ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಜುಲೈ 8 ರ ವಾರ
ಸಂಗೀತ 202 (18)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ತಕ್ಕದಾದ್ದ ಪ್ರಕಟಣೆಗಳು.
20 ನಿ: “ಶಾಂತಿ ಮತ್ತು ಭದ್ರತೆ—ಒಂದು ದೃಢ ನಿರೀಕ್ಷೆ.” ಮೊದಲ ಐದು ಪಾರಾಗಳನ್ನು ಆವರಿಸಿ ಹಿರಿಯನು 12 ನಿಮಿಷಗಳ ಭಾಷಣ ಕೊಡುತ್ತಾನೆ. ಇದನ್ನು ಹಿಂಬಾಲಿಸಿ ಪಾರಾ. 6-8ರ ಸಭಾ ಚರ್ಚೆ. ಪಾರಾ 7ರಲ್ಲಿ, ನುರಿತ ಪ್ರಚಾರಕನು ಟ್ರು ಪೀಸ್ ಪುಸ್ತಕದಿಂದ, ಸೂಚಿಸಲ್ಪಟ್ಟ ಮಾತಾಡುವ ವಿಷಯಗಳನ್ನು ಮನೆಯವನೊಂದಿಗೆ ಉಪಯೋಗಿಸುವ ವಿಧಾನವನ್ನು ದೃಶ್ಯಮಾಡುವನು.
15 ನಿ: “ಮಳೆಗಾಲದ ಅವಧಿಯಿಂದ ದೇವಪ್ರಭುತ್ವ ರೀತಿಯಲ್ಲಿ ಅತಿಹೆಚ್ಚನ್ನು ಪಡೆಯುವುದು.” ಭಾಷಣ ಮತ್ತು ಒಂದು ಕುಟುಂಬ ಚರ್ಚೆ.
(3ನಿ.) ಅಧ್ಯಕ್ಷನು ಮೊದಲು ಎರಡು ಪಾರಾಗಳನ್ನು ಚರ್ಚಿಸುತ್ತಾನೆ ಮತ್ತು ಕುಟುಂಬ ಚರ್ಚೆಯನ್ನು ಒಳತರುತ್ತಾನೆ. ಮಳೆಗಾಲದ ಅವಧಿಯಲ್ಲಿ ಕುಟುಂಬದ ಆತ್ಮಿಕತೆಯನ್ನು ದುರ್ಲಕ್ಷಿಸಬಾರದು. ಆತ್ಮಿಕ ಅಗತ್ಯತೆಗಳು ಎಲ್ಲಾ ಸಮಯದಲ್ಲಿ ಕೊಡಲ್ಪಡುವಂತೆ ಕುಟುಂಬ ತಲೆಗಳು ನಿಶ್ಚಯ ಮಾಡಬೇಕು.—ಧರ್ಮೋ. 6:6, 7.
(10ನಿ.) ಪಾರಾ 3-6 ರಲ್ಲಿರುವ ವಿಷಯಗಳನ್ನು ಕುಟುಂಬ ಚರ್ಚೆಯು ಆವರಿಸುತ್ತದೆ. ಮಳೆಗಾಲದ ಅವಧಿಯಲ್ಲಿ ಆತ್ಮಿಕ ಚಟುವಟಿಕೆಗಳು ಒಳಗೂಡಿರುವಂತೆ ಖಾತರಿಪಡಿಸಲು ಕುಟುಂಬ ತಲೆಯು ಬೇಕಾದ ಏರ್ಪಾಡುಗಳನ್ನು ಕುಟುಂಬದೊಂದಿಗೆ ಚರ್ಚಿಸುತ್ತಾನೆ. ತಾವು ಸಂದರ್ಶಿಸುವ ಕ್ಷೇತ್ರದಲ್ಲಿ ಸ್ಥಳೀಕ ಸಭೆಯ ಕೂಟಗಳ ಸಮಯ ಮತ್ತು ವಿಳಾಸವನ್ನು ಒಬ್ಬ ಕುಟುಂಬ ಸದಸ್ಯನು ಪಡಕೊಂಡಿದ್ದಾನೆ. ಸಭೆಯೊಂದಿಗೆ ಕ್ಷೇತ್ರಸೇವೆಯಲ್ಲಿ ಪಾಲಿಗರಾಗಲು ಹಾಗೂ ಅವಿಧಿ ಸಾಕ್ಷಿಯ ಸಂದರ್ಭಗಳನ್ನು ಸದುಪಯೋಗಿಸಲು ಕುಟುಂಬದೊಂದಿಗೆ ಸಾಕಷ್ಟು ಲಿಟ್ರೇಚರ್ ಇದೆ. ಸಾಕ್ಷಿ ಕೊಡಲು ಯಾವ ಯಾವ ಸಂದರ್ಭಗಳು ಎದುರಾಗಬಹುದೆಂದು ತಿಳಿಸಲಾಗುತ್ತದೆ. ಕುಟುಂಬ ತಲೆಯು, “ಸ್ವಾತಂತ್ರ್ಯ ಪ್ರಿಯರ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ಯೋಜನೆಗೆ ಗಮನ ಸೆಳೆಯುತ್ತಾನೆ ಮತ್ತು ಪ್ರತಿದಿನದ ಅಧಿವೇಶನದ ಅಂತ್ಯದಲ್ಲಿ ಅಂದಿನ ಕಾರ್ಯಕ್ರಮದ ವಿಷಯಗಳನ್ನು ಅವರು ಪುನರ್ವಿಮರ್ಶೆ ಮಾಡುವರೆಂಬ ನೆನಪನ್ನು ಕೊಡುತ್ತಾನೆ ಮತ್ತು ಹಾಗೆ ಮಾಡುವುದರ ಪ್ರಯೋಜನವನ್ನು ವಿವರಿಸುತ್ತಾನೆ. ಮಳೆಗಾಲದ ಮತ್ತು ಅಧಿವೇಶನದ ಅವಧಿಯಲ್ಲಿ ದೇವಪ್ರಭುತ್ವ ರೀತಿಯಲ್ಲಿ ಅತಿ ಹೆಚ್ಚನ್ನು ಪಡೆಯುವಂತೆ ಎಲ್ಲರೂ ಆತುರದಿಂದ ಮನ್ನೋಡುವರು.
(2ನಿ.) 7ನೇ ಪಾರಾದೊಂದಿಗಿನ ಮಾಹಿತಿಯೊಡನೆ ಅಧ್ಯಕ್ಷನು ಕೊನೆಗೊಳಿಸುತ್ತಾನೆ. ನಾವು ಯಾವ ಯೋಜನೆಗಳನ್ನು ಮಾಡಿದರೂ, ಕುಟುಂಬದ ಆತ್ಮಿಕ ಅಗತ್ಯತೆಗಳನ್ನು ದುರ್ಲಕ್ಷ ಮಾಡದಂತೆ ಎಚ್ಚರವಿರೋಣ.
ಸಂಗೀತ 100 (81) ಮತ್ತು ಸಮಾಪ್ತಿ ಪ್ರಾರ್ಥನೆ.
ಜುಲೈ 15 ರ ವಾರ
ಸಂಗೀತ 116 (108)
5 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಅಕೌಂಟ್ಸ್ ರಿಪೋರ್ಟ್. ಲೋಕವ್ಯಾಪಕ ಕಾರ್ಯಕ್ಕಾಗಿ ನೀಡಿದ ಆರ್ಥಿಕ ಬೆಂಬಲಕ್ಕಾಗಿ ಸೊಸೈಟಿಯ ಗಣ್ಯತೆಯ ಪತ್ರವನ್ನು ಓದಿರಿ. ದೊರೆತ ಕಾಣಿಕೆಗಳಿಗಾಗಿ ಸಭೆಗೆ ಉಪಕಾರ ಹೇಳಿರಿ.
20 ನಿ: “ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು.” ಪ್ರಶ್ನೋತ್ತರ ಚರ್ಚೆ. ಮಾಹಿತಿಯನ್ನು ಸ್ಥಳೀಕವಾಗಿ ಅನ್ವಯಿಸಲು ಏನು ಮಾಡಬಹುದೆಂದು ಸಭೆಯೊಂದಿಗೆ ಚರ್ಚಿಸಿರಿ.
