ನೆಡುವುದು ಮತ್ತು ನೀರು ಹೊಯ್ಯುವುದು—ಶಿಷ್ಯರನ್ನಾಗಿ ಮಾಡುವುದಕ್ಕಾಗಿ ಹೆಜ್ಜೆಗಳು
1 “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲಾಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದವನು ದೇವರು.” (1 ಕೊರಿ. 3:6) ಹೀಗೆ ಅಪೊಸ್ತಲ ಪೌಲನು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವ ಕಾರ್ಯ ವಿಧಾನದಲ್ಲಿ ಮೂರು ಮೂಲಭೂತ ಹೆಜ್ಜೆಗಳನ್ನು ಗುರುತಿಸಿದ್ದಾನೆ. ಮೊದಲ ಎರಡು ಹೆಜ್ಜೆಗಳಾದ ನೆಡುವುದು ಮತ್ತು ನೀರು ಹೊಯ್ಯುವದು, ದೇವರ ಸಮರ್ಪಿತ, ಸ್ನಾನಿತ ಸಾಕ್ಷಿಗಳ ಮೇಲೆ ಇರುವ ಒಂದು ಸುಯೋಗ ಮತ್ತು ಜವಾಬ್ದಾರಿಯಾಗಿದೆ.
2 ಇದರಲ್ಲಿ ಬಹಿರಂಗವಾಗಿ ಮತ್ತು ಮನೆ-ಮನೆಯ ಸಾರುವಿಕೆ ಹಾಗೂ ಅವಿಧಿ ಸಾಕ್ಷಿ ಕಾರ್ಯ ಮುಂತಾದವುಗಳು ಸೇರಿರುತ್ತವೆ. ಯೇಸು ಆಜ್ಞಾಪಿಸಿದ ಎಲ್ಲವನ್ನು ಪಾಲಿಸಲು ಜನರಿಗೆ ಪ್ರಗತಿಪೂರ್ವಕವಾಗಿ ಕಲಿಸುವ ಕೆಲಸವೂ ಅದರಲ್ಲಿದೆ. (ಮತ್ತಾ. 28:19, 20) ಈ ನಂತರದ ಹೆಜ್ಜೆಯು, ಅಸಕ್ತಿ ತೋರಿಸಿದವರನ್ನು ಪುನಃಸಂದರ್ಶನೆ ಮಾಡುವ ಮೂಲಕ, ಬೈಬಲ್ ಚರ್ಚೆಯಲ್ಲಿ ಅವರನ್ನು ಒಳಗೂಡಿಸುವ ಮೂಲಕ ಮತ್ತು ಅವರೊಂದಿಗೆ ಬೈಬಲ್ ಅಭ್ಯಾಸ ನಡಿಸುವ ಮೂಲಕ ಮಾತ್ರವೇ ನಿರ್ವಹಿಸಲ್ಪಡುತ್ತದೆ. ಸತ್ಯದ ಬೀಜಗಳನ್ನು ನೆಡುವ ಮೂಲಕ ಮತ್ತು ನಂತರ ಆವಶ್ಯಕ ನೀರು ಹೊಯ್ಯುವಿಕೆ ಮತ್ತು ವ್ಯವಸಾಯದ ಮೂಲಕ ಯೆಹೋವನೊಂದಿಗೆ ಸಹಕರಿಸುವ ನಿಷ್ಠೆಯುಳ್ಳ ಜತೆಗೆಲಸದವರು ನೀವಾಗಿದ್ದೀರೋ?—1 ಕೊರಿ. 3:9.
ಶಕ್ಯತೆ ಮತ್ತು ಅಗತ್ಯತೆಯನ್ನು ಅರಿತುಕೊಳ್ಳಿ
3 ಭಾರತದಲ್ಲಿ 1990ರ ಸೇವಾ ವರ್ಷದಲ್ಲಿ, ನಾವು 4,14,000 ಪುಸ್ತಕ ಮತ್ತು ಕಿರುಪುಸ್ತಕಗಳನ್ನು 8,94,000ರಪ್ಟು ಪತ್ರಿಕೆಗಳನ್ನು ನೀಡಿದೆವು! ಜ್ಞಾಪಕಾಚರಣೆಗೂ 28,000 ಹಾಜರಿಯನ್ನು ನಾವು ಪಡೆದೆವು, ಇದು ನಮ್ಮ ಸರಾಸರಿ 9,725 ಪ್ರಚಾರಕ ಸಂಖ್ಯೆಗಿಂತ ಎಷ್ಟೋ ಹೆಚ್ಚು. ಸಾಹಿತ್ಯ ವಿತರಣೆಯು ನಮ್ಮ ನೆಡುವ ಕೆಲಸದ ಪ್ರಧಾನ ಭಾಗವು. ಹೀಗೆ ಬಿತ್ತಲ್ಪಟ್ಟ ಸತ್ಯದ ಬೀಜಗಳು ಹೊಸ ಶಿಷ್ಯರನ್ನು ಉತ್ಪಾದಿಸುವುದರಲ್ಲಿ ಪ್ರಚಂಡವಾದ ಸಂಭ್ಯಾವತೆಯನ್ನು ಕೊಡುತ್ತದೆ. ಆದರೆ ದೇವರ ಜೊತೆ ಕೆಲಸಗಾರರಾದ ನಾವು, ಈ ಜನರನ್ನು