ಮಾರ್ಚಗಾಗಿ ಸೇವಾ ಕೂಟಗಳು
ಮಾರ್ಚ್ 1 ರ ವಾರ
ಸಂಗೀತ 9 (19)
15 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಪ್ರಕಟಣೆಗಳು. ಭೂಮಿಯ ವಿವಿಧ ಭಾಗಗಳಲ್ಲಿನ ಅವನ ಸೇವಕರ ಮೇಲೆ ಯೆಹೋವನ ಆಶೀರ್ವಾದವು ಇರುವ ವಿಧವನ್ನು ಎತ್ತಿತೋರಿಸುತ್ತಾ, ದೇವಪ್ರಭುತ್ವ ವಾರ್ತೆಯಿಂದ ಮುಖ್ಯಾಂಶಗಳು. ಸ್ಥಳೀಕ ಸಭೆಯ ಅನುಭವಗಳನ್ನು ತಕ್ಕದಾಗಿರುವ ರೀತಿಯಲ್ಲಿ ಸೇರಿಸಬಹುದು.
15 ನಿ: “‘ಬನ್ನಿರಿ!’ ಎಂದು ಹೇಳುತ್ತಾ ಇರ್ರಿ.” ಪ್ರಶ್ನೆ ಮತ್ತು ಉತ್ತರ ಆವರಿಸುವಿಕೆ. ಪ್ಯಾರಗ್ರಾಫ್ 4ನ್ನು ಚರ್ಚಿಸುವಾಗ, ಒಳ್ಳೇದಾಗಿ ತಯಾರಿಸಿದ ಪ್ರಚಾರಕನು ಸದಾ ಜೀವಿಸಬಲ್ಲಿರಿ ಪುಸ್ತಕದ 18 ನೆಯ ಅಧ್ಯಾಯದಿಂದ ಕೆಲವು ವಿಷಯಗಳನ್ನು, ವಿಶೇಷವಾಗಿ ಯೇಸುವಿನ ಮತ್ತು ಇತರ ಪ್ರವಾದನೆಗಳೊಂದಿಗೆ ವ್ಯವಹರಿಸುವ ಪುಟ 150-153 ರಲ್ಲಿರುವ ಚಿತ್ರಗಳನ್ನು ಎತ್ತಿತೋರಿಸಲಿ.
15 ನಿ: “ನಿಮ್ಮ ಶುಶ್ರೂಷೆಯಲ್ಲಿ ಬಹುಮುಖ ಸಾಮರ್ಥ್ಯವುಳ್ಳವರಾಗಿರ್ರಿ.” ಸಭಿಕರ ಭಾಗವಹಿಸುವಿಕೆಯೊಂದಿಗೆ ಭಾಷಣ. ಪ್ಯಾರಗ್ರಾಫ್ 3-5ನ್ನು ಚರ್ಚಿಸುವಾಗ ಎರಡು ಚುಟುಕಾದ ಪ್ರತ್ಯಕ್ಷಾಭಿನಯಗಳನ್ನು ಸೇರಿಸಿರಿ. ಪ್ಯಾರಗ್ರಾಫ್ 4 ಮತ್ತು 5 ರಲ್ಲಿರುವ ವಿಷಯಗಳನ್ನು ಪ್ರತ್ಯಕ್ಷಾಭಿನಯಿಸುವಾಗ, ಲೇಖನದಲ್ಲಿ ನಿರ್ದೇಶಿಸಲ್ಪಟ್ಟಂತೆ ಮನೆ-ಮನೆಯ ಸೇವೆಯಲ್ಲಿ ಪ್ರಾಯಸ್ಥ ಪ್ರಚಾರಕನು ಒಬ್ಬ ಎಳೆಯನೊಂದಿಗೆ ಒಟ್ಟಿಗೆ ಕಾರ್ಯ ಮಾಡುವ ವಿಧವನ್ನು ತೋರಿಸಿರಿ. ಫಲಿತಾಂಶವೇನಿದ್ದರೂ, ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳುವ ಅಗತ್ಯವನ್ನು ಒತ್ತಿಹೇಳಿರಿ.
