ಇಂಡೆಕ್ಸ್ನ ಸಹಾಯದೊಂದಿಗೆ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು
1 ಸಮರ್ಪಿತ ಕ್ರೈಸ್ತರೋಪಾದಿ ನಾವು, ನಮ್ಮ ಶುಶ್ರೂಷೆಯನ್ನು ಪ್ರಾಮಾಣಿಕತೆಯಿಂದ ನೆರವೇರಿಸಲು ಪ್ರಯತ್ನಿಸುತ್ತೇವೆ. ಇದನ್ನು ಮಾಡಲು ನಮ್ಮ ಸಹಾಯಕ್ಕಾಗಿ ಯೆಹೋವನು, ಅಮೂಲ್ಯ ಸಾಹಿತ್ಯಗಳ ವಿಸ್ತಾರ್ಯ ಲೈಬ್ರೆರಿಯಲ್ಲಿ ಒಂದು ಸಮೃದ್ಧ ಮಾರ್ಗದರ್ಶನೆ ಮತ್ತು ಉತ್ತೇಜನವನ್ನು ಒದಗಿಸಿರುತ್ತಾನೆ. ಅವುಗಳ ಉತ್ತಮ ಉಪಯೋಗವನ್ನು ನಾವು ಮಾಡಬಲ್ಲೆವೋ? ಹಾಗೆ ಮಾಡಲು ಒಂದು ಮುಖ್ಯ ಸಾಧನವು, ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್. ಇದು 1961 ರಿಂದ ಹಲವಾರು ಭಾಷೆಗಳಲ್ಲಿ ಪ್ರಕಟವಾಗುತ್ತಾ ಇದೆ.
2 ನಿಮ್ಮ ಶುಶ್ರೂಷೆಯನ್ನು ನೆರವೇರಿಸಲು ಈ ಇಂಡೆಕ್ಸ್ ನೆರವಾಗುವುದು ಹೇಗೆ? ಈ ಮೊದಲೇ ಕೊಡಲ್ಪಟ್ಟ, ಅತ್ಯುತ್ತಮ ಸೂಚನೆ ಮತ್ತು ಅರ್ಥವಿವರಣೆಗಳಿಗೆ ದಾರಿ ತೋರಿಸುವ ಮೂಲಕವೇ. ಲೋಕ ವ್ಯಾಪಕ ಭ್ರಾತೃತ್ವವನ್ನು ಮನಸ್ಸಲ್ಲಿಟ್ಟೇ ಈ ಇಂಡೆಕ್ಸ್ನ್ನು ತಯಾರಿಸಲಾಗಿದೆ. ಮಕ್ಕಳಿಂದ ಹಿಡಿದು ಅಜ್ಜಿಅಜ್ಜಂದಿರ ತನಕ, ಹೊಸ ಬೈಬಲ್ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯರ ತನಕ ಎಲ್ಲರೂ, ಯಾವುದೇ ಉಪಯುಕ್ತ ಉದ್ದೇಶಕ್ಕಾಗಿ ತಮಗೆ ಬೇಕಾದ ನಿರ್ದೇಶನೆಗಳನ್ನು ಇದರಲ್ಲಿ ಕಂಡುಕೊಳ್ಳಬಲ್ಲರು.
ನಿಮಗೆ ಬೇಕಾದದ್ದನ್ನು ಕಂಡುಕೊಳ್ಳುವ ವಿಧ
3 ನಿಮ್ಮ ಅಭಿರುಚಿಯು ಒಂದು ನಿರ್ದಿಷ್ಟ ವಚನದ ಅಥವಾ ವಚನಗಳ ಅರ್ಥವನ್ನು ತಿಳಿಯುವದಾಗಿದ್ದರೆ, ಪುಸ್ತಕದ ಹಿಂದೆ ಇರುವ ಸ್ಕ್ರಿಪ್ಚರ್ ಇಂಡೆಕ್ಸ್ನ್ನು ಮೊದಲಾಗಿ ನೋಡುವುದು ಒಳ್ಳೆಯದು. ತ್ರಿಯೈಕ್ಯ ಬೋಧನೆಯನ್ನು ರುಜುಪಡಿಸುವ ಪ್ರಯತ್ನದಲ್ಲಿ ಯಾರಾದರೂ ಯೋಹಾನ 10:30 ನ್ನು ಸೂಚಿಸಿದ್ದಾರೋ? ಸ್ಕ್ರಿಪ್ಚರ್ ಇಂಡೆಕ್ಸ್ ನಿಮ್ಮನ್ನು, ಯೇಸು ಆ ಮಾತುಗಳನ್ನು ಏಕೆ ಹೇಳಿದ್ದನೆಂಬ ಸ್ಪಷ್ಟೀಕರಣದ ಸಮಾಚಾರಕ್ಕೆ ನಡಿಸುವುದು. ಸ್ಕ್ರಿಪ್ಚರ್ ಇಂಡೆಕ್ಸ್ ನಮ್ಮ ವ್ಯಕ್ತಿಪರ ಬೈಬಲ್ ವಾಚನವನ್ನು, ಕೆಲವು ಗೂಢ ಅಥವಾ ಕಷ್ಟವಾಗಿ ತೋರುವ ವಚನಗಳ ಅರ್ಥವನ್ನು ತಿಳಿಸಿ, ಸಮೃದ್ಧಗೊಳಿಸುವುದು.
