ಸುವಾರ್ತೆಯನ್ನು ನೀಡುವದು—ಸಂಜಾ ವೇಳೆಯಲ್ಲಿ
1 “ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ” ಎಂದು ಯೆಹೂದಿ ಮಹಾಯಾಜಕರು ಯೇಸು ಕ್ರಿಸ್ತನ ಆರಂಭದ ಶಿಷ್ಯರಿಗೆ ಹೇಳಿದ್ದರು. (ಅಪೊ. 5:28) ಆ ಸಹೋದರರು ಆ ಪಟ್ಟಣದಲ್ಲಿ ಪೂರ್ಣ ರೀತಿಯಲ್ಲಿ ಸಾಕ್ಷಿಯನ್ನು ಕೊಟ್ಟಿದ್ದಿರಬೇಕು ಮತ್ತು ತಮ್ಮ ಕ್ಷೇತ್ರದ ಪ್ರತಿಯೊಬ್ಬರನ್ನು ಸಂಪರ್ಕಿಸಲು ಅವರು ದಕ್ಷತೆಯಿಂದ ಕೆಲಸ ಮಾಡಿದಿರ್ದಬೇಕು ನಿಶ್ಚಯ. ಅಲ್ಲಿ ಮತ್ತು ಎಲ್ಲಾ ಕಡೆಗಳಲ್ಲಿ ಅವರು ಪೂರ್ಣ ರೀತಿಯಲ್ಲಿ ಸಾಕ್ಷಿ ಕೊಡುವುದನ್ನು ಮುಂದರಿಸಿದ್ದರು.—ಅಪೊ. 8:25.
2 ಇಂದು ಅನೇಕ ಕ್ಷೇತ್ರಗಳನ್ನು ನಾವು ಸತ್ಯದ ಶಿಕ್ಷಣದಿಂದ ತುಂಬಿಸಿದ್ದೇವೆ. ಪ್ರಚಾರಕರಲ್ಲಿ ನಮಗೆ ಅತ್ಯುತ್ತಮ ಅಭಿವೃದ್ಧಿ ದೊರೆತದೆ ಮತ್ತು ಅದಕ್ಕನುರೂಪವಾಗಿ ಸಭೆಗಳ ಸಂಖ್ಯೆಯೂ ಹೆಚ್ಚಿದೆ. ಕ್ಷೇತ್ರಗಳು ಸಂಕುಚಿತವಾಗಿವೆ ಮತ್ತು ಪದೆಪದೇ ಆವರಿಸಲ್ಪಡುತ್ತಾ ಇವೆ. ಹೆಚ್ಚು ಜನರನ್ನು ಸುವಾರ್ತೆಯಿಂದ ತಲಪಲಿಕ್ಕಾಗಿ, ನಮ್ಮ ಕ್ಷೇತ್ರವನ್ನು ವಿಸ್ತರಿಸುವ ಆವಶ್ಯಕತೆ ಈಗ ನಮಗೆ ಉಂಟಾಗಿದೆ.
