ಕಂಡುಕೊಂಡಥ ಆಸಕ್ತಿಯ ಕಡೆಗೆ ಗಮನ ಕೊಡಿರಿ
1 ನಾವು ನಮ್ಮ ಪತ್ರಿಕೆಗಳನ್ನು ಮತ್ತು ಇತರ ದೇವಪ್ರಭುತ್ವ ಪ್ರಕಾಶನಗಳನ್ನು ಹಂಚುವಾಗ, ಯೇಸು ಕ್ರಿಸ್ತನು ಘೋಷಿಸಿದಂಥ ಸಂದೇಶವನ್ನು ಎಲ್ಲ ಕಡೆಗೂ ನಾವು ಹರಡಿಸುತ್ತಾ ಇದ್ದೇವೆ. ಆದುದರಿಂದ ಆಸಕ್ತಿಯನ್ನು ತೋರಿಸುವ ಪ್ರತಿಯೊಬ್ಬರಲ್ಲಿಗೆ ಪುನಃ ಸಂದರ್ಶನವೊಂದನ್ನು ಮಾಡಲು ನಾವು ವಿಶೇಷವಾದ ಪ್ರಯತ್ನವನ್ನು ಮಾಡಬೇಕು.
2 ಮನೆಯವನಿಗೆ ಆಸಕ್ತಿ ಹುಟ್ಟಿಸಿದಂಥ ಒಂದು ನಿರ್ದಿಷ್ಟ ಲೇಖನವನ್ನು ಎಚ್ಚರ! ದಲ್ಲಿ ನೀವು ಎತ್ತಿತೋರಿಸಿದ್ದರೆ, ನೀವು ಹಿಂದಿರುವಾಗ ನಿಮ್ಮ ಸಂಭಾಷಣೆಯನ್ನು ಒಂದು ಮುಖ್ಯ ವಚನದ ಮತ್ತು ಬಹುಶಃ ಒಂದೆರಡು ಪ್ಯಾರಗ್ರಾಫ್ಗಳ ಸುತ್ತಲೂ ಕೇಂದ್ರೀಕರಿಸುತ್ತಾ, ಲೇಖನದಿಂದ ಹೆಚ್ಚಿನ ಅಂಶಗಳನ್ನು ವಿಕಾಸಿಸಿರಿ. ಮುಂದುವರಿದ ಆಸಕ್ತಿ ಇರುವುದಾದರೆ, ಎಚ್ಚರ! ಇಡೀ ಕುಟುಂಬವನ್ನು ಪ್ರಯೋಜನಗೊಳಿಸುತ್ತದೆ ಎಂಬುದನ್ನು ಸೂಚಿಸಿರಿ. ಪರಿಸರ, ಸ್ವ-ಅಭಿವೃದ್ಧಿ, ಇಂದಿನ ಸಮಸ್ಯೆಗಳೊಂದಿಗೆ ನಿಭಾಯಿಸುವುದು, ಮತ್ತು ಯುವ ಜನರಿಗೆ ಸಂಬಂಧಿಸುವ ಪ್ರಶ್ನೆಗಳಂಥ ಭಿನ್ನವಾದ ವಿಷಯಗಳೊಂದಿಗೆ ಪ್ರತಿ ಸಂಚಿಕೆಯು ನಿರ್ವಹಿಸುತ್ತದೆ. ಯಥಾರ್ಥವಾದ ಆಸಕ್ತಿ ತೋರಿಸಲ್ಪಟ್ಟಾಗ, ಎಚ್ಚರ!ವು ಚಂದಾದ ಮೂಲಕ ದೊರೆಯುತ್ತದೆ ಎಂದು ಮತ್ತು ಅವನು ಆರು ತಿಂಗಳುಗಳ ಅವಧಿಯಲ್ಲಿ 12 ಸಂಚಿಕೆಗಳನ್ನು (ಇಂಗ್ಲಿಷಿನಲ್ಲಿ) ಪಡೆಯಬಹುದೆಂದು ಮನೆಯವನಿಗೆ ಗೊತ್ತಾಗಲಿ.