4 ಸಬ್ಜೆಕ್ಟ್ ಇಂಡೆಕ್ಸ್ ಇದೇ ರೀತಿ ಉಪಯುಕ್ತವಾದ ಬೇರೆ ಮಾರ್ಗಗಳನ್ನು ಒದಗಿಸುತ್ತದೆ. ಉದಾಹರಣೆಗೆ, ನಿಮ್ಮ ಮಕ್ಕಳನ್ನು ಕೂಟಗಳಿಗೆ ಒಯ್ಯುವ ವಿಷಯವಾಗಿ ನಿಮ್ಮ ಅವಿಶ್ವಾಸಿ ಜೊತೆಯು ಆಕ್ಷೇಪ ಮಾಡಿದಲ್ಲಿ ಮಾಡುವದೇನು, ಎಂಬ ವಿಷಯದ ಕುರಿತು ನಿಮಗೆ ಸಮಾಚಾರದ ಅಗತ್ಯವಿದ್ದೀತು. ಉತ್ತರವನ್ನು ಕಂಡುಹಿಡಿಯಲು, “ಹಸ್ಬೆಂಡ್ಸ್,” “ವೈವ್ಸ್,” “ಚಿಲ್ಡ್ರನ್,” “ಒಪೊಸಿಶನ್” ಅಥವಾ “ಮೀಟಿಂಗ್ಸ್” ಶೀರ್ಷಿಕೆಗಳನ್ನು ನೀವು ನೋಡಬಹುದು. ಯಾವುದೇ ವಿಷಯವನ್ನು ಹುಡುಕುವಾಗ ಅದು, ಮೊದಲನೇ ಶೀರ್ಷಿಕೆಯ ಅಡಿಯಲ್ಲಿ ಸಿಕ್ಕದಿದ್ದರೆ, ಇನ್ನೊಂದು ವಿಷಯದ ಕೆಳಗೆ ನೋಡಿರಿ. ನಿಮ್ಮನ್ನು ಕೇಳಿರಿ: ‘ಯಾರು ಒಳಗೂಡಿದ್ದಾರೆ? ಒಂದು ನಿರ್ದಿಷ್ಟ ಸ್ಥಳ ಮಹತ್ವದ್ದೋ? ನಿರ್ದಿಷ್ಟ ಗುಣ ಅಥವಾ ನಿಪುಣತೆಯೋ? ಪ್ರಧಾನ ಭಾವೂದ್ರೇಕವೂ? ಒಂದು ಗುರಿಯೋ?’ ಸರಿಯೆಂದು ತೋರುವ ಮುಖ್ಯ ಶೀರ್ಷಿಕೆ ದೊರೆತಾಗ ಮೊದಲು, ನೇರವಾಗಿ ಅದರ ಕೆಳಗಿರುವ ಕ್ರಾಸ್ ರೆಫರೆನ್ಸ್ಗಳನ್ನು ಪರೀಕ್ಷಿಸಿರಿ. ಇದು ಹೆಚ್ಚಾಗಿ, ವಿಷಯಕ್ಕೆ ಹೆಚ್ಚು ಸಂಬಂಧಿಸಿದ ಇನ್ನೊಂದು ಶೀರ್ಷಿಕೆಯನ್ನು ಗುರುತಿಸುವ ಮೂಲಕ ಸಮಯವನ್ನು ಉಳಿಸುವುದು.
5 ಇಂಡೆಕ್ಸ್ನ್ನು ಉಪಯೋಗಿಸುವುದರಲ್ಲಿ ನೈಪುಣ್ಯವು, ಪವಿತ್ರ ಜವಾಬ್ದಾರಿಕೆಗಳನ್ನು ನೆರವೇರಿಸುವುದರಲ್ಲಿನ ಸಾಫಲ್ಯಕ್ಕೆ ನೆರವಾಗುತ್ತದೆ. ನಾವೀ ಉಪಕರಣವನ್ನು ಉಪಯೋಗಿಸುವುದರಲ್ಲಿ ಅಧಿಕ ನಿಪುಣತೆ ಗಳಿಸುವಾಗ ನಮ್ಮ ಕುಟುಂಬಗಳು, ನಮ್ಮ ಬೈಬಲ್ ವಿದ್ಯಾರ್ಥಿಗಳು ಮತ್ತು ನಮ್ಮ ಸಭೆಗಳು ಪ್ರಯೋಜನ ಪಡೆಯುತ್ತವೆ. ನಮ್ಮ ರಾಜ್ಯದ ಸೇವೆಯ ಮುಂದಣ ಸಂಚಿಕೆಗಳು, ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದರಲ್ಲಿ ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ ಅತ್ಯಮೂಲ್ಯ ಸಹಾಯಕವಾಗಬಲ್ಲ ನಿರ್ದಿಷ್ಟ ಕ್ಷೇತ್ರಗಳನ್ನು ಶೋಧಿಸಲಿವೆ.