ಸಂಗೀತ 114 (61) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 8 ರ ವಾರ
ಸಂಗೀತ 128 (4)
5 ನಿ: ಸ್ಥಳೀಕ ತಿಳಿಸುವಿಕೆಗಳು. ಎಪ್ರಿಲ್‌ಗಾಗಿ ಈಗಾಗಲೇ ಸಮ್ಮತಿ ನೀಡಲ್ಪಟ್ಟ ಸಹಾಯಕ ಪಯನೀಯರರುಗಳ ಸಂಖ್ಯೆಯನ್ನು ತಿಳಿಸಿರಿ. ಪಯನೀಯರ್ ಆಗಲು ಯೋಜಿಸುವವರು ಅರ್ಜಿಗಳನ್ನು ಬೇಗನೆ ಕೊಡುವಂತೆ ಉತ್ತೇಜಿಸಿರಿ.
20 ನಿ: “ಯೆಹೋವನನ್ನು ಸನ್ಮಾನಿಸಲು ನೀವು ಹೆಚ್ಚನ್ನು ಮಾಡಶಕ್ತರೋ?” ಪ್ಯಾರಗ್ರಾಫ್ 1 ರಿಂದ 10 ಪ್ಯಾರಗ್ರಾಫ್‌ಗಳ ತನಕದ ಪ್ರಶ್ನೋತ್ತರ ಚರ್ಚೆ.
20 ನಿ: ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ನೆರವನ್ನೀಯುವುದು. ಕೇವಲ ಅಭ್ಯಾಸ ಮಾತ್ರ ನಡಿಸುವುದಕ್ಕಿಂತಲೂ ಮೀರಿ, ಬೈಬಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವನ್ನು ನೀಡುವ ಅಗತ್ಯವನ್ನು ಒತ್ತಿಹೇಳುತ್ತಾ, ಸಭಿಕರ ಚರ್ಚೆ. (1 ಥೆಸ. 2:8) ಕೂಟಗಳಲ್ಲಿ ಹಾಜರಾಗಲು ಮತ್ತು ಭಾಗವಹಿಸಲು ಹೃತ್ಪೂರ್ವಕ ಆಶೆಯನ್ನು ಹುರಿದುಂಬಿಸಲು ಅಧಿಕ ಸಮಯವನ್ನು ತೆಗೆದುಕೊಳ್ಳಿರಿ. ಸರ್ಕಿಟ್ ಸಮ್ಮೇಳನಗಳ, ವಿಶೇಷ ಸಮ್ಮೇಳನ ದಿನಗಳ, ಮತ್ತು ಜಿಲ್ಲಾ ಅಧಿವೇಶನಗಳ ಕುರಿತು ವಿವರಿಸುವದರಿಂದ ಸಂಸ್ಥಾಪನೆಗೆ ಮತ್ತು ಅಂತರಾಷ್ಟ್ರೀಯ ಸಹೋದರತ್ವಕ್ಕಾಗಿ ಗಣ್ಯತೆಯನ್ನು ಕಟ್ಟಿರಿ. ಜೆಹೊವಾಸ್ ವಿಟ್ನೆಸೆಸ್ ಯುನೈಟೆಡ್ಲಿ ಡುಯಿಂಗ್ ಗಾಡ್ಸ್ ವಿಲ್ ವರ್ಲ್ಡ್‌ವೈಡ್ ಬ್ರೊಷರ್‌ನಿಂದ ಒಂದು ವಿಭಾಗವನ್ನು ಚರ್ಚಿಸಲು ಪ್ರತಿ ಅಭ್ಯಾಸದ ನಂತರ ಸ್ವಲ್ಪ ಸಮಯ ವ್ಯಯಿಸಿ, ಅದರಿಂದ ಅವರೇನು ಕಲಿತಿದ್ದಾರೆಂಬುದನ್ನು ವಿದ್ಯಾರ್ಥಿಗಳಿಂದ ಹೊರಕ್ಕೆ ತನ್ನಿರಿ. ಅವರೇನನ್ನು ಕಲಿಯುತ್ತಿದ್ದಾರೋ ಅದನ್ನು ಅವಿಧಿಯಾಗಿ ಇತರರೊಂದಿಗೆ ಹಂಚುವ ವಿಧವನ್ನು ಪ್ರಗತಿಪರವಾಗಿ ತೋರಿಸಿರಿ. ನಮ್ಮ ಶುಶ್ರೂಷೆ ಪುಸ್ತಕದ 98 ಮತ್ತು 99 ಪುಟಗಳಲ್ಲಿ ತಿಳಿಸಲ್ಪಟ್ಟ ಆವಶ್ಯಕತೆಗಳನ್ನು