ಸಾಯಂಕಾಲದ ಸಾಕ್ಷಿಯಿಂದ ಪ್ರಯೋಜನಗಳು
3 ಸಂಜಾ ತಾಸುಗಳಲ್ಲಿ ಮನೆಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಕ್ಷೇತ್ರವನ್ನು, ಕಾರ್ಯಥಃ ವಿಸ್ತರಿಸ ಸಾಧ್ಯವಿದೆ ಎಂದು ಅನೇಕ ಪ್ರಚಾರಕರು ಕಂಡಿರುತ್ತಾರೆ. ಸಾಮಾನ್ಯವಾಗಿ ದಿನದ ವೇಳೆಯಲ್ಲಿ ಮನೆಯಲ್ಲಿರದ ಅನೇಕ ಮನೆಯವರನ್ನು ಅವರು ಸಂಜೆಯಲ್ಲಿ ಸಂಪರ್ಕಿಸಲು ಅವರು ಶಕ್ತರಾಗಿದ್ದಾರೆ. ಸಾಯಂಕಾಲ ಸೇವೆ ಮಾಡುವಾಗ, ತಮ್ಮ ಟೆರಿಟರಿಯ ಬಹುಮಟ್ಟಿಗೆ ಪ್ರತಿಯೊಂದು ಮನೆಯಲ್ಲಿ ಯಾರಾದರೂ ಸಿಕ್ಕುತ್ತಾರೆಂದು ಪ್ರಚಾರಕರು ವರದಿಸಿದ್ದಾರೆ. ಹೆಚ್ಚು ಜನರು ಮನೆಯಲ್ಲಿ ಸಿಕ್ಕುತ್ತಾರೆ ಮಾತ್ರವೇ ಅಲ್ಲ, ಅವರು ಸಾಮಾನ್ಯವಾಗಿ ಹೆಚ್ಚು ಆರಾಮದಿಂದ ಮತ್ತು ಸಿದ್ಧ ಮನಸ್ಸಿನಿಂದಲೂ ನಮ್ಮ ಸಂದೇಶಕ್ಕೆ ಕಿವಿಗೊಡುತ್ತಾರೆ. ಸರ್ಕಿಟ್ ಮೇಲ್ವಿಚಾರಕರು ಅನೇಕ ಸಭೆಗಳಿಗೆ ಸಂಜೆಯ ಸಾಕ್ಷಿ ಏರ್ಪಾಡುಗಳನ್ನು ಸಂಘಟಿಸಲು ಸಹಾಯ ಮಾಡಿದ್ದಾರೆ. ಸರ್ಕಿಟ್ ಮೇಲ್ವಿಚಾರಕನ ಸಂದರ್ಶನೆಯ ಸಮಯ ಪ್ರಚಾರಕರೆಲ್ಲರೂ ಈ ಕ್ರಮದ ಬುಧವಾರ ಸಂಜೆಯ ಕಾರ್ಯಕ್ಕೆ ಬೆಂಬಲ ಕೊಡುವಂತೆ ಪ್ರೋತ್ಸಾಹಿಸಲಾಗಿದೆ.
4 ಸಾಯಂಕಾಲದ ತಾಸುಗಳಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಾಕ್ಷಿಕೊಡುವುದನ್ನು ನೀವು ಪ್ರಯತ್ನಿಸಿದ್ದೀರೋ? ಬೇಸಗೆಯಲ್ಲಿ ಸೂರ್ಯನು ತಡವಾಗಿ ಅಸ್ತಮಿಸುವುದರಿಂದ, ಬೇರೆ ಸಮಯಕ್ಕಿಂತ ಸ್ವಲ್ಪ ಹೆಚ್ಚು ಕಾಲ ನಾವು ಹೊರಗಿರ ಶಕ್ತರು. ಸಂಜೆಯ ಒಂದು ಭಾಗವನ್ನು ಮನೆ ಮನೆಯ ಸಾಕ್ಷಿಗಾಗಿ ಅಥವಾ ಮನೆಯಲ್ಲಿ ಸಿಕ್ಕದವರ ಭೇಟಿಗಾಗಿ ಉಪಯೋಗಿಸಬಹುದು. ಅನಂತರ ಪ್ರಾಯಶಃ ಸಂಜೆಯ ಕೊನೆಯಲ್ಲಿ ನಾವು, ಪುನರ್ಭೇಟಿಗಳನ್ನು ಅಥವಾ ಒಂದು ಬೈಬಲಭ್ಯಾಸವನ್ನು ನಡಿಸಬಹುದು. ವರ್ಷದಲ್ಲಿ ಅನಂತರ, ದಿನವು ಸೀಮಿತವಾಗಿ ಗಿಡ್ಡದಾಗುವ ಸಮಯದಲ್ಲೂ, ಸಂಜೆಯ ಆರಂಭದ ತಾಸುಗಳನ್ನು ನಾವು ಮನೆಮನೆಯ ಸಾಕ್ಷಿಗಾಗಿ ಉಪಯೋಗಿಸ ಶಕ್ತರಾಗಬಹುದು. ವಿಶೇಷವಾಗಿ, ಕತ್ತಲೆಯ ನಂತರ ಸುರಕ್ಷಿತವಲ್ಲದ ವಠಾರಗಳಲ್ಲಿ ಸಾಕ್ಷಿ ಕೊಡುವಾಗ, ಸ್ವಸ್ಥ ಮಾನಸಿಕ ಭಾವವನ್ನು ಮತ್ತು ವಿವೇಚನೆಯನ್ನು ಉಪಯೋಗಿಸಬೇಕು ನಿಶ್ಚಯ.
