ಸುವಾರ್ತೆಯನ್ನು ನೀಡುವದು—ಪತ್ರಿಕೆಗಳೊಂದಿಗೆ
1 ವಾಚ್ಟವರ್ ಮತ್ತು ಅವೇಕ್ ! ನಷ್ಟು ಉತ್ತಮ ಪ್ರಭಾವವನ್ನು ಇತಿಹಾಸದಲ್ಲಿ ಬೇರೆ ಯಾವ ಪತ್ರಿಕೆಗಳೂ ಜನರ ಜೀವಿತದ ಮೇಲೆ ಹಾಕುವುದಿಲ್ಲ. ಅದರ ಪ್ರತಿಯೊಂದು ಸಂಚಿಕೆಯೂ ಜೀವದಾಯಕ ಆತ್ಮಿಕ ಆಹಾರದಿಂದ ತುಂಬಿದೆ. ಬಲವಾದ ಶಾಸ್ತ್ರೀಯ ಆಧಾರದೊಂದಿಗೆ ನೀಡಲಾದ ಆಳವಾದ ಸಂಶೋಧನೆಯು ಅದರಲ್ಲಿರುವ ಸತ್ಯದ ಸಂದೇಶವನ್ನು ನಮ್ಮ ಹೃದ ಮತ್ತು ಮನದೊಳಗೆ ದೃಢವಾಗಿ ಅಚ್ಚೊತ್ತುತ್ತದೆ.
2 ವಾಚ್ಟವರ್ ತನ್ನ ಪುಟಗಳ ಮೂಲಕ ಬೈಬಲಿನ ಬೋಧನೆಯನ್ನು ವಿವರಿಸುತ್ತದೆ ಮತ್ತು ಬೈಬಲ್ ಪ್ರವಾದನೆಗಳ ನೆರವೇರಿಕೆಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಆತ್ಮಿಕವಾಗಿ ಹಸಿದ ಜನರೆಲ್ಲರೂ ತಮ್ಮ ಮನಸ್ಸುಗಳನ್ನು ರೂಪಾಂತರಿಸಿಕೊಳ್ಳುವಂತೆ ಮತ್ತು ಹೊಸ ವ್ಯಕ್ತಿತ್ವವನ್ನು ಧರಿಸುವಂತೆ ಅದು ಪ್ರೋತ್ಸಾಹಿಸುತ್ತದೆ. (ರೋಮಾ. 12:2; ಎಫೆ. 4:22-24) ಅವೇಕ್! ತನ್ನ ವಾಚಕರನ್ನು ಲೋಕದಲ್ಲಿ ನಡೆಯುವ ಗಮನಾರ್ಹ ವಿಷಯಗಳೆಡೆಗೆ ಎಚ್ಚರಿಸುತ್ತದೆ. ಸೃಷ್ಟಿಯ ಅದ್ಭುತಗಳನ್ನು ತೋರಿಸುವ ಅದರ ವಿಸ್ಮಯಕರ ಚಿತ್ರಗಳು ಹೊಸಲೋಕದಲ್ಲಿ ಆಸಕ್ತಿಯನ್ನು ಬಡಿದೆಬ್ಬಿಸುತ್ತದೆ ಮತ್ತು ಪ್ರೀತಿಯುಳ್ಳ ನಿರ್ಮಾಣಿಕನ ಕಡೆಗೆ ನಮ್ಮ ಗಣ್ಯತೆಯನ್ನು ಆಳಗೊಳಿಸುತ್ತದೆ.
