ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ ಜೀವಿಸುವುದು
1 ದೇವಭಕ್ತಿಹೀನತೆಯ ಕಡೆಗೆ ಬಲವಾದ ಪ್ರಭಾವವನ್ನು ಹಾಕುವ ಲೋಕವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ. ಈ ವ್ಯವಸ್ಥೆಯ ಮಟ್ಟಗಳು ಅವನತಿಗೊಳ್ಳುವದು ಮುಂದರಿಯುತ್ತಾ ಇದೆ. (2 ತಿಮೊ. 3:3) ಕ್ರೈಸ್ತರೋಪಾದಿ, ಯೋಗ್ಯವಾಗಿರುವುದರ ಕಡೆಗೆ ನಾವೊಂದು ನಿಲುವನ್ನು ತಕ್ಕೊಳ್ಳಬೇಕು ಮತ್ತು ನಾವು ಹಾಗೆ ಯಾಕೆ ಮಾಡುತ್ತಾ ಮುಂದರಿಸಬೇಕು ಎಂದು ಕೂಡ ನಾವು ತಿಳಿದಿರತಕ್ಕದ್ದು. ಆದರೆ ಯಾವ ನಿರ್ದೇಶನೆ ಮತ್ತು ಮಾರ್ಗದರ್ಶಕ ದೊರೆಯುತ್ತದೆ? ಯಾವ ಮಟ್ಟಗಳನ್ನು ನಾವು ಅನುಸರಿಸತಕ್ಕದ್ದು? “ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ ಜೀವಿಸುವುದು”, 1993 ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಕ್ಕೆ ಆರಿಸಲ್ಪಟ್ಟ ಒಂದು ಪ್ರೋತ್ಸಾಹದಾಯಕ ಮುಖ್ಯಪ್ರಸಂಗವಾಗಿದೆ.—ತೀತ. 2:12.
2 ಭಾಷಣಗಳ, ಪ್ರತ್ಯಕ್ಷಾಭಿನಯಗಳ ಮತ್ತು ಅನುಭವಗಳ ಮೂಲಕ, ಭಕ್ತಿಹೀನತೆಯನ್ನು ಪ್ರತಿರೋಧಿಸಲು ಮತ್ತು ಪ್ರಾಪಂಚಿಕತೆಯ ಆಶೆಗಳನ್ನು ವಿಸರ್ಜಿಸಲು ನಮ್ಮನ್ನು ನಾವೇ ದೃಢಗೊಳಿಸುವದು ಹೇಗೆ ಸಾಧ್ಯವೆಂದು ನಾವು ಕಲಿಯಲಿರುವೆವು. ಈ ದುಷ್ಟ ವ್ಯವಸ್ಥೆಯ ನಡುವೆ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ ಜೀವಿಸಲು ಹೇಗೆ ಸಾಧ್ಯವಿದೆ ಎಂಬುದನ್ನು ನಾವು ನೋಡಲಿರುವೆವು. ನಮ್ಮ ಮಾನಸಿಕ ಶಕ್ತಿಗಳನ್ನು ಸುರಕ್ಷಿತವಾಗಿಡಲು ನಮಗೆ ಸಹಾಯವಾಗುವಂತೆ ಒದಗಿಸುವಿಕೆಗಳ ರೂಪರೇಖೆಗಳನ್ನು ಕೊಡಲಾಗುವುದು. (1 ಪೇತ್ರ 4:7) ಹೆತ್ತವರು ಮತ್ತು ಯುವಕರು ವಿಶೇಷವಾಗಿ ಮಧ್ಯಾಹ್ನದ ಕಾರ್ಯಕ್ರಮದ ಭಾಷಣಗಳಿಗೆ ಮತ್ತು ಮುಖಾಮುಖಿ ಭೇಟಿ (ಇಂಟರ್ವ್ಯೂ) ಗಳಿಗೆ ಗಮನಕೊಡಲು ಬಯಸುವರು. ದೈವಿಕ ವಿವೇಕ ಮತ್ತು ಅನುಭವವನ್ನು ಸಂಪಾದಿಸುವ ಮತ್ತು ಒಂದು ದೇವಪ್ರಭುತ್ವ ಭವಿಷ್ಯತ್ತನ್ನು ಕಟ್ಟಲು ಒಟ್ಟಿಗೆ ಕೆಲಸಮಾಡುವ ಅಗತ್ಯವನ್ನು ಇವು ಒತ್ತಿಹೇಳಲಿವೆ.
3 ಸುತ್ತಲೂ ಅದೈವಿಕತೆಯ ಲೋಕವೊಂದರಿಂದ ಆವರಿಸಲ್ಪಟ್ಟಿರುವುದಾದರೂ, ದೇವರ ವಾಕ್ಯವು ಅನುಸರಿಸಬೇಕಾದ ಅತ್ಯುತ್ತಮ ಮಾರ್ಗವನ್ನು ನಮಗೆ ಬೋಧಿಸುತ್ತದೆ. ಬೈಬಲಿನ ಬುದ್ಧಿವಾದವನ್ನು ಆಲಿಸುವುದರ ಪ್ರಯೋಜನಗಳನ್ನು “ಆನಂದರಹಿತ ಲೋಕದ ನಡುವೆ ನಿಮ್ಮ ಆಶೀರ್ವಾದಗಳನ್ನು ನೆಚ್ಚಿಕೊಂಡಿರ್ರಿ” ಎಂಬ ಭಾಷಣದಲ್ಲಿ ಎತ್ತಿತೋರಿಸಲಾಗುವುದು. ಹಾಜರಾಗಲು ನಾವು ಸಿದ್ಧತೆಗಳನ್ನು ಮಾಡುವಾಗ, ಕಾರ್ಯಕ್ರಮಕ್ಕೆ ನಿಕಟ ಗಮನವನ್ನು ಕೊಡುವದರ ಮತ್ತು ಬುದ್ಧಿವಾದವನ್ನು ಅನ್ವಯಿಸುವದರ ಮೂಲಕ ಯೆಹೋವನಿಗೆ ನಾವು ಸಲ್ಲಿಸುವ ಸೇವೆಯಲ್ಲಿ ಹೆಚ್ಚು ಪರಿಣಾಮಕಾರಿಗಳಾಗುವಂತೆ ಅದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆಂಬುದನ್ನು ಮನಸ್ಸಿನಲ್ಲಿಡಲು ನಾವು ಬಯಸುತ್ತೇವೆ.—ಫಿಲಿ. 3:15, 16.