ಒಂದು ಸಂತಸದ ಸಂದರ್ಭ—ಗಿಲ್ಯಡ್ನ 104ನೆಯ ತರಗತಿಯ ಪದವಿಪ್ರಾಪ್ತಿ
“ಇದೊಂದು ಸಂತಸದ ದಿನ, ಮತ್ತು ನಾವೆಲ್ಲರೂ ಹರ್ಷಿಸುತ್ತಿದ್ದೇವೆ.” ಆ ಮಾತುಗಳೊಂದಿಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಕ್ಯಾರೀ ಬಾರ್ಬರ್, 1998, ಮಾರ್ಚ್ 14ರಂದು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 104ನೆಯ ತರಗತಿಯ ಆನಂದಮಯ ಪದವಿಪ್ರಾಪ್ತಿ ಕಾರ್ಯಕ್ರಮವನ್ನು ಆರಂಭಿಸಿದರು. ಸಭಿಕರಲ್ಲಿದ್ದ 4,945 ಜನರು, “ಹರ್ಷದ ಒಂದು ಗೀತೆ” ಎಂಬ ಶೀರ್ಷಿಕೆಯ ರಾಜ್ಯ ಸಂಗೀತ ನಂಬ್ರ 208ನ್ನು ಹಾಡುವ ಮೂಲಕ ಆ ಸಂದರ್ಭವನ್ನು ಆರಂಭಿಸುವಂತೆ ಆಮಂತ್ರಿಸಲ್ಪಟ್ಟರು.
ಸಂತೋಷಿತರಾಗಿ ಉಳಿಯಲು ಪ್ರಾಯೋಗಿಕ ಸಲಹೆ
ಕಾರ್ಯಕ್ರಮದ ಮೊದಲ ಭಾಗವಾದ, ಬೈಬಲ್ ಆಧಾರಿತ ಐದು ಚಿಕ್ಕ ಭಾಷಣಗಳ ಸರಣಿಯು, ಪದವಿಪ್ರಾಪ್ತಿ ದಿನದಂದು ವ್ಯಾಪಿಸಿದ್ದ ಆನಂದಪೂರ್ಣ ಮನೋಭಾವವನ್ನು ಹೇಗೆ ಕಾಪಾಡಿಕೊಂಡು ಹೋಗಬೇಕೆಂಬ ವಿಷಯದಲ್ಲಿ ಒಂದಿಷ್ಟು ಪ್ರಾಯೋಗಿಕ ಸಲಹೆಯನ್ನು ಒದಗಿಸಿತು.
ಪ್ರಥಮ ಭಾಷಣವು, ಬರವಣಿಗೆ (ರೈಟಿಂಗ್) ಇಲಾಖೆಯ ಜೋಸೆಫ್ ಈಮ್ಸ್ ಅವರಿಂದ ನೀಡಲ್ಪಟ್ಟಿತು. ಅವರು, 2 ಸಮುವೇಲ, 15 ಹಾಗೂ 17ನೆಯ ಅಧ್ಯಾಯಗಳಲ್ಲಿರುವ ಬೈಬಲ್ ವೃತ್ತಾಂತದ ಮೇಲಾಧಾರಿಸಿ, “ನಿಷ್ಠಾವಂತರ ಮನೋಭಾವವನ್ನು ಅನುಕರಿಸಿರಿ” ಎಂಬ ಮುಖ್ಯವಿಷಯದ ಮೇಲೆ ಮಾತಾಡಿದರು. ಆ ಅಧ್ಯಾಯಗಳಲ್ಲಿ, ದಾವೀದನ ಮಗನಾದ ಅಬ್ಷಾಲೋಮನು, ಒಂದು ದಂಗೆಯನ್ನು ಕೆರಳಿಸುವ ಮೂಲಕ ತನ್ನ ತಂದೆಯ ದೇವದತ್ತ ರಾಜ್ಯವನ್ನು ಕಸಿದುಕೊಳ್ಳಲು ಸಂಚುಹೂಡಿದ ವಿಷಯವಿದೆ. ಆದರೆ, ಯೆಹೋವನ ಅಭಿಷಿಕ್ತನಾದ ರಾಜ ದಾವೀದನಿಗೆ ನಿಷ್ಠಾವಂತರಾಗಿ ಉಳಿದವರೂ ಅಲ್ಲಿದ್ದರು. ಇದರಿಂದ ಹೊಸ ಮಿಷನೆರಿಗಳು ಯಾವ ಪಾಠವನ್ನು ಕಲಿಯಸಾಧ್ಯವಿತ್ತು? “ನಿಮ್ಮ ಮಿಷನೆರಿ ನೇಮಕದ ಭಾಗವಾಗಿ ನೀವು ಎಲ್ಲೇ ಹೋದರೂ, ಸಹಕಾರದ ಮನೋಭಾವವನ್ನು ಮತ್ತು ದೇವಪ್ರಭುತ್ವ ಅಧಿಕಾರಕ್ಕೆ ಗೌರವವನ್ನು ನಿಷ್ಠಾಪೂರ್ವಕವಾಗಿ ಪ್ರವರ್ಧಿಸಿರಿ. ಅದನ್ನೇ ಮಾಡುವಂತೆ ಇತರರಿಗೂ ಸಹಾಯಮಾಡಿರಿ” ಎಂದು ಸಹೋದರ ಈಮ್ಸ್ ಕೊನೆಗೊಳಿಸಿದರು.
