ದೇವಪ್ರಭುತ್ವ ವಾರ್ತೆಗಳು
ಕ್ಯಾಮರೂನ್: 18,810 ಪ್ರಚಾರಕರ ಒಂದ ಹೊಸ ಉಚ್ಚಾಂಕವನ್ನು ಜೂನ್ ತಿಂಗಳಿನಲ್ಲಿ ಮುಟ್ಟಲಾಯಿತು, ಮತ್ತು ಆ ತಿಂಗಳಿನಲ್ಲಿ 84 ಜನರು ದೀಕ್ಷಾಸ್ನಾನವನ್ನು ಪಡೆದುಕೊಂಡರು.
ಕೋಟ್‌ಡೀವಾರ್: ಜೂನ್ ತಿಂಗಳಿನಲ್ಲಿ ವರದಿಯನ್ನು ಸಲ್ಲಿಸಿದ ಪ್ರಚಾರಕರ ಮೊತ್ತವು 4,330 ಆಗಿತ್ತು. ಈ ಸೇವಾ ವರ್ಷದಲ್ಲಿ ಇದು ಅವರ ಆರನೆಯ ಪ್ರಚಾರಕ ಉಚ್ಚಾಂಕವಾಗಿದೆ.
ಇಟಲಿ: ಕ್ಷೇತ್ರ ಸೇವೆಯಲ್ಲಿ 1,98,179 ಜನರು ಭಾಗವಹಿಸುವುದರೊಂದಿಗೆ ಜೂನ್ ತಿಂಗಳಿನಲ್ಲಿ ಪ್ರಚಾರಕರ ಸಂಖ್ಯೆಯಲ್ಲಿ ಇನ್ನೊಂದು ಉಚ್ಚಾಂಕವನ್ನು ವರದಿಸಲಾಯಿತು. ಆ ತಿಂಗಳಿನಲ್ಲಿ ಇಪ್ಪತ್ತೆರಡು ಹೊಸ ಸಭೆಗಳು ರೂಪಿಸಲ್ಪಟ್ಟವು.
ಸಾವ್ ಟೋಮೆ ಮತ್ತು ಪ್ರಿಂಸಿಪಿ: ಜೂನ್ 30 ರಂದು ಹೆಚ್ಚಿನ ಚಟುವಟಿಕೆಗಾಗಿ ದ್ವಾರವನ್ನು ತೆರೆಯುತ್ತಾ, ಅಸೋಸಿಏಷನ್‌ವೊಂದನ್ನು ನ್ಯಾಯಬದ್ಧವಾಗಿ ಸ್ಥಾಪಿಸಲಾಯಿತು. ಆ ತಿಂಗಳಲ್ಲಿ ವರದಿಸಿದ 100 ಪ್ರಚಾರಕರು, ಕಳೆದ ವರ್ಷದ ಸರಾಸರಿಗೆ ಹೋಲಿಸುವಾಗ 43 ಪ್ರತಿಶತ ಹೆಚ್ಚಳವನ್ನು ಪ್ರತಿನಿಧಿಸುತ್ತಾರೆ.
ಯುರಗ್ವೈ: ಜೂನ್ ತಿಂಗಳಿನಲ್ಲಿ 9,093 ಪ್ರಚಾರಕರ ಒಂದು ಹೊಸ ಉಚ್ಚಾಂಕವನ್ನು ಮುಟ್ಟಲಾಯಿತು.