ಇತರರೊಂದಿಗೆ ಆತ್ಮಿಕ ಐಶ್ವರ್ಯವನ್ನು ಹಂಚಿರಿ
1 ನಂಬಿಗಸ್ತನಾದ ಮೋಶೆಯಂತೆ, ಆಧುನಿಕ ಯೆಹೋವನ ಸಾಕ್ಷಿಗಳಿಗೆ ಈ ಲೋಕದ ಭೌತಿಕ ನಿಕ್ಷೇಪಗಳು ಬೆಲೆಯಲ್ಲಿ ಆತ್ಮಿಕ ಐಶ್ವರ್ಯಕ್ಕೆ ಎಂದೂ ತುಲನೆಯಾಗವು ಎಂದು ತಿಳಿದದೆ. (ಇಬ್ರಿ. 11:26) ಹಣವು ಮನೆಗಳನ್ನು, ಕಾರುಗಳನ್ನು ಮತ್ತು ಇತರ ಸೊತ್ತುಗಳನ್ನು ಖರೀದಿಸಬಲ್ಲದು, ಆದರೆ ಜೀವ, ಮನೋಶಾಂತಿ ಮತ್ತು ಯೆಹೋವ ದೇವರ ಮೆಚ್ಚಿಗೆ ಹಾಗೂ ಆಶೀರ್ವಾದವನ್ನು ಅದೆಂದೂ ಗಳಿಸಲಾರದು.
2 ದೇವರ ವಾಕ್ಯ ಮತ್ತು ಉದ್ದೇಶದ ಜ್ಞಾನ ಮತ್ತು ತಿಳುವಳಿಕೆಯು ನಿಜ ಆತ್ಮಿಕ ಐಶ್ವರ್ಯವಾಗಿದೆ. (ಕೊಲೊ. 2:3) ಈ ಅಸದೃಶ ಐಶ್ವರ್ಯವು ಈಗ ನಿಜ ಸಂತೋಷವನ್ನು ತರುತ್ತದೆ ಮಾತ್ರವಲ್ಲ ಭವಿಷ್ಯತ್ತಿಗಾಗಿ ದೃಢವಾದ ನಿರೀಕ್ಷೆಯನ್ನೂ ಕೊಡುತ್ತದೆ. ಅಂತಹ ಆತ್ಮಿಕ ಐಶ್ವರ್ಯವನ್ನು ಪಡೆಯಲು ನಾವೆಷ್ಟು ಅನುಗ್ರಹಿತರು!.
ಇತರರನ್ನು ಐಶ್ವರ್ಯವಂತರಾಗಿ ಮಾಡುವ ವಿಧ
3 ವಾಚ್ಟವರ್ ಪತ್ರಿಕೆಯನ್ನು ಪರಿಚಯಿಸುವ ಮೂಲಕ ನಾವು ಇನ್ನು ಅನೇಕರನ್ನು ಆತ್ಮಿಕವಾಗಿ ಐಶ್ವರ್ಯವಂತರಾಗಿ ಮಾಡ ಸಾಧ್ಯವಿದೆ, ಯಾಕಂದರೆ ಅದು ಅವರನ್ನು ದೇವರ ಜ್ಞಾನವೆಂಬ ‘ಅಡಗಿರುವ ನಿಕ್ಷೇಪದ’ ಕಡೆಗೆ ನಡಿಸುವುದು. (ಜ್ಞಾನೋ. 2:4) ಜೂನ್ನಲ್ಲಿ ಸಿಗುವ ಪ್ರತಿಯೊಂದು ಯುಕ್ತ ಸಂಧಿಯಲ್ಲಿ ನಾವು ವಾಚ್ಟವರ್ ಚಂದಾವನ್ನು ನೀಡಲಿರುವೆವು. ನಮ್ಮ ಜೀವಿತವನ್ನು ವಾಚ್ಟವರ್ ಹೇಗೆ ಸಮೃದ್ಧವನ್ನಾಗಿ ಮಾಡಿದೆಂದು ನಾವು ಮನಸ್ಸಲ್ಲಿಟ್ಟರೆ, ನಾವು ಹಿಂದೆ ಸರಿಯದೆ ನಮ್ಮಿಂದಾದಷ್ಟು ಹೆಚ್ಚು ಜನರಿಗೆ ಅದನ್ನು ನೀಡುವ ಹಾದಿಗಳನ್ನು ಹುಡುಕುವೆವು. (ಜ್ಞಾನೋ. 3:27) ಎಲ್ಲಿ ಬಿಡಿಪತ್ರಿಕೆಗಳನ್ನು ಮತ್ತು ಬ್ರೊಷರುಗಳನ್ನು ನೀಡಲಾಗಿದೆಯೋ ಅಲ್ಲಿ ಅವರನ್ನು ಪುನ: ಸಂದರ್ಶಿಸುವ, ಮತ್ತು ಕ್ರಮವಾಗಿ ಪತ್ರಿಕೆ ಒಯ್ದು ನಿಮ್ಮ ಸ್ವಂತ ಪತ್ರಿಕಾ ಮಾರ್ಗವನ್ನು ಮಾಡುವ ನೋಟದಿಂದ ವಿಳಾಸಗಳನ್ನು ಬರೆದಿಡಿರಿ.