ಪುನಃ ಸಂದರ್ಶಿಸಲು ಮತ್ತು ಬೈಬಲಿನ ವಿಷಯಗಳಲ್ಲಿ ಅವರ ಆಸಕ್ತಿಯನ್ನು ಬೆಳೆಸಲು ಪ್ರೇರೇಪಿಸಲ್ಪಡುತ್ತೇವೋ? ಭಾರತದ ಸಭಾ ಪ್ರಚಾರಕರು ಈಗ ಸರಾಸರಿ 0.4 ಬೈಬಲಭ್ಯಾಸಗಳನ್ನು ನಡಿಸುತ್ತಿದ್ದಾರೆ. ಪ್ರತಿಯೊಬ್ಬ ಪ್ರಚಾರಕನು ಬರೇ ಸತ್ಯದ ಬೀಜಗಳನ್ನು ನೆಡುವ ಪ್ರಾರಂಭದ ಹೆಜ್ಜೆಗಿಂತ ಹೆಚ್ಚನ್ನು ಮಾಡುವ ವೈಯಕ್ತಿಕ ಜವಾಬ್ದಾರಿಯನ್ನು ಸ್ಪಷ್ಟವಾಗಿಗಿ ಪರೀಕ್ಷಿಸಿಕೊಂಡರೆ ಮತ್ತು ಪ್ರಗತಿಪರ ಮನೆಬೈಬಲಭ್ಯಾಸಗಳನ್ನು ನಡಿಸುವರೆ ಎಟಕಿಸಿಕೊಂಡರೆ, ಈ ಸರಾಸರಿಯು ಪ್ರಗತಿಹೊಂದುವದು ಎಂದು ನಾವು ನಂಬುತ್ತೇವೆ. ಕೆಲವರಿಗೆ ಹಲವಾರು ಸೀಮಿತಗಳ ಕಾರಣ, ಒಂದು ಅಥವಾ ಹೆಚ್ಚು ಬೈಬಲಭ್ಯಾಸಗಳನ್ನು ನಡಿಸಲಾಗದಿದ್ದರೂ, ಪ್ರತಿಯೊಬ್ಬನು ತನ್ನ ವೈಯಕ್ತಿಕ ಪರಿಸ್ಥಿತಿಗಳನ್ನು ಪರಾಮರ್ಶಿಸಿಕೊಳ್ಳುವದು ಉತ್ತಮ.
4 ಕೆಲವು ಕ್ಷೇತ್ರಗಳಲ್ಲಿ ಏನು ಸಂಭವಿಸುತ್ತಾ ಇದೆ ಎಂದು ನೋಡುವದು ಅಭಿರುಚಿಯ ಸಂಗತಿ. ಈ ಸಭೆಗಳಿಗೆ ಫಲದಾಯಕ ಟೆರಿಟೆರಿ ಇದೆ ಮತ್ತು ಪ್ರಚಾರಕರು ಸರಾಸರಿ 1-2 ಬೈಬಲಭ್ಯಾಸಗಳನ್ನು ವರದಿ ಮಾಡುತ್ತಿದ್ದಾರೆ. ನಡಿಸಲ್ಪಡುವ ಬೈಬಲಭ್ಯಾಸಗಳ ಸಂಖ್ಯೆಗೆ ಹೊಸ ಶಿಷ್ಯರ ವೃದ್ಧಿಯು ಸಮರೂಪದಲ್ಲಿದೆ. 1991 ವರ್ಷಪುಸ್ತಕ ವರದಿ ಮಾಡಿದ ಪ್ರಕಾರ, ಹಲವಾರು ದೇಶಗಳಲ್ಲಿ, ಸರಾಸರಿ ಪ್ರಚಾರಕರ ಸಂಖ್ಯೆಯನ್ನು ಬೈಬಲಭ್ಯಾಸಗಳ ಸಂಖ್ಯೆಯೊಂದಿಗೆ ಹೋಲಿಸುವ ಮೂಲಕ ಇದು ತೋರಿಬಂದಿದೆ.
5 ಬೈಬಲಭ್ಯಾಸವನ್ನು ನಡಿಸಲು ನಮ್ಮ ಪ್ರೇರೇಪಣೆಯು ನಾವು ಸಾರುವ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸುವ ಜನರ ಕಡೆಗೆ ನಮಗಿರುವ ಪ್ರೀತಿಯೇ ಆಗಿರಬೇಕು. ಜನರ ಕಡೆಗೆ ಯೆಹೋವನಿಗಿರುವ ಪ್ರೀತಿಯ ಗಮನವನ್ನು ನಾವು ಅವರೊಂದಿಗೆ ಪ್ರಾಮಾಣಿಕತೆಯಿಂದ ಪಾಲಿಗರಾಗಿ, ಅವರ ರಕ್ಷಣೆಯು ಅವರ ಆತ್ಮಿಕ ಪ್ರಗತಿಯೊಂದಿಗೆ ಜೋಡಿಸಲ್ಪಟ್ಟಿದೆಂಬದನ್ನು ಗಣ್ಯ ಮಾಡಬೇಕು. (1 ಪೇತ್ರ 2:2) ಅಕ್ಷರಾರ್ಥ ಸಸಿಗಳಿಗೆ ಹೇಗೆ ಬೆಳೆಯಲಿಕ್ಕೆ ನೀರು ಬೇಕೋ ಹಾಗೆಯೇ, ರಾಜ್ಯದ ಸಂದೇಶದಲ್ಲಿ ಆರಂಭದ ಆಸಕ್ತಿಯನ್ನು ತೋರಿಸುವ ಜನರು, ಬೈಬಲಭ್ಯಾಸಗಳ ಮೂಲಕ ದೇವರ ಸಂಸ್ಥೆಯ ಕಡೆಗೆ ಕ್ರಮವಾಗಿ ಎಳೆಯಲ್ಪಡದೇ ಇದ್ದಲ್ಲಿ ಸಾಮಾನ್ಯವಾಗಿ ಕೂಟಗಳಿಗೆ ಹಾಜರಾಗುವುದಿಲ್ಲ.
