ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 7/1 ಪು. 8-9
  • ಲೋಕಾಂತ್ಯ ಯಾವಾಗ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಕಾಂತ್ಯ ಯಾವಾಗ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮ್ಮ ಕಣ್ಮುಂದೆ ನಡೆಯುತ್ತಿರುವ ಘಟನೆಗಳು
  • ನಿಮ್ಮ ಕಣ್ಮುಂದೆ ನಡೆಯಲಿರುವ ಘಟನೆಗಳು
  • ನೀವೇನು ಮಾಡುವಿರಿ?
  • ಲೋಕಕ್ಕೆ ಅಂತ್ಯ ಹೇಗೆ ಬರಲಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ದೇವರ ಸರ್ಕಾರ ಆಳುತ್ತಿದೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ದೇವರ ವೈರಿಗಳಿಗೆ ಏನಾಗುತ್ತೆ ಅಂತ ಪ್ರಕಟನೆಯಲ್ಲಿ ಹೇಳುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ದೇವರ ಉದ್ದೇಶವು ಬೇಗನೆ ಕೈಗೂಡಲಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 7/1 ಪು. 8-9

ಲೋಕಾಂತ್ಯ ಯಾವಾಗ?

“ಯಾರೂ ಎಣಿಸಲಾಗದಂಥ ಮಹಾ ಜನಸಮೂಹ . . . ಪ್ರತಿ ರಾಷ್ಟ್ರ, ಕುಲ, ಜನ ಮತ್ತು ಭಾಷೆಯವರಾಗಿದ್ದು . . . ಇವರು ಆ ಮಹಾಸಂಕಟದಿಂದ ಹೊರಬಂದವರು.”—ಪ್ರಕಟನೆ 7:9, 14, ಪವಿತ್ರ ಗ್ರಂಥ ಭಾಷಾಂತರ.

ಅರ್ಮಗೆದ್ದೋನ್‌ ಯುದ್ಧಕ್ಕೆ ಈಗ ರಂಗ ಸಜ್ಜಾಗಿದೆ. ಹೇಗೆ?

ಯೆಹೋವನನ್ನು ಆರಾಧಿಸಿ ಬೈಬಲಿನ ಉನ್ನತ ನೈತಿಕ ಮಟ್ಟಗಳನ್ನು ಪಾಲಿಸುತ್ತಿರುವ ಒಂದು ಅಂತಾರಾಷ್ಟ್ರೀಯ ಸಂಘ ಈಗಾಗಲೇ ಇದೆ. ಎಲ್ಲ ರಾಷ್ಟ್ರ, ಕುಲ, ಭಾಷೆಗಳ ಲಕ್ಷಾಂತರ ಜನರು ದೇವರ ಬೆಂಬಲದಿಂದಾಗಿ ಪ್ರೀತಿ, ಸಾಮರಸ್ಯಗಳಿರುವ ಸಹೋದರತ್ವದಲ್ಲಿ ಐಕ್ಯರಾಗುತ್ತಿದ್ದಾರೆ. ಇಂಥ ಸಹೋದರತ್ವ ಯೆಹೋವನ ಸಾಕ್ಷಿಗಳಲ್ಲಿ ಇದೆ.—ಯೋಹಾನ 13:35.