4 ಒಂದು ಆತ್ಮಿಕ ಅರ್ಥದಲ್ಲಿ, ತನ್ನ ಬೆಲೆಯುಳ್ಳ ವಸ್ತುಗಳನ್ನು ಉದಾರವಾಗಿ ದಾನಮಾಡಿದ ಆ 112ನೇ ಕೀರ್ತನೆಯ ದೇವಭೀರು ಮನುಷ್ಯನಂತೆ ನಾವು ಹೇಗಿರುವೆವು? (ಕೀರ್ತ. 112:1, 3, 9) ಕುರಿಸದೃಶ ಜನರನ್ನು ಹುಡುಕಿ ಅವರ ಆತ್ಮಿಕ ಹಸಿವನ್ನು ತಣಿಸುವ ಅಗತ್ಯ ನಮಗಿದೆ. (ಮತ್ತಾ.5:3) ಇದು ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ದೊರೆಯುವ ಪ್ರತಿಯೊಂದು ಸಂದರ್ಭದ ಸದುಪಯೋಗ ಮಾಡುವಂತೆ ನಮ್ಮನ್ನು ಕೇಳಿಕೊಳ್ಳುತ್ತದೆ.
5 ಕೆಲವು ಕ್ಷೇತ್ರಗಳಲ್ಲಿ ಸಂಜಾವೇಳೆಯ ಸಾಕ್ಷಿಯು ಅತಿ ಫಲಕಾರಿಯು ಯಾಕಂದರೆ ಆಗ ಹೆಚ್ಚಿನ ಜನರು ಮನೆಯಲ್ಲಿರುವ ಸಂಭವವಿದೆ. ನಿಮ್ಮ ಸಭಾ ಪುಸ್ತಕಭ್ಯಾಸದ ಮುಂಚೆ ಅಥವಾ ವಾರದ ಇನ್ನೊಂದು ಸಂಜೆಯಲ್ಲಿ ಒಂದೆರಡು ತಾಸಿನ ಸೇವೆಯನ್ನು ನೀವು ಪ್ರಯತ್ನಿಸಿ ನೋಡಿದ್ದೀರೋ? ಇದನ್ನು ಮಾಡಲು ನಿಶ್ಚಿತ ಏರ್ಪಾಡುಗಳನ್ನು ಏಕೆ ಮಾಡಬಾರದು? ಇದು ನಿಮಗೆ ಅತ್ಯಂತ ಫಲಕಾರಿಯಾಗಿ ಪರಿಣಮಿಸಬಹುದು.
6 ನಿಮ್ಮ ಕೆಲ್ಸದ ಸ್ಥಳದಲ್ಲಿ ಸಾಕ್ಷಿಕೊಡಲು ತಕ್ಕದಾದ ಸಮಯವನ್ನು ನೀವು ಕಂಡುಕೊಳ್ಳಬಲ್ಲಿರೋ? ಒಬ್ಬಾಕೆ ಸಹೋದರಿ ತನ್ನ ಡೆಸ್ಕಿನ ಮೇಲೆ ಹಲವಾರು ಪತ್ರಿಕೆಗಳನ್ನು ಹರಡಿ, ಜತೆ ಕೆಲ್ಸಗಾರರು ಹಾದುಹೋಗುವಾಗ ನೋಡುವಂತೆ ಇಡುತ್ತಿದ್ದಳು. ಬೆಳಿಗ್ಗೆಯು ತೀರುವ ಮುಂಚೇ ಎಲ್ಲಾ ಪತ್ರಿಕೆಗಳು ನೀಡಲ್ಪಟ್ಟವು. ಅವಳ ಸಹೋದ್ಯೋಗಿಗಳಲ್ಲಿ ಹಲವಾರು ಮಂದಿ ನಿಜಾಸಕ್ತಿಯನ್ನು ತೋರಿಸಿದರು ಮತ್ತು ಅವಳು 18 ಚಂದಾಗಳನ್ನು ನೀಡಶಕ್ತಳಾದಳು.
7 ಯೆಹೋವನ ಸಂಸ್ಥೆಯ ಮೂಲಕ ಮತ್ತು ನಮ್ಮ ಬೈಬಲ್ ಅಧ್ಯಯನದ ಮೂಲಕ ನಾವು ಗಳಿಸಿದ ಜ್ಞಾನ ಮತ್ತು ತಿಳುವಳಿಕೆಯೆಂಬ ಆತ್ಮಿಕ ಐಶ್ವರ್ಯಕ್ಕೆ ಬೆಳ್ಳಿ, ಬಂಗಾರ ಮತ್ತು ಬೇರೆಲ್ಲಾ ಭೌತಿಕ ನಿಕ್ಷೇಪಗಳು ಎಂದೂ ತುಲನೆಯಾಗಲಾರವು. ಆತ್ಮಿಕ ಐಶ್ವರ್ಯವನ್ನು ಹುಡುಕುವವರಿಗೆ ನಿಜ ಸಂತೋಷ, ಸುಖ:ಕರವಾದ ದಾರಿ, ಸಮಾಧಾನ, “ದೀರ್ಘಾಯುಷ್ಯ”—ನಿತ್ಯಜೀವ ಸಹಾ— ಶಕ್ಯವಾಗಲಿದೆ. (ಜ್ಞಾನೋ. 3:13-18) ಇತರರೊಂದಿಗೆ ನಮ್ಮ ಆತ್ಮಿಕ ಐಶ್ವರ್ಯವನ್ನು ಹಂಚುವ ಮಾಲಕ, ನಮಗೆ ದೊರೆತ ವಿಷಯಗಳಿಗಾಗಿ ನಾವು ಗಣ್ಯತೆತೋರಿಸುವವರಾಗುತ್ತೇವೆ ಮತ್ತು ಸದಾ ಯೆಹೋವನ ಆಶೀರ್ವಾದವನ್ನು ಗಳಿಸುವೆವು.—ಜ್ಞಾನೋ. 19:17.