ಇಂದಿನ ಲೋಕದಲ್ಲಿ ಬೈಬಲಿನ ಮಹತ್ವ
1 ಅನೇಕರು ಇಂದು ಬೈಬಲನ್ನು ಸಮಯಬಾಹ್ಯ ಮತ್ತು ಕಾಲ್ಪನಿಕವೆಂದು ವೀಕ್ಷಿಸುತ್ತಾರೆ. ಇತಿಹಾಸದಲ್ಲೇ ಅತಿ ವ್ಯಾಪಕವಾಗಿ ಹಂಚಲಾದ ಮತ್ತು ಅತಿ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡಲಾದ ಪುಸ್ತಕವು ಅದಾಗಿದ್ದರೂ, ಸಂಬಂಧಸೂಚಕವಾಗಿ ಕೊಂಚ ಜನರು ಅದನ್ನು ಓದುತ್ತಾರೆ, ಮತ್ತು ಅದಕ್ಕಿಂತ ಕೊಂಚ ಜನರು ಅದರ ಮಾರ್ಗದರ್ಶನವನ್ನು ಅನುಸರಿಸುತ್ತಾರೆ.
2 ಅದಕ್ಕೆ ಪ್ರತಿಯಾಗಿ, ನಾವು ಬೈಬಲನ್ನು ದೇವರ ವಾಕ್ಯದಂತೆ ಗೌರವಿಸುತ್ತೇವೆ. ಅದು ಐತಿಹಾಸಿಕವಾಗಿ ನಿಜವಾಗಿದೆ ಎಂದು ನಿಜತ್ವಗಳು ತೋರಿಸುತ್ತವೆ. ಅಲ್ಲದೆ, ಅದರ ಗಮನಾರ್ಹವಾದ ಸಾಮರಸ್ಯ, ಅದರ