6 ನಮ್ಮ ಪಾಲಿನ ವಿಧೇಯತೆ ಕೂಡಾ ದೃಶ್ಯವನ್ನು ಪ್ರವೇಶಿಸುತ್ತದೆ. ಸತ್ಯದ ಪಕ್ಷದಲ್ಲಿರುವವರೆಲ್ಲರೂ ತನ್ನ ಮಾತಿಗೆ ಕಿವಿಗೊಡುವರು ಎಂದು ಯೇಸು ಹೇಳಿದ್ದಾನೆ. (ಯೋಹಾ. 18:37) ಸಾರಲು ಮತ್ತು ಶಿಷ್ಯರನ್ನಾಗಿ ಮಾಡಲು ಅವನು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು, ಮತ್ತು ಆ ಕಾರ್ಯವನ್ನು ನಿರ್ವಹಿಸಲು ಅವರನ್ನು ಸನ್ನದ್ಧಗೊಳಿಸಿದನು. ಶಿಕ್ಷಕನೋಪಾದಿ ತನ್ನ ಉತ್ತಮ ಮಾದರಿಯ ಮೂಲಕ ಮತ್ತು ಜನರ ಕಡೆಗೆ ಆಳವಾದ ಗಮನದ ಮೂಲಕ, ಇತರರಿಗೆ ಸಹಾಯ ಮಾಡುವದರಲ್ಲಿ ಒಂದು ನಮೂನೆಯನ್ನು ಯೇಸು ನಮಗೆ ಇಟ್ಟಿದ್ದಾನೆ. (ಲೂಕ 6:40; ಯೋಹಾ. 13:13; 14:12) ನಮ್ಮ ಪ್ರಯತ್ನಗಳು ನಮ್ಮ ಮತ್ತು ನಾವು ಕಲಿಸುವವರ ರಕ್ಷಣೆಗೆ ಸಹಾಯಕವಾಗುವುದು.—1 ತಿಮೊ. 4:16.
ಬೈಬಲಭ್ಯಾಸ ಪ್ರಾರಂಭಿಸಲು ಸಹಾಯಕಗಳು
7 ತನ್ನ ಕೆಲಸವನ್ನು ದೋಷವಿಲ್ಲದೆ ಮಾಡಲು ಒಬ್ಬ ನಿಪುಣ ಶಿಲ್ಪಿಯು ತನ್ನಲ್ಲಿರುವ ಹಲವಾರು ತರದ ಉಪಕರಣಗಳನ್ನು ಆರಿಸಿಕೊಳ್ಳುತ್ತಾನೆ. ಶಿಕ್ಷಕರಾದ ನಮ್ಮ ಸಹಾಯಕ್ಕಾಗಿ, ವಿವಿಧ ಹಿನ್ನೆಲೆಗಳ ಮತ್ತು ದೃಷ್ಟಿಕೋನಗಳಿರುವ ಜನರ ಹೃದಯಗಳನ್ನು ತಲಪುವಂತೆ ರಚಿಸಲಾದ ಬ್ರೋಷರ್ ಮತ್ತು ಟ್ರೇಕ್ಟ್ಗಳೂ ಸೇರಿರುವ ಸಾಹಿತ್ಯಗಳ ಸಮೂಹವೇ ಅಲ್ಲಿದೆ.
8 ಬೈಬಲ್ ಚರ್ಚೆಗಳನ್ನು ಪ್ರಸ್ತಾಪಿಸಲು ಟ್ರೇಕ್ಟ್ಗಳನ್ನು ಮತ್ತು ಬ್ರೋಷರ್ಗಳನ್ನು ಉಪಯೋಗಿಸಿದರಲ್ಲಿ ಕೆಲವು ಪ್ರಚಾರಕರು ಒಳ್ಳೆಯ ಫಲಿತಾಂಶಗಳನ್ನು ಪಡೆದಿದ್ದಾರೆ. ಉದಾಹರಣ್ಗೆಗೆ, ಲೈಫ್ ಇನ್ ಎ ಪೀಸ್ಫುಲ್ ನ್ಯೂವರ್ಲ್ಡ್ ಟ್ರೇಕ್ಟ್ ಆ ಆಶ್ಚರ್ಯಕರ ನಿರೀಕ್ಷೆಯನ್ನು ತಿಳಿಸುವುದರಲ್ಲಿ 20ಕ್ಕಿಂತಲೂ ಹೆಚ್ಚು ವಿವಿಧ ವಚನಗಳನ್ನುಪಯೋಗಿಸಿದೆ. ಈ ವಚನಗಳನ್ನು ಹಲವಾರು ಅಭಿರುಚಿಯ ಬೈಬಲ್ ಚರ್ಚೆಗಳನ್ನು ಬೆಳೆಸುವರೇ ಬಳಸ ಸಾಧ್ಯವಿದೆ. ನಮ್ಮ ಬ್ರೋಷರ್ಗಳು ಸಹಾ, ತಮ್ಮ ಕಣ್ಸೆಳೆಯುವ ಮತ್ತು ಸರಳ ರೀತಿಯಲ್ಲಿ, ಜನರಿಗೆ ಬೈಬಲಿನ ಮೂಲಭೂತ ಸತ್ಯತೆಗಳನ್ನು ತಿಳಿಸಬಲ್ಲವು ಮತ್ತು ಅಧಿಕ ಸಂಶೋಧನೆ ನಡಿಸಲು ಪ್ರೇರಿಸಬಲ್ಲವು.
