ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಆಗಸ್ಟ್ 5ರ ವಾರ
ಸಂಗೀತ 173 (45)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಹೊಸ ಪತ್ರಿಕೆಗಳಿಂದ ಈ ಶನಿವಾರ ಪತ್ರಿಕಾ ಸೇವೆಯಲ್ಲಿ ಉಪಯೋಗಿಸಬಹುದಾದ ಲೇಖನಗಳನ್ನು ಎತ್ತಿಹೇಳಿರಿ
15 ನಿ: “ವಿಸಿಟಿಂಗ್ ಎ ಪೇಷಂಟ್—ಹೌ ಟು ಹೆಲ್ಪ್?” ಮಾರ್ಚ್ 8, 1991 ಅವೇಕ್! ಲೇಖನದ ಸಮಾಚಾರದಿಂದ ಭಾಷಣ. ವೃದ್ಧರಿಗೆ, ನಿರ್ಬಲರಿಗೆ, ಮತ್ತು ಮನೆಯಿಂದ ಹೊರಬರಲಾರದವರಿಗೆ ಸಹಾಯ ನೀಡಲು ಸಭಾ ಏರ್ಪಾಡನ್ನು ತಿಳಿಸಿರಿ; ಯೋಗ್ಯ ಬಟ್ಟೆ ಧರಿಸುವ ಪ್ರಯೋಜನದ ಬಗ್ಗೆ ಪುಟ 11, ಪಾರಾ. 4 ವಿಷಯವನ್ನು ಒತ್ತಿಹೇಳಿ. (ದೇಶಭಾಷೆ: km 12⁄88 ಪುಟ 1)
20 ನಿ: “ಶುಶ್ರೂಷೆಯಲ್ಲಿ ತಾಳ್ಮೆಯಿಂದಲೂ ಪೂರ್ತಿಯಾಗಿಯೂ ಇರ್ರಿ.” ಲೇಖನದ ಪ್ರಶ್ನೋತ್ತರ ಚರ್ಚೆ. ತಾಳ್ಮೆಯಿಂದಿರುವ ಅಗತ್ಯವನ್ನು ಒತ್ತಿಹೇಳಿರಿ, ವಿಶೇಷವಾಗಿ ಹೆಚ್ಚು ಸಲ ಸೇವೆಯಾದ ಕ್ಷೇತ್ರಗಳಲ್ಲಿ. 6ನೇ ಪಾರಾವನ್ನು ಚರ್ಚಿಸಿದ ನಂತರ, “ಲುಕ್!” ಬ್ರೊಷೂರನ್ನು ನೀಡುವಾಗ ಸಂಭಾಷಣೆಯ ವಿಷಯವನ್ನು ಉಪಯೋಗಿಸುವುದು ಹೇಗೆ ಎಂಬದನ್ನು ಪ್ರಚಾರಕನು ದೃಶ್ಯವಾಗಿ ಮಾಡಲಿ.
ಸಂಗೀತ 156 (10) ಮತ್ತು ಸಮಾಪ್ತಿ ಪ್ರಾರ್ಥನೆ
ಆಗಸ್ಟ್ 12ರ ವಾರ
ಸಂಗೀತ 162 (89)
10 ನಿ: ಸ್ಥಳೀಕ ತಿಳಿಸುವಿಕೆಗಳು. ಅಕೌಂಟ್ಸ್ ರಿಪೋರ್ಟ್. ದೇವಪ್ರಭುತ್ವ ವಾರ್ತೆ. ಕ್ಷೇತ್ರಸೇವೆಗಾಗಿ ವಾರಾಂತ್ಯದ ಏರ್ಪಾಡುಗಳನ್ನು ಸಭೆಗೆ ನೆನಪಿಸಿರಿ.
15 ನಿ: “ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ—ಭಾಗ 1” ಸೇವಾ ಮೇಲ್ವಿಚಾರಕನಿಂದ ಪ್ರಶ್ನೋತ್ತರ ಚರ್ಚೆ. ಆಯ್ದ ಮುಖ್ಯ ವಚನಗಳನ್ನು ಓದುವಂತೆ ಮುಂಚಿತವಾಗಿ ನೇಮಿಸಿಡಿ ಮತ್ತು ಸ್ಥಳೀಕ ಅನ್ವಯಗಳನ್ನು ಮಾಡಿರಿ. ಐದು-ಭಾಗ ಲೇಖನಮಾಲೆಯ ಕಡೆಗೆ ಆಸಕ್ತಿಯನ್ನು ಚೇತರಿಸಿರಿ.