ಯಾವುದೇ ರಕ್ಷಣೆಯಿಲ್ಲದಂತೆ ತೋರುವ ಇಂಥ ಶಾಂತಿಶೀಲ ಜನರ ಮೇಲೆ ಬಲುಬೇಗನೆ ಸೈತಾನನು ತನ್ನ ಸೈನ್ಯಗಳ ಮುಖಾಂತರ ಆಕ್ರಮಣ ಮಾಡಲಿದ್ದಾನೆ. ಅವನ ದಾಳಿಗಳಲ್ಲೇ ಇದು ದೊಡ್ಡದು. (ಯೆಹೆಜ್ಕೇಲ 38:8-12; ಪ್ರಕಟನೆ 16:13, 14, 16) ಇದು ಆಗಲಿದೆಯೆಂದು ಖಡಾಖಂಡಿತವಾಗಿ ಹೇಗೆ ಹೇಳಬಹುದು? ಅರ್ಮಗೆದ್ದೋನ್‌ ಯುದ್ಧ ಸನ್ನಿಹಿತವಿದೆಯೆಂದು ತಿಳಿಯಲು ನೆರವಾಗುವ ನಿರ್ದಿಷ್ಟ ಘಟನೆಗಳನ್ನು ಬೈಬಲಿನಲ್ಲಿ ವರ್ಣಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಈಗಾಗಲೇ ನಡೆಯುತ್ತಿವೆ.

ನಿಮ್ಮ ಕಣ್ಮುಂದೆ ನಡೆಯುತ್ತಿರುವ ಘಟನೆಗಳು

“ಲೋಕಾಂತ್ಯ” ಹತ್ತಿರವಾಗುತ್ತಿರುವುದನ್ನು ಗುರುತಿಸುವುದು ಹೇಗೆಂದು ಯೇಸುವಿನ ಶಿಷ್ಯರು ಆತನಿಗೆ ಕೇಳುತ್ತಾರೆ. (ಮತ್ತಾಯ 24:3, ಪವಿತ್ರ ಗ್ರಂಥ ಭಾಷಾಂತರ) ಇದಕ್ಕುತ್ತರವಾಗಿ ಯೇಸು ಅವರಿಗೆ ‘ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವ, ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವ’ ಒಂದು ಸಮಯಾವಧಿಯ ಬಗ್ಗೆ ಹೇಳಿದನು. “ಇವೆಲ್ಲವೂ ಸಂಕಟದ ಶೂಲೆಯ ಪ್ರಾರಂಭ” ಎಂದೂ ಹೇಳಿದನು. (ಮತ್ತಾಯ 24:7, 8) ಇದೇ ಸಮಯಾವಧಿಯನ್ನು ‘ಕಡೇ ದಿವಸಗಳು’ ಎಂದು ಯೇಸುವಿನ ಶಿಷ್ಯನಾದ ಪೌಲ ಕರೆದನು. ಇವು “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು” ಆಗಿರುವವೆಂದೂ ಹೇಳಿದನು. (2 ತಿಮೊಥೆಯ 3:1) ಈ ಭವಿಷ್ಯವಾಣಿಗಳು ಇಂದು ನಡೆಯುತ್ತಿರುವ ಘಟನೆಗಳನ್ನೇ ವರ್ಣಿಸುತ್ತಿರುವಂತೆ ಅನಿಸುತ್ತಿದೆಯೇ?

ಈ ಸಮಯಾವಧಿ ಏಕೆ ಕಷ್ಟಗಳಿಂದ ತುಂಬಿರುವುದು? ಇದರ ಕಾರಣವನ್ನು ಯೇಸುವಿನ ಶಿಷ್ಯ ಯೋಹಾನ ತಿಳಿಸಿದ್ದನು. ಅವನಂದಂತೆ ಸೈತಾನನಿಗೆ ಉಳಿದಿರುವ ಸಮಯ “ಸ್ವಲ್ಪ.” ಅಲ್ಲದೆ ಸೈತಾನ ಮತ್ತವನ ದುಷ್ಟ ದೂತರ ಚಟುವಟಿಕೆ ಭೂಮಿಗೆ ಮಾತ್ರ ಸೀಮಿತ. ಹಾಗಾಗಿ ಅವನು “ಮಹಾ ಕೋಪ”ದಿಂದ ಕಾರ್ಯವೆಸಗುತ್ತಿದ್ದಾನೆ. (ಪ್ರಕಟನೆ 12:7-12) ಇಂದು ಭೂಮಿಯ ಎಲ್ಲೋ ಒಂದು ಸ್ಥಳದಲ್ಲಿ ಮಾತ್ರವಲ್ಲ ಎಲ್ಲೆಡೆಯೂ ಜನರಲ್ಲಿ ಕೋಪ, ಹಿಂಸೆ ತುಂಬಿರುವುದನ್ನು ಗಮನಿಸಿದ್ದೀರಲ್ಲವೇ?