ಮುಟ್ಟುವ ಮತ್ತು ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸಲು ಬಯಸುವ ಬೈಬಲ್ ವಿದ್ಯಾರ್ಥಿಗಳು ಅಸ್ನಾನಿತ ಪ್ರಚಾರಕರಾಗುವಂತೆ ಸಹಾಯಿಸತಕ್ಕದ್ದು. ಅಭ್ಯಾಸದ ಸಮಯದಲ್ಲಿ ಮತ್ತು ಅನಂತರ, ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕಾಗಿ ಆಶೆಯನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡತಕ್ಕದ್ದು. ನಮ್ಮ ಅಧಿವೇಶನಗಳಲ್ಲಾಗುವ ದೀಕ್ಷಾಸ್ನಾನಗಳ ಚಿತ್ರಗಳನ್ನು ಯಾ ವೃತ್ತಪತ್ರಕೆಯ ಲೇಖನಗಳನ್ನು ವಿದ್ಯಾರ್ಥಿಗಳಿಗೆ ತೋರಿಸಸಾಧ್ಯವಿದೆ. ಪ್ರತ್ಯಕ್ಷಾಭಿನಯ: ಪ್ರಚಾರಕನು ಬೈಬಲ್ ವಿದ್ಯಾರ್ಥಿಯನ್ನು ಅವಿಧಿ ಸಾಕ್ಷಿ ನೀಡುವಿಕೆಯಲ್ಲಿ ನೆರವಾಗುತ್ತಾನೆ. ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಕ್ಷೇತ್ರದ ವಿಷಯವನ್ನು ಆರಿಸಿ, ಹೇಳುವುದು: “ನಿಮ್ಮ ಸಂಬಂಧಿಕರಲ್ಲಿ ಯಾ ನೆರೆಯವರಲ್ಲಿ ಕೆಲವರೊಂದಿಗೆ ಆ ವಿಷಯವನ್ನು ಹಂಚಿಕೊಳ್ಳುವುದು ಒಳ್ಳೆಯದು. ಈ ಮೊದಲು ನಿಮಗೆ ತಿಳಿಯದೇ ಇದ್ದ, ಬೈಬಲಿನಿಂದ ಕಲಿತಿರುವ ಒಂದು ವಿಷಯವೆಂದು ನೀವು ಅವರಿಗೆ ಹೇಳಬಹುದು.” ಬೈಬಲ್ ವಿದ್ಯಾರ್ಥಿಗಳಿಗೆ ನೆರವಾಗಲು, ದೀಕ್ಷಾಸ್ನಾನದ ನಂತರವೂ ಪ್ರೀತಿಯ ಆರೈಕೆಯನ್ನು ಮುಂದರಿಸುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
ಸಂಗೀತ 123 (63) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 15 ರ ವಾರ
ಸಂಗೀತ 72 (58)
10 ನಿ: ಸ್ಥಳೀಕ ತಿಳಿಸುವಿಕೆಗಳು, ಅಕೌಂಟ್ಸ್ ವರದಿ ಮತ್ತು ಕಾಣಿಕೆಯ ಅಂಗೀಕಾರದ ಸಹಿತ. ಈ ಅಂಕಣದ ಕೆಳಭಾಗದಲ್ಲಿರುವ “ಒಂದು ಸಮಯೋಚಿತ ಸಂದೇಶ”ಕ್ಕೆ ಸೂಚಿಸಿರಿ. ಮಾರ್ಚ್ 28ರ ವಿಶೇಷ ಭಾಷಣದ ಶಿರೋನಾಮವನ್ನು ಗಮನಿಸುವಂತೆ ಮತ್ತು ಆಸಕ್ತರು ಹಾಜರಾಗಲು ಆಮಂತ್ರಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ.
