ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಬೈಬಲ್ ಅಧ್ಯಯನಗಳನ್ನು ನಡಿಸುವುದು
1 ಸದಾ ಜೀವಿಸಬಲ್ಲಿರಿ ಪುಸ್ತಕಕ್ಕೆ ಸೂಚಿಸುತ್ತಾ, ಒಬ್ಬ ಸ್ತ್ರೀಯು ಉದ್ಗರಿಸಿದ್ದು: “ಸ್ವತಃ ಬೈಬಲಿನ ನಂತರ, ಈ ಪುಸ್ತಕವು ನಾನು ಇಂದಿನ ತನಕ ಓದಿದ್ದರೆಲ್ಲದರಲ್ಲಿ, ಅತಿ ನಿಖರವೂ, ಸ್ಫೂರ್ತಿಕೊಡುವಂತಹದ್ದೂ, ಮತ್ತು ಪ್ರೇರಕವೂ ಆಗಿರುವ ಒಂದು ಸಾಹಿತ್ಯದ ಕೃತಿಯೆಂದು ನಾನು ಕಂಡುಕೊಂಡಿದ್ದೇನೆ!” ಈ ಪುಸ್ತಕವು ಬೈಬಲನ್ನು ತಿಳಿದುಕೊಳ್ಳಲು ಜನರಿಗೆ ಸಹಾಯ ಮಾಡಲು ಮತ್ತು ಯೆಹೋವನ ಕ್ರಿಯಾಶೀಲ ಸ್ತುತಿಗಾರರಾಗುವಂತೆ ಅವರನ್ನು ವಿಶೇಷವಾಗಿ ಪ್ರೇರಿಸಲು ಇಂದಿನ ತನಕ ಪ್ರಕಾಶಿಸಲ್ಪಟ್ಟ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿದೆ ಎಂದು ನಾವೆಲ್ಲರೂ ಒಪ್ಪುತ್ತೇವೆ.
2 ಸದಾ ಜೀವಿಸಬಲ್ಲಿರಿ ಪುಸ್ತಕವು ಬಿಡುಗಡೆಗೊಂಡ 1982 ನೆಯ ವರ್ಷದಲ್ಲಿ, ಸರಾಸರಿ 5,136 ಪ್ರಚಾರಕರು 3,310 ಬೈಬಲ್ ಅಧ್ಯಯನಗಳನ್ನು ಭಾರತದಲ್ಲಿ ನಡಿಸುತ್ತಿದ್ದರು. ಕಳೆದ ವರ್ಷ ಅಕ್ಟೋಬರದಲ್ಲಿ, 12,306 ಪ್ರಚಾರಕರು 10,912 ಬೈಬಲ್ ಅಧ್ಯಯನಗಳನ್ನು ನಡಿಸಿದರು. ಇಂದಿನ ತನಕ, ಸದಾ ಜೀವಿಸಬಲ್ಲಿರಿ ಪುಸ್ತಕದ 6 ಕೋಟಿ 20 ಲಕ್ಷ ಪ್ರತಿಗಳು 115 ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿವೆ. ನಮ್ಮ ಲೋಕವ್ಯಾಪಕ ಕಾರ್ಯದೊಡನೆ ಈ ಪುಸ್ತಕವು ಎಂಥ ಸೇರಿಕೆಯದ್ದಾಗಿದೆ!
3 ಧ್ಯೇಯಗಳನ್ನು ಇಡಿರಿ: ಈ ಗಮನಾರ್ಹ ಬೆಳವಣಿಗೆಯು ಯೆಹೋವನ ಆಶೀರ್ವಾದ ಮತ್ತು ಬೈಬಲಿನ ಜೀವರಕ್ಷಕ ಸಂದೇಶದೊಂದಿಗೆ ಯಥಾರ್ಥವಂತರನ್ನು ಸಹಾಯಮಾಡುವ ಆತನ ಜನರ ಅತ್ಯಾಸಕ್ತಿಯ ಫಲಿತಾಂಶವಾಗಿದೆ. (ರೋಮಾ. 10:13-15; 1 ತಿಮೊ. 2:4) ಸಮಯಗಳ ಜರೂರಿಯನ್ನು ಮತ್ತು ದೇವರ ರಾಜ್ಯವನ್ನು ಘೋಷಿಸುವುದರಲ್ಲಿ ಕಾರ್ಯತತ್ಪರತೆಯ ಆವಶ್ಯಕತೆಯನ್ನು ನಾವು ತಿಳಿದಿದ್ದೇವೆ.