ಮುಂದಿನ ಭಾಷಣ ಡೇವಿಡ್ ಸಿಂಕ್ಲರ್ ಅವರದ್ದಾಗಿತ್ತು. ‘ಯೆಹೋವನ ಗುಡಾರ’ದಲ್ಲಿ ಅತಿಥಿಗಳಾಗಿರಲಿಕ್ಕಾಗಿ, 15ನೆಯ ಕೀರ್ತನೆಯಲ್ಲಿ ಉಲ್ಲೇಖಿಸಲ್ಪಟ್ಟ ಹತ್ತು ಆವಶ್ಯಕತೆಗಳನ್ನು ಅವರು ನಿರೂಪಿಸಿದರು. “ನಿಮ್ಮ ಮಿಷನೆರಿ ಗುಡಾರದಲ್ಲಿ ಅತಿಥಿಗಳಾಗಿ ಮುಂದುವರಿಯಿರಿ” ಎಂಬ ಶೀರ್ಷಿಕೆಯುಳ್ಳ ಅವರ ಭಾಷಣವು, ಪದವಿಪ್ರಾಪ್ತರಾಗುತ್ತಿದ್ದ ವಿದ್ಯಾರ್ಥಿಗಳು ಈ ಕೀರ್ತನೆಯನ್ನು ತಮ್ಮ ಮಿಷನೆರಿ ನೇಮಕಗಳಿಗೆ—ಎಲ್ಲಿ ಅವರು ಅತಿಥಿಗಳಾಗಿರುವರೊ ಅಲ್ಲಿ—ಅನ್ವಯಿಸುವಂತೆ ಉತ್ತೇಜಿಸಿತು. ಎಲ್ಲ ಸಮಯಗಳಲ್ಲಿ ದೈವಿಕ ಮಟ್ಟಗಳಿಗನುಸಾರ ಜೀವಿಸುವುದರ ಮಹತ್ವವನ್ನು ಸಹೋದರ ಸಿಂಕ್ಲರ್ ಎತ್ತಿತೋರಿಸಿದರು. ಅದರ ಪರಿಣಾಮವು ಏನಾಗಿರುವುದು? ಕೀರ್ತನೆ 15:5 ಹೇಳುವುದು: “ಇಂಥವನು ಎಂದಿಗೂ ಕದಲುವದಿಲ್ಲ.”
ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಜಾನ್ ಬಾರ್, ಮುಂದಿನ ಭಾಷಣವನ್ನು ನೀಡಿ, ಕ್ರೈಸ್ತ ಕೂಟಗಳಲ್ಲಿ ಹಾಡುವಿಕೆಗೆ ಇರುವ ಉತ್ತೇಜಕ ಪರಿಣಾಮದ ಕಡೆಗೆ ಗಮನ ಸೆಳೆದರು. ಆದರೆ ಇಂದು ಭೂಮಿಯಾದ್ಯಂತ ಹಾಡಲ್ಪಡುತ್ತಿರುವ ಅತ್ಯಂತ ಆನಂದಮಯ ಗೀತೆಯು ಯಾವುದಾಗಿದೆ? ಅದು ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಸುವಾರ್ತೆಯೇ. ಈ ಎಲ್ಲ ಹಾಡುವಿಕೆಯಿಂದ, ಇಲ್ಲವೆ ರಾಜ್ಯದ ಕುರಿತು ಸಾರುವುದರಿಂದ ಏನು ಫಲಿಸುತ್ತಿದೆ? ಸಂಗೀತ ನಂಬ್ರ 208ರ ಎರಡನೆಯ ಸಾಲು ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳುತ್ತದೆ: “ರಾಜ್ಯದ ಸಾರುವಿಕೆ ಹಾಗೂ ಕ್ರೈಸ್ತ ಬೋಧನೆಯ ಮೂಲಕ, ಅನೇಕರು ಯೆಹೋವನ ಪಕ್ಕಕ್ಕೆ ಸೆಳೆಯಲ್ಪಡುತ್ತಾರೆ. ಇವರು ಸಹ ಹರ್ಷದ ಗೀತೆಗಳನ್ನು ಹಾಡುತ್ತಾ, ಅವುಗಳನ್ನು ಬಹುದೂರದ ವರೆಗೆ ಧ್ವನಿಸುತ್ತಿದ್ದಾರೆ!” ಹೌದು, ಪ್ರತಿದಿನ ಸುಮಾರು 1,000ದಷ್ಟು ಹೊಸ ಶಿಷ್ಯರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಸಹೋದರ ಬಾರ್ ಕೊನೆಗೊಳಿಸಿದ್ದು: “ನಿಮ್ಮ ಸ್ತುತಿಗೀತೆಯನ್ನು ಆಲಿಸಲು ತವಕದಿಂದ ಕಾದುಕೊಂಡಿರುವ ಜನರನ್ನು ಸಂಧಿಸಲಿಕ್ಕಾಗಿ ನೀವು ಅಂತಹ ಟೆರಿಟೊರಿಗಳಿಗೆ ಕಳುಹಿಸಲ್ಪಡುತ್ತಿದ್ದೀರಿ ಎಂಬ ವಿಷಯದ ಕುರಿತು ಯೋಚಿಸುವುದು ಅದ್ಭುತಕರವಾಗಿಲ್ಲವೊ ಸಹೋದರರೇ?”
