ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 8/15 ಪು. 30
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಅನುರೂಪ ಮಾಹಿತಿ
  • ಯೆಹೋವನಿಂದ ಶಕ್ತಿ ಪಡೆದ ಸಂಸೋನ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅತಿ ಬಲಿಷ್ಠ ಪುರುಷ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋವನ ಬಲದಿಂದ ಸಂಸೋನನು ಜಯಗಳಿಸುತ್ತಾನೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಸಂಸೋನನ ತರ ಯೆಹೋವನನ್ನ ನಂಬಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 8/15 ಪು. 30

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಸಂಸೋನನ ತಲೆಗೂದಲೇ ಅವನಲ್ಲಿದ್ದ ಮಹಾಶಕ್ತಿಗೆ ಕಾರಣವಾಗಿತ್ತಾ?

ಇಲ್ಲ. ಸಂಸೋನನ ತಲೆಗೂದಲು ಅವನ ಶಕ್ತಿಗೆ ಕಾರಣವಾಗಿರಲಿಲ್ಲ. ಅದು, ಒಬ್ಬ ನಾಜೀರನಾಗಿ ಸಂಸೋನನು ಯೆಹೋವನೊಂದಿಗೆ ಹೊಂದಿದ್ದ ವಿಶೇಷ ಸಂಬಂಧಕ್ಕೆ ಗುರುತಾಗಿತ್ತು. ದೆಲೀಲಳು ಕುತಂತ್ರದಿಂದ ಸಂಸೋನನ ತಲೆಗೂದಲನ್ನು ಬೋಳಿಸಿದಾಗ ಯೆಹೋವನೊಂದಿಗಿನ ಸಂಬಂಧಕ್ಕೆ ಧಕ್ಕೆಯುಂಟಾಯಿತು.​—4/15, ಪುಟ 9.

ನಮ್ಮ ಶಾರೀರಿಕ ಹೃದಯದ ಆರೋಗ್ಯಕ್ಕೆ ಬೇಕಾಗಿರುವಂತೆಯೇ ನಮ್ಮ ಸಾಂಕೇತಿಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಯಾವ ಮೂರು ಅಂಶಗಳು ಸಹಾಯ ಮಾಡುತ್ತವೆ?

(1) ಪೋಷಣೆ. ನಮ್ಮ ಹೃದಯಕ್ಕೆ ಆರೋಗ್ಯಕರ ಆಹಾರ ಅಗತ್ಯವಿರುವಂತೆ ಸಾಂಕೇತಿಕ ಹೃದಯಕ್ಕೂ ಆರೋಗ್ಯಪೂರ್ಣ ಆಧ್ಯಾತ್ಮಿಕ ಆಹಾರ ಸಾಕಷ್ಟು ಅಗತ್ಯ. (2) ವ್ಯಾಯಾಮ. ಕ್ಷೇತ್ರಸೇವೆಯಲ್ಲಿ ಹುರುಪಿನಿಂದ ಭಾಗವಹಿಸುವುದು ನಮ್ಮ ಆಧ್ಯಾತ್ಮಿಕ ಹೃದಯವನ್ನು ಆರೋಗ್ಯಕರವಾಗಿ ಇಡುತ್ತದೆ. (3) ಪರಿಸ. ನಮ್ಮ ಬಗ್ಗೆ ಅಕ್ಕರೆ ತೋರಿಸುವ ಜೊತೆ ವಿಶ್ವಾಸಿಗಳೊಂದಿಗೆ ಹೆಚ್ಚೆಚ್ಚು ಸಹವಾಸ ಮಾಡುವಾಗ ಒತ್ತಡವನ್ನು ಕಡಿಮೆಗೊಳಿಸಬಲ್ಲೆವು.​—4/15, ಪುಟ 16.

ಶವಸಂಸ್ಕಾರ ಭಾಷಣ ಕೊಡುವಾಗ ಕೀರ್ತನೆ 116:15 ನ್ನು ಮೃತ ವ್ಯಕ್ತಿಗೆ ಅನ್ವಯಿಸಿ ಹೇಳುವುದು ತಕ್ಕದ್ದಲ್ಲ ಏಕೆ?

“ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವದಿಲ್ಲ” ಎಂದು ವಚನ ತಿಳಿಸುತ್ತದೆ. ಯೆಹೋವ ದೇವರಿಗೆ ತನ್ನ ನಿಷ್ಠಾವಂತ ಆರಾಧಕರ ಇಡೀ ಸಮೂಹ ಅಮೂಲ್ಯವಾಗಿದೆ, ತನ್ನ ಭಕ್ತರ ಇಡೀ ಸಮೂಹ ಮರಣಕ್ಕೀಡಾಗಿ ನಾಶವಾಗುವುದನ್ನು ಆತನು ಅನುಮತಿಸುವುದಿಲ್ಲ ಎಂದು ಆ ಮಾತುಗಳು ಸೂಚಿಸುತ್ತವೆ. ತನ್ನ ನಿಷ್ಠಾವಂತ ಆರಾಧಕರೆಲ್ಲರು ನಿರ್ನಾಮವಾಗುವಂತೆ ಯೆಹೋವನು ಬಿಡುವುದಿಲ್ಲ ಎಂಬ ಭರವಸೆ ಕೊಡುತ್ತದೆ.​—5/15, ಪುಟ 22.

