ಸಭಾ ಪುಸ್ತಕಭ್ಯಾಸ ಏರ್ಪಾಡು
ಭಾಗ 1: ಅಭ್ಯಾಸ ನಿರ್ವಾಹಕನ ಜವಾಬ್ದಾರಿ
1 ಸಭಾ ಪುಸ್ತಕಭ್ಯಾಸವು ಯೆಹೋವನ ಜನರ ಆತ್ಮಿಕ ವಿಕಸನೆಯಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಮುಂದಣ ತಿಂಗಳುಗಳಲ್ಲಿ, ನಾವು ಸಭಾ ಪುಸ್ತಕಭ್ಯಾಸ ಏರ್ಪಾಡಿನ ಹಲವಾರು ಮುಖಗಳನ್ನು ಪರೀಕ್ಷಿಸಿ, ನಾವದರಿಂದ ಹೇಗೆ ಪ್ರಯೋಜನ ಪಡೆಯಬಹುದೆಂಬದನ್ನು ಚರ್ಚಿಸಲಿದ್ದೇವೆ. ಈ ಸಂಚಿಕೆಯಲ್ಲಿ, ಪುಸ್ತಕಭ್ಯಾಸ ನಡಿಸುವವನು ಅಭ್ಯಾಸವನ್ನು ಹೇಗೆ ಪ್ರೋತ್ಸಾಹನೀಯವೂ ವಿಶ್ವಾಸವನ್ನು ಬಲಪಡಿಸುವಂಥಾದ್ದಾಗ್ಯಿ ಮಾಡಬಹುದು ಎಂಬದನ್ನು ನಾವು ಚರ್ಚಿಸ ಬಯಸುತ್ತೇವೆ.
2 ಅಭ್ಯಾಸ ನಿರ್ವಾಹಕನು ತನ್ನ ಕಲಿಸುವಿಕೆಯಲ್ಲಿ ಪರಿಣಾಮಕಾರಿಯಾಗ ಬೇಕಾದರೆ, ಚೆನ್ನಾಗಿ ತಯಾರಿಸಬೇಕು. ದೇವರ ವಾಕ್ಯದ ಗಂಭೀರ ವಿದ್ಯಾರ್ಥಿಯಾದ ಆತನು, ಪ್ರತಿ ಪ್ರಶ್ನೆಯ ಉತ್ತರವನ್ನು ಬಲ್ಲವನಾಗಬೇಕು ಮಾತ್ರವಲ್ಲ, ಆ ಉತ್ತರವು ಯಾಕೆ ಸರಿ ಎಂಬದನ್ನೂ ತಿಳಿದಿರಬೇಕು. ಅಭ್ಯಾಸದಲ್ಲಿರುವ ಎಲ್ಲರಿಗೆ ಉತ್ತರಗಳ ಕಾರಣವನ್ನು ತಿಯುವಂತೆ ಮಾಡುವದೇ ಅವನ ಯತ್ನವಾಗಿರಬೇಕು. (1 ಪೇತ್ರ 3:15) ಇದು, ವಿಷಯಕ್ಕಾಗಿ ಅವರ ಗಣ್ಯತೆಯನ್ನು ಆಳಗೊಳಿಸುವುದು.
ಅಭ್ಯಾಸ ನಡಿಸುವುದರಲ್ಲಿ ಗುರಿಗಳು
3 ನಿರ್ವಾಹಕನ ಒಂದು ಗುರಿಯು, ಅಭ್ಯಾಸ ವಿಷಯವನ್ನುಪಯೋಗಿಸಿ ಹಾಜರಾದ ಎಲ್ಲರ ನಂಬಿಕೆಯನ್ನು ಬಲಪಡಿಸುವದು ಮತ್ತು ದೇವರ ಚಿತ್ತವನ್ನು ಅಧಿಕ ಪೂರ್ಣವಾಗಿ ಮಾಡುವಂತೆ ಅವರನ್ನು ಪ್ರಚೋದಿಸುವದೇ. (ಕೀರ್ತ. 110:3; 2 ಥೆಸ. 1:3-5) ಇದನ್ನು ಪೂರೈಸಲು, ಅಭ್ಯಾಸ ನಿರ್ವಾಹಕನು ತಕ್ಕದಾದ ಬಿಂದುವಲ್ಲಿ ನಿಂತು, ಯೆಹೋವನಲ್ಲಿ, ಆತನ ವಾಕ್ಯದಲ್ಲಿ ಮತ್ತು ಆತನ ಸಂಸ್ಥೆಯಲ್ಲಿ ಹೃದಯವೇದ್ಯ ಭರವಸೆಯನ್ನು ಕಟ್ಟುವ ವಿಷಯಗಳನ್ನು ‘ಪ್ರತಿದ್ವನಿಸ’ ಬೇಕು. (ಗಲಾ 6:6, Ref. Bi. ಪಾದಟಿಪ್ಪಣಿ.) ಈ ನಂಬಿಕೆ-ಕಟ್ಟುವ ವಿವರಗಳನ್ನು ಹೊರತೆಗೆಯಲು, ಸಮಯವಿದ್ದ ಹಾಗೆ, ಜಾಣ್ಮೆಯಿಂದ ರಚಿಸಿದ ಪ್ರಶ್ನೆಗಳನ್ನು ಬಳಸಬಹುದು.
