ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು
1 ಇತರರಲ್ಲಿ ಯೆಹೋವನಿಗಿರುವ ಆಸಕ್ತಿಯು ಸಮೃದ್ಧವೆಂಬದು ವ್ಯಕ್ತ. ತನ್ನ ಸೃಷ್ಟಿಗಾಗಿ ಭೌತಿಕ ಅಗತ್ಯತೆಗಳನ್ನು ಆತನು ಉದಾರವಾಗಿ ಒದಗಿಸಲಿಲ್ಲವೇ? (ಆದಿ. 1:29, 30; 2:16, 17; ಮತ್ತಾ. 5:45; ಲೂಕ 6:35 ಹೋಲಿಸಿ.) ಅಧಿಕ ಮಹತ್ವದ್ದಾಗಿ, ಪಾಪ ಮತ್ತು ಮರಣದಿಂದ ಬಿಡುಗಡೆಯನ್ನು ಒದಗಿಸಿದ ಮೂಲಕ ಆತನು ನಮ್ಮಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿಲ್ಲವೇ?—ಯೋಹಾ. 3:16.
2 ಯೇಸು ಭೂಮಿಯಲ್ಲಿದ್ದಾಗ, ಇತರರಲ್ಲಿ ವೈಯಕ್ತಿಕ ಅಭಿರುಚಿಯನ್ನು ತೋರಿಸುವ ತನ್ನ ತಂದೆಯ ಪರಿಪೂರ್ಣ ಮಾದರಿಯನ್ನು ಅನುಸರಿಸಿದನು. (ಮತ್ತಾ. 11:28-30; 1 ಪೇತ್ರ 2:21) ಒಬ್ಬ ಕುಷ್ಟರೋಗಿಯು ಯೇಸುವಿನ ಬಳಿಗೆ ಬಂದು, “ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲೆ” ಎಂದು ಹೇಳಿದಾಗ ಯೇಸು, “ನನಗೆ ಮನಸ್ಸುಂಟು” ಎಂದು ಹೇಳಿ ಅವನನ್ನು ವಾಸಿಮಾಡಿದನು. (ಮತ್ತಾ. 8:2, 3) ನಾಯಿನೆಂಬ ನಗರವನ್ನು ಸಮೀಪಿಸುತ್ತಿದ್ದಾಗ, ಒಬ್ಬ ವಿಧವೆ ತಾಯಿಯ ಒಬ್ಬನೇ ಮಗನಾಗಿದ್ದ ಒಬ್ಬ ಯೌವನಸ್ಥನ ಶವಯಾತ್ರೆಯು ಅವನಿಗೆ ಎದುರಾಗಲಾಗಿ, ಯೇಸು ಕನಿಕರ ತುಂಬಿದವನಾಗಿ ಅವನನ್ನು ಜೀವಿತನಾಗಿ ಮಾಡಿದನು. (ಲೂಕ 7:11-15) ಬೇರೆಯವರಿಂದ ಕೇಳಲ್ಪಡದೇ, ಯೇಸು ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿದನು. ಚಿಕ್ಕ ಮಕ್ಕಳು ಸಹಾ ಅವನ ಸಮಯ ಮತ್ತು ಗಮನಕ್ಕೆ ಪಾತ್ರರಿದ್ದರು, ಮತ್ತು ಇತರರನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಅವನೆಂದೂ ತೀರಾ ಕಾರ್ಯಮಗ್ನನಿರಲಿಲ್ಲ.—ಮತ್ತಾ. 20:31-34; ಮಾರ್ಕ 10:13-16.
ಕುಟುಂಬ ಮತ್ತು ಮಿತ್ರರು
3 ಇತರರಲ್ಲಿ ವೈಯಕ್ತಿಕ ಅಭಿರುಚಿಯನ್ನು ತೋರಿಸುವ ಮಾರ್ಗಗಳನ್ನು ಹುಡುಕುವುದರಲ್ಲಿ ನಾವು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನಂತೆ ಇರಲು ಪ್ರಯತ್ನಿಸಬೇಕು. ಆದ್ದರಿಂದ, ಅದನ್ನು ಮಾಡುವ ಕೆಲವು ಸಂದರ್ಭಗಳನ್ನು ನಾವು ಪರಿಗಣಿಸೋಣ.