“ಅನುಭವದ ಧ್ವನಿಗಳಿಗೆ ಕಿವಿಗೊಡಿರಿ” ಎಂಬುದು ಬರವಣಿಗೆ ಇಲಾಖೆಯ ಜೇಮ್ಸ್ ಮ್ಯಾನ್ಸ್ ಅವರು, ತರುವಾಯ ನೀಡಿದ ಭಾಷಣದ ಶೀರ್ಷಿಕೆ ಆಗಿತ್ತು. ಕೆಲವು ವಿಷಯಗಳನ್ನು ವೈಯಕ್ತಿಕ ಅನುಭವದಿಂದಲೇ ಕಲಿಯಸಾಧ್ಯವೆಂದು ಅವರು ಹೇಳಿದರು. (ಇಬ್ರಿಯ 5:8) ಆದರೂ, ನಾವು “ಕಿವಿಗೊಟ್ಟು ಜ್ಞಾನಿಗಳ” ಅಥವಾ ಅನುಭವ ಪಡೆದುಕೊಂಡಿರುವವರ “ಮಾತುಗಳನ್ನು ಕೇಳು”ವಂತೆ, ಜ್ಞಾನೋಕ್ತಿ 22:17 ಉತ್ತೇಜಿಸುತ್ತದೆ. ತಮಗಿಂತ ಮುಂಚೆ ಹೋಗಿರುವವರಿಂದ ಪದವಿಪ್ರಾಪ್ತರಾಗುತ್ತಿರುವ ವಿದ್ಯಾರ್ಥಿಗಳು ಹೆಚ್ಚನ್ನು ಕಲಿಯಬಲ್ಲರು. “ಸ್ಥಳಿಕ ಅಂಗಡಿಗಾರರೊಂದಿಗೆ ಹೇಗೆ ಚೌಕಾಸಿ ಮಾಡಬೇಕೆಂಬುದು ಅವರಿಗೆ ಗೊತ್ತು. ಶಾರೀರಿಕ ಇಲ್ಲವೆ ನೈತಿಕ ಅಪಾಯಗಳಿಂದಾಗಿ ನಗರದ ಯಾವ ಕ್ಷೇತ್ರಗಳಿಂದ ದೂರವಿರಬೇಕೆಂದು ಅವರಿಗೆ ಗೊತ್ತು. ಸ್ಥಳಿಕ ಜನರ ಸೂಕ್ಷ್ಮಸಂವೇದನೆಗಳ ಕುರಿತು ಅವರಿಗೆ ಗೊತ್ತು. ನಿಮ್ಮ ನೇಮಕದಲ್ಲಿ ನೀವು ಆನಂದಿತರೂ ಸಫಲರೂ ಆಗಿರಲು ನಿಮಗೆ ಯಾವುದರ ಅಗತ್ಯವಿದೆಯೆಂದು, ದೀರ್ಘಕಾಲದ ಮಿಷನೆರಿಗಳಿಗೆ ಗೊತ್ತಿದೆ” ಎಂದು ಸಹೋದರ ಮ್ಯಾನ್ಸ್ ಹೇಳಿದರು.