20 ನಿ: ಪೂರ್ಣ ಸಮಯದ ಸೇವೆ—ದೇವರೊಂದಿಗೆ ನಡಿಯಲು ಒಂದು ಅತ್ಯುತ್ತಮ ಸಂದರ್ಭ. (ಮೀಕ 6:8) ನುರಿತ ಹಿರಿಯ ಅಥವಾ ಶುಶ್ರೂಷೆ ಸೇವಕ, ಇಷ್ಟಕರವಾಗಿ ಪೂರ್ಣ ಸಮಯದ ಸೇವೆಯಲ್ಲಿರುವವನು ಬೆಚ್ಚನೆಯ, ಪ್ರೋತ್ಸಾಹನೀಯ ಭಾಷಣವನ್ನು ಕೊಡುತ್ತಾನೆ. (ಮೇ 15, 1989, ವಾಚ್ಟವರ್, ಪುಟ 21-3 ನೋಡಿ.) (ದೇಶ ಭಾಷೆ: km 8⁄89 ಪುಟ 1-2; 11⁄89 ಪುಟ 1-2) ಸಭಾಪ್ರಚಾಕರು ಅವರವರ ಪರಿಸ್ಥಿತಿಗನುಸಾರ, ಪೂರ್ಣ ಸಮಯದ ಸೇವೆಯನ್ನು ತಕ್ಕೊಳ್ಳುವ ಕುರಿತು ಗಂಭೀರವಾಗಿ ಯೋಚಿಸುವಂತೆ ವ್ಯಾವಹಾರ್ಯ ಸಲಹೆಗಳನ್ನು ಸೂಚಿಸಿರಿ. 2-3 ಪಯನೀಯರರನ್ನು ಸಾಕ್ಷತ್ ಸಂದರ್ಶನ (ಇಂಟರ್ವ್ಯೂ) ಮಾಡಿಸಿರಿ, ಪೂರ್ಣಸಮಯದ ಸೇವೆಯ ಅನೇಕ ಪ್ರಯೋಜನಗಳನ್ನು ತಿಳಿಸಲಿ. ಹೊಸ ಸೇವಾ ವರ್ಷವು ಅದನ್ನಾರಂಭಿಸಲು ಉತ್ತಮ ಸಮಯ. ಸಪ್ಟಂಬರ 1, 1991 ರೊಳಗೆ ಆರಂಭಿಸುವವರು, ಮುಂದಿನ ಪಯನೀಯರ ಸೇವಾ ಶಾಲೆಗೆ ಹೋಗಲು ಯೋಗ್ಯತೆ ಪಡೆಯುತ್ತಾರೆ.
ಸಂಗೀತ 204 (109) ಮತ್ತು ಸಮಾಪ್ತಿ ಪ್ರಾರ್ಥನೆ.
ಆಗಸ್ಟ್ 19ರ ವಾರ
ಸಂಗೀತ 32 (81)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸಭೆಯ ಇತ್ತೀಚಿನ ಕ್ಷೇತ್ರ ಸೇವಾ ವರದಿಯಿಂದ ಮುಖ್ಯಾಂಶಗಳನ್ನು ಪರಾಮರ್ಶಿಸಿರಿ. ಕ್ಷೇತ್ರದಲ್ಲಿ ಪೂರೈಸಲ್ಪಟ್ಟಕಾರ್ಯಕ್ಕಾಗಿ ಪ್ರಚಾರಕರನ್ನು ಪ್ರಶಂಸಿಸಿರಿ.