4 ಸಂಸ್ಥಾಪನೆಯು ಮುಂದಕ್ಕೆ ಸಾಗುತ್ತಿರುವಾಗ, ವೈಯಕ್ತಿಕವಾಗಿ ನಾವು ಹೇಗೆ ಮಾಡುತ್ತಾ ಇದ್ದೇವೆ? ಅತ್ಯಾವಶ್ಯಕ ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಒಂದು ಪೂರ್ಣ ಪಾಲು ಇರುವಂತೆ ನಾವು ನಿಶ್ಚಯ ಮಾಡಿದ್ದೇವೊ? ಇದನ್ನು ಪೂರೈಸಲು, ನಾವು ವೈಯಕ್ತಿಕ ಧ್ಯೇಯಗಳನ್ನು ಇಡತಕ್ಕದ್ದು. ಆಸಕ್ತಿಯನ್ನು ಅನುಸರಿಸಿ ಹೋಗುವುದರಲ್ಲಿ ನಾವು ಇನ್ನಷ್ಟು ಉದ್ಯೋಗಶೀಲರಾಗಿರ ಸಾಧ್ಯವಿದೆಯೇ? ಫೆಬ್ರವರಿ ತಿಂಗಳಲ್ಲಿ ಒಂದು ಹೊಸ ಬೈಬಲ್ ಅಧ್ಯಯನವನ್ನು ಆರಂಭಿಸುವ ಧ್ಯೇಯವೊಂದನ್ನು ನಾವು ಯಾಕೆ ಇಡಬಾರದು?
5 ಬೈಬಲ್ ಅಧ್ಯಯನವೊಂದನ್ನು ಯಾರು ನಡಿಸಸಾಧ್ಯವಿದೆ?: ವಿವಿಧ ಹಿನ್ನೆಲೆಗಳ ಅನೇಕ ಪ್ರಚಾರಕರಿಗೆ ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಬೈಬಲ್ ಅಧ್ಯಯನವೊಂದನ್ನು ನಡಿಸುವ ಆನಂದವು ದೊರಕಿತ್ತು. ಅದರ ಶೈಲಿಯ ಸರಳತೆಯು ಅಧ್ಯಯನ ನಡಿಸುವುದನ್ನು ಸುಲಭವನ್ನಾಗಿ ಮಾಡುತ್ತಾ, ಹೊಸ ಪ್ರಚಾರಕರಿಗೆ ಈ ಪ್ರಾಮುಖ್ಯ ಕೆಲಸದಲ್ಲಿ ಒಂದು ಭಾಗವಿರುವಂತೆ ಸಾಧ್ಯಮಾಡಿದೆ. ಇದಕ್ಕೆ ಕೂಡಿಸಿ, ನಮ್ಮಲ್ಲಿ ಅನೇಕರು ಅದನ್ನು ವೈಯಕ್ತಿಕವಾಗಿ ಅಭ್ಯಾಸಿಸಿರುವುದರಿಂದ, ಅದರ ಒಳವಿಷಯಗಳೊಂದಿಗೆ ನಾವು ಪರಿಚಿತರಾಗಿದ್ದೇವೆ. ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಉಪಯೋಗಿಸುವ ಮೊದಲು ಬೈಬಲ್ ಅಧ್ಯಯನಗಳನ್ನು ನಡಿಸದಿದ್ದ ಒಬ್ಬ ಪ್ರಚಾರಕನು, ಮೆಚ್ಚುಗೆಯಲ್ಲಿ ಬರೆದದ್ದು: “ನನಗೆ ಮೂರು ಅಧ್ಯಯನಗಳಿವೆ ಮತ್ತು ನಾಲ್ಕನೆಯದ್ದು ಆರಂಭಿಸಲು ಸಿದ್ಧವಾಗಿದೆ. ಬೈಬಲ್ ಅಧ್ಯಯನಗಳನ್ನು ನಡಿಸಲು ಸುಲಭವನ್ನಾಗಿ ಮಾಡಿದ್ದರಲ್ಲಿ ತಕ್ಕಷ್ಟು ಉಪಕಾರವನ್ನು ನಿಮಗೆ ನಾನು ಹೇಳಶಕ್ತನಲ್ಲ.”