ಪರಿಗಣನೆ ತೋರಿಸಿರಿ
5 ಸಾಯಂಕಾಲ ಸಾಕ್ಷಿಯಲ್ಲಿ ಸಾಫಲ್ಯ ಪಡೆಯ ಬೇಕಾದರೆ, ಕೆಲವು ಮೂಲಭೂತ ವಿಷಯಗಳನ್ನು ನಾವು ಮನಸ್ಸಿನಲ್ಲಿಡುವ ಅಗತ್ಯವಿದೆ. ಉದಾಹರಣೆಗಾಗಿ, ಸಂಜೆಗೆ ಬರುವ ಅನಿರೀಕ್ಷಿತ ಸಂದರ್ಶಕರ ಬಗ್ಗೆ ಕೆಲವು ಕ್ಷೇತ್ರದ ಜನರು ಸಂಶಯ ತಾಳುತ್ತಾರಾದರ್ದಿಂದ, ನಮ್ಮ ಪೀಠಿಕೆಗಳಲ್ಲಿ ನಾವು ಹೃತ್ಪೂರ್ವಕರೂ ಸ್ನೇಹಪರರೂ ಆಗಿದ್ದು ಭೇಟಿಯ ಉದ್ದೇಶವನ್ನು ಕ್ಷಿಪ್ರವಾಗಿ ಸ್ಪಷ್ಟಪಡಿಸಬೇಕು. ಮನೆಯವರ ಸುಕ್ಷೇಮಕ್ಕಾಗಿ ನಾವು ನಿಜ ಚಿಂತೆಯನ್ನು ತೋರಿಸುವುದಾದರೆ, ಅವರು ಹಾಯಾಗಿ ವರ್ತಿಸಬಹುದು ಮತ್ತು ತಮ್ಮನ್ನು ಸರಾಗವಾಗಿ ವ್ಯಕ್ತಪಡಿಸುವ ಭಾವವನ್ನು ತಾಳ್ಯಾರು.
6 ಕೆಲವು ಸ್ಥಳಗಳಲ್ಲಿ ಮನೆಯವರು, ತಮ್ಮ ಭದ್ರತೆಯನ್ನು ಕಾಪಾಡುವುದಕ್ಕಾಗಿ ಕ್ರಮಗಳನ್ನು ಕೈಕೊಂಡಿರುತ್ತಾರೆ. ಒಂದುವೇಳೆ ನಮಗೆ ಇಂಟರ್ಕಾಮ್ ಮೂಲಕ ಮಾತಾಡಬೇಕಾದೀತು ಅಥವಾ ಮುಚ್ಚಿದ ಬಾಗಲಿನಿಂದ ಮನೆಯವನು ನಮ್ಮೊಡನೆ ಮಾತಾಡ್ಯಾನು ಇಲ್ಲವೇ ಬಾಗಲಿನ ಇಣುಕುಕಂಡಿಯ ಮೂಲಕ ನಮ್ಮನ್ನು ನೋಡ ಬಯಸ್ಯಾನು. ಮನೆಯವನ ಈ ಏರ್ಪಾಡಿಗೆ ಗೌರವ ತೋರಿಸುವ ಮೂಲಕ ಅವನು, ನಾವು ಹಂಚ ಬಯಸುವ ಸತ್ಯಕ್ಕೆ ಕಿವಿಗೊಡಲು ಹೆಚ್ಚು ಒಪ್ಪುವವನಾಗಬಹುದು.