20 ನಿ: “ಸುವಾರ್ತೆಯನ್ನು ನೀಡುವುದು—ವಿವೇಚನೆಯೊಂದಿಗೆ.” ಪ್ರಶ್ನೋತ್ತರ ಚರ್ಚೆ. 5ನೇ ಪಾರೆಗ್ರಾಫಿನಲ್ಲಿನ ವಿಷಯವನ್ನು ದೃಶ್ಯವಾಗಿ ಮಾಡಿರಿ. ಪ್ರಾರಂಭದಲ್ಲಿ ವಿವಾದವೆಬ್ಬಿಸುವ ಮನೆಯವನಿಗೆ, ಜಾಣತನದ ಪ್ರಶ್ನೆಗಳನ್ನು ಹಾಕುವ ಮೂಲಕ ಮತ್ತು ಆ ವಿಷಯವಾಗಿ ಬೈಬಲ್ ಏನನ್ನುತ್ತದೆಂದು ತೋರಿಸುವ ಮೂಲಕ ನುರಿತ ಪ್ರಚಾರಕನು ಅವನೊಂದಿಗೆ ವ್ಯವಹರಿಸುವುದನ್ನು ತೋರಿಸಿರಿ. ದೃಶ್ಯವನ್ನು ಚೆನ್ನಾಗಿ ರಿಹರ್ಸ್ ಮಾಡಬೇಕು.
15 ನಿ: ನನಗೆ ಸತ್ಯವು ಸಿಕ್ಕಿದ್ದು ಹೇಗೆ. ಅನುಭವಗಳು. ಇಬ್ಬರು ಮೂವರು ವ್ಯಕ್ತಿಗಳನ್ನು ಹಿರಿಯನು ಸಾಕ್ಷತ್ ಸಂದರ್ಶನ ಮಾಡಿಸುತ್ತಾನೆ. ದೇವರ ವಾಕ್ಯ ಮತ್ತು ಸಂಸ್ಥೆಯು, ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಿಂದುವಿಗೆ ತಮ್ಮನ್ನು ನಡಿಸಿದ್ದು ಹೇಗೆ ಎಂದವರು ತಿಳಿಸಲಿ. ಸತ್ಯದಲ್ಲಿರುವದರಿಂದ ಅವರು ಅನುಭವಿಸುವ ಪ್ರಯೋಜನಗಳನ್ನು ಒತ್ತಿಹೇಳಲಿ.
ಸಂಗೀತ 67 (38) ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 26ರ ವಾರ
ಸಂಗೀತ 210 (31)
15 ನಿ: ಸ್ಥಳೀಕ ತಿಳಿಸುವಿಕೆಗಳನ್ನು ಹಿರಿಯನು ಅಥವಾ ನುರಿತ ಶುಶ್ರೂಷೆ ಸೇವಕನು ನಿರ್ವಹಿಸುತ್ತಾನೆ. ದೊರೆಯುವ ಬ್ರೊಷೂರ್ಗಳಿಂದ ಮಾತಾಡುವ ವಿಷಯಗಳಿಗಾಗಿ ಸಭಿಕರನ್ನು ಕೇಳಿರಿ. ಸಂಭಾಷಣೆಗಾಗಿ ವಿಷಯದೊಂದಿಗೆ ಒಪ್ಪುವ ಮತ್ತು ಮನೆಯವನು ಬ್ರೊಷೂರನ್ನೋದಲು ಇಚ್ಛೈಸುವಂತೆ ಮಾಡುವ ವಿಷಯಗಳನ್ನು ಹೆಕ್ಕಿರಿ. ಪ್ರಸಂಗವನ್ನು ಬ್ರೊಷೂರಿಗೆ ಜೋಡಿಸುವ ಮತ್ತು ತಕ್ಕದಾದ ಮಾತಾಡುವ ವಿಷಯದ ಚಿಕ್ಕ ದೃಶ್ಯ ಮಾಡಿರಿ.
18 ನಿ: “ಸಭಾ ಪುಸ್ತಕಭ್ಯಾಸ ಏರ್ಪಾಡು—ಭಾಗ 1.” ಅನುಭವಸ್ಥ ಹಿರಿಯನು, ಪುಸ್ತಕಭ್ಯಾಸ ನಿರ್ವಾಹಕರಾದ ಬೇರೆ ಒಬ್ಬಿಬ್ಬರು ಹಿರಿಯರು ಅಥವಾ ಶುಶ್ರೂಷೆ ಸೇವಕರೊಂದಿಗೆ ಚರ್ಚಿಸುತ್ತಾನೆ. ಸ್ಥಳೀಕ ಸಭೆಗೆ ವಿಶೇಷವಾಗಿ ಅಗತ್ಯವಿರುವ ಒಂದೆರಡು ವಿಷಯಗಳನ್ನು ವಿಶಿಷ್ಟವಾಗಿ ಒತ್ತಿಹೇಳಿರಿ. (ತಮ್ಮ ಸ್ವಂತ ಮಾತುಗಳಲ್ಲಿ ಉತ್ತರಿಸುವುದು ಮತ್ತು ಕಲಿತ ವಿಷಯಗಳ ವ್ಯಾವಹಾರ್ಯ ಅನ್ವಯವನ್ನು ಮಾಡುವುದು, ಇತ್ಯಾದಿ.)