“ನಿಮ್ಮ ದೇವಪ್ರಭುತ್ವ ನೇಮಕವನ್ನು ಗಣ್ಯಮಾಡಿರಿ” ಎಂಬ ಮುಖ್ಯವಿಷಯದ ಮೇಲೆ ಮಾತಾಡುತ್ತಾ, ಗಿಲ್ಯಡ್ ಶಾಲೆಯ ರೆಜಿಸ್ಟ್ರಾರ್ ವಾಲೆಸ್ ಲಿವರನ್ಸ್ ವಿವರಿಸಿದ್ದೇನೆಂದರೆ, ಅಪೊಸ್ತಲ ಪೌಲನು, ತಿಮೊಥೆಯನು, ಮತ್ತು ಬಾರ್ನಬರಂತಹ ಕೆಲವು ಮಿಷನೆರಿಗಳು ತಮ್ಮ ನೇಮಕಗಳನ್ನು ದೇವರಿಂದ ಪವಿತ್ರಾತ್ಮದ ಮೂಲಕ ಇಲ್ಲವೆ ಯಾವುದೊ ಅದ್ಭುತಕರ ಪ್ರದರ್ಶನದ ಮೂಲಕ ಪಡೆದಿರುವಾಗ, ಗಿಲ್ಯಡ್ ಶಿಕ್ಷಿತ ಮಿಷನೆರಿಗಳು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ, ಲೋಕವ್ಯಾಪಕ ಕ್ಷೇತ್ರದಲ್ಲಿನ ಒಂದು ಸ್ಥಳಕ್ಕೆ ನೇಮಿಸಲ್ಪಡುತ್ತಾರೆ. (ಮತ್ತಾಯ 24:45-47) ಮಿದ್ಯಾನ್ಯರೊಂದಿಗೆ ಹೋರಾಡಬೇಕಿದ್ದ ತನ್ನ ಪುರುಷರಿಗೆ ಗಿದ್ಯೋನನು ನೇಮಿಸಿದ ಸ್ಥಳಗಳಿಗೆ, ಅವರು ಈ ಮಿಷನೆರಿಗಳ ನೇಮಕಗಳನ್ನು ಹೋಲಿಸಿದರು. (ನ್ಯಾಯಸ್ಥಾಪಕರು 7:16-21) “ನಿಮ್ಮ ದೇವಪ್ರಭುತ್ವ ಮಿಷನೆರಿ ನೇಮಕವನ್ನು ಗಣ್ಯಮಾಡಿರಿ. ಗಿದ್ಯೋನನ ಸೈನಿಕರು ‘ತಮ್ಮ ತಮ್ಮ ಸ್ಥಳದಲ್ಲಿ ನಿಂತುಕೊಂಡಿದ್ದಂತೆ’ಯೇ, ನಿಮ್ಮ ನೇಮಕವನ್ನು ನೀವು ಇರಬೇಕಾದ ಸ್ಥಳವಾಗಿ ವೀಕ್ಷಿಸಿರಿ. ಯೆಹೋವನು ಗಿದ್ಯೋನನ ಮುನ್ನೂರು ಜನರನ್ನು ಉಪಯೋಗಿಸಿದಂತೆಯೇ ನಿಮ್ಮನ್ನು ಉಪಯೋಗಿಸಬಲ್ಲನೆಂಬ ನಂಬಿಕೆ ನಿಮಗಿರಲಿ” ಎಂದು ಸಹೋದರ ಲಿವರನ್ಸ್ ಉತ್ತೇಜಿಸಿದರು.
ಜನಾಭಿಮುಖರಾಗಿರುವುದು ಸಂತೋಷದಲ್ಲಿ ಫಲಿಸುತ್ತದೆ
ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯು ಒಮ್ಮೆ ಹೇಳಿಕೆ ನೀಡಿದ್ದು: “ಈ ಲೋಕದಿಂದ ಉತ್ಪಾದಿಸಲ್ಪಟ್ಟ ವಸ್ತುಗಳು ಹಾಗೂ ಸಾಧನ—ಮುಂದುವರಿಯುವ ಭರವಸೆಯಿಲ್ಲದ ವಸ್ತು—ಗಳ ಸುತ್ತಲೂ ನಮ್ಮ ಅಭಿರುಚಿಗಳು ಹಾಗೂ ಜೀವಿತಗಳನ್ನು ಕಟ್ಟಿಕೊಳ್ಳುವ ಬದಲು, ಜನರನ್ನು ನಮ್ಮ ನಿಜವಾದ ಆಸಕ್ತಿಯನ್ನಾಗಿ ಮಾಡಿ, ಇತರರಿಗಾಗಿ ಮಾಡುವ ವಿಷಯಗಳಲ್ಲಿ ಯಥಾರ್ಥವಾದ ಆನಂದವನ್ನು ಕಂಡುಕೊಳ್ಳಲು ಕಲಿತುಕೊಳ್ಳುವುದು, ಎಷ್ಟೊಂದು ಉತ್ತಮವೂ ವಿವೇಕಯುತವೂ ಆಗಿದೆ.” ಇದಕ್ಕೆ ಸುಸಂಗತವಾಗಿ, ಗಿಲ್ಯಡ್ ಶಾಲಾ ಉಪದೇಶಕರಲ್ಲಿ ಒಬ್ಬರಾದ ಸಹೋದರ ಮಾರ್ಕ್ ನೂಮ್ಯಾರ್, ವಿದ್ಯಾರ್ಥಿಗಳ ಒಂದು ಗುಂಪಿನೊಂದಿಗೆ ಅವರ ಕ್ಷೇತ್ರ ಸೇವಾ ಅನುಭವಗಳನ್ನು ಚರ್ಚಿಸಿ, ಹೀಗೆ ಹೇಳಿದರು: “ಇತರರಲ್ಲಿ ವೈಯಕ್ತಿಕ ಅಭಿರುಚಿಯನ್ನು ತೋರಿಸುವುದೇ ನಿಮ್ಮನ್ನು ಒಳ್ಳೆಯ ಮಿಷನೆರಿಗಳಾಗಿ ಮಾಡುವುದು.”