ಕಾಲ್ಪೋರ್ಟರರು ಯಾರು?

ಪಯನೀಯರರನ್ನು 1931ಕ್ಕಿಂತ ಮೊದಲು ‘ಕಾಲ್ಪೋರ್ಟರ್ಸ್‌’ ಎಂದು ಕರೆಯಲಾಗುತ್ತಿತ್ತು.​—5/15, ಪುಟ 31.

ದಾನಿಯೇಲ 2:44ರಲ್ಲಿ ತಿಳಿಸಲಾಗಿರುವ “ಆ ರಾಜ್ಯಗಳನ್ನೆಲ್ಲಾ” ಅಂದರೆ ಯಾವ ರಾಜ್ಯಗಳು?

ಇದು ದಾನಿಯೇಲನು ಅರ್ಥವಿವರಿಸಿದ ಲೋಹದ ಪ್ರತಿಮೆಯ ವಿವಿಧ ಭಾಗಗಳಿಂದ ಸೂಚಿತವಾದ ರಾಜ್ಯಗಳನ್ನು ಅಥವಾ ಸರ್ಕಾರಗಳನ್ನು ಸೂಚಿಸುತ್ತದೆ.​—6/15, ಪುಟ 17.

ಆಂಗ್ಲೋ-ಅಮೆರಿಕ ಲೋಕಶಕ್ತಿ ಬೈಬಲ್‌ ಪ್ರವಾದನೆಯಲ್ಲಿ ತಿಳಿಸಿರುವ ಏಳನೇ ಲೋಕಶಕ್ತಿಯಾದದ್ದು ಯಾವಾಗ?

ಈ ಉಭಯ ಲೋಕಶಕ್ತಿ ಅಸ್ತಿತ್ವಕ್ಕೆ ಬಂದದ್ದು ಒಂದನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ ಮತ್ತು ಅಮೆರಿಕ ಎರಡೂ ಜೊತೆಗೂಡಿ ಮಹತ್ತಾದ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ.​—6/15, ಪುಟ 19.

ಯಾವ ಘಟನೆಗಳು ಅರ್ಮಗೆದ್ದೋನ್‌ ಯುದ್ಧಕ್ಕೆ ನಡೆಸುತ್ತವೆ?

ಲೋಕ ನಾಯಕರು “ಶಾಂತಿ ಮತ್ತು ಭದ್ರತೆ” ಎಂಬ ಮಹತ್ವದ ಘೋಷಣೆ ಮಾಡುವರು. (1 ಥೆಸ. 5:⁠3) ಸರ್ಕಾರಗಳು ಸುಳ್ಳು ಧರ್ಮಗಳ ವಿರುದ್ಧ ಕ್ರಮ ಕೈಗೊಳ್ಳುವವು. (ಪ್ರಕ.17:​15-18) ಸತ್ಯಾರಾಧಕರ ಮೇಲೆ ಆಕ್ರಮಣ ಮಾಡಲಾಗುವುದು. ಆಗ ಲೋಕಾಂತ್ಯವಾಗುವುದು.​—⁠7/1, ಪುಟ 9.

ತನ್ನ ಪ್ರಿಯ ಮಗನನ್ನೇ ಬಲಿಕೊಡುವಂತೆ ಯೆಹೋವನು ಅಬ್ರಹಾಮನಿಗೆ ಹೇಳಿದ್ದೇಕೆ?

ನೆನಪಿಡಬೇಕಾದ ಮುಖ್ಯ ವಿಷಯವೆನೆಂದರೆ, ಇಸಾಕನನ್ನು ಬಲಿಯಾಗಿ ಅರ್ಪಿಸುವಂತೆ ಅಬ್ರಹಾಮನಿಗೆ ಯೆಹೋವನು ಹೇಳಿದ್ದರೂ ಹಾಗೆ ಮಾಡುವಂತೆ ಅನುಮತಿಸಲಿಲ್ಲ. ಈ ಘಟನೆಯ ಮೂಲಕ ದೇವರು ಶತಮಾನಗಳ ನಂತರ ತನ್ನ ಮಗನಾದ ಯೇಸುವನ್ನು ಬಲಿಯಾಗಿ ಅರ್ಪಿಸುವಾಗ ತನಗಾಗುವ ಅಪಾರ ವೇದೆನೆಯನ್ನು ಮನಮುಟ್ಟುವ ವಿಧದಲ್ಲಿ ತೋರಿಸಿದನು.​—⁠7/1 ಪುಟ 20.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