ನೊವೆಂಬರ್ಗಾಗಿ ಸೇವಾ ಕೂಟಗಳು
ನೊವೆಂಬರ್ 9 ರ ವಾರ
ಸಂಗೀತ 92 (51)
10 ನಿ: ಸ್ಥಳೀಕ ತಿಳಿಸುವಿಕೆಗಳು, ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು ಮತ್ತು ದೇವಪ್ರಭುತ್ವ ವಾರ್ತೆಗಳಿಂದ ಮುಖ್ಯ ವಿಷಯಗಳು. ಪ್ರಚಲಿತ ಪತ್ರಿಕೆಗಳಿಂದ ಪ್ರಮುಖ ಲೇಖನಗಳನ್ನು ಪರಾಮರ್ಶಿಸಿರಿ; ಪ್ರಥಮವಾಗಿ ಶಾಸ್ತ್ರೀಯ ಚರ್ಚೆಯನ್ನುಪಯೋಗಿಸಿ ಆದ ನಂತರ ಅವುಗಳನ್ನು ಹೇಗೆ ನೀಡಬಹುದೆಂದು ತೋರಿಸಲು ಒಂದು ಯಾ ಎರಡು ಚುಟುಕಾದ ಪ್ರತ್ಯಕ್ಷಾಭಿನಯಗಳನ್ನು ಮಾಡಿರಿ. ನೊವೆಂಬರ್ ತಿಂಗಳಲ್ಲಿನ ಸೌಮ್ಯ ಹವಾಮಾನದ ಪ್ರಯೋಜನ ತಕ್ಕೊಂಡು ಕ್ಷೇತ್ರ ಸೇವೆಯಲ್ಲಿ ಅವರ ಭಾಗವನ್ನು ಹೆಚ್ಚಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
15 ನಿ: “ಪತ್ರಿಕೆಗಳ ಸದುಪಯೋಗವನ್ನು ಮಾಡಿರಿ.” ಪ್ರಶ್ನೆ ಮತ್ತು ಉತ್ತರಗಳ ಮೂಲಕ. ಪ್ಯಾರಗ್ರಾಫ್ 6 ನ್ನು ಚರ್ಚಿಸುವಾಗ, ಪತ್ರಿಕಾ ಪಥವನ್ನು ಆರಂಭಿಸುವುದು ಹೇಗೆ ಎಂದು ಸಲಹೆಗಳನ್ನೀಡಿರಿ: ಸರಳ, ನೇರ ಗೋಚರಿಸುವಿಕೆಯನ್ನುಪಯೋಗಿಸುವುದು; ಒಳ್ಳೇ ಮನೆ ಮನೆಯ ದಾಖಲೆಯನ್ನಿಡುವುದು; ಮುಂಬರುವಂಥಾ ಲೇಖನಗಳನ್ನು ಹೇಳುವುದರ ಮೂಲಕ ಮುಂದಿನ ಸಂಚಿಕೆಯಲ್ಲಿ ಅಭಿರುಚಿಯನ್ನು ಹುಟ್ಟಿಸುವುದು; ಲೇಖನಗಳ ಮೂಲಕ ಉತ್ತರಿಸಲ್ಪಡುವ ಪ್ರಶ್ನೆಗಳನ್ನು ಎಬ್ಬಿಸುವುದು; ಪ್ರತಿ ಎರಡು ವಾರಗಳಲ್ಲಿ ಮರು ಭೇಟಿ ನೀಡಲು ನಿಶ್ಚಯದಿಂದಿರುವುದು.—8⁄84 km p. 8.