15 ನಿ: “ಆಸಕ್ತಿಯನ್ನು ತೋರಿಸಿದವರೆಲ್ಲರಿಗೆ ಸಹಾಯ ಮಾಡುವುದು.” ಸಭಿಕರ ಸ್ವಲ್ಪ ಭಾಗವಹಿಸುವಿಕೆಯೊಂದಿಗೆ ಭಾಷಣ. ಸಮಯವಿದ್ದಂತೆ, ನಮೂದಿಸಲ್ಪಟ್ಟ ಶಾಸ್ತ್ರವಚನಗಳನ್ನು ಪರಿಗಣಿಸಿರಿ. ಪ್ಯಾರಗ್ರಾಫ್ 3 ರಲ್ಲಿನ ಸಲಹೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಮೊದಲ ಬಾರಿ ಹಾಜರಾಗುವವರ ಆಸಕ್ತಿಯನ್ನು ಬಿಡದೆ ಅನುಸರಿಸುವ ಅಗತ್ಯವನ್ನು ಎತ್ತಿ ತೋರಿಸಿರಿ.
20 ನಿ: “ಯೆಹೋವನನ್ನು ಸನ್ಮಾನಿಸಲು ನೀವು ಹೆಚ್ಚನ್ನು ಮಾಡಶಕ್ತರೋ?” ಪ್ಯಾರಗ್ರಾಫ್ 11 ರಿಂದ 22 ಪ್ಯಾರಗ್ರಾಫ್‌ಗಳ ತನಕದ ಪ್ರಶ್ನೋತ್ತರ ಚರ್ಚೆ.
ಸಂಗೀತ 32 (10) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 22 ರ ವಾರ
ಸಂಗೀತ 66 (37)
10 ನಿ: ಸ್ಥಳೀಕ ತಿಳಿಸುವಿಕೆಗಳು. ಪ್ರಶ್ನಾ ಪೆಟ್ಟಿಗೆ. ಎಪ್ರಿಲ್‌ನಲ್ಲಿ ಶುಶ್ರೂಷೆಯಲ್ಲಿ ವರ್ಧಿಸಿದ ಭಾಗವಹಿಸುವಿಕೆಗಾಗಿ ಯೋಜಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
20 ನಿ: ವಯಸ್ಸಾದವರನ್ನು ಪರಾಮರಿಸುವುದು. ಇಬ್ಬರು ಸಹೋದರರಿಂದ ಚರ್ಚೆ ಮತ್ತು ಮುಖತಃ ಭೇಟಿಗಳು. “ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಆದಿತ್ಯವಾರ ಬೆಳಿಗ್ಗೆ “ಕ್ರೈಸ್ತ ಕುಟುಂಬದಲ್ಲಿ ಒಬ್ಬರು ಇನ್ನೊಬ್ಬರನ್ನು ಪರಾಮರಿಸುವುದು” ಎಂಬ ಮುಖ್ಯ ವಿಷಯದ ಭಾಷಣಗೋಷ್ಠಿಯು ಸಾದರಪಡಿಸಲ್ಪಟ್ಟಿತ್ತು. ಅದರ ಕೊನೆಯ ಭಾಗ “ವಯಸ್ಸಾದವರನ್ನು ಪರಾಮರಿಸುವುದು” ಕುಟುಂಬ ಮತ್ತು ಸಭೆಗೆ ವಯಸ್ಸಾದ ವ್ಯಕ್ತಿಗಳು ಮಾಡುವಂತಹ ಅಮೂಲ್ಯ ಕಾಣಿಕೆಯನ್ನು ಒತ್ತಿಹೇಳಿತು. (ಜ್ಞಾನೋ. 16:31) ವಯಸ್ಸಾದವರಿಗೆ ನಾವು ಯಾವ ವಿಧಗಳಲ್ಲಿ ಸಹಾಯ ಕೊಡಬಲ್ಲೆವು? ಕುಟುಂಬಕ್ಕೆ ಪ್ರಾಥಮಿಕ ಜವಾಬ್ದಾರಿಯಿದೆ. (1 ತಿಮೊ. 