ವಿದೇಶಿ ಕ್ಷೇತ್ರದಲ್ಲಿ ಸಂತೋಷವನ್ನು ಕಂಡುಕೊಳ್ಳಲಿಕ್ಕಾಗಿರುವ ಕೀಲಿ ಕೈಗಳು
ಮಿಷನೆರಿ ಕೆಲಸದಲ್ಲಿ ಯಶಸ್ಸು ಹಾಗೂ ಸಂತೋಷವನ್ನು ಕಂಡುಕೊಳ್ಳಲಿಕ್ಕಾಗಿರುವ ಕೆಲವು ಕೀಲಿ ಕೈಗಳಾವುವು? ಸೇವಾ ಇಲಾಖೆ (ಸರ್ವಿಸ್ ಕಮಿಟಿ)ಯ ಸಹೋದರ ಚಾರ್ಲ್ಸ್ ವುಡೀ ಹಾಗೂ ಲ್ಯಾಟಿನ್ ಅಮೆರಿಕದ ಮಾಜಿ ಮಿಷನೆರಿ ಮತ್ತು ಬೋಧನಾ (ಟೀಚಿಂಗ್) ಕಮಿಟಿಯ ಒಬ್ಬ ಸಹಾಯಕರಾಗಿರುವ ಹ್ಯಾರಲ್ಡ್ ಜ್ಯಾಕ್ಸನ್, ಬ್ರಾಂಚ್ ಸಿಬ್ಬಂದಿಗಳಿಗಾಗಿ ನಡೆಯುತ್ತಿರುವ ಶಾಲೆಯ ಒಂಬತ್ತನೆಯ ತರಗತಿಗೆ ಹಾಜರಾಗುತ್ತಿರುವ ವಿಭಿನ್ನ ಬ್ರಾಂಚ್ ಕಮಿಟಿಗಳ ಸದಸ್ಯರನ್ನು ಇಂಟರ್ವ್ಯೂ ಮಾಡಿದರು. ಇವರು ನೀಡಿದ ಬುದ್ಧಿವಾದದ ಒಂದು ನಮೂನೆ ಇಲ್ಲಿದೆ:
ಸಾಂಬಿಯದಿಂದ ಬಂದ ಆ್ಯಲ್ಬರ್ಟ್ ಮೂಸಾಂಡ ಗಮನಿಸಿದ್ದು: “ಮಿಷನೆರಿಯು ತಾನಾಗಿಯೇ ಮೊದಲ ಹೆಜ್ಜೆಯನ್ನು ತೆಗೆದುಕೊಂಡು, ಸಹೋದರರನ್ನು ಅಭಿವಂದಿಸುವಾಗ, ಅದೊಂದು ಒಳ್ಳೆಯ ಮನೋಭಾವವನ್ನು ಹುಟ್ಟಿಸುತ್ತದೆ, ಏಕೆಂದರೆ ಆ ಸಹೋದರರು ಮಿಷನೆರಿಯ ಕಡೆಗೆ ಆಕರ್ಷಿತರಾಗುವರು, ಮತ್ತು ಆ ಮಿಷನೆರಿಯು ಅವರ ಕಡೆಗೆ ಆಕರ್ಷಿತನಾಗುವನು.”