3 ಎಚ್ಚರ! ಪತ್ರಿಕೆಯ ಪ್ರಚಲಿತ ಸಂಚಿಕೆಯಲ್ಲಿರುವ ಯಾವುದೇ ಲೇಖನಗಳಲ್ಲಿ ಮನೆಯವನಿಗೆ ಆಸಕ್ತಿ ಇರದಿದ್ದರೆ ಆಗೇನು? ಸಂಭಾಷಣೆಯನ್ನು ಕೊನೆಗೊಳಿಸುವ ಬದಲು, ರೀಸನಿಂಗ್ ಪುಸ್ತಕದ ಪುಟ 206 ರಲ್ಲಿರುವ ಮಾಹಿತಿಯನ್ನು ಉಪಯೋಗಿಸುವ ಮೂಲಕ ಯೆಹೋವನ ಸಾಕ್ಷಿಗಳ ಕೆಲಸದ ಕುರಿತು ಹೆಚ್ಚಿನದನ್ನು ಮನೆಯವನಿಗೆ ಕಲಿಸಲು ಈ ಅವಕಾಶದ ಲಾಭವನ್ನು ನೀವು ತೆಗೆದುಕೊಳ್ಳಬಹುದು.
4 ಎರಡನೆಯ ತಿಮೊಥೆಯ 3:1-5ನ್ನು ಉಪಯೋಗಿಸುತ್ತಾ ಮತ್ತು ಪತ್ರಿಕೆಯ 2 ನೆಯ ಪುಟದಲ್ಲಿರುವ ಮಾಹಿತಿಯನ್ನು ಎತ್ತಿತೋರಿಸುವ ಮೂಲಕ “ಕಾವಲಿನಬುರುಜು” ಪತ್ರಿಕೆಯ ಒಂದು ಸಂಚಿಕೆಯನ್ನು ನೀವು ಹಿಂದೆ ನೀಡಿರುವುದಾದರೆ, ಹಿಂದಿರುಗುವಾಗ ಒಂದು ಗೊತ್ತಾದ ವಿಷಯವನ್ನು ಈ ರೀತಿಯಲ್ಲಿ ನೀವು ಹೇಳಬಹುದು:
▪ “ನಮ್ಮ ಹಿಂದಿನ ಸಂಭಾಷಣೆಯಲ್ಲಿ, ಲೋಕದಲ್ಲಿ ನಮ್ಮ ಸುತ್ತಲೂ ಇಂದು ಏನು ಸಂಭವಿಸುತ್ತಿದೆಯೋ ಅದರ ಅರ್ಥವನ್ನು ನಾವು ಚರ್ಚಿಸಿದೆವು. ದೇವರಲ್ಲಿ ಮತ್ತು ಬೈಬಲಿನಲ್ಲಿ ಜೀವನಕ್ಕಾಗಿ ಸ್ಥಾಪಿಸಲಾದ ಅವನ ಮಟ್ಟಗಳಲ್ಲಿ ಅನೇಕ ಜನರು ಆಸಕ್ತಿಯನ್ನು ಕಳೆದುಕೊಂಡಂತೆ ಕಾಣುತ್ತದೆ. ಎರಡನೆಯ ತಿಮೊಥೆಯ 3:1-5 ರಲ್ಲಿರುವ ವಚನದಲ್ಲಿ ವರ್ಣಿಸಲಾದಂತೆ, ಇದು ಪರಸ್ಪರವಾಗಿ ಜನರ ಮನೋಭಾವವನ್ನು ಬಹಳವಾಗಿ ಪ್ರಭಾವಿಸಿದೆ. ಭವಿಷ್ಯದಲ್ಲಿ ಉತ್ತಮ ಪರಿಸ್ಥಿತಿಗಳನ್ನು ನಿರೀಕ್ಷಿಸಲು ಸ್ವಸ್ಥವಾದ ಕಾರಣವಿದೆ ಎಂದು ನೀವು ನೆನಸುತ್ತೀರೋ?” ಹೇಳಿಕೆಗಾಗಿ ಅನುಮತಿಸಿದ ಬಳಿಕ, 2 ಪೇತ್ರ 3:13ಕ್ಕೆ ಗಮನವನ್ನು ನಿರ್ದೇಶಿಸಬಹುದು. ಆಮೇಲೆ ರೀಸನಿಂಗ್ ಪುಸ್ತಕದ ಪುಟಗಳು 227-33ಕ್ಕೆ ತಿರುಗಿಸಿ, ದೇವರ ರಾಜ್ಯವು ಮಾನವಕುಲಕ್ಕೆ ಏನನ್ನು ಮಾಡಲಿರುವುದು ಎಂಬುದನ್ನು ಎತ್ತಿತೋರಿಸಿರಿ.