5:3, 4, 8, 16) ತಾಳ್ಮೆ ಮತ್ತು ಕನಿಕರವು ಬೇಕಾಗಿದೆ. ಹೆತ್ತವರು ಮತ್ತು ಅಜ್ಜಅಜಿಯ್ಜಂದಿರು ಗತಕಾಲದಲ್ಲಿ ಒದಗಿಸಿದ ಪ್ರೀತಿ, ಕೆಲಸ ಮತ್ತು ಪರಾಮರಿಕೆಯ ವರ್ಷಗಳಿಗಾಗಿ ಬೆಳೆದಿರುವ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಗಣ್ಯತೆಯನ್ನು ತೋರಿಸುವ ಒಂದು ಅವಕಾಶ ಇರುತ್ತದೆ. (w 87 6⁄1 13-18) ವಯಸ್ಸಾದವರಿಗೆ ಸಭೆಯು ಕೂಡ ಸಹಾಯ ಕೊಡಬಹುದು. ಸರಕಾರದ ನೆರವಿಗಾಗಿ ಅರ್ಹರಾಗಲು ಕೆಲವರಿಗೆ ಸಹಾಯ ಬೇಕಾಗಿರಬಹುದು. ಊಟಗಳಿಗೆ ಮತ್ತು ಒಟ್ಟುಗೂಡುವಿಕೆಗಳಿಗೆ ಅವರನ್ನು ಆಮಂತ್ರಿಸುವುದರ ಮೂಲಕ ಅತಿಥಿ ಸತ್ಕಾರವನ್ನು ತೋರಿಸಿರಿ. (ರೋಮಾಪುರ 12:13) ಕ್ಷೇತ್ರ ಶುಶ್ರೂಷೆಯಲ್ಲಿ ಅವರಿಗೆ ನೆರವಾಗಿರಿ. ಕೂಟಗಳಿಗೆ ಮತ್ತು ಸಮ್ಮೇಳನಗಳಿಗೆ ವಾಹನ ಸೌಕರ್ಯ ಒದಗಿಸಿರಿ. ಖರೀದಿಸುವಿಕೆಗಳಲ್ಲಿ ಮತ್ತು ಅವರ ಮನೆಗಳ ಜಾಗ್ರತೆ ವಹಿಸುವುದರಲ್ಲಿ ಸಹಾಯ ಮಾಡಿರಿ. (w 87 6⁄1 4-7) ಪ್ರಾಯ ಸಂದವರಿಗೆ ಯಾವಾಗಲೂ ಗೌರವವನ್ನು ತೋರಿಸಿರಿ. (1 ತಿಮೊ. 5:1, 2) ಒಳ್ಳೆಯ ಮಾದರಿಗಳಾಗಿರುವ ಒಬ್ಬರು ಯಾ ಇಬ್ಬರು ವಯಸ್ಸಾದ ವ್ಯಕ್ತಿಗಳ ಮುಖತಃ ಭೇಟಿ ಮಾಡಿರಿ. ಅವರ ಕುಟುಂಬ ಮತ್ತು ಸಭೆಯಿಂದ ತೋರಿಸಲ್ಪಟ್ಟ ದಯೆಯಿಂದ ಅವರು ಹೇಗೆ ಪ್ರಯೋಜನ ಹೊಂದಿದ್ದಾರೆಂಬುದನ್ನು ಎತ್ತಿ ಹೇಳಿರಿ.
15 ನಿ: ಎಪ್ರಿಲ್‌ನಲ್ಲಿ ಸಹಾಯಕ ಪಯನೀಯರಿಂಗ್ ಮಾಡುವ ಯಾ ಹಿಂದೆ ಮಾಡಿರುವ ಮೂರು ಯಾ ನಾಲ್ಕು ಪ್ರಚಾರಕರ ಮುಖತಃ ಭೇಟಿಯನ್ನು ಹಿರಿಯನು ಮಾಡುತ್ತಾನೆ. ಪಯನೀಯರ್ ಆಗಲು ಅವರನ್ನು ಪ್ರಚೋದಿಸಿದ್ದು ಏನು? ಎಪ್ರಿಲ್‌ಗಾಗಿ ಅವರು ಯಾವ ಯೋಜನೆಗಳನ್ನು ಮಾಡಿದ್ದಾರೆ? ಸಹಾಯಕ ಪಯನೀಯರಿಂಗ್ ವೈಯಕ್ತಿಕವಾಗಿ ಅವರಿಗೆ ಹೇಗೆ ಸಹಾಯ ಮಾಡಿದೆ? ಬರುವ ತಿಂಗಳು ಸಹಾಯಕ ಪಯನೀಯರಿಂಗ್ ಮಾಡಲು ಯೋಜಿಸುವವರೆಲ್ಲರೂ ಅರ್ಜಿಗಳನ್ನು ತೆಗೆದುಕೊಳ್ಳುವಂತೆ ಮತ್ತು ಬೇಗನೆ ತುಂಬಿಸಿ ಹಿಂದಿರುಗಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ.