6 ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಉಪಯೋಗಿಸುವುದರಿಂದ ಎಳೆಯರಿಗೂ ಕೂಡ, ಬೈಬಲ್ ಅಧ್ಯಯನ ಕಾರ್ಯದಲ್ಲಿ ಒಂದು ಕ್ರಿಯಾತ್ಮಕ ಪಾಲು ಇದೆ. ಒಬ್ಬ ಯುವ ಸಹೋದರನು ಶಾಲೆಯಲ್ಲಿ ತನ್ನ ಡೆಸ್ಕಿನ ಮೇಲೆ ಪುಸ್ತಕವನ್ನು ಬಿಟ್ಟು ಹೋದನು. ಇದು ಉತ್ತಮ ಚರ್ಚೆಗಳಿಗೆ ಮತ್ತು ಅನೇಕ ಬೈಬಲ್ ಅಧ್ಯಯನಗಳಿಗೆ ದಾರಿಯನ್ನು ತೆರೆಯಿತು. ಕೆಲವು ಎಳೆಯರು, ಮನೆಮನೆಯ ಶುಶ್ರೂಷೆಯಲ್ಲಿ ಅವರು ಭೇಟಿಯಾಗುವ ಹೆತ್ತವರೊಂದಿಗೆ, ಅವರ ಮಕ್ಕಳೊಂದಿಗೆ ಒಂದು ಬೈಬಲ್ ಅಧ್ಯಯನ ನಡಿಸಲು ಅನುಮತಿಗಾಗಿ ಕೇಳುವುದರ ಮೂಲಕ ನೇರವಾದ ಸಮೀಪಿಸುವಿಕೆಯನ್ನು ಬಳಸಿದ್ದಾರೆ. ಪ್ರಮೋದವನವಾದ ಭೂಮಿಯ ಮೇಲೆ ನಿತ್ಯಜೀವದ ಯೆಹೋವನ ವಾಗ್ದಾನಗಳ ಕುರಿತು ಮಾತಾಡುವ ಬಗ್ಗೆ ನಮ್ಮ ಮಕ್ಕಳು ಎಂದಿಗೂ ಎಳೆಯವರಾಗಿರುವುದಿಲ್ಲ.
7 ಎಳೆಯವರಾಗಿರಲಿ ಯಾ ವಯಸ್ಕರಾಗಿರಲಿ, ಶುಶ್ರೂಷೆಯಲ್ಲಿ ಯಾರೇ ಒಬ್ಬನಿಗೆ ಇರಬಹುದಾದ ಅತಿ ಮಹತ್ತರವಾದ ಆಶೀರ್ವಾದಗಳಲ್ಲಿ ಒಂದು, ಮನೆ ಬೈಬಲ್ ಅಧ್ಯಯನವೊಂದನ್ನು ನಡಿಸುವುದೇ ಆಗಿದೆ. ಆದುದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನ ಸಹಾಯಕ್ಕಾಗಿ ಬೇಡೋಣ ಮತ್ತು ನಮ್ಮ ನಿರೀಕ್ಷೆಯನ್ನು ಬಹಿರಂಗವಾಗಿ ಘೋಷಿಸಲು ಪ್ರತಿಯೊಂದು ಅವಕಾಶವನ್ನು ನಮ್ಮದಾಗಿ ಮಾಡಿಕೊಳ್ಳೋಣ. ನಮ್ಮ ದೇವರಾದ ಯೆಹೋವನನ್ನು ಸ್ತುತಿಸುವುದರಲ್ಲಿ ಅವರಿಗೆ ಹೇಗೆ ಒಂದು ಪಾಲು ಇರಸಾಧ್ಯವಿದೆ ಎಂಬುದನ್ನು ಕಲಿಯಲು ಇತರರಿಗೆ ಸಹಾಯ ಮಾಡುವುದರಲ್ಲಿ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಉಪಯೋಗಿಸಿರಿ.—ಕೀರ್ತನೆ 148:12, 13.