ಕಷ್ಟಗಳೇ ತುಂಬಿರುವ ಈ ಸಮಯದಲ್ಲಿ ಒಂದು ಅಸಾಧಾರಣ ಕೆಲಸವನ್ನೂ ಪೂರೈಸಲಾಗುವುದೆಂದು ಯೇಸು ಭವಿಷ್ಯನುಡಿದನು. ದೇವರ “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾಯ 24:14) ಯೆಹೋವನ ಸಾಕ್ಷಿಗಳು ಇಂದು 235ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ದೇವರ ರಾಜ್ಯದ ಕುರಿತ ಶುಭವಾರ್ತೆಯನ್ನು ಸಾರುತ್ತಿದ್ದಾರೆ, 500ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶನಗಳನ್ನು ವಿತರಿಸುತ್ತಿದ್ದಾರೆ. ಕಾವಲಿನಬುರುಜು ಮತ್ತು ಎಚ್ಚರ! ಎಂಬ ಬೈಬಲಾಧರಿತವಾದ ಎರಡು ಪತ್ರಿಕೆಗಳನ್ನು ಪ್ರಕಾಶಿಸುತ್ತಾರೆ. ಇವು ಲೋಕದ ಮೂಲೆಮೂಲೆಗೂ ತಲುಪಿ ಅತಿ ಹೆಚ್ಚು ವಿತರಣೆಯಾಗುವ ಪತ್ರಿಕೆಗಳಾಗಿವೆ. ಯೆಹೋವನ ಸಾಕ್ಷಿಗಳು ಬೈಬಲನ್ನೂ ಸುಮಾರು 100 ಭಾಷೆಗಳಿಗೆ ಅನುವಾದಿಸಿದ್ದಾರೆ. ಇದೆಲ್ಲವನ್ನು ಅವರು ಸ್ವಯಂಸೇವಕರಾಗಿ ಮಾಡುತ್ತಿದ್ದಾರೆ. ಇದು ಪೂರ್ತಿಯಾಗಿ ಸ್ವಯಂಪ್ರೇರಿತ ದಾನಗಳಿಂದ ನಡೆಯುತ್ತದೆ. ಸಾರುವ ಈ ಗಮನಾರ್ಹ ಕೆಲಸ ಯೇಸು ನುಡಿದ ಭವಿಷ್ಯವಾಣಿಯ ನೆರವೇರಿಕೆ ಆಗಿರಬಹುದೇ?

ಯೆಹೋವ ದೇವರ ಮತ್ತು ಆತನ ವಿರೋಧಿಗಳ ನಡುವಿನ ಯುದ್ಧಕ್ಕೆ ನಡೆಸುವ ಘಟನೆಗಳನ್ನೂ ಬೈಬಲ್‌ ತಿಳಿಸುತ್ತದೆ. ನಿಮ್ಮ ಕಣ್ಮುಂದೆ ಸತ್ಯವಾಗಲಿರುವ ಮೂರು ಭವಿಷ್ಯವಾಣಿಗಳು ಇಲ್ಲಿವೆ.