20 ನಿ: “ನಮ್ಮ ಸಮಸ್ಯೆಗಳು ಬ್ರೊಷರಿನ ಪೂರ್ಣ ಉಪಯೋಗ ಮಾಡುವುದು.” ಆಗಸ್ಟ್ ನಮ್ಮ ರಾಜ್ಯದ ಸೇವೆಯ ಪುಟ 4ರ “ನಮ್ಮ ಸಮಸ್ಯೆಗಳು ಬ್ರೊಷರ್ನಿಂದ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು” ಲೇಖನದ ಮೇಲೆ ಹಿರಿಯನಿಂದ ಭಾಷಣ. ಫಲಭರಿತ ಪುನರ್ಭೇಟಿಗಳನ್ನು ಹೇಗೆ ಮಾಡಸಾಧ್ಯವಿದೆ ಮತ್ತು ಬೈಬಲ್ ಅಭ್ಯಾಸವನ್ನಾರಂಭಿಸಲು ಹೇಗೆ ಬುನಾದಿಯನ್ನಿಡಸಾಧ್ಯವಿದೆ ಎಂಬುದನ್ನು ತೋರಿಸಿರಿ. ಪ್ಯಾರಗ್ರಾಫ್ 2 ಮತ್ತು 3ನ್ನು ಗಮನಿಸಿಯಾದ ಮೇಲೆ, ಈ ಬ್ರೊಷರಿನ ಸಹಾಯದೊಂದಿಗೆ ಬೈಬಲನ್ನಭ್ಯಾಸಿಸುವಂತೆ ಮನೆಯವನಿಗೆ ಹೇಗೆ ಉತ್ತೇಜಿಸಬಹುದೆಂದು ತೋರಿಸುವ ಚುಟುಕಾದ ಪತ್ಯಕ್ಷಾಭಿನಯಗಳನ್ನು ತೋರಿಸಿರಿ. ಬೈಬಲಿನ ಜ್ಞಾನದ ಹಿನ್ನಲೆಯಿಲ್ಲದಿರುವ ವ್ಯಕ್ತಿಗಳೊಂದಿಗೆ ಪುನಃ ಸಂದರ್ಶನಗಳನ್ನು ಮಾಡುವ ಸನ್ನಿವೇಶಗಳಾಗಿರಬಹುದು.
ಸಂಗೀತ 63 (32) ಮತ್ತು ಸಮಾಪ್ತಿಯ ಪ್ರಾರ್ಥನೆ.
ನೊವೆಂಬರ್ 16 ರ ವಾರ
ಸಂಗೀತ 77 (41)
10 ನಿ: ಸ್ಥಳೀಕ ತಿಳಿಸುವಿಕೆಗಳು. ತಿಂಗಳ ಅಕೌಂಟ್ಸ್ ವರದಿಯನ್ನೋದಿರಿ; 2 ಕೊರಿಂಥದವರಿಗೆ 9:6, 7 ರ ಮೇಲಾಧರಿತ ಪ್ರಶಂಸೆಯನ್ನೀಯಿರಿ. ನೊವೆಂಬರ್ನಲ್ಲಿ ಪತ್ರಿಕೆಗಳನ್ನು ಮತ್ತು ಚಂದಾಗಳನ್ನು ನೀಡುವಲ್ಲಿ ಗಮನಾರ್ಹ ಅನುಭವಗಳನ್ನು ತಿಳಿಸಲು ತಯಾರಿಸಿದ ಪ್ರಚಾರಕರನ್ನು ಆಮಂತ್ರಿಸಿರಿ.
15 ನಿ: “ಪ್ರೇರಣೆಯನ್ನೀಯುವ ಪೀಠಿಕೆಗಳನ್ನು ವಿಕಸಿಸಿರಿ.” ನೊವೆಂಬರ್ ಪತ್ರಿಕೆಗಳಲ್ಲಿ ಎತ್ತಿ ತೋರಿಸಲ್ಪಟ್ಟ ಲೇಖನಗಳನ್ನುಪಯೋಗಿಸಿ ನೀಡುವಿಕೆಗಳನ್ನು ಹೇಗೆ ತಯಾರಿಸುವುದು ಎಂಬದನ್ನು ಚರ್ಚಿಸುವ ಭಾಷಣವನ್ನೀಯಿರಿ. ಸೂಚಿಸಲ್ಪಟ್ಟ ನೀಡುವಿಕೆಗಳನ್ನು ಪ್ರತ್ಯಕ್ಷಾಭಿನಯಿಸಲು ಎರಡು ಅಥವಾ ಮೂರು ಸಮರ್ಥ ಪ್ರಚಾರಕರನ್ನು ಏರ್ಪಡಿಸಿರಿ; ತರುಣ ಪ್ರಚಾರಕನಿಂದ⁄ಳಿಂದ ಒಂದು ನೀಡುವಿಕೆಯನ್ನು ಒಳಗೂಡಿಸಿರಿ.
