ಸುವಾರ್ತೆಯನ್ನು ನೀಡುವದು—ಕಿವಿಗೊಡುವ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ
1 ನಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಬೇಕಾದರೆ, ಯಾವನೇ ಇಬ್ಬರು ವ್ಯಕ್ತಿಗಳು ಒಂದೇ ತರಹ ಇಲ್ಲವೆಂಬದನ್ನು ನಾವು ಮನಗಾಣಬೇಕು. ಪ್ರತಿಯೊಬ್ಬನಿಗೆ ಜೀವಿತದಲ್ಲಿ ಬೇರೆ ಅನುಭವಗಳಾಗಿವೆ ಹಾಗೂ ಬೇರೆ ಬೇರೆ ವೈಯಕ್ತಿಕ ಚಿಂತೆಗಳೂ ಅಪೇಕ್ಷೆಗಳೂ ಇವೆ. ಪಂಥಾಹ್ವಾನವು ಏನಂದರೆ ರಾಜ್ಯ ಸಂದೇಶವನ್ನು ವ್ಯಕ್ತಿಪರವಾಗಿ ಮಾಡುವುದೇ, ಅಂದರೆ ನಾವೇನನ್ನು ವೈಯಕ್ತಿಕವಾಗಿ ಹೇಳುತ್ತೇವೂ ಅದು ಅವನಿಗೆ ವ್ಯಕ್ತಿಪರವಾಗಿ ಯಾವ ಅರ್ಥದಲ್ಲಿದೆಯೆಂದು ತೋರಿಸುವುದೇ. ಇದನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ, ನಾವು ಕಿವಿಗೊಟ್ಟು ಕೇಳಲೂ ಬೇಕು.
2 ಅನೇಕ ಪ್ರಚಾರಕರು ತಮ್ಮ ಪೀಠಿಕೆಗಳಲ್ಲಿ ಜಾಣ್ಮೆಯಿಂದ ಪ್ರಶ್ನೆಗಳನ್ನು ಉಪಯೋಗಿಸುತ್ತಾರೆ ಮತ್ತು ಇದು ಮನೆಯವನನ್ನು ಸಂಭಾಷಣೆಯಲ್ಲಿ ಒಳಗೂಡಿಸಲು ಸಹಾಯ ಮಾಡುತ್ತದೆ. ಮನೆಯವನನ್ನು ಗಾಬರಿಗೊಳಿಸದ, ದೃಷ್ಟಿಕೋನ ಪ್ರಶ್ನೆಗಳು ಅತ್ಯಂತ ಪರಿಣಾಮಕಾರಿ. ಆದರೆ ಮನೆಯವನು ಮಾತಾಡುವಾಗ ಅವನು ಹೇಳುವುದಕ್ಕೆ ನಾವು ಕಿವಿಗೊಡುವುದೂ ಆವಶ್ಯಕ. ಕಿವಿಗೊಡುವಿಕೆಯು ನೆರೆಯವನಿಗೆ ಪ್ರೀತಿ ಮತ್ತು ಆದರವನ್ನು ಪ್ರದರ್ಶಿಸುತ್ತದೆ ಮತ್ತು ಹಾಗೆ ಮಾಡುವ ಮೂಲಕ ನಾವು ಮನೆಯವನ ಯೋಚನೆಗಳ ಒಳನೋಟವನ್ನು ಸಂಪಾದಿಸುತ್ತೇವೆ. ವ್ಯಕ್ತಿಯ ಪರಿಸ್ಥಿತಿಗಳನ್ನು ತಿಳಿಯುವುದು ಅನುಭೂತಿಯನ್ನು ಹುಟ್ಟಿಸುತ್ತದೆ ಮತ್ತು, ನಮ್ಮನ್ನು ಅವನ ಸ್ಥಾನದಲ್ಲಿ ಹಾಕುತ್ತದೆ. ಆಗ ನಾವು ಅವನೊಂದಿಗೆ ಬೈಬಲಿನ ಸಾಂತ್ವನ ಮತ್ತು ನಿರೀಕ್ಷೆಯನ್ನು ಹಂಚ ಸಾಧ್ಯವಿದೆ.