ಐಹಿಕ ಪತ್ರಿಕೆಗಳಂತೆ ಅಲ್ಲ
3 ಈ ಲೋಕದಲ್ಲಿ ತೃಪ್ತಿಕರವಾದ ಜೀವಿತವನ್ನು ಜೀವಿಸುವುದು ಹೇಗೆಂಬದನ್ನು ಐಹಿಕ ಪತ್ರಿಕೆಗಳು ಜನತೆಗೆ ತೋರಿಸುವದಿಲ್ಲ. ಅವು ಭವಿಷ್ಯತ್ತಿಗಾಗಿ ಯಾವ ನಿರೀಕ್ಷೆಯನ್ನೂ ಕೊಡುವುದಿಲ್ಲ ಮತ್ತು ನಿತ್ಯಜೀವವನ್ನು ಪಡೆಯುವದು ಹೇಗೆಂಬದನ್ನು ಜನರಿಗೆ ಕಲಿಸಲು ತಪ್ಪುತ್ತವೆ. ಆ ಲೌಕಿಕ ಪತ್ರಿಕೆಗಳು ಲೋಕದ ವಿಷಯಗಳನ್ನು ಪ್ರವರ್ಧಿಸುವದಕ್ಕಾಗಿ ರಚಿಸಲ್ಪಟ್ಟಿವೆ. ವಾಚ್ಟವರ್ ಮತ್ತು ಅವೇಕ್ ! ಕ್ಕಿಂತ ಇದು ಎಂತಹ ವ್ಯತ್ಯಾಸ !—1 ಯೋಹಾನ 2:15-17.
4 “ನಂಬಿಗಸ್ತ ಮನೆವಾರ್ತೆಯವ”ನಿಂದ ಬರುವ ಸತ್ಯದ ಸುವಾಸನೆಗಳು ಅಡಕವಾಗಿರುವ ವಾಚ್ಟವರ್ ಮತ್ತು ಅವೇಕ್!ನ ಪ್ರತಿಯೊಂದು ಸಂಚಿಕೆಗಾಗಿ ನೀವು ಸ್ವತಃ ಆಳವಾದ ಕೃತಜ್ಞತೆ ತೋರಿಸುತ್ತೀರೆಂಬದಕ್ಕೆ ಯಾವ ಸಂದೇಹವೂ ಇಲ್ಲ. (ಲೂಕ 12:42) ಹೀಗಿರಲಾಗಿ, ನಮ್ಮ ಪತ್ರಿಕಾ ನೀಡಿಕೆಗಳನ್ನು ಹೆಚ್ಚಿಸಲು ಮತ್ತು ಅವುಗಳಿಂದ ಹೆಚ್ಚು ಜನರು ಪ್ರಯೋಜನ ಹೊಂದುವಂತೆ ಮಾಡಲು ನಾವು ಏನು ಮಾಡಬಹುದು?
ನಮ್ಮ ಪಾಲನ್ನು ಮಾಡುವುದು
5 ಪ್ರಾಮಾಣಿಕ ಹೃದಯದ ಜನರು ನಮ್ಮ ಪತ್ರಿಕೆಗಳನ್ನು ಓದುವಂತೆ ಯೋಗ್ಯವಾಗಿ ಉತ್ತೇಜಿಸುವ ಮೊದಲು, ಅವುಗಳಲ್ಲಿ ಅಡಕವಾಗಿರುವ ವಿಷಯಗಳನ್ನು ನಾವು ತಿಳಿಯುವ ಅಗತ್ಯವದೆ. ಶುಶ್ರೂಷೆಯಲ್ಲಿ ಉಪಯೋಗಿಸುವ ಮೊದಲು ಪ್ರತಿಯೊಂದು ಸಂಚಿಕೆಯನ್ನು ಓದುವಂತೆ ಇದು ಕೇಳಿಕೊಳ್ಳುತ್ತದೆ. ಅದರ ವಿಷಯಗಳನ್ನು ಪೂರಾ ರೀತಿಯಲ್ಲಿ ಪರಿಚಯ ಮಾಡಿಕೊಂಡ ನಂತರ ಪತ್ರಿಕೆಗಳನ್ನು ಹಂಚಲು, ಮನೆಮನೆಯ ಸೇವೆ, ಬೀದಿ ಸಾಕ್ಷಿ, ಮತ್ತು ಅನೌಪಚಾರಿಕ ಸಾಕ್ಷಿಯ ವಿಧಾನಗಳನ್ನು ನಾವು ಬಳಸಬಹುದು.