ಗ್ವಾಟೆಮಾಲದ ರೊಲಾಂಡೊ ಮೊರಾಲಿಸ್ ಸಲಹೆ ನೀಡಿದ್ದೇನೆಂದರೆ, ಹೊಸ ಮಿಷನೆರಿಗಳಿಗೆ ಸ್ನೇಹಪರ ಜನರು ಸ್ಥಳೀಯ ಪಾನೀಯಗಳನ್ನು ನೀಡುವಾಗ, ಮಿಷನೆರಿಗಳು ದಯಾಪರವಾಗಿಯೂ ಜಾಣ್ಮೆಯಿಂದಲೂ ಹೀಗೆ ಉತ್ತರಿಸಬಲ್ಲರು: “ನಾನು ಈ ದೇಶಕ್ಕೆ ಹೊಸಬನು. ಅದನ್ನು ಕುಡಿಯಲು ನಾನು ಇಷ್ಟಪಡುವೆನಾದರೂ, ನಿಮ್ಮ ದೇಹಕ್ಕಿರುವ ನಿರೋಧಕ ಶಕ್ಕಿ ನನ್ನ ದೇಹಕ್ಕಿಲ್ಲ. ಮುಂದೆ ಯಾವುದಾದರೊಂದು ದಿನ ಅದನ್ನು ಸ್ವೀಕರಿಸಲು ಸಾಧ್ಯವಾಗುವುದೆಂದು ನಾನು ನಿರೀಕ್ಷಿಸುವೆ, ಮತ್ತು ಹಾಗೆ ಮಾಡಲು ನಾನು ಸಂತೋಷಿಸುವೆ.” ಆ ರೀತಿಯ ಉತ್ತರದಿಂದ ಬರುವ ಲಾಭಗಳೇನು? “ಜನರ ಮನಸ್ಸಿಗೆ ನೋವಾಗುವುದಿಲ್ಲ, ಮತ್ತು ಮಿಷನೆರಿಗಳು ಇತರರಿಗೆ ದಯೆಯನ್ನು ತೋರಿಸಿದವರಾಗಿ ಪರಿಣಮಿಸಿರುವರು.”
ಮಿಷನೆರಿಗಳು ತಮ್ಮ ನೇಮಕಗಳಲ್ಲಿ ತಾಳಿಕೊಳ್ಳುವಂತೆ ಯಾವುದು ಸಹಾಯಮಾಡಬಲ್ಲದು? ಗಿಲ್ಯಡ್ನ 79ನೆಯ ತರಗತಿಯ ಪದವೀಧರರೂ ಕಳೆದ 12 ವರ್ಷಗಳಿಂದ ಲೈಬೀರಿಯದಲ್ಲಿ ಸೇವೆ ಸಲ್ಲಿಸುತ್ತಾ ಇರುವವರಾದ ಸಹೋದರ ಪಾಲ್ ಕ್ರೂಡಸ್ ಈ ಅವಲೋಕನವನ್ನು ಮಾಡಿದರು: “ಹೆತ್ತವರು ತಮ್ಮ ಮಕ್ಕಳನ್ನು ಮಿಸ್ಮಾಡುವ ಸಂಗತಿ ನಿಜವೆಂದು ನನಗೆ ಗೊತ್ತು. ಆದರೆ ಮಿಷನೆರಿಯು ಆ ದೇಶಕ್ಕೆ, ಪರಿಸರಕ್ಕೆ, ಸಂಸ್ಕೃತಿಗೆ, ಹಾಗೂ ಜನರಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯಗಳೂ ಇರುತ್ತವೆ. ಅವನಿಗೆ ತನ್ನ ಮಿಷನೆರಿ ನೇಮಕವನ್ನು ಬಿಟ್ಟುಬಿಡುವ ಅನಿಸಿಕೆ ಆಗಬಹುದು. ಆಗ, ‘ನಾವು ನಿನ್ನನ್ನು ತುಂಬ ಮಿಸ್ಮಾಡುತ್ತೇವೆ; ನೀನಿಲ್ಲದೆ ನಾವೇನು ಮಾಡುವೆವೆಂದು ನಮಗೆ ತಿಳಿಯದು’ ಎಂದು ಹೇಳುವ ಪತ್ರವೊಂದು ಮನೆಯಿಂದ ಬರುವುದಾದರೆ, ತನ್ನ ಗಂಟುಮೂಟೆಗಳನ್ನು ಕಟ್ಟಿಕೊಂಡು ಮನೆಗೆ ಹಿಂದಿರುಗುವಂತೆ ಮಾಡಲು ಅವನಿಗೆ ಅಷ್ಟೇ ಸಾಕು. ಇಂದು ಇಲ್ಲಿರುವ ಸಂಬಂಧಿಕರು ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ತುಂಬ ಪ್ರಾಮುಖ್ಯ.”