ಸಂಗೀತ 172 (92) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 29 ರ ವಾರ
ಸಂಗೀತ 105 (46)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸ್ಮಾರಕಾಚರಣೆಗೆ ಆಸಕ್ತ ವ್ಯಕ್ತಿಗಳನ್ನು ಮತ್ತು ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸಲು ಎಲ್ಲರಿಗೆ ಮರುಜ್ಞಾಪಕ ಮಾಡಿರಿ. ಮುದ್ರಿತ ಆಮಂತ್ರಣಗಳ ಸದುಪಯೋಗವನ್ನು ಮಾಡಿರಿ. ಜ್ಞಾಪಕಾಚರಣೆಯ ಸಮಯ ಮತ್ತು ಅದು ನಡಿಸಲ್ಪಡುವ ಸ್ಥಳದ ವಿಳಾಸವನ್ನು ನೀಟಾಗಿ ಮುದ್ರಣದಂತೆ ಬರೆಯಲು ಪ್ರಚಾರಕರನ್ನು ಉತ್ತೇಜಿಸಿರಿ.
25 ನಿ: “ನಿತ್ಯ ಜೀವದ ನಿರೀಕ್ಷೆಯನ್ನು ನೀಡುವ ಮರಣವನ್ನು ಆಚರಿಸುವುದು.” ಅಧ್ಯಕ್ಷ ಮೇಲ್ವಿಚಾರಕನಿಂದ ಪ್ರಶ್ನೋತ್ತರ ಆವರಿಸುವಿಕೆ. “ಸ್ಮಾರಕಾಚರಣೆಗಾಗಿ ತಯಾರಿಯಲ್ಲಿ” ಪೆಟ್ಟಿಗೆಯಲ್ಲಿರುವ ವಿಷಯವನ್ನೂ ಸೇರಿಸಿರಿ. ಲೇಖನದ ಪ್ಯಾರಗ್ರಾಫ್ 5ನ್ನು ಪರಿಗಣಿಸಿಯಾದ ಮೇಲೆ, ಪ್ರಚಾರಕನು ಬೈಬಲ್ ವಿದ್ಯಾರ್ಥಿಯನ್ನು ಸ್ಮಾರಕಾಚರಣೆಗೆ ಆಮಂತ್ರಿಸುವ ಪ್ರತ್ಯಕ್ಷಾಭಿನಯವಿರಲಿ. ಎಪ್ರಿಲ್ 1-6ರ ಸಮಯಾವಧಿಯಲ್ಲಿ ಆಯ್ದ ಬೈಬಲ್ ವಚನಗಳನ್ನು ಓದಲು ಇರುವ ಏರ್ಪಾಡನ್ನು ಮತ್ತು ವಾಹನ ಸೌಕರ್ಯವನ್ನು ಒದಗಿಸಲು ಸಿದ್ಧನಾಗಿರುವದನ್ನು ಪ್ರಚಾರಕನು ವಿವರಿಸುತ್ತಾನೆ.
10 ನಿ: ಎಪ್ರಿಲ್‌ನಲ್ಲಿ ಕಾವಲಿನಬುರುಜು ಚಂದಾಗಳನ್ನು ನೀಡುವುದು. ಈ ತಿಂಗಳಲ್ಲಿ ಮುಖ್ಯನೋಟವಾಗಿ ತೋರಿಸಬಹುದಾದ ನಿರ್ದಿಷ್ಟ ಮಾತಾಡುವ ಅಂಶಗಳನ್ನು ಮತ್ತು ವಿಷಯಗಳನ್ನು ಎತ್ತಿತೋರಿಸಿ, ಪ್ರತಿಯೊಂದು ಸಂದರ್ಭದಲ್ಲಿ ಪತ್ರಿಕೆಯಲ್ಲಿನ ಅಂಶಗಳಿಗೆ ಗಮನ ಸೆಳೆಯಲು ಎಚ್ಚರವಿರ್ರಿ.
ಸಂಗೀತ 87 (47) ಮತ್ತು ಸಮಾಪ್ತಿಯ ಪ್ರಾರ್ಥನೆ.