5 ಪುನಃ ಸಂದರ್ಶನದಲ್ಲಿ, ಅದೊಂದು ಬಹಳ ವೈಯಕ್ತಿಕ ವಿಷಯವೆಂದು ಎಣಿಸುತ್ತಾ, ಅವನ ಧರ್ಮವನ್ನು ಚರ್ಚಿಸಲು ಮನೆಯವನಿಗೆ ಮನಸ್ಸಿಲ್ಲದಿರುವುದನ್ನು ನೀವು ಗ್ರಹಿಸಬಹುದು. ಇದಕ್ಕೆ ಸಮವಾಗಿರುವ ಒಂದು ಗೊತ್ತಾದ ವಿಷಯವನ್ನು ನೀವು ಹೇಳಬಹುದು:
▪ “ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿರುವ ಪ್ರಯಾಣ ಮತ್ತು ಸಂಸರ್ಗದ ಮೂಲಕ ಚಿಕ್ಕದಾಗುತ್ತಿರುವ ಒಂದು ಲೋಕದಲ್ಲಿ ಇಷ್ಟೊಂದು ಧರ್ಮಗಳೊಂದಿಗೆ, ನಮಗೆ ಇಷ್ಟವಾಗಲಿ ಇಷ್ಟವಾಗದೆ ಇರಲಿ, ವಿವಿಧ ನಂಬಿಕೆಗಳ ಪ್ರಭಾವವು ಲೋಕವ್ಯಾಪಕವಾಗಿ ಬೀರಲ್ಪಟ್ಟಿದೆ. ಆದುದರಿಂದ, ಒಬ್ಬರು ಇನ್ನೊಬ್ಬರ ದೃಷ್ಟಿಕೋನಗಳನ್ನು ತಿಳಿದುಕೊಳ್ಳುವುದು ಭಿನ್ನವಾದ ನಂಬಿಕೆಗಳಿರುವ ಜನರ ನಡುವೆ ಹೆಚ್ಚಿನ ಅರ್ಥಭರಿತ ಸಂಸರ್ಗಕ್ಕೆ ನಡೆಸಬಹುದು. ಧಾರ್ಮಿಕ ನಂಬಿಕೆಗಳ ಮೇಲೆ ಆಧಾರಿತವಾದ ಕೆಲವೊಂದು ವೈರತ್ವವನ್ನು ಅದು ಹೋಗಲಾಡಿಸಬಹುದು. ನೀವೇನು ನೆನಸುತ್ತೀರಿ?” ಹೇಳಿಕೆಗಾಗಿ ಅನುಮತಿಸಿದ ಬಳಿಕ, ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಪುಸ್ತಕದ ಪರಿವಿಡಿಯ ಕಡೆಗೆ ಮನೆಯವನ ಗಮನವನ್ನು ನಿರ್ದೇಶಿಸಿರಿ.
6 ಸತ್ಯದಲ್ಲಿ ಆಸಕ್ತಿ ತೋರಿಸುವವರೆಲ್ಲರನ್ನು ನಾವು ಮತ್ತೆ ಭೇಟಿಯಾಗಲು ಎಲ್ಲಾ ಪ್ರಯತ್ನವನ್ನು ಮಾಡೋಣ ಮತ್ತು ನಿತ್ಯಜೀವಕ್ಕೆ ನಡೆಸುವ ದಾರಿಯ ಮೇಲೆ ಹೋಗುವಂತೆ ಅವರಿಗೆ ಸಹಾಯ ಮಾಡೋಣ.—ಯೋಹಾ. 4:23, 24.