9 ಸೀಮಿತ ವಿದ್ಯೆಯಿರುವ ಅಥವಾ ದೃಷ್ಟಿ ಮಾಂದ್ಯವಿರುವ ಯಾರಾದರೂ ನಿಮ್ಮ ಪರಿಚಿತರೋ? ಅಂಥವರೊಂದಿಗೆ ಪ್ರಗತಿ ಪೂರ್ವಕ ಬೈಬಲ್ ಚರ್ಚೆಯನ್ನು ಸ್ಥಾಪಿಸಲಿಕ್ಕೆ ಎಂಜಾಯ್ ಲೈಫ್ ಆನ್ ಅರ್ಥ್ ಬ್ರೋಷರನ್ನು ನೀವು ಉಪಯೋಗಿಸಿ ನೋಡಿದ್ದೀರೋ? ಭವಿಷ್ಯತ್ತಿಗಾಗಿ ದೇವರ ವಾಗ್ದಾನಗಳ ಕುರಿತು ಕಲಿಯುವುದರಲ್ಲಿ ಆರಂಭದ ಪಾರಾಗಳಲ್ಲೇ ಮನೆಯವನನ್ನು ಕೌಶಲ್ಯದಿಂದ ಒಳಗೂಡಿಸುವ ಇನ್ನೊಂದು ಉತ್ತಮ ಉಪಕರಣವು “ಲುಕ್” ಬ್ರೋಷರ್. ಮತ್ತು 1982ರಲ್ಲಿ ಪ್ರಕಾಶಿತವಾದ, “ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ” ಪುಸ್ತಕವು, ಅಂದಿನಿಂದ ದೀಕ್ಷಾಸ್ನಾನ ಪಡೆದಿರುವವರಾದ 17 ಲಕ್ಷಕ್ಕಿಂತಲೂ ಹೆಚ್ಚು ಜನರಲ್ಲಿ ಅಧಿಕ ಸಂಖ್ಯಾತರಿಗೆ ಸಹಾಯ ಮಾಡುವದರಲ್ಲಿ ಖಂಡಿತವಾಗಿಯೂ ಪರಿಣಾಮಕಾರಿಯಾಗಿದೆ.
ಆಸಕ್ತ ಜನರ ಕಡೆಗೆ ಕ್ರಿಯಾಶೀಲ ಜವಾಬ್ದಾರಿ
10 ನೀವು ನಿಮ್ಮ ಸಭಾ ಪ್ರಚಾರಕ ಕಾರ್ಡನ್ನು ಪರೀಕ್ಷಿಸಿ, ಕಳೆದ ಹನ್ನೆರಡು ತಿಂಗಳುಗಳಲ್ಲಿ ನೀವು ನೀಡಿರುವ ಪುಸ್ತಕಗಳು, ಕಿರುಪುಸ್ತಕಗಳು (ಬ್ರೋಷರುಗಳನ್ನೂ ಸೇರಿಸಿ) ಮತ್ತು ಪತ್ರಿಕೆಗಳ ಸಂಖ್ಯೆಯನ್ನು ಗಮನಿಸುವುದು ಪ್ರಯೋಜನಕಾರಿಯು. ಆ ಎಲ್ಲಾ ನೀಡುವಿಕೆಗಳು ಅಲ್ಲೇ ಕೊನೆಗೊಳ್ಳುತ್ತವೋ? ಅಥವಾ ನೆಡುವ ಹೆಜ್ಜೆಗಿಂತ ಆಚೇಕಡೆ ನೀವು ಹೋಗಿದ್ದೀರೋ? ಪುಸ್ತಕಗಳನ್ನು ತಕ್ಕೊಳ್ಳಲು ಸಾಕಷ್ಟು ಆಸಕ್ತಿಯನ್ನು ತೋರಿಸಿದ್ದ ಆ ವ್ಯಕ್ತಿಗಳಲ್ಲಿ ಎಷ್ಟು ಮಂದಿಯನ್ನು ನೀವು ತಪ್ಪದೆ ಪುನಃ ಸಂದರ್ಶಿಸಿರುವಿರಿ? ನೀವು ನೆಟ್ಟ ಬೀಜವು ಮೊಳಿಕೆ ಬಿಟ್ಟಿದೆಯೋ ಎಂದು ನೋಡಲು ನೀವು ಪುನಃ ಹೋಗಿದ್ದಿರೋ? ಬೇಕಾದ ನೀರನ್ನು ಹೊಯ್ಯಲು ನೀವು ಪುನಃ ಭೇಟಿ ಮಾಡಿ, ಅನಂತರ ಯೆಹೋವನು ಅದನ್ನು ಬೆಳೆಸುವಂತೆ ಪ್ರಾರ್ಥನೆ ಮಾಡಿದ್ದಿರೋ?—ಅ.ಕೃ. 16:14 ಮತ್ತು 2 ಥೆಸಲೋನಿಕ 3:1ನ್ನು ಹೋಲಿಸಿರಿ.