6 ಅದಲ್ಲದೆ ಶಾಪಿಂಗ್ ಮಾಡುವಾಗ, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ, ಶಾಲೆಯಲ್ಲಿ ಮತ್ತು ನಮ್ಮ ಐಹಿಕ ಕೆಲಸದ ಸ್ಥಳಗಳಲ್ಲಿ, ಹಾಗೂ ನಾವು ಹೋಗುವಲ್ಲೆಲ್ಲಾ ಸಾಕ್ಷಿಕೊಡಲು, ತಕ್ಕದ್ದಾದ ಸಂದರ್ಭಗಳನ್ನು ಹುಡುಕಿರಿ. ರೀಸನಿಂಗ್ ಪುಸ್ತಕದಿಂದ ಉತ್ತಮವಾಗಿ ಆಯ್ದ ಒಂದು ಪೀಠಿಕೆಯೊಂದಿಗೆ ಲೇಖನಗಳಲ್ಲಿನ ಒಂದು ವಿಷಯವನ್ನು ಸೇರಿಸಿ ಮಾತಾಡುವುದಾದರೆ, ಪತ್ರಿಕೆಗಳನ್ನೋದಲು ವ್ಯಕ್ತಿಯು ಅಪೇಕ್ಷೆ ಪಟ್ಟಾನು.
7 ಪತ್ರಿಕೆಗಳನ್ನು ನೀಡುವಾಗ ನಮ್ಮ ಸಂಭಾಷಣೆಯು ಸಂಕ್ಷಿಪ್ತವಾಗಿರಬೇಕಾದರೂ ನಮ್ಮ ಚರ್ಚೆಯನ್ನು ಕೇವಲ ಒಂದೇ ಮಿನಿಟಿಗೆ ಸೀಮಿತವಾಗಿಡಬೇಕಾದ ಅವಶ್ಯವಿಲ್ಲ. ವ್ಯಕ್ತಿಗೆ ನಿಜವಾಗಿ ಸಂದೇಶದಲ್ಲಿ ಆಸಕ್ತಿ ಇದೆಯೋ ಮತ್ತು ಅವನು ನಮ್ಮ ಪತ್ರಿಕೆ ಓದುವನೋ ಎಂದು ನಿರ್ಣಯಿಸಲು ನಾವು ಸಮಯ ತಕ್ಕೊಳ್ಳಬೇಕು. ಪ್ರಶ್ನೆಗಳೆದ್ದರೆ ನಮ್ಮ ಬೈಬಲನ್ನು ಯಾ ರೀಸನಿಂಗ್ ಪುಸ್ತಕ ಉಪಯೋಗಿಸಿ ಅವನ್ನುತ್ತರಿಸಲು ಪ್ರಯತ್ನಿಸಬೇಕು. ನಮ್ಮ ನಂಬಿಕೆಯನ್ನು ಸಮರ್ಥಿಸಲು ಸಿದ್ಧರಾಗಿರುವ ಮೂಲಕ ಆಶ್ಚರ್ಯಕರವಾದ ಆಶೀರ್ವಾದಗಳನ್ನು ಕೊಯ್ಯುವೆವು.—1 ಪೇತ್ರ 3:15.