ಪರಿಸ್ಥಿತಿಗೆ ಹೊಂದಿಕೆಯಾಗಿರಿ
3 ಅಪೊಸ್ತಲ ಪೌಲನು ಬೋಧಿಸಿದ್ದು: “ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಹೇಗೆ ಉತ್ತಮವಾಗಿ ಮಾತಾಡುವದೆಂದು ಅಧ್ಯಯನ ಮಾಡಿರಿ.” (ಕೊಲೊ. 4:6, ನ್ಯೂ ಇಂಗ್ಲಿಷ್ ಬೈಬಲ್) ವ್ಯಕ್ತಿಯೊಬ್ಬನು ನಿಜವಾಗಿ ಏನು ಹೇಳಬಹುದೆಂದು ನಮಗೆ ಮುಂಚಿತವಾಗಿ ತಿಳಿಯದೆ ಇದ್ದರೂ, ಅನೇಕ ಜನರು ಎದುರಿಸುವ ಸಮಸ್ಯೆಗಳು ನಮಗೆ ತಿಳಿದೇ ಇವೆ. ಆದ್ದರಿಂದ, ವಿವಿಧ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ನಾವು “ಅಧ್ಯಯನ” ಮಾಡಬೇಕು ಮತ್ತು ಮಾನಸಿಕವಾಗಿ ತಯಾರಿರಬೇಕು.
4 ಉದಾಹರಣೆಗೆ, ಲೋಕ ಶಾಂತಿಯ ವಿಷಯವಾಗಿ ಮಾತಾಡಲು ನಾವು ತಯಾರಿಸಿರಬಹುದು, ಆದರೆ ಮನೆಯವನು ತನ್ನ ಕೆಲಸ ಹೋಗಿದೆ ಎಂದು ಹೇಳುತ್ತಾನೆ. ನಾವೀ ಹೇಳಿಕೆಯನ್ನು ಅಸಡ್ಡೆ ಮಾಡಬೇಕೋ? ಅವನ ಮನೆವಾರ್ತೆಯ ಜೀವನೋಪಾಯದ ವಿಷಯವು ಅವನ ಹೃದ ಮನದಲ್ಲಿ ಭಾರವಾದ ಹೊರೆಯಾಗಿದೆ ನಿಸ್ಸಂಶಯ. ಅವನ ಅಗತ್ಯತೆಗಳಿಗೆ ನೀವು ಹೇಗೆ ಪ್ರತಿಕ್ರಿಯೆ ತೋರಿಸಬಹುದು? ಅವನ ಪರಿಸ್ಥಿತಿಗಾಗಿ ನಿಜ ಚಿಂತೆಯನ್ನು ತೋರಿಸುವ ಮೂಲಕ ನೀವು ಅವನಿಗೆ ಅನುಭೂತಿ ತೋರಿಸಬಹುದು. ಅನಂತರ ಅವನ ಗಮನವನ್ನು ದಯೆಯಿಂದ ಶಾಸ್ತ್ರ ವಚನಗಳ ಕಡೆಗೆ ತಿರುಗಿಸಿ, ದೇವರ ಸರಕಾರವು ಹೇಗೆ ತೃಪ್ತಿಕರವಾದ ಉದ್ಯೋಗ ಹಾಗೂ ನಮ್ಮೆಲ್ಲಾ ಅಗತ್ಯತೆಗಳನ್ನು ಪೂರೈಸುವುದೆಂದು ತೋರಿಸಿರಿ.—ಯೆಶಾ. 65:17, 21, 22, 24.