11 ಒಂದುವೇಳೆ ನಿಮಗೆ ಸಾಮರ್ಥ್ಯವಿಲ್ಲ ಎಂಬ ಅನಿಸಿಕೆಯಿಂದಾಗಿ ನೀವು ಪುನಃಸಂದರ್ಶನೆ ಯಾ ಬೈಬಲಭ್ಯಾಸಗಳನ್ನು ಮಾಡುತ್ತಿರಲಿಕ್ಕಿಲ್ಲ. ಇದು ಬಹುಶಃ ಹೆಚ್ಚು ನಿಮ್ಮ ಅನಿಸಿಕೆಯಿಂದಾಗಿಯೇ ಹೊರತು ಅಸಾಮರ್ಥ್ಯದಿಂದಾಗಿ ಆಗಿರಲಿಕ್ಕಿಲ್ಲ. ಯೆಹೋವನು ತನ್ನ ಜನರನ್ನು ತಕ್ಕದಾಗಿ ಸನ್ನದ್ಧಗೊಳಿಸದ ಹೊರತು ಮತ್ತು ಯೋಗ್ಯತೆಯನ್ನು ಕೊಡದ ಹೊರತು, ಹೊರಗೆ ಕಾರ್ಯಕ್ಕೆ ಕಳುಹಿಸಲಾರನು. ತನ್ನ ಪರಿಶುದ್ಧ ವಾಕ್ಯ ಮತ್ತು ಸಂಸ್ಥೆಯ ಮೂಲಕವಾಗಿ, ಆತನು ನಮ್ಮನ್ನು “ಸಕಲ ಸತ್ಕಾರ್ಯಕ್ಕೆ” ಸನ್ನದ್ಧಗೊಳಿಸುತ್ತಾನೆ. (2 ತಿಮೊ. 3:16, 17; 2 ಕೊರಿ. 3:5, 6) ಪವಿತ್ರಾತ್ಮದ ಮೂಲಕ, ಮುದ್ರಿತ ಪುಟಗಳ ಮೂಲಕ ಮತ್ತು ವೇದಿಕೆಯಿಂದ ದೊರೆಯುವ ಮೌಖಿಕ ಉಪದೇಶ ಮತ್ತು ದೃಶ್ಯಗಳ ಮೂಲಕ, ಅದಲ್ಲದೆ, ನಮಗೆ ನೆರವಾಗಲು ಸದಾ ಸಿದ್ಧರಿರುವ ನುರಿತ ಮತ್ತು ಮೀಸಲಾದ ಸೇವಕರ ಜೀವಂತ ಮಾದರಿಗಳ ಮೂಲಕ, ನಮಗೆ ಬೇಕಾದದ್ದೆಲ್ಲವನ್ನು ಆತನು ಒದಗಿಸುತ್ತಾನೆ. ಒಂದು ಬೈಬಲಭ್ಯಾಸವನ್ನು ನಡಿಲಿಕ್ಕಾಗಿ ನಮಗೆ ಉಚ್ಛ ಲೌಕಿಕ ಶಿಕ್ಷಣವು ಬೇಡ. ಯೆಹೋವನ ಸಂಸ್ಥೆಯ ಮೂಲಕವಾಗಿ ಕೊಡಲ್ಪಡುವ ಉಚ್ಛತ್ತಮ ಆತ್ಮಿಕ ಶಿಕ್ಷಣಕ್ಕೆ ಮಾತ್ರ ಪ್ರತಿಕ್ರಿಯಿಸಬೇಕಾದ ಅಗತ್ಯ ನಮಗಿದೆ.—ಅ.ಕೃ. 4:13 ಹೋಲಿಸಿ.
12 ನಮ್ಮ ರಾಜ್ಯದ ಸೇವೆ, ದೇವಪ್ರಭುತ್ವ ಶುಶ್ರೂಷೆ ಶಾಲೆ, ಸೇವಾ ಕೂಟಗಳು ಮತ್ತು ಇತರ ಉಪದೇಶ ಸಾಧನಗಳ ಮೂಲಕವಾಗಿ ಏನು ಒದಗಿಸಲ್ಪಡುತ್ತದೋ ಅದರ ವೈಯಕ್ತಿಕ ಅನ್ವಯವು ಅತ್ಯಾವಶ್ಯಕವು. ಅಪೊಸ್ತಲ ಪೌಲನು ಮುಚ್ಚುಮರೆಯಿಲ್ಲದೆ ಹೇಳಿದ್ದು: “ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಬೇಕಾಗಿದ್ದರೂ ಒಬ್ಬನು ನಿಮಗೆ ದೇವೋಕ್ತಿಗಳ ಮೂಲಪಾಠಗಳನ್ನು ತಿರುಗಿ ಕಲಿಸಿ ಕೊಡಬೇಕಾಗಿದೆ.” (ಇಬ್ರಿ. 5:12) ಹಲವಾರು ವರ್ಷಗಳಿಂದ ಒಂದು ಕಸುಬಿನಲ್ಲಿರುವ ಕೆಲಸಗಾರನು ತನ್ನ ಉಪಕರಣಗಳನ್ನು ಉಪಯೋಗಿಸುವುದರಲ್ಲಿ ಸಾಕಷ್ಟು ನಿಪುಣತೆಯನ್ನು ಗಳಿಸುವಂತೆ ನಿರೀಕ್ಷಿಸಲಾಗುತ್ತದೆ. ನಾವು ಪ್ರಾಮಾಣಿಕ ಅಭಿರುಚಿಯನ್ನು ತೋರಿಸುವಾಗ ಮತ್ತು ದಕ್ಷತೆಯ ಪ್ರಯತ್ನವನ್ನು ಮಾಡುವಾಗ, ಬೈಬಲ್ ಚರ್ಚೆಗಳನ್ನು ಹೇಗೆ ನಿರ್ವಹಿಸುವದೆಂದು ಕಲಿಯುವುದರಲ್ಲಿ ಪ್ರಗತಿಯು ತೋರಿಬರುವುದು.—ಜ್ಞಾನೋ. 12:24; 22:29.
13 ರಾಜ್ಯ ಸಂದೇಶದಲ್ಲಿ ಆಸಕ್ತಿ ತೋರಿಸಿದವರನ್ನು ಪುನಃಸಂದರ್ಶಿಸಿ ಅಧಿಕ ಬೈಬಲ್ ಚರ್ಚೆಗಳನ್ನು ನಡಿಸುವುದಕ್ಕೆ ಸಮಯ ಮತ್ತು ಪ್ರಯತ್ನದ ಅಗತ್ಯವಿದೆ. ಆದರೆ ನಾವು ಗಣ್ಯಮಾಡಬೇಕು ಏನಂದರೆ ನಾವು ಸತ್ಯದಲ್ಲಿರುವದೇ ಯೆಹೋವನ ಪ್ರೀತಿ ಮತ್ತು ಕೃಪಾತಿಶಯದ ಸೂಚಕವೆಂಬದಾಗಿ. ಅದು ನಮಗೆ ಸತ್ಯವನ್ನು ಕಲಿಸುವುದರಲ್ಲಿ ಅನೇಕ ವರ್ಷಗಳನ್ನು ತಾಳ್ಮೆಯಿಂದ ವ್ಯಯಿಸಿದ ಯಾವನಾದರೊಬ್ಬನಿಂದ ತೋರಿಸಲ್ಪಟ್ಟಿದೆ. ಅದೇ ರೀತಿಯಲ್ಲಿ, ಆವಶ್ಯಕ ಸಮಯವನ್ನು ಖರೀದಿಸಲು ಮತ್ತು ಶಿಷ್ಯರನ್ನಾಗಿ ಮಾಡುವ ಈ ಹೆಚ್ಚು ಮಹತ್ವದ ಕೆಲಸದಲ್ಲಿ ಅದನ್ನುಪಯೋಗಿಸಲು ಪ್ರೀತಿಯು ನಮ್ಮನ್ನು ಒತ್ತಯಾಪಡಿಸಬೇಕು.—2 ಕೊರಿ. 5:14, 15; ಎಫೆ. 5:15, 16.