4 ನ್ನೊಂದು ಗುರಿಯು, ವಿಷಯವನ್ನು ಎಲ್ಲರೂ ವ್ಯಾವಹಾರ್ಯ ರೀತಿಯಲ್ಲಿ ಹೇಗೆ ಬಳಸಶಕ್ತರು ಎಂದು ತಿಳಿಯುವಂತೆ ಮಾಡುವದೇ. ಅದನ್ನು ಅವರು ಕ್ಷೇತ್ರ ಶುಶ್ರೂಷೆಯಲ್ಲಿ ಹೇಗೆ ಉಪಯೋಗಿಸಬಹುದು? ಸಹೋದರರಿಗೆ ಮತ್ತು ಹೊಸಬರಿಗೆ ಪ್ರೋತ್ಸಾಹನೆ ಕೊಡುವದರಲ್ಲಿ? ಕುಟುಂಬವನ್ನು ಮತ್ತು ತಮ್ಮನ್ನು ಬಲಪಡಿಸುವದರಲ್ಲಿ? ಸಭಾ ಪುಸ್ತಕಭ್ಯಾಸ ನಿರ್ವಾಹಕರು ಪ್ರತಿಯೊಂದು ಪಾಠವನ್ನು ತಯಾರಿಸುವಾಗ, ಅಭ್ಯಾಸದ ವಿಶಿಷ್ಟ ವಿಷಯಗಳ ವ್ಯಾವಹಾರ್ಯ ಪ್ರಯೋಗವನ್ನು ವಿವೇಚಿಸಿಕೊಳ್ಳಲು ಪ್ರಯತ್ನಿಸಬೇಕು.
5 ನಿರ್ದಿಷ್ಟ ಮಾಹಿತಿಯನ್ನು ಅವಿಶ್ವಾಸಿ ಸಂಬಂಧಿಕರಿಗೆ, ಸಹಪಾಠಿಗಳಿಗೆ, ಅಥವಾ ಸಹೋದ್ಯೋಗಿಗಳಿಗೆ ಸಹಾಯಕ್ಕಾಗಿ ಉಪಯೋಗಿಸಬಹುದು. ಬೇರೆ ವಿಷಯಗಳನ್ನು ವಿಭಜಿತ ಕುಟುಂಬಗಳ ಅಥವಾ ಏಕ-ಹೆತ್ತವ ಕುಟುಂಬಗಳ ಸಹಾಯಕ್ಕಾಗಿ ಉಪಯೋಗಿಸ ಸಾಧ್ಯವಿದೆ. ಹಾಜರಿರುವವರಿಗೆ, ವಿವೇಚಿಸುವಂತೆ ಮತ್ತು ಚರ್ಚಿಸಲ್ಪಡುವ ಸಮಾಚಾರದ ವ್ಯಾವಹಾರ್ಯ ಅನ್ವಯವನ್ನು ಅವರು ಹೇಗೆ ಮಾಡಬಹುದೆಂದು ಸಹಾಯ ಮಾಡುವ ಮೂಲಕ ಅಭ್ಯಾಸ ನಡಿಸುವವನು ಅವರಿಂದ ಹೇಳಿಕೆಗಳನ್ನು ಹೊರತೆಗೆಯಬಹುದು. ಅವನು ಅಭ್ಯಾಸವನ್ನು ಅಸಕ್ತಿಕರವನ್ನಾಗಿ, ಬರೇ ಪ್ರಶ್ನೋತ್ತರ ಚರ್ಚೆಯ ವಿಷಯಕ್ಕಿಂತ ಹೆಚ್ಚಿನದ್ದಾಗಿ ಮಾಡಬೇಕು.—1 ಕೊರಿಂಥ 14:9, 19 ಹೋಲಿಸಿ.