ಇಂಟರ್ವ್ಯೂಗಳ ತರುವಾಯ, ಕಾರ್ಯಕ್ರಮದ ಅಂತಿಮ ಭಾಷಣವು, ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಥಿಯೋಡರ್ ಜ್ಯಾರಸ್ ಅವರಿಂದ ಪ್ರಸ್ತುತಪಡಿಸಲ್ಪಟ್ಟಿತು. ಅವರ ಮುಖ್ಯವಿಷಯವು: “ರಾಜ್ಯವನ್ನು ನಿಮ್ಮ ಜೀವಿತದಲ್ಲಿ ಅಗ್ರಗಣ್ಯವಾಗಿಡಿರಿ” ಎಂದಾಗಿತ್ತು. ಮಿಷನೆರಿಗಳು ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ, ಅಪಕರ್ಷಿಸಲ್ಪಡದೆ ಹೇಗೆ ಉಳಿಯಸಾಧ್ಯವಿದೆ? ವೈಯಕ್ತಿಕ ಬೈಬಲ್ ಅಧ್ಯಯನಕ್ಕಾಗಿ ಒಂದು ಕಾರ್ಯತಖ್ತೆ ಇರುವಂತೆ ಅವರು ಮಿಷನೆರಿಗಳಿಗೆ ಉತ್ತೇಜನ ನೀಡಿದರು. ಇದು ರಾಜ್ಯದ ಅಭಿರುಚಿಗಳನ್ನು ಜೀವಿತದಲ್ಲಿ ಅಗ್ರಗಣ್ಯವಾಗಿಡಲು ಅವರಿಗೆ ಸಹಾಯಮಾಡುವುದು. ಮತ್ತು ಸಮಯೋಚಿತವಾದ ಈ ಮರುಜ್ಞಾಪನವು ಅವರಿಗೆ ನೀಡಲ್ಪಟ್ಟಿತು: “ಕೆಲವು ಮಿಷನೆರಿಗಳು ಇಲೆಕ್ಟ್ರಾನಿಕ್ ಸಾಧನಗಳು, ಇ-ಮೇಲ್, ಮತ್ತು ಕಂಪ್ಯೂಟರ್ನಲ್ಲಿ ತಲ್ಲೀನರಾಗಿ ಬಿಡುವುದರಿಂದ, ವೈಯಕ್ತಿಕ ಅಧ್ಯಯನವನ್ನು ಅಲಕ್ಷಿಸಿದ್ದಾರೆ. ಯಾವುದೇ ಸಾಧನದ ಬಳಕೆಯ ವಿಷಯದಲ್ಲಿ ಸಮತೆಯುಳ್ಳವರಾಗಿರುವ ಮತ್ತು ದೇವರ ವಾಕ್ಯದ ನಮ್ಮ ವೈಯಕ್ತಿಕ ಅಧ್ಯಯನವನ್ನು ಅತಿಕ್ರಮಿಸಸಾಧ್ಯವಿರುವ ಯಾವುದೇ ವಿಷಯದಲ್ಲಿ ಮಿತಿಮೀರಿದ ಸಮಯವನ್ನು ವ್ಯಯಿಸದಿರುವ ಪರಿಜ್ಞಾನ ನಮಗಿರಬೇಕು.”
ಸಹೋದರ ಜ್ಯಾರಸ್ ಅವರ ಭಾಷಣದ ನಂತರ, ಪ್ರಶಸ್ತಿಪತ್ರಗಳು (ಡಿಪ್ಲೋಮಗಳು) ಕೊಡಲಾದವು ಮತ್ತು ತರಗತಿಯಿಂದ ಒಂದು ಗಣ್ಯತಾ ಪತ್ರವನ್ನು ಓದಲಾಯಿತು. ತರಗತಿಯ ಪ್ರತಿನಿಧಿಯು, ಪ್ರತಿಯೊಬ್ಬರ ಅನಿಸಿಕೆಗಳನ್ನು ಈ ವಿಧದಲ್ಲಿ ವ್ಯಕ್ತಪಡಿಸಿದನು: “ತನ್ನ ಶಿಷ್ಯರ ವಿಶಿಷ್ಟ ಗುಣವಾಗಿರುವುದೆಂದು ಯೇಸು ಹೇಳಿದ ಪ್ರೀತಿಯ ಸ್ಪಷ್ಟ ಪ್ರಮಾಣವನ್ನು ನಾವು ನೋಡಿದೆವು. ಇದು, ನಾವು ಎಲ್ಲೇ ಇರಲಿ, ಒಂದು ಆದರದ, ಪ್ರೀತಿಪರ, ತಾಯಿಸದೃಶ ಸಂಸ್ಥೆಯು ನಮ್ಮನ್ನು ಬೆಂಬಲಿಸುತ್ತಾ ಇದೆ ಎಂಬ ಆಶ್ವಾಸನೆಯನ್ನು ನಮಗೆ ಮತ್ತೆ ನೀಡಿದೆ. ಇಂತಹ ಬೆಂಬಲದೊಂದಿಗೆ, ನಾವು ಭೂಮಿಯ ಕಟ್ಟಕಡೆಯ ವರೆಗೂ ಹೋಗಲು ಸಿದ್ಧರಾಗಿದ್ದೇವೆ.” ಅದು ಗಿಲ್ಯಡ್ನ 104ನೆಯ ತರಗತಿಯ ಸಂತಸಕರ ಪದವಿಪ್ರಾಪ್ತಿ ದಿನಕ್ಕೆ ಪ್ರೇರಿಸುವಂತಹ ಒಂದು ಮುಕ್ತಾಯವಾಗಿತ್ತು.