14 ಸಾಯಂಕಾಲದ ಸೇವೆಗಾಗಿ ಏರ್ಪಾಡುಗಳನ್ನು ಮಾಡುವಂತೆ ಸೊಸೈಟಿಯು ಕೊಟ್ಟ ಸಲಹೆಯನ್ನು ಅನೇಕ ಸಭೆಗಳು ಹಿಂಬಾಲಿಸಿವೆ. ಸಂಜಾರಂಭದ ತಾಸುಗಳು ಆಸಕ್ತಿ ತೋರಿಸಿದವರನ್ನು ಪುನರ್ಭೇಟಿ ಮಾಡಲು ಸಾಮಾನ್ಯವಾಗಿ ಉತ್ತಮ ಸಮಯ. ನಾವು ಯಾರಿಗೆ ಸಾಕ್ಷಿ ನೀಡಿದ್ದೇವೋ ಅವರ ಕುರಿತಾದ ಸಂಬಂಧಿತ ಮಾಹಿತಿಗಳುಳ್ಳ ಮನೆಮನೆಯ ರೆಕಾರ್ಡು, ಪರಿಣಾಮಕಾರಿ ಪುನಃಸಂದರ್ಶನೆಗಳಿಗೆ ಮತ್ತು ಬೈಬಲ್ ಚರ್ಚೆಗಳನ್ನು ಆರಂಭಿಸುವುದಕ್ಕೆ ಅತ್ಯಾವಶ್ಯಕ. ಅಂಥ ರೆಕಾರ್ಡನ್ನು ಒಂದು ಪುಸ್ತಕದಲ್ಲಿ ಯಾ ಬೈಬಲಲ್ಲಿ ಹೂತಿಟ್ಟು ಅನಂತರ ಮರೆತು ಬಿಡಬೇಡಿ. ಹಲವಾರು ವಾರಗಳ ನಂತರ ಅದೇ ನೆರೆಹೊರೆಗೆ ಬರುವ ತನಕ ಆ ಸಂದರ್ಶನೆಗಳನ್ನು ಮಾಡಲು ಮರೆತು ಬಿಡುವದರಿಂದ, ಆ ವ್ಯಕ್ತಿಯ ಹೃದಯದಲ್ಲಿ ನೆಡಲ್ಪಟ್ಟ ಬೀಜವನ್ನು ತೆಗೆದುಬಿಡುವುದರಲ್ಲಿ ಸಂತೋಷಪಡುವ ಸೈತಾನನ ಕಾರಭಾರಿಗಳಿಗೆ ಇಂಬು ಕೊಟ್ಟಂಥಾಗುತ್ತದೆ. (ಲೂಕ 8:12) ತಕ್ಕ ಸಮಯದಲ್ಲಿ ಪುನಃ ಸಂದರ್ಶಿಸುವ ಮೂಲಕ ಸೈತಾನನ ತಂತ್ರಗಳನ್ನು ನಷ್ಟಗೊಳಿಸುವಿರೋ? ನಿಮ್ಮ ಜವಾಬ್ದಾರಿಯನ್ನು ಅರಿತವರಾದರೆ ಮತ್ತು ಸುಯೋಗವನ್ನು ನೀವು ಗಣ್ಯಮಾಡುವುದಾದರೆ, ಸಾಧ್ಯವಾದಾಗಲೆಲ್ಲಾ, ತಕ್ಕ ಸಮಯದಲ್ಲೇ ತಪ್ಪದೆ ಪುನಃ ಸಂದರ್ಶಿಸುವಿರಿ.—1 ಕೊರಿ. 9:16, 23.
ಬೈಬಲಭ್ಯಾಸ ಪ್ರಾರಂಭಿಸುವುದು ಹೇಗೆ
15 ಬೈಬಲಭ್ಯಾಸವೊಂದನ್ನು ಪ್ರಾರಂಭಿಸುವುದರಲ್ಲಿ ಒಂದು ಕಷ್ಟವಾದ, ಜಟಿಲ ವಿಧಾನವು ಒಳಗೂಡಿಲ್ಲ. ಕೆಲವರು ಅವರೊಂದಿಗೆ ಒಂದು ಬೈಬಲಭ್ಯಾಸ ನಡಿಸಲು ನಾವು ನೀವು ಮಾಡುವ ನೇರವಾದ ನೀಡಿಕೆಯನ್ನು ಸ್ವೀಕರಿಸಲೂ ಬಹುದು. ಆದರೂ ಅನೇಕ ಪ್ರಚಾರಕರು ಅಭ್ಯಾಸದ ಕುರಿತು ಮಂಚೆಯೇ ತಿಳಿಸದೆ ಅಂತ್ಯದಲ್ಲಿ ಬೈಬಲ್ ಚರ್ಚೆಯ ಕುರಿತು ಮಾರ್ಗದರ್ಶಿಸಲು ಇಷ್ಟ ಪಡುತ್ತಾರೆ.