7 ಅನೇಕ ಸಭೆಗಳು ವಾರದಲ್ಲಿ ಒಂದು ಅಥವಾ ಹೆಚ್ಚು ಸಂಜೆಗಳಲ್ಲಿ ಸಾಕ್ಷಿ ಕಾರ್ಯ ಏರ್ಪಡಿಸಿದ್ದಾರೆ. ಇದು ಪೂರ್ಣ ಸಮಯದ ಐಹಿಕ ಉದ್ಯೋಗದಲ್ಲಿರುವ ಪ್ರಚಾರಕರಿಗೆ ಸೇವೆಯಲ್ಲಿ ಭಾಗವಹಿಸಲು ಹೆಚ್ಚಿನ ಸಂದರ್ಭವನ್ನು ಕೊಟ್ಟಿದೆ ಮತ್ತು ಕೆಲಸದ ಕಾಲಕ್ರಮಗಳ ಘರ್ಷಣೆಯಿಂದಾಗಿ ಹಿಂದೆಂದೂ ಸೇವೆ ಮಾಡಲಾಗದ ಕೆಲವು ಪ್ರಚಾರಕರೊಂದಿಗೆ ಅವರು ಸೇವೆ ಮಾಡುವಂತೆಯೂ ಸಾಧ್ಯಮಾಡಿದೆ. ಸಂಜೆಯ ಸಾಕ್ಷಿ ಕಾರ್ಯವು ಕೆಲವು ಪ್ರಚಾರಕರಿಗೆ ತಮ್ಮ ಕ್ಷೇತ್ರ ಸೇವಾ ತಾಸುಗಳನ್ನು ಹೆಚ್ಚಿಸಲು ಶಕ್ಯಮಾಡಿದೆ ಮತ್ತು ಇದರ ಫಲವಾಗಿ ಅವರು ಇತರರಿಗೆ ಸುವಾರ್ತೆಯನ್ನು ಹಂಚುವುದರಲ್ಲಿ ಹೆಚ್ಚು ನಿಪುಣತೆಯನ್ನು ಗಳಿಸಿದ್ದಾರೆ. ಅಲ್ಲದೆ, ಹಿಂದೆ ಯೆಹೋವನ ಸಾಕ್ಷಿಗಳ ಕುರಿತು ಕೇಳಿರದ ಜನರನ್ನು ಸಂಪರ್ಕಿಸಿದ ಫಲಿತಾಂಶವಾಗಿ, ಅನೇಕ ಬೈಬಲಭ್ಯಾಸಗಳೂ ಆರಂಭಿಸಲ್ಪಟ್ಟಿವೆ.
8 ಈ ಸಂಜೆಯ ಸಾಕ್ಷಿಕಾರ್ಯದಲ್ಲಿ ಭಾಗಹಿಸಲು ಮತ್ತು “ಸೌವಾರ್ತಿಕನ ಕೆಲಸ ಮಾಡುವ” ಈ ಹೆಚ್ಚಿನ ಸುಯೋಗದಲ್ಲಿ ಆನಂದಿಸಲು ನಿಮಗೆ ಶಕ್ಯವಾಗಬಹುದೋ? (2 ತಿಮೊ. 4:5) ನಮ್ಮಲ್ಲಿ ಹೆಚ್ಚಿನವರು ಈ ಪ್ರಶ್ನೆಯನ್ನು ಸಕಾರಾತ್ಮಕವಾಗಿ ಉತ್ತರಿಸಲು ಶಕ್ತರಾದರೆ ಪ್ರಾಯಶಃ ನಾವು ಸಹಾ, ನಮ್ಮ ಟೆರಿಟರಿಯನ್ನು ಸತ್ಯದಿಂದ ತುಂಬಿಸುವ ಕೆಲಸವನ್ನು ಚೆನ್ನಾಗಿ ಪೂರೈಸ ಶಕ್ತರಾಗುವೆವು.