ಕ್ಷೇತ್ರ ಸೇವೆಗಾಗಿ ವಿಶೇಷವಾದ ಒಂದು ತಿಂಗಳು
1 ದಶಂಬರ ತಿಂಗಳವು ನಿಮಗಾಗಿ ವಿಶೇಷ ಕ್ಷೇತ್ರ ಸೇವಾ ತಿಂಗಳಾಗಿರಬಲ್ಲದೊ? ನಿಮ್ಮ ಸಾಮಾನ್ಯ ದಿನಚರಿಯಲ್ಲಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡುವುದು ಆವಶ್ಯಕವಾಗಿರಬಹುದು, ಆದರೆ ಪ್ರತಿಫಲಗಳು ಅದನ್ನು ಸಾರ್ಥಕವನ್ನಾಗಿ ಮಾಡದೇ ಇರುವವೊ?
2 ಕೆಲವು ಎಳೆಯ ದೀಕ್ಷಾಸ್ನಾನ ಪಡೆದ ಪ್ರಚಾರಕರಿಗೆ ಶಾಲೆಯಿಂದ ಹೆಚ್ಚಿನ ದಿನಗಳ ರಜೆ ಇರುವುದು ಮತ್ತು ತಿಂಗಳಿಗಾಗಿ ಸಹಾಯಕ ಪಯನೀಯರರಂತೆ ತಮ್ಮನ್ನು ನಮೂದಿಸಿಕೊಳ್ಳಲು ಅವರು ಬಯಸಬಹುದು. ಅವರೊಂದಿಗೆ ಕ್ಷೇತ್ರದಲ್ಲಿ ಕೆಲವು ಹಿರಿಯರು, ಶುಶ್ರೂಷಾ ಸೇವಕರು, ಮತ್ತು ಇತರ ಪ್ರಚಾರಕರು ಕೆಲಸಮಾಡುವುದು ಅವರಿಗೆ ಎಷ್ಟು ಉತ್ತೇಜಕವಾಗಿರುವುದು! ವೈಯಕ್ತಿಕ ಸನ್ನಿವೇಶಗಳು ಈ ತಿಂಗಳಿನಲ್ಲಿ ನೀವು ಪಯನೀಯರ್ ಸೇವೆಯನ್ನು ಮಾಡುವಂತೆ ನಿಮ್ಮನ್ನು ಅನುಮತಿಸದಿದ್ದರೆ, ಪಯನೀಯರಿಂಗ್ ಮಾಡುತ್ತಿರುವವರೊಂದಿಗೆ ಸೇವೆಯಲ್ಲಿ ಕೇವಲ ಕೆಲವು ಹೆಚ್ಚಿನ ತಾಸುಗಳನ್ನು ವ್ಯಯಿಸಲು ನಿಮಗೆ ಸಾಧ್ಯವೊ? ಇದು ನಿಶ್ಚಯವಾಗಿ ಪರಸ್ಪರವಾಗಿ ಉತ್ತೇಜನಕಾರಿಯಾಗಿರುವುದು.
3 ಎಲ್ಲಾ ಪ್ರಚಾರಕರು ಹೆಚ್ಚಿದ ಪ್ರಯತ್ನವನ್ನು ಹಾಕುವುದಾದರೆ, ರಜಾ ಕಾಲದಲ್ಲಿ ಪ್ರತಿ ದಿನ ಗುಂಪು ಸಾಕ್ಷಿ ಕಾರ್ಯಕ್ಕಾಗಿ ಹಿರಿಯರು ಏರ್ಪಡಿಸಲು ಶಕ್ತರಾಗಬಹುದು. ಇದರಿಂದಾಗಿ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿರುವವರಿಗೆ ಯಾವಾಗಲೂ ತಮ್ಮೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡಲು ಯಾರಾದರೂ ಇರುವರು.
4 ನಿಮ್ಮ ಸಭೆಯಲ್ಲಿ ಕ್ಷೇತ್ರ ಸೇವೆಗಾಗಿ ದಶಂಬರ ತಿಂಗಳನ್ನು ಒಂದು ವಿಶೇಷವಾದ ತಿಂಗಳನ್ನಾಗಿ ಮಾಡಲು, ವೈಯಕ್ತಿಕವಾಗಿ ಹಾಗೂ ಕುಟುಂಬ ಗುಂಪುಗಳಂತೆ ಅಷ್ಟೇ ಅಲ್ಲದೆ ಸಭೆಯ ಮಟ್ಟದಲ್ಲಿಯೂ ಕೂಡ ಯೋಜಿಸುವ ಸಮಯವು ಇದಾಗಿದೆ.