16 ಜನರ ಕಡೆಗೆ ಪ್ರೀತಿ ಮತ್ತು ಅವರಿಗೆ ಸಹಾಯ ಮಾಡಲು ಪ್ರಾಮಾಣಿಕ ಅಪೇಕ್ಷೆಯು ಬೇಕಾಗಿದೆ. ಇದರಲ್ಲಿ ಆ ವ್ಯಕ್ತಿಯೊಂದಿಗೆ ಈ ಮೊದಲೇ ನೀವೇನನ್ನು ಚರ್ಚಿಸಿದ್ದೀರಿ ಎಂಬ ಟಿಪ್ಪಣಿಯನ್ನು ಪುನರಾವರ್ತಿಸುವದು ಮತ್ತು ಯಾವ ಅಧಿಕ ಬೈಬಲ್ ಚರ್ಚೆಯನ್ನು ಮಾಡುವದೆಂಬ ನಿರ್ಣಯವೂ ಸೇರಿರುವುದು. ನೀವು ಹೇಳಲಿರುವ ಸಾಮಾನ್ಯ ಸಂಗತಿಗಳನ್ನು ಮನಸ್ಸಿಗೆ ತಂದುಕೊಳ್ಳಿರಿ. ಹಿಂದೆ ಚರ್ಚಿಸಿದ ವಿಷಯಕ್ಕೆ ಕೂಡಿಸಲು ಕೆಲವು ಹೆಚ್ಚು ವಚನಗಳನ್ನು ಆರಿಸುವಿರೋ? ಅಥವಾ ಮನೆಯವನಲ್ಲಿರುವ ಟ್ರೇಕ್ಟ್ ಅಥವಾ ಪುಸ್ತಕವನ್ನು ತೆರೆದು ಆರಂಭದ ಕೆಲವು ಪಾರಾಗಳನ್ನು ಅವನೊಂದಿಗೆ ಚರ್ಚಿಸುವಿರೋ? ಅವನು ಆಸಕ್ತಿ ವ್ಯಕ್ತಪಡಿಸಿದ ಒಂದು ವಿಷಯವನ್ನೂ ನೀವು ಆರಿಸಿಕೊಳ್ಳಬಹುದು. ಮೊದಮೊದಲು, ಕೇವಲ 10-15 ನಿಮಿಷಗಳನ್ನು ತೆಗೆದುಕೊಳ್ಳಿರಿ. ತೋರಿಸಲ್ಪಡುವ ಆಸಕ್ತಿಯ ಆಳಕ್ಕನುಸಾರ ಕ್ರಮೇಣ ಸಮಯವನ್ನು ಹೆಚ್ಚಿಸಬಹುದು. ಹೇಗೆ ಮುಂದುವರಿಯುವದು ಮತ್ತು ಎಷ್ಟು ಸಮಯ ತಕ್ಕೊಳ್ಳುವದು ಎಂಬದನ್ನು ವಿವೇಚಿಸಲು ನಿಮ್ಮ ಒಳ್ಳೇ ತೀರ್ಮಾನವು ನೆರವಾಗಬೇಕು.
17 ಶಿಷ್ಯರನ್ನಾಗಿ ಮಾಡುವ ಕಡೆಗೆ ಪ್ರಗತಿಪೂರ್ವಕ ಹೆಜ್ಜೆಗಳನ್ನು ತಕ್ಕೊಳ್ಳುವರೇ ಸಹಾಯಕ್ಕಾಗಿ ಹಲವಾರು ವರ್ಷಗಳಿಂದ ಹೇರಳವಾದ ಸಹಾಯಕಾರಿ ಸಲಹೆಗಳು ಕೊಡಲ್ಪಟ್ಟಿವೆ. ನವಂಬರ ಮತ್ತು ದಶಂಬರ 1990ರ ನಮ್ಮ ರಾಜ್ಯದ ಸೇವೆಯಲ್ಲಿ, “ಪರಿಣಾಮಕಾರಿ ಬೈಬಲಭ್ಯಾಸಗಳ ಮೂಲಕ ಹೃದಯವನ್ನು ತಲಪಿರಿ” ಮತ್ತು “ಬೈಬಲ್ ವಿದ್ಯಾರ್ಥಿಗಳನ್ನು ಯೆಹೋವನ ಸಂಸ್ಥೆಗೆ ನಡಿಸುವುದು” ಲೇಖನ ಮಾಲೆಗಳು ಕೊಡಲ್ಪಟ್ಟವು. ಮಾರ್ಚ್ 1987ರ ನಮ್ಮ ರಾಜ್ಯದ ಸೇವೆಯು, “ಮನೆಬೈಬಲಭ್ಯಾಸಗಳಿಗಾಗಿ ತಯಾರಿಸುವುದು ಮತ್ತು ನಡಿಸುವುದು” ಎಂಬ ಲೇಖನವನ್ನು ಕೊಟ್ಟಿತ್ತು. ಇಂಡೆಕ್ಸ್ನಲ್ಲಿ, “ಬೈಬಲ್ಸಡ್ಟೀಸ್” ಕೆಳಗಿನ ಸಮಾಚಾರದ ಕ್ಷಣಪರೀಕ್ಷೆಯು ಹೆಚ್ಚಿನ ಸಹಾಯಕಾರಿ ಮಾಹಿತಿಗಳ ಕಡೆಗೆ ನಿಮ್ಮನ್ನು ನಡಿಸುವುದು.