ನಿಮ್ಮ ಕಣ್ಮುಂದೆ ನಡೆಯಲಿರುವ ಘಟನೆಗಳು

ಭವಿಷ್ಯವಾಣಿ 1. ಲೋಕ ನಾಯಕರು “ಶಾಂತಿ ಮತ್ತು ಭದ್ರತೆ”ಯ ಮಹತ್ವದ ಘೋಷಣೆ ಮಾಡುವರೆಂದು ಬೈಬಲ್‌ ಹೇಳುತ್ತದೆ. ತಾವು ದೊಡ್ಡ ದೊಡ್ಡ ಸಮಸ್ಯೆಗಳನ್ನು ಇನ್ನೇನು ಇತ್ಯರ್ಥಗೊಳಿಸಿಯೇ ಬಿಡುವೆವೆಂದು ಅವರು ನೆನಸಬಹುದು. ಆದರೆ ಆ ಘೋಷಣೆ ಮಾಡಿದ ನಂತರ ಏನು ನಡೆಯಲಿದೆಯೊ ಅದು ಖಂಡಿತವಾಗಿ ಶಾಂತಿಯುತವಂತೂ ಆಗಿರುವುದಿಲ್ಲ!!—1 ಥೆಸಲೊನೀಕ 5:1-3.

ಭವಿಷ್ಯವಾಣಿ 2. ನಂತರ ಹಲವಾರು ಸರ್ಕಾರಗಳು ಈ ಲೋಕದ ಪ್ರಧಾನ ಧರ್ಮಗಳ ವಿರುದ್ಧ ಕ್ರಮಗೈಯುವವು. ಈ ಸರ್ಕಾರಗಳನ್ನು ಬೈಬಲ್‌ ಒಂದು ಕಾಡುಮೃಗವಾಗಿ ಚಿತ್ರಿಸುತ್ತದೆ. ಲೋಕದ ಸುಳ್ಳು ಧರ್ಮಗಳನ್ನು ಆ ಮೃಗದ ಬೆನ್ನಮೇಲೆ ಕುಳಿತಿರುವ ಸ್ತ್ರೀ ಎಂದು ಚಿತ್ರಿಸಲಾಗಿದೆ. (ಪ್ರಕಟನೆ 17:3, 15-18) ಆ ಸಾಂಕೇತಿಕ ಮೃಗವು ದೇವರನ್ನು ಪ್ರತಿನಿಧಿಸುತ್ತವೆಂದು ಹೇಳಿಕೊಳ್ಳುವ ಧರ್ಮಗಳನ್ನು ನಾಶಮಾಡುತ್ತದೆ. ಈ ಮೂಲಕ ಅದು ಅರಿವಿಲ್ಲದೆ ದೇವರ ಉದ್ದೇಶವನ್ನೇ ಪೂರೈಸುತ್ತದೆ.

ಇದೆಲ್ಲವನ್ನು ದರ್ಶನ ರೂಪದಲ್ಲಿ ಕಂಡ ಶಿಷ್ಯ ಯೋಹಾನನು ಅದನ್ನು ಹೀಗೆ ವರ್ಣಿಸುತ್ತಾನೆ: “ಹತ್ತು ಕೊಂಬುಗಳು ಮತ್ತು ಕಾಡುಮೃಗವು ಆ ವೇಶ್ಯೆಯನ್ನು ದ್ವೇಷಿಸಿ ಅವಳನ್ನು ಗತಿಗೆಡಿಸಿ ನಗ್ನಳನ್ನಾಗಿ ಮಾಡಿ ಅವಳ ಮಾಂಸಲ ಭಾಗಗಳನ್ನು ತಿಂದು ಅವಳನ್ನು ಬೆಂಕಿಯಿಂದ ಪೂರ್ಣವಾಗಿ ಸುಟ್ಟುಬಿಡುವವು. ಏಕೆಂದರೆ ದೇವರು ತನ್ನ ಯೋಚನೆಯನ್ನು . . . ಅವರ ಹೃದಯಗಳಲ್ಲಿ ಹಾಕಿದನು.”—ಪ್ರಕಟನೆ 17:16, 17.

ಭವಿಷ್ಯವಾಣಿ 3. ಸುಳ್ಳು ಧರ್ಮಗಳ ಮೇಲಿನ ಈ ದಾಳಿಯಲ್ಲಿ ಯಶಸ್ವಿಯಾದ ಸರ್ಕಾರಿ ಹಾಗೂ ಮಿಲಿಟರಿ ಸಂಘಟನೆಗಳನ್ನು ಸೈತಾನನು ಯೆಹೋವ ದೇವರ ಆರಾಧಕರ ಮೇಲೆರಗಲು ಒಟ್ಟುಗೂಡಿಸುವನು.—ಪ್ರಕಟನೆ 7:14; ಮತ್ತಾಯ 24:21.