20 ನಿ: “1991ರ ‘ಸ್ವಾತಂತ್ರ್ಯ ಪ್ರಿಯರ’ ಜಿಲ್ಲಾ ಅಧಿವೇಶನವನ್ನು ಹಾಜರಾಗಲು ಈಗಲೇ ಏರ್ಪಡಿಸಿರಿ”—1ನೇ ಭಾಗ. ಪಾರಾ 1-9ರ ಸಭಾ ಚರ್ಚೆ, ಮತ್ತು ಸಮಯ ಅನುಮತಿಸುವ ಮೇರೆಗೆ, “ಜಿಲ್ಲಾ ಅಧಿವೇಶನ ಮರುಜ್ಞಾಪಕಗಳು” ಇದರ ಸಂಕ್ಷೇಪ ಪರಾಮರ್ಶೆ. ಪ್ರಚಾರಕರು ಅಧಿವೇಶನವನ್ನು ಹಾಜರಾಗುವ ತಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ತಕ್ಕದಾದ್ದ ವಿಷಯಗಳನ್ನು ಚರ್ಚಿಸ ಬಯಸಬಹುದು.
ಸಂಗೀತ 177 (52) ಮತ್ತು ಸಮಾಪ್ತಿ ಪ್ರಾರ್ಥನೆ.
ಜುಲೈ 22 ರ ವಾರ
ಸಂಗೀತ 133 (68)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸದ್ಯದ ಪತ್ರಿಕೆಗಳಿಂದ ಒಂದೆರಡು ಮಾತಾಡುವ ವಿಷಯಗಳನ್ನು ಎತ್ತಿಹೇಳಿರಿ. ಈ ವಾರಾಂತ್ಯದಲ್ಲಿ ಕ್ಷೇತ್ರಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ಪ್ರಚಾರಕರಿಗೆ ಉತ್ತೇಜನ ಕೊಡಿರಿ.
23 ನಿ: “ಸುವಾರ್ತೆಯನ್ನು ನೀಡುವುದು—ಬಾರಿಬಾರಿ ಆವರಿಸಲ್ಪಡುವ ಟೆರಿಟೆರಿಯಲ್ಲಿ ಪತ್ರಿಕೆಗಳೊಂದಿಗೆ.” ಪ್ರಶ್ನೋತ್ತರ. 3ನೇ ಪಾರವನ್ನು ಚರ್ಚಿಸುವಾಗ, ಚೆನ್ನಾಗಿ ತಯಾರಿಸಿದ ಯುವಕನು ಪ್ರಚಲಿತ ಪತ್ರಿಕೆಯನ್ನು ನೀಡುತ್ತಾ, ಎಳೆಯ ಪ್ರಚಾರಕರು ಹೇಗೆ ಮನೆಯವನೊಂದಿಗೆ ಸಂಭಾಷಣೆ ನಡಿಸಿ ಸಾಹಿತ್ಯ ನೀಡಬಹುದೆಂಬದನ್ನು ದೃಶ್ಯ ಮಾಡಿಸಿರಿ. ಹೀಗನ್ನಬಹುದು: “ನಮಸ್ಕಾರ. ನನ್ನ ಹೆಸರು____. ಒಂದು ಅತಿ ಮಹತ್ವದ ವಿಷಯದ ಕುರಿತು [ವಿಷಯ ಅಥವಾ ಮೇಲ್ಬರಹ ತಿಳಿಸಿ.] ಮಾಹಿತಿ ಕೊಡಲು ನಾನು ಬಂದಿರುತ್ತೇನೆ. ಈ ಒಂದು ವಿಷಯದಲ್ಲಿ ನಾನು ಬಹು ಆನಂದಿಸಿದೆ. [ವಿಶಿಷ್ಟ ವಿಷಯ ತೋರಿಸಿ ಅಥವಾ ಚಿತ್ರವನ್ನು ವಿವರಿಸಿರಿ.] ಅದು ನನಗೆ ಸಹಾಯ ಮಾಡಿದೆ. [ಹೇಗೆ ಸಹಾಯಿಸಿತೆಂದು ಹೇಳಿ.] ನೀವೂ ಅದರಲ್ಲಿ ಆನಂದಿಸುವಿರೆಂದು ನಾನು ನೆನಸುತ್ತೇನೆ. ನೀವೀ ಪತ್ರಿಕೆ ಓದುವುದಾದರೆ, ರೂ.2.50ಕ್ಕೆ ನಿಮಗದನ್ನು ನೀಡಲು ನಾನು ಸಂತೋಷಿಸುತ್ತೇನೆ.”