18 ಅಭ್ಯಾಸ ನಡಿಸುವದು ಹೇಗೆಂಬ ಒಂದು ನಮೂನೆಗಾಗಿ, ಸಭಾ ಪುಸ್ತಕಭ್ಯಾಸದಲ್ಲಿ ಏನೆಲ್ಲಾ ನಡಿಯುತ್ತದೆಂಬದಕ್ಕೆ ಗಮನ ಕೊಡಿರಿ. ಮನೆ ಬೈಬಲಭ್ಯಾಸದಲ್ಲಾದರೋ ನಿಮಗೆ ಆವರಿಸಲು ಪೂರ್ವ ನೇಮಿತ ಪಾರೆಗ್ರಾಫ್ಗಳಿರುವುದಿಲ್ಲ. ಆದ್ದರಿಂದ ನೀವು ನಿಮ್ಮ ವಿಷಯದ ಆವರಿಸುವಿಕೆಯ ವೇಗವನ್ನು ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ಅಗತ್ಯತೆಗಳಿಗೆ ಅನುಸಾರವಾಗಿ ನಡಿಸಬೇಕು. ಅದಲ್ಲದೆ, ಸೇವಾ ಮೇಲ್ವಿಚಾರಕರು ಮತ್ತು ಇತರ ಅನುಭವಸ್ಥ ಪ್ರಚಾರಕರು ಮತ್ತು ಪಯನೀಯರರು, ಪರಿಣಾಮಕಾರಿ ಬೈಬಲ್ ಅಭ್ಯಾಸಗಳನ್ನು ನಡಿಸುವರೆ ನಿಮ್ಮೊಂದಿಗೆ ಬರಲು ಮತ್ತು ವ್ಯಾವಹಾರ್ಯ ಸಲಹೆಗಳನ್ನು ನೀಡಲು ಸಂತೋಷ ಪಡುವರು.
19 ಜನರಿಗೆ ನೆರವಾಗುವ ನಮ್ಮ ಪ್ರಯತ್ನದಲ್ಲಿ ಯೆಹೋವನು ವಹಿಸುವ ಮುಖ್ಯ ಪಾತ್ರವನ್ನು ಅರಿತವರಾಗಿ, ಅಭ್ಯಾಸ ಮಾಡಲು ಯಾರಾದರೂ ಸಿಗುವಂತೆ ಮಾತ್ರವಲ್ಲ ನಮಗೆ ಸಿಕ್ಕಿದ ಆಸಕ್ತ ಜನರು ಅಭ್ಯಾಸದಲ್ಲಿ ಪ್ರಗತಿ ಮಾಡುವಂತೆಯೂ ನಾವು ಯೆಹೋವನಿಗೆ ಪ್ರಾರ್ಥಿಸಬೇಕು. ಅರಸ ಅಗ್ರಿಪ್ಪನಿಗೆ ಸಾಕ್ಷಿ ನೀಡಿದಾಗ ಅಪೊನಲ್ತ ಪೌಲನು ತೋರಿಸಿದ ಮನೋಭಾವ ಮತ್ತು ಅನಿಸಿಕೆಗಳು ನಮ್ಮದಾಗಿರಬೇಕು: “ಅಲ್ಪ ಪ್ರಯತ್ನದಿಂದಾಗಲಿ ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈ ಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ ಈ ಬೇಡಿಗಳ ಹೊರತು ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ.” ಅಂದರೆ, ವೈಯಕ್ತಿಕ ಸಹಾಯ ಕೊಡಲು ಅಲ್ಪ ಸಮಯ ತಗಲಲಿ ಯಾ ಅಧಿಕ ಸಮಯ ತಗಲಲಿ, ತನಗೆ ಕಿವಿಗೊಡುವವರು ಕ್ರಿಸ್ತನ ನಿಜ ಶಿಷ್ಯರಾಗಿ ಪರಿಣಮಿಸುವಂತೆ ಪೌಲನು ಬಯಸಿದ್ದನು.
20 ಬೈಬಲಭ್ಯಾಸಗಳನ್ನು ನಡಿಸುವಿಕೆಯು ನಮ್ಮನ್ನು ‘ದೇವರ ಕೃಪೆಯ ವಿಷಯವಾದ ಸುವಾರ್ತೆಗೆ ಪೂರಾ ರೀತಿಯ ಸಾಕ್ಷಿನೀಡುವಂತೆ’ ಶಕ್ತರಾಗಿ ಮಾಡುತ್ತದೆ. (ಅ.ಕೃ. 20:24) ಇನ್ನೂ ಅಗಣಿತ ಜನರು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದೊಳಗಿಂದ ದೇವರ ಕಡೆಗೂ ತಿರುಗಬಹುದು. (ಅ.ಕೃ. 26:18) ಯೆಹೋವನ ಸಮರ್ಪಿತ, ಸ್ನಾನಿತ ಸೇವಕರಾದ ನೀವು, ಸತ್ಯದ ಬೀಜವನ್ನು ನೆಡುವ ಮೂಲಕ ನಿಮ್ಮ ವೈಯಕ್ತಿಕ ಪಾಲನ್ನು ಮಾಡಬೇಕು, ಮತ್ತು ಬೈಬಲ್ ಚರ್ಚೆಗಳ ಮೂಲಕ ಹಾಗೂ ಕ್ರಮದ ಬೈಬಲಭ್ಯಾಸಗಳ ಮೂಲಕ ಬೇಕಾದ ನೀರನ್ನು ಹೊಯ್ಯಬೇಕು. ಹೀಗೆ ಜನರು ಶಿಷ್ಯರಾಗಿ ಪರಿಣಮಿಸುವದನ್ನು ಮತ್ತು ಇನ್ನೂ ಇತರರು ಯೇಸುಕ್ರಿಸ್ತನ ಶಿಷ್ಯರಾಗುವಂತೆ ಮಾಡುವುದರಲ್ಲಿ ನೆರವಾಗಲು ನಿಮ್ಮೊಂದಿಗೆ ಜತೆಗೂಡುವದನ್ನು ಕಾಣುವದರಲ್ಲಿ ನೀವು ಮಹಾನಂದವನ್ನು ಕಂಡುಕೊಳ್ಳುವಿರಿ.