ನೀವೇನು ಮಾಡುವಿರಿ?

ಬೈಬಲನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲು ನಿಮಗೆ ಈ ವರೆಗೆ ಅವಕಾಶ ಸಿಕ್ಕಿರದಿದ್ದಲ್ಲಿ, ಮೇಲೆ ತಿಳಿಸಲಾಗಿರುವ ಘಟನೆಗಳು ನಡೆಯುವವೆಂದು ನಂಬಲು ನಿಮಗೆ ಕಷ್ಟವಾದೀತು. ಆದರೆ ಪ್ರತಿಯೊಂದು ಭವಿಷ್ಯವಾಣಿಯೂ ಚಾಚೂತಪ್ಪದೆ ನೆರವೇರುವುದು, ಅದೂ ಅತಿ ಬೇಗನೆ ನೆರವೇರುವುದೆಂದು ನಂಬಲು ಬಲವಾದ ಕಾರಣವಿದೆ. ಏಕೆಂದರೆ ಬೈಬಲಿನ ಅನೇಕಾನೇಕ ಭವಿಷ್ಯವಾಣಿಗಳು ಈಗಾಗಲೇ ಚಾಚೂತಪ್ಪದೆ ನೆರವೇರಿವೆ.a

“ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಸನ್ನಿಹಿತವಾಗಿದೆ ಎಂದು ಯೆಹೋವನ ಸಾಕ್ಷಿಗಳಿಗೆ ಏಕೆ ಖಾತ್ರಿಯಿದೆ ಮತ್ತು ಆ ಯುದ್ಧದ ಬಗ್ಗೆ ನೀವೇಕೆ ಹೆದರಬೇಕಾಗಿಲ್ಲ ಎಂದು ತಿಳಿಯಲು ನಿಮಗೆ ಮನಸ್ಸಿದೆಯೇ? ಹಾಗಿದ್ದರೆ ಸ್ವಲ್ಪ ಸಮಯ ಮಾಡಿಕೊಂಡು, ಅವರೊಂದಿಗೆ ಈ ವಿಷಯದ ಬಗ್ಗೆ ಮಾತಾಡಿ. ಆ ಯುದ್ಧದಲ್ಲಿ ಯೆಹೋವನು ರಕ್ಷಿಸುವವರ ಪೈಕಿ ನೀವೂ ಒಬ್ಬರಾಗಿರಲು ಏನು ಮಾಡಬೇಕೆಂದು ಬೈಬಲ್‌ ಹೇಳುತ್ತದೋ ಅದನ್ನು ಅವರಿಂದ ತಿಳಿದುಕೊಳ್ಳಿ. (ಪ್ರಕಟನೆ 16:14) ನೀವು ತಿಳಿದುಕೊಳ್ಳುವ ಸಂಗತಿಗಳು ಭವಿಷ್ಯದ ಕುರಿತ ನಿಮ್ಮ ನೋಟವನ್ನೇ ಬದಲಿಸೀತು. (w12-E 02/01)

[ಪಾದಟಿಪ್ಪಣಿ]

a ಬೈಬಲ್‌ ಭವಿಷ್ಯವಾಣಿಗಳು ನೆರವೇರಿವೆ ಎಂಬ ಪುರಾವೆಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 2 ಮತ್ತು 9ನ್ನು ಓದಿ.

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನ ಸಾಕ್ಷಿಗಳ ಕೆಲಸವು ಯೇಸು ನುಡಿದ ಭವಿಷ್ಯವಾಣಿಯ ನೆರವೇರಿಕೆ ಆಗಿರಬಹುದೇ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