5 ಪ್ರಾಯಶಃ ಆ ವ್ಯಕ್ತಿ ಅಥವಾ ಅವನ ಕುಟುಂಬ ಸದಸ್ಯನು ಇತ್ತೀಚೆಗೆ ಒಂದು ಪಾತಕಕ್ಕೆ ಅಥವಾ ಯಾವುದೇ ಅನ್ಯಾಯಕ್ಕೆ ಗುರಿಯಾದನೆಂದು ನಮಗೆ ತಿಳಿಯುತ್ತದೆ. ಆಗ, ನಮ್ಮ ಸಹಾನುಭೂತಿಯ ಚಿಂತೆ ಮತ್ತು ಆ ಪರಿಸ್ಥಿತಿಗಳಲ್ಲಿ ನಮ್ಮ ವೈಯಕ್ತಿಕ ಆಸಕ್ತಿಯು ವ್ಯಕ್ತಿಯ ಹೃದಯವನ್ನು ಮೃದುಗೊಳಿಸಬಹುದು ಮತ್ತು ಯೆಹೋವನು ಆ ದುಃಖಿತ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದಾನೆ ಹಾಗೂ ಎಲ್ಲಾ ಕೆಟ್ಟತನವನ್ನು ತೆಗೆದುಹಾಕಲು ಬೇಗನೇ ಕ್ರಮಕೈಕೊಳ್ಳುವನು ಎಂದು ತೋರಿಸಲು ಸಾಧ್ಯಮಾಡುವುದು.—ರೀಸನಿಂಗ್ ಫ್ರಮ ದ ಸ್ಕ್ರಿಪ್ಚರ್ಸ್, ಪುಟ 10, 12, 229-31 ನೋಡಿ.
6 ವ್ಯಕ್ತಿಗಳ ನಡುವೆ ನ್ಯೂನ ಸಂಬಂಧವು ಉಂಟಾಗುವುದು ಹೆಚ್ಚಾಗಿ ಅವರ ನಡುವೆ ಸರಿಯಾದ ಮಾತುಕತೆ ಇಲ್ಲದಾಗ. ಒಬ್ಬನು ಮಾತಾಡುವಾಗ ಬೇರೊಬ್ಬನು ಪ್ರಾಯಶಃ ತನ್ನ ಮನಸ್ಸು ಮತ್ತು ಹೃದಯವಿಟ್ಟು ನಿಜವಾಗಿ ಗಮನ ಕೊಡದೇ ಇರಬಹುದು. ಅಂಥ ಅಲ್ಪ ಕಿವಿಗೊಡುವ ಹವ್ಯಾಸವು ತಪ್ಪು ತಿಳುವಳಿಕೆಯನ್ನು ಕೊಡಬಹುದು ಅಥವಾ ಒಬ್ಬನಿಗೆ ಸಹಾಯ ಕೊಡುವ ಸುಸಂದರ್ಭಗಳನ್ನು ತಪ್ಪಿಸಬಹುದು. ಆದರದಿಂದ ಕಿವಿಗೊಡುವ ಸುಹವ್ಯಾಸವನ್ನು ಬೆಳೆಸುವ ಮೂಲಕ, ನಾವು ಹೆಚ್ಚು ಪರಿಣಾಮಕಾರಿಯಾಗಿ ಸುವಾರ್ತೆಯನ್ನು ನೀಡಶಕ್ತರಾಗುವೆವು, ಇತರರಲ್ಲಿ ಯೆಹೋವನ ನಿಸ್ವಾರ್ಥ ಆಸಕ್ತಿಯನ್ನು ಪ್ರತಿಬಿಂಬಿಸುವೆವು ಮತ್ತು ನಮ್ಮ ಪ್ರೀತಿಯ ನಿರ್ಮಾಣಿಕನೊಂದಿಗೆ ಮತ್ತು ಆತನ ಜನರೊಂದಿಗೆ ಒಂದು ಸುಸುಂಬಂಧವನ್ನು ಕಟ್ಟಲು ಇತರರಿಗೆ ಸಹಾಯ ಮಾಡುವೆವು.—ಯಾಕೋ. 1:19; g74 11⁄22 ಪುಟ 21-3.