ದೇವಪ್ರಭುತ್ವ ವಾರ್ತೆಗಳು
◆ ಬೆನಿನ್ ಸರಕಾರವು ಜನವರಿ 23, 1990 ರಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯದ ಮೇಲಿದ್ದ ಬ್ಯಾನನ್ನು ಅಧಿಕೃತವಾಗಿ ತೆಗೆಯಿತು. ಜನವರಿ 28 ರಲ್ಲಿ ಕೊಟೊನೊ ಎಂಬಲ್ಲಿ ಸಹೋದರರು ಒಂದು ವಿಶೇಷ ಕೂಟದಲ್ಲಿ ಒಟ್ಟಾಗಿ ಕೂಡಿ ಬಂದು ಸಂತೋಷಿಸಿದರು ಮತ್ತು ಅವರೀಗ ತಮ್ಮ ದೇವಪ್ರಭುತ್ವ ಕಾರ್ಯದಲ್ಲಿ ಮುಂದೊತ್ತಲು ಮುನ್ನೋಡುತ್ತಿದ್ದಾರೆ.
◆ ಕೊಲಂಬಿಯಾದಲ್ಲಿ ಒಳ್ಳೇ ವೃದ್ಧಿಯಾಗುತ್ತಾ ಇದೆ. ಜನವರಿಯಲ್ಲಿ ಅವರು 43,850 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಮುಟ್ಟಿದರು ಮತ್ತು 490 ಮಂದಿಗೆ ದೀಕ್ಷಾಸ್ನಾನವಾಯಿತು.
◆ ಕಾಸ್ಟಾರಿಕದಲ್ಲಿ ಮೊದಲನೆ ಎಸೆಂಬ್ಲಿ ಹಾಲನ್ನು ಕಟ್ಟುವರೇ ಜನವರಿ 26, 1990ಕ್ಕೆ ಪರವಾನಗಿ ಸಿಕ್ಕಿತು. ಅದರಲ್ಲಿ ಒಟ್ಟು 2,200 ಮಂದಿಯನ್ನು ಹಿಡಿಸುವ ಜಾಗವಿದೆ ಮತ್ತು ಒಂದು ವರ್ಷದೊಳಗೆ ಕಟ್ಟಿ ಮುಗಿಸುವಂತೆ ನಿರೀಕ್ಷಿಸಲಾಗಿದೆ.