12 ನಿ. ಸ್ಥಳಿಕ ಅಗತ್ಯತೆಗಳು. ಸಭೆಗೆ ಯಾವದರಲ್ಲಿ ಸಹಾಯ ಬೇಕೆಂದು ಹಿರಿಯರು ಎಣಿಸುತ್ತಾರೋ ಅವನ್ನು ಚರ್ಚಿಸಿರಿ. ಸರ್ಕಿಟ್ ಮೇಲ್ವಿಚಾರಕನ ಕೊನೆಯ ಸಂದರ್ಶನೆಯಲ್ಲಿ ಸಭೆಯ ಗಮನಕ್ಕೆ ತರಲ್ಪಟ್ಟ ಕೆಲವು ಸಂಗತಿಗಳನ್ನು ಶಾಸ್ತ್ರೀಯವಾಗಿ ಚರ್ಚಿಸಬಹುದು.
ಸಂಗೀತ 42 (18) ಮತ್ತು ಸಮಾಪ್ತಿ ಪ್ರಾರ್ಥನೆ.
ಸಪ್ಟಂಬರ 2ರ ವಾರ
ಸಂಗೀತ 56 (37)
15 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಪ್ರಶ್ನಾ ಪೆಟ್ಟಿಗೆಯ ಚರ್ಚೆ. ಬ್ರೊಷೂರ್ ನೀಡಿಕೆಯಲ್ಲಿ ಮತ್ತು ಮತ್ತು ಬೈಬಲಧ್ಯಯನ ಪ್ರಾರಂಭಿಸಿದರಲ್ಲಿ ಅನುಭವಗಳಿಗಾಗಿ ಕೇಳಿರಿ.
15 ನಿ: “ಪುನಃಸಂದರ್ಶನಗಳಿಗೆ ಗಮನವನ್ನು ಕೊಡುವದು.” ಪುನಃ ಸಂದರ್ಶನಗಳ ವಿಷಯದಲ್ಲಿ ಕಳೆದ ಆರು ತಿಂಗಳಲ್ಲಿ ಸಭೆಯಲ್ಲಾದ ಕಾರ್ಯದ ಕುರಿತು ಸೇವಾ ಮೇಲ್ವಿಚಾರಕನು ವಿಶ್ಲೇಷಣೆ ಮಾಡುತ್ತಾನೆ. ಅಭಿರುಚಿಯುಳ್ಳವರನ್ನು ಪುನಃ ಸಂದರ್ಶಿಸಲು ಯಾವ ಕ್ರಮದ ಏರ್ಪಾಡುಗಳು ಅಲ್ಲಿವೆ? ಈ ಪ್ರಾಮುಖ್ಯ ಚಟುವಟಿಕೆಯನ್ನು ಎತ್ತಿಕಟ್ಟಲು ಯಾವ ಸುಧಾರಣೆಗಳನ್ನು ಮಾಡಬಹುದು?
15 ನಿ. “ಪ್ರಿವೆಂಟಿಂಗ್ ದ ರಿಟರ್ನ್ ಆಫ್ ಬ್ಯಾಡ್ ಹ್ಯಾಬಿಟ್ಸ್.” ಎಪ್ರಿಲ್ 8, 1991 ಅವೇಕ್! ಲೇಖನದ ಚರ್ಚೆ. (ದೇಶಭಾಷೆ: “ನೈತಿಕ ನೈರ್ಮಲ್ಯ ಯೌವನದ ಸೌಂದರ್ಯ.” ಕಾ.ಬು. 90 5⁄1)
ಸಂಗೀತ 132 (70) ಮತ್ತು ಸಮಾಪ್ತಿ ಪ್ರಾರ್ಥನೆ.