[ಪುಟ 35 ರಲ್ಲಿರುವ ಚೌಕ]
ತರಗತಿಯ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 9
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 16
ವಿದ್ಯಾರ್ಥಿಗಳ ಸಂಖ್ಯೆ: 48
ವಿವಾಹಿತ ದಂಪತಿಗಳ ಸಂಖ್ಯೆ: 24
ಸರಾಸರಿ ಪ್ರಾಯ: 33
ಸತ್ಯದಲ್ಲಿ ಸರಾಸರಿ ವರ್ಷಗಳು: 16
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12
[ಪುಟ 25 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವಿಪ್ರಾಪ್ತರಾಗುತ್ತಿರುವ 104ನೆಯ ತರಗತಿ
ಕೆಳಗಿಣ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ
(1) ರಮೇರೋ, ಎಮ್.; ಹಾವರ್ತ್, ಜೆ.; ಬ್ಲ್ಯಾಕ್ಬರ್ನ್-ಕೇನ್, ಡಿ.; ಹೋಅನ್ಗಾಸರ್, ಇ.; ವೆಸ್ಟ್, ಎಸ್.; ಟಾಮ್, ಎಸ್. (2) ಕೋಲೋನ್, ಡಬ್ಲ್ಯೂ.; ಗ್ಲ್ಯಾನ್ಸೀ, ಜೆ.; ಕೋನೋ, ವೈ.; ಡ್ರೂಸ್, ಪಿ.; ಟ್ಯಾಮ್, ಎಸ್.; ಕೋನೋ, ಟಿ., (3) ಟ್ಯಾಮ್, ಡಿ.; ಸೆಶ್ಮೈಸ್ಟರ್, ಎಸ್.; ಗರ್ಡೆಲ್, ಎಸ್.; ಎಲ್ವೆಲ್, ಜೆ.; ಡನೆಕ್, ಪಿ.; ಟೆಬಿಡೋ, ಎಚ್. (4) ಟೇಲರ್, ಈ.; ಹಿಲ್ಡ್ರೆಡ್, ಎಲ್.; ಸಂಚೆಸ್, ಎಮ್.; ಆ್ಯಂಡರ್ಸನ್, ಸಿ.; ಬಕ್ನರ್, ಟಿ.; ಹೋಅನ್ಗಾಸರ್, ಈ. (5) ಹಾವರ್ತ್, ಡಿ.; ವಾರ್ಡ್, ಸಿ.; ಹಿಂಚ್, ಪಿ.; ಮೆಕ್ಡಾನಲ್ಡ್, ವೈ.; ಸಾಂಚೆಸ್, ಟಿ.; ಟಾಮ್, ಓ. (6) ಡ್ರೂಸ್, ಟಿ.; ಟಿಬಡೋ, ಈ.; ಎಲ್ವೆಲ್, ಡಿ.; ಡೂನೆಕ್, ಡಬ್ಲ್ಯೂ.; ಬ್ಲ್ಯಾಕ್ಬರ್ನ್-ಕೇನ್, ಡಿ.; ವಾರ್ಡ್, ಡಬ್ಲ್ಯೂ. (7) ಆ್ಯಂಡರ್ಸನ್, ಎಮ್.; ಸೆಶ್ಮೈಸ್ಟರ್, ಆರ್.; ಮೆಕ್ಡಾನಲ್ಡ್, ಆರ್.; ಬಕ್ನರ್, ಆರ್.; ಗ್ಲಾನ್ಸೀ, ಎಸ್.; ಗರ್ಡೆಲ್, ಜಿ. (8) ರಮೇರೋ, ಡಿ.; ಹಿಂಚಿ, ಆರ್.; ಹಿಲ್ಡ್ರೆಡ್, ಎಸ್.; ಟೇಲರ್, ಜೆ.; ಕೋಲೋನ್, ಎ.; ವೆಸ್ಟ್, ಡಬ್ಲ್ಯೂ.
[ಪುಟ 26 ರಲ್ಲಿರುವ ಚಿತ್ರ]
104ನೆಯ ತರಗತಿಗೆ ಶಿಕ್ಷಣ ನೀಡುವುದರಲ್ಲಿ ಭಾಗವಹಿಸಿದ ಸಹೋದರರು: (ಎಡದಿಂದ) ಡಬ್ಲ್ಯೂ. ಲಿವರನ್ಸ್, ಯು. ಗ್ಲಾಸ್, ಕೆ. ಆ್ಯಡಮ್ಸ್, ಎಮ್. ನೂಮ್ಯಾರ್