ವೈಯಕ್ತಿಕ ಅಭಿರುಚಿ ತೋರಿಸಿರಿ
6 ಗುಂಪಿನಲ್ಲಿರುವ ಪ್ರತಿಯೊಬ್ಬನಲ್ಲಿ ವೈಯಕ್ತಿಕ ಅಭಿರುಚಿಯನ್ನು ತೋರಿಸುವ ಮೂಲಕ ಅಭ್ಯಾಸ ನಿರ್ವಾಹಕನು ಪೂರ್ಣ ಸಹಭಾಗವನ್ನು ಪ್ರೋತ್ಸಾಹಿಸಬಲ್ಲನು. ಸಂಕೋಚ ಸ್ವಭಾವದವರಿಗೆ ವಚನಗಳನ್ನು ಓದುವಂತೆ ಮೊದಲೇ ನೇಮಿಸಬಹುದು ಇಲ್ಲವೇ ಮುಂಚಿತವಾಗಿಯೇ ಒಂದು ಪ್ರಶ್ನೆಯನ್ನು ಕೊಟ್ಟು ಉತ್ತರ ತಯಾರಿಸಲು ಹೇಳಿಡಬಹುದು. ಎಲ್ಲರೂ ತಮ್ಮ ಸ್ವಂತ ಮಾತಿನಲ್ಲಿ ಉತ್ತರಿಸುವಂತೆ ಪ್ರಯತ್ನಿಸಬೇಕು. ಅಭ್ಯಾಸ ನಡಿಸುವವನು ಉತ್ತರಗಳಿಗೆ ಜಾಗ್ರತೆಯಿಂದ ಕಿವಿಗೊಡುವ ಮೂಲಕಯಾರಿಗೆ ವೈಯಕ್ತಿಕ ಸಹಾಯದ ಅಗತ್ಯವಿದೆಂದು ನಿರ್ಧರಿಸಶಕ್ತನು. ಅಂಥ ವೈಯಕ್ತಿಕ ಸಹಾಯವನ್ನು ಕೊಡಲು ಗುಂಪಿನಲ್ಲಿರುವ ಬೇರೆ ಅನುವಸ್ಥರನ್ನು ಅವನು ಉಪಯೋಗಿಸಬಹುದು.
7 ಸಭಾ ಪುಸ್ತಕಭ್ಯಾಸವು ನಮಗಿರುವ ಒಂದು ಆಶೀರ್ವಾದವು. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಕೂಡಿಬರುವ ಮತ್ತು ಅಧಿಕ ವೈಯಕ್ತಿಕ ಗಮನವನ್ನು ಹೊಂದಲು ಸಂದರ್ಭವನ್ನು ಅದು ನಮಗೆ ಕೊಡುತ್ತದೆ. ಬೇರೆ ಕೂಟಗಳಿಗಿಂತ ಅದು ಕಡಿಮೆ ಮಹತ್ವದೆಂದು ನಾವೆಂದೂ ವೀಕ್ಷಿಸಬಾರದು. ಯೆಹೋವನಲ್ಲಿ ನಿಮ್ಮ ನಂಬಿಕೆಯ ವರ್ಧನೆಗಾಗಿ ಮತ್ತು ದೇವರ ಆತ್ಮಿಕ ಒದಗಿಸುವಿಕೆಗಾಗಿ ನಿಮ್ಮ ಗಣ್ಯತೆಯನ್ನು ಕಟ್ಟುವಂತೆ ಪ್ರತಿಯೊಂದು ಅಭ್ಯಾಸವನ್ನು ಉಪಯೋಗಿಸುವ ತನ್ನ ಜವಾಬ್ದಾರಿಕೆಯನ್ನು, ನಿಮ್ಮ ಪುಸ್ತಕಭ್ಯಾಸ ನಿರ್ವಾಹಕನು ಗಂಭೀರವಾಗಿ ತಕ್ಕೊಳ್ಳುವನು.