4 ಒಂದು ಅತಿ ಮಹತ್ವದ ಅಗತ್ಯತೆಯು, ಸಹೋದರರು ತಮ್ಮ ಸ್ವಂತ ಕುಟುಂಬದ ಸದಸ್ಯರಲ್ಲಿ ನಿಜಾಸಕ್ತಿಯನ್ನು ತೋರಿಸುವುದು ಮತ್ತು ಕುಟುಂಬವನ್ನು ಆತ್ಮಿಕ ರೀತಿಯಲ್ಲಿ ಅಲಕ್ಷಿಸದೆ ಇರುವುದೇ. ಇದರಲ್ಲಿ ಕುಟುಂಬದೊಂದಿಗೆ ಕ್ರಮವಾಗಿ ಅಭ್ಯಾಸಮಾಡುವುದೂ ಸೇರಿದೆ. ನಿಮ್ಮ ಕುಟುಂಬ ಅಭ್ಯಾಸದಲ್ಲಿ ವಿಷಯವನ್ನು, ಆಸಕ್ತಿಭರಿತವೂ ಮತ್ತು ವ್ಯಾವಹಾರ್ಯವಾಗಿ ಬೆಲೆಯುಳ್ಳದ್ದೂ ಆದ ರೀತಿಯಲ್ಲಿ ನೀವು ಚರ್ಚಿಸುತ್ತೀರೋ? ಅದನ್ನು ಹಿಂಬಾಲಿಸಿ ನಿಮ್ಮ ಮನೆವಾರ್ತೆಯ ಪ್ರತಿಯೊಬ್ಬ ಸದಸ್ಯನೊಂದಿಗೆ ಕ್ಷೇತ್ರಸೇವೆಯಲ್ಲಿ ಕ್ರಮವಾಗಿ ಪಾಲಿಗರೂ ಆಗುತ್ತೀರೋ? ಹಾಗೆ ಮಾಡುವಾಗ, ಅದು ನಿಮಗೆ ಸಂತೋಷದ ಸಮಯವಾಗಿರುತ್ತದೋ? ನಿಮ್ಮ ಮಕ್ಕಳಲ್ಲಿ ನೀವು ಇತರರಿಗೆ ಸಹಾಯ ಮಾಡುವ ಅಪೇಕ್ಷೆಯನ್ನು ಕಟ್ಟುತ್ತಿದ್ದೀರೋ, ಮತ್ತು ಹೀಗೆ ಕ್ರಿಸ್ತೀಯ ನೆರೆಯವರ ಮೇಲಣ ಪ್ರೀತಿಯನ್ನು ತೋರಿಸುತ್ತೀರೋ? ವಿವಾಹವಾಗಿದ್ದರೆ ಮತ್ತು ಮಕ್ಕಳು ಇಲ್ಲದಿದ್ದರೂ, ಕುಟುಂಬ ಅಭ್ಯಾಸವನ್ನು ನೀವು ಮಾಡುತ್ತೀರೋ?
5 ಸಾಧ್ಯವಾದ ಎಲ್ಲರಿಗೆ ಆತ್ಮಿಕ ಸಹಾಯವನ್ನು ಕೊಡಲು ನಾವು ಬಯಸುತ್ತೇವೆ. ಆದರೆ ನಮ್ಮ ಕಾರ್ಯಮಗ್ನ ಜೀವಿತದಲ್ಲಿ, ವಿಶೇಷ ಅಗತ್ಯತೆಗಳಿರುವ ನಮ್ಮ ಸಭಾ ಸದಸ್ಯರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಲು ನಾವು ಮರೆಯುತ್ತೇವೋ? (ಜ್ಞಾನೋ. 3:27; ಗಲಾ. 6:10) ಕ್ರೈಸ್ತ ಸಭೆಯಲ್ಲಿ ಪಿತನಿಲ್ಲದ ಮಕ್ಕಳು, ವೃದ್ಧ ಜನರು, ವಿಧವೆಯರು, ನಿರ್ಬಲರು, ಕುಗ್ಗಿಹೋದವರು, ಅಂಗವಿಕಲರು ಮತ್ತು ವಿಶೇಷ ಕೊರತೆಗಳುಳ್ಳ ಇತರರು ಇದ್ದಾರೆ. ಯೆಹೋವ ಮತ್ತು ಆತನ ಪುತ್ರ ಯೇಸು ಕ್ರಿಸ್ತನ ಅನುಕರಣೆಯಲ್ಲಿ, ನಾವು ನಮ್ಮೆಲ್ಲಾ ಸಹೋದರ ಮತ್ತು ಸಹೋದರಿಯರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದನ್ನು ಅಸಡ್ಡೆ ಮಾಡಬಾರದು.—1 ಕೊರಿ. 10:24; ಪಿಲಿ. 2:4; ಇಬ್ರಿ. 13:16.