12 ನಿ: ಪ್ರಶ್ನಾ ಪೆಟ್ಟಿಗೆ. ಶಾಲಾ ಮೇಲ್ವಿಚಾರಕನಿಂದ ಚರ್ಚೆ.
ಸಂಗೀತ 216 (108) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 29 ರ ವಾರ
ಸಂಗೀತ 139 (74)
7 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ವಾರಾಂತ್ಯದ ಸೇವಾ ಏರ್ಪಾಡುಗಳನ್ನು ಬೆಂಬಲಿಸುವಂತೆ ಸಭೆಗೆ ಉತ್ತೇಜನ ಕೊಡಿರಿ.
18 ನಿ: “ಕ್ಷೇತ್ರದಲ್ಲಿ ನಮ್ಮ ರಾಜ್ಯ ಶುಶ್ರೂಷೆಯನ್ನು ಪೂರೈಸುವುದು.” ಲೇಖನದ ಪ್ರಶ್ನೋತ್ತರ ಚರ್ಚೆ. ಪಾರಾ 2-6 ರಲ್ಲಿರುವ ವಿಷಯಗಳನ್ನು ಹೇಗೆ ವ್ಯಾವಹಾರ್ಯ ಉಪಯೋಗಕ್ಕೆ ಹಾಕಬಹುದೆಂದು ಚಿತ್ರಿಸಿರಿ. 5ನೇ ಪಾರಾ ಚರ್ಚಿಸುವಾಗ, ಬೈಬಲಭ್ಯಾಸ ಆರಂಭಿಸಲು ಕಷ್ಟವಾಗುವ ಪ್ರಚಾರಕನು ಸಹಾಯಕ್ಕಾಗಿ ಸೇವಾ ಮೇಲ್ವಿಚಾರಕನನ್ನು ಗೋಚರಿಸುವದನ್ನು ದೃಶ್ಯ ಮಾಡಿರಿ. ಸೇವಾ ಮೇಲ್ವಿಚಾರಕನು ಪ್ರಚಾರಕನಿಗೆ ಸಹಾಯ ಮಾಡಲು ಇಂಡೆಕ್ಸ್ ಉಪಯೋಗಿಸುತ್ತಾನೆ.
20 ನಿ. “1991ರ ‘ಸ್ವಾತಂತ್ರ್ಯ ಪ್ರಿಯರ’ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಈಗಲೇ ಏರ್ಪಡಿಸಿರಿ.”— 2ನೇ ಭಾಗ. ಪಾರಾ 10-25ರ ಸಭಾ ಚರ್ಚೆ. ವಾಚ್ಟವರ್ ಜೂನ್ 15, 1989, ಪುಟ 10-20ರ ಸಮಾಚಾರದಲ್ಲಿ ಆಧರಿತ ತಕ್ಕದಾದ ಮರುಜ್ಞಾಪಕಗಳನ್ನು ಸೇರಿಸಿರಿ. ಅಧಿವೇಶನಕ್ಕೆ ಹಾಜರಾಗುವ ಮೊದಲು ಈ ಲೇಖನಗಳಲ್ಲಿರುವ ವಿಷಯಗಳನ್ನು ಪುನರ್ವಿಮರ್ಶಿಸುವಂತೆ ಕುಟುಂಬ ಗುಂಪುಗಳಿಗೆ ಉತ್ತೇಜನ ಕೊಡಿ.
ಸಂಗೀತ 14 (6) ಮತ್ತು ಸಮಾಪ್ತಿ ಪ್ರಾರ್ಥನೆ.