8 ವ್ಯಕ್ತಿಯು ಪತ್ರಿಕೆಗಳನ್ನು ಓದಲು ಒಪ್ಪಿದರೆ ನಾವು ಪತ್ರಿಕೆಯ ಗುಣಧರ್ಮದ ಕುರಿತು ಮತ್ತು ಈ ಪತ್ರಿಕೆಗಳು ಹೇಗೆ ಜಗವ್ಯಾಪ್ತ ಬೈಬಲ್ ಶಿಕ್ಷಣಕಾರ್ಯದ ಭಾಗವಾಗಿ ತಿಂಗಳಿಗೆರಡು ಬಾರಿ ಪ್ರಕಟವಾಗುತ್ತವೆಂದು ತಿಳಿಸಬಹುದು. ವಾಚ್ಟವರ್ನ 2ನೇ ಪುಟ ಅಥವಾ ಅವೇಕ್ ! ನ 4ನೇ ಪುಟದಲ್ಲಿರುವ ಸಮಾಚಾರವು ಇದನ್ನು ಉತ್ತಮವಾಗಿ ವಿವರಿಸುತ್ತದೆ. ಮುಂದಣ ಸಂಚಿಕೆಯ ವಿಷಯಗಳು ಯಾವಾಗಲೂ ತಿಳಿಸಲ್ಪಡುವದರಿಂದ, ಸಂಬಂಧಿತ ಪ್ರಶ್ನೆಗಳನ್ನು ಹಾಕಬಹುದು ಯಾ ಮುಂದಣ ಲೇಖನಗಳ ಕಡೆಗೆ ಗಮನ ಸೆಳೆಯಬಹುದು. ಇದು ವ್ಯಕ್ತಿಯ ಆಸಕ್ತಿಯನ್ನು ಎಬ್ಬಿಸಬಹುದು ಮತ್ತು ಮುಂದಣ ಸಂಚಿಕೆಯು ಬರುವಾಗ ಅದನ್ನು ಪಡೆಯುವ ಅಪೇಕ್ಷೆಯನ್ನು ಅವನಲ್ಲಿ ಹುಟ್ಟಿಸಬಲ್ಲದು. ಇದು ಪತ್ರಿಕಾ ಮಾರ್ಗದ ಪ್ರಾರಂಭವಾಗಲೂ ಸಾಧ್ಯವಿದೆ.
9 ವಿಷಯ ವ್ಯವಸ್ಥೆಯ ಅಂತ್ಯವು ಹತ್ತಿರವಾದಷ್ಟಕ್ಕೆ ನಾವು ನಮ್ಮ ವೇಗವನ್ನು ಹೆಚ್ಚಿಸಿ, ಪ್ರಾಮಾಣಿಕ ಜನರಿಗೆ ಮಹಾ ಬಾಬೇಲನ್ನು ಬಿಟ್ಟು ಬರುವಂತೆ ಮತ್ತು ಸತ್ಯವನ್ನು ಸ್ವೀಕರಿಸುವಂತೆ ಸಹಾಯ ಮಾಡೋಣ. (ಪ್ರಕ. 18:4) ವಾಚ್ಟವರ್ ಮತ್ತು ಅವೇಕ್! ನಮ್ಮ ಲೋಕವ್ಯಾಪಕ ಬೈಬಲ್ ಶಿಕ್ಷಣಾ ಕಾರ್ಯದಲ್ಲಿ ಮಹತ್ತಾದ ಪಾತ್ರವನ್ನು ವಹಿಸುತ್ತವೆ. ಅವನ್ನು ನಮ್ಮ ಶುಶ್ರೂಷೆಯಲ್ಲಿ ಉಪಯೋಗಿಸಲು ಕೊಟ್ಟದ್ದಕ್ಕಾಗಿ ನಾವು ಯೆಹೋವನಿಗೆ ಕೃತಜ್ಞರು. ಹೀಗೆ, ನಾವೀ ಪತ್ರಿಕೆಗಳನ್ನು ಜಾಗ್ರತೆಯಿಂದ ಮತ್ತು ಹೆಚ್ಚೆಚ್ಚಾಗಿ ಉಪಯೋಗಿಸುವಾಗ ಯೆಹೋವನ ಆಶೀರ್ವಾದವು ಸದಾ ನಮ್ಮೊಂದಿಗಿರಲಿ!