ಕ್ಷೇತ್ರದಲ್ಲಿ ಕುರಿ ಸದೃಶ್ಯರು
6 ಮನೆ ಬೈಬಲಭ್ಯಾಸ ಮಾಡುವ ಜನರಲ್ಲಿ ನಾವು ವೈಯಕ್ತಿಕ ಅಭಿರುಚಿಯನ್ನು ಹೇಗೆ ತೋರಿಸಬಹುದು? ಇವರಲ್ಲಿ ಅನೇಕರು ತಮ್ಮ ಲೌಕಿಕ ಪರಿಚಯಸ್ಥರೊಂದಿಗೆ ಸಹವಾಸವನ್ನು ಕಡಿಯುವ ಅಗತ್ಯವನ್ನು ಕಂಡಿದ್ದಾರೆ. ನಾವು ಕಾರ್ಯಮಗ್ನರಿದ್ದರೂ, ಅಂಥಾ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತೇವೋ ಮತ್ತು ಅಂಥ ಬದಲಾವಣೆ ಮಾಡಿದವರನ್ನು ನಮ್ಮ ಮಿತ್ರರಾಗಿರಲು ಸ್ವಾಗತಿಸಿದ್ದೇವೋ? ಅವರೊಂದಿಗೆ ಅಭ್ಯಾಸ ಮಾಡುವವರು ನಾವಲ್ಲವಾದರೂ, ಅವರಿಗೆ ಒಂದು ಉತ್ತೇಜನದ ಮೂಲವಾಗಿ ನಾವಿದ್ದೇವೋ?—ಮಾರ್ಕ 10:28-30.
7 ಸುವಾರ್ತೆಗೆ ಕಿವಿಗೊಡಲು ಮನಸ್ಸಿರುವ ಜನರಲ್ಲಿ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದರಲ್ಲಿ ಅಧಿಕ ಪಾಲನ್ನು ನೀವು ತಕ್ಕೊಳ್ಳ ಬಲ್ಲಿರೋ? ಅವರ ಆತ್ಮಿಕ ಅಗತ್ಯತೆಗಳನ್ನು ಮುಟ್ಟಲು ಅವರಿಗೆ ಸಹಾಯ ಮಾಡಲು ನೀವು ಯತ್ನೈಸುವಿರೋ? ವೈಯಕ್ತಿಕವಾಗಿ ನೀವು, ಕ್ಷೇತ್ರಸೇವೆಯಲ್ಲಿ ಅಧಿಕ ಪಾಲನ್ನು ತಕ್ಕೊಳ್ಳುವಂತೆ ಏನು ಮಾಡಬಲ್ಲಿರಿ? ಈಗ ನೀವು ಅಧಿಕ ಪೂರ್ಣವಾಗಿ ಭಾಗವಹಿಸ ಶಕ್ತರಿದ್ದರೆ, ನಿಮ್ಮನ್ನು ತಡೆದು ಹಿಡಿಯಬೇಡಿರಿ.—ಲೂಕ 9:60-62.
8 ಬೇರೆಯವರಲ್ಲಿ ವೈಯಕ್ತಿಕ ಅಭಿರುಚಿಯನ್ನು ತೋರಿಸುವುದರಲ್ಲಿ ಯೆಹೋವ ಮತ್ತು ಯೇಸುವನ್ನು ನಾವು ಅನುಕರಿಸಬೇಕು. ನಾವು ಕನಿಕರವುಳ್ಳವರಾಗಿ, ಕುಷ್ಟರೋಗದಿಂದ ತುಂಬಿದ್ದ ಆ ಮನುಷ್ಯನಿಗೆ ಯೇಸು ಮಾಡಿದಂತೆ, ಸಹಾಯಮಾಡಲು ಎಟಕಿಸಬೇಕು. ಹೌದು, ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮಾರ್ಗಗಳಿಗಾಗಿ ನಾವು ಯಾವಾಗಲೂ ಎಚ್ಚರದಿಂದ ಕಾಯಬೇಕು.