20 ನಿ: “ಅಭಿರುಚಿಯುಳ್ಳವರಿಗೋಸ್ಕರ ಚಿಂತೆ ತೋರಿಸಿರಿ.” ಸಭಿಕರೊಂದಿಗೆ ಚರ್ಚಿಸಿರಿ. ಪ್ಯಾರಗ್ರಾಫ್ 2ನ್ನು ಗಮನಿಸುವಾಗ, ಬೇರೆಯವರಲ್ಲಿ ಆಸಕ್ತಿ ವಹಿಸುವುದರಲ್ಲಿ ಯೇಸುವನ್ನು ನಾವು ಹೇಗೆ ಅನುಕರಿಸಬಹುದೆಂದು ಹೇಳಲು, ಜುಲೈ 1, 1981ರ ವಾಚ್ಟವರ್, ಪುಟ 4-6 ರಲ್ಲಿರುವ ಆರಿಸಿದ ವಿಷಯಗಳನ್ನು ತಿಳಿಸಿರಿ. ಮನೆ ಮನೆಯ ದಾಖಲೆಯನ್ನು ಭರ್ತಿಮಾಡುವುದು ಹೇಗೆ ಮತ್ತು ಅಭಿರುಚಿಯನ್ನು ಹಿಂಬಾಲಿಸಲು ಅದನ್ನು ಹೇಗೆ ಉಪಯೋಗಿಸುವುದು ಎಂಬದರ ಮೇಲೆ ಹೇಳಿಕೆಗಳನ್ನು ಸೇರಿಸಿರಿ. ಸಲಹೆಗಳಲ್ಲೊಂದನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿರಿ. ಸಮರ್ಥ ಪ್ರಚಾರಕನೊಬ್ಬನು ಸೂಚಿಸಲ್ಪಟ್ಟ ವಿಧಾನವನ್ನು ಪ್ರತ್ಯಕ್ಷಾಭಿನಯಿಸಿದ ನಂತರ, ಸ್ಥಳಿಕ ಟೆರಿಟೊರಿಯಲ್ಲಿ ಅಭ್ಯಾಸಗಳನ್ನಾರಂಭಿಸಲು ಅದು ಒಂದು ಪರಿಣಾಮಕಾರಿ ವಿಧಾನ ಯಾಕಾಗಿರಬಹುದೆಂದು ಹೇಳಿಕೆಯನ್ನೀಯಲು ಸಭಿಕರನ್ನು ಆಮಂತ್ರಿಸಿರಿ.
ಸಂಗೀತ 88 (42) ಮತ್ತು ಸಮಾಪ್ತಿಯ ಪ್ರಾರ್ಥನೆ.
ನೊವೆಂಬರ್ 23 ರ ವಾರ
ಸಂಗೀತ 164 (73)
5 ನಿ: ಸ್ಥಳೀಕ ತಿಳಿಸುವಿಕೆಗಳು. ಡಿಸೆಂಬರ್ ಮತ್ತು ಜನವರಿಯಲ್ಲಿ ರಜಾ ದಿನದ ಅವಧಿಗಳು ಇರುವಾಗ ಸಾಮಾನ್ಯವಾಗಿಯೆ ಹೆಚ್ಚು ಸಮಯ ದೊರಕುವುದರಿಂದ ಸಹಾಯಕ ಪಯನಿಯರಿಂಗ್ ಮಾಡುವ ಸಾಧ್ಯತೆಯನ್ನು ಎಲ್ಲರೂ ಆಲೋಚಿಸುವಂತೆ ಉತ್ತೇಜಿಸಿರಿ.
20 ನಿ: “ಹೃದಯದಿಂದ ಯೆಹೋವನನ್ನು ಸೇವಿಸುವಂತೆ ಮಕ್ಕಳಿಗೆ ಸಹಾಯ ಮಾಡಿರಿ.” ಸಭಿಕರೊಂದಿಗೆ ಚರ್ಚೆ. ಶುಶ್ರೂಷೆಯಲ್ಲಿ ವೈಯಕ್ತಿಕವಾಗಿ ಅವರ ಮಕ್ಕಳಿಗಾಗಿ ಮಾದರಿಯನ್ನಿಡಲು ಮತ್ತು ತರಬೇತಿಗೊಳಿಸಲು ಅವರ ಜವಾಬ್ದಾರಿಯನ್ನು ನೆರವೇರಿಸಲು ಹೆತ್ತವರಿಗಿರುವ ಅಗತ್ಯತೆಯನ್ನು ಒತ್ತಿ ಹೇಳಿರಿ. ಒಳ್ಳೇ ಫಲಿತಾಂಶವನ್ನು ಪಡೆಯುವಂತಾಗಲು ಅವರೇನನ್ನು ಮಾಡಿದ್ದಾರೆಂದು ತಿಳಿಸಲು ಒಬ್ಬ ಅಥವಾ ಇಬ್ಬರು ಹೆತ್ತವರನ್ನು ಆಮಂತ್ರಿಸಿರಿ. ಮನೆ ಮನೆಯ ಶುಶ್ರೂಷೆಯಲ್ಲಿ ಉಪಯೋಗಿಸಲಾಗುವಂತೆ ಒಂದು ಬೈಬಲ್ ಚರ್ಚೆಯನ್ನು ತಯಾರಿಸುವಂತೆ ಮಗುವಿಗೆ ಹೇಗೆ ಸಹಾಯ ಮಾಡಿದರು ಎಂದು ಅವನು ಯಾ ಅವಳು ಪ್ರತ್ಯಕ್ಷಾಭಿನಯ ಮಾಡುವಂತೆ ಒಬ್ಬ ಹೆತ್ತವರನ್ನು ಕೇಳಿರಿ. ಒಬ್ಬ ಯುವಕನನ್ನು ಸೂಚಿಸಲ್ಪಟ್ಟ ಚರ್ಚೆಗಳಲ್ಲೊಂದನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡುವುದರ ಮೂಲಕ ಸಮಾಪ್ತಿಗೊಳಿಸಿರಿ.
10 ನಿ: ಪ್ರಶ್ನಾ ಪೆಟ್ಟಿಗೆ. ಸಭಿಕರೊಂದಿಗೆ ಚರ್ಚಿಸಿರಿ. ಅಸ್ನಾನಿತ ಪ್ರಚಾರಕರಾಗಿ ಯೋಗ್ಯತೆಪಡೆಯುವಲ್ಲಿ ಒಳ್ಳೇ ನಡತೆಗಾಗಿ ಸತ್ಕೀರ್ತಿಯನ್ನು ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಸಾಚ ಆಶೆಯನ್ನು ಹೊಂದಿರುವುದು ಮಕ್ಕಳಿಗೆ ಯಾಕೆ ಪ್ರಾಮುಖ್ಯವೆಂದು ಒತ್ತಿ ಹೇಳಿರಿ.
10 ನಿ: ಯುವ ಪ್ರಚಾರಕರಿಂದ ಹೇಳಿಕೆಗಳು. ಅಸ್ನಾನಿತ ಹೊಂದಿಲ್ಲದ ಪ್ರಚಾರಕರಾಗಲು ಅವರು ಹೇಗೆ ಯೋಗ್ಯತೆ ಪಡೆದರು ಮತ್ತು ಅವರು ಯಾಕೆ ಕ್ಷೇತ್ರ ಸೇವೆಯಲ್ಲಿ ಆನಂದಿಸುತ್ತಾರೆ ಮತ್ತು ಅದರಲ್ಲಿ ಇನ್ನೂ ಹೆಚ್ಚು ಭಾಗವಹಿಸಲು ಬಯಸುತ್ತಾರೆ ಎಂಬದನ್ನು ವಿವರಿಸಲು ಕೆಲವು ತಯಾರಿಸಲ್ಪಟ್ಟ ಯುವಕರನ್ನು ಆಮಂತ್ರಿಸಿರಿ. ಯಾರನ್ನು ಮುಖತಃ ಭೇಟಿ (ಇಂಟರ್ವ್ಯೂ) ಮಾಡುತ್ತಾರೊ, ಅವರು ತಮ್ಮ ಸ್ವಂತ ಸಕಾರಾತ್ಮಕ ಹೇಳಿಕೆಗಳನ್ನು ನೀಡಬೇಕು ಮತ್ತು ಅವರು ಪಠಿಸುವಂತೆ ಕೇಳಿಕೊಳ್ಳಲಾದ ಶಬ್ದಗಳನ್ನು ಪುನರಾವೃತ್ತಿಸಬಾರದು.
ಸಂಗೀತ 221 (78) ಮತ್ತು ಸಮಾಪ್ತಿಯ ಪ್ರಾರ್ಥನೆ.
ನೊವೆಂಬರ್ 30 ರ ವಾರ
ಸಂಗೀತ 46 (20)
5 ನಿ: ಸ್ಥಳೀಕ ತಿಳಿಸುವಿಕೆಗಳು. ಚಂದಾ ಸ್ಲಿಪ್ನಲ್ಲಿ ಖಾಲಿ ಸ್ಥಳವನ್ನು ಭರ್ತಿಮಾಡುವುದು ಹೇಗೆ ಎಂದು ಚುಟುಕಾಗಿ ವಿವರಿಸಿರಿ, ಮತ್ತು ಚಂದಾಗಳನ್ನು ಸ್ವೀಕರಿಸಲು ನೇಮಕವಾದ ಸಹೋದರ(ರ) ಗುರುತು ತಿಳಿಸಿರಿ.
15 ನಿ: ರೀಸನಿಂಗ್ ಪುಸ್ತಕ, 58-64 ಪುಟಗಳ ಮೇಲಾಧರಿತವಾದ, “ಬೈಬಲ್” ಮೇಲೆ ಭಾಷಣ. ನಮ್ಮ ಜೀವಿತದಲ್ಲಿ ಬೈಬಲ್ ಸೂತ್ರಗಳನ್ನು ಅನ್ವಯಿಸುವುದರ ಮೂಲಕ ನಾವು ವೈಯಕ್ತಿಕವಾಗಿ ಪಡಕೊಳ್ಳುವ ಪ್ರಯೋಜನವನ್ನು ಎತ್ತಿ ತೋರಿಸಿರಿ.
15 ನಿ: ಡಿಸೆಂಬರ್ನಲ್ಲಿ ದ ಗ್ರೇಟಸ್ಟ್ ಮ್ಯಾನ್ ಹು ಎವರ್ ಲಿವ್ಡ್ ಪುಸ್ತಕ ನೀಡುವುದು. ಭಾಷಣ ಮತ್ತು ಪ್ರತ್ಯಕ್ಷಾಭಿನಯ. ರೀಸನಿಂಗ್ ಪುಸ್ತಕದ 209 ಮತ್ತು 210 ಪುಟಗಳಲ್ಲಿರುವ ‘ಜೀಸಸ್ ಕ್ರೈಸ್ಟ್’ ಮುಖ್ಯ ಮೇಲ್ಬರಹದ ಕೆಳಗಿರುವ ವಿಷಯವನ್ನು ಪರಾಮರ್ಶಿಸಿರಿ. ನಂತರ ಸಾಹಿತ್ಯದಲ್ಲಿ ಮನೆಯವನ ಅಭಿರುಚಿಯನ್ನು ಕೆರಳಿಸುವಂತೆ ಈ ವಿಷಯವನ್ನು ಹೇಗೆ ಉಪಯೋಗಿಸಬಹುದೆಂದು ಪ್ರತ್ಯಕ್ಷಾಭಿನಯಿಸಿರಿ.
10 ನಿ: “ಕಾರ್ಯಮಗ್ನರು ನಿರ್ಜೀವ ಕರ್ಮಗಳಲ್ಲೋ ಅಥವಾ ಯೆಹೋವನ ಸೇವೆಯಲ್ಲೋ?” ಹಿರಿಯನಿಂದ ಅಕ್ಟೋಬರ್ 1, 1992 ರ ಕಾವಲಿನಬುರುಜುನ ಪುಟ 26 ರಲ್ಲಿನ ಲೇಖನದ ಮೇಲಾಧಾರಿತ ಭಾಷಣ. ಸಾಧ್ಯವಾದಲ್ಲಿ ಈ ಭಾಗವನ್ನು ಪೂರ್ಣ ಸಮಯದ ಶುಶ್ರೂಷೆಯ ಅನುಭವ ಇರುವ ಸಹೋದರನಿಗೆ ನೇಮಿಸತಕ್ಕದ್ದು.
ಸಂಗೀತ 111 (100) ಮತ್ತು ಸಮಾಪ್ತಿಯ ಪ್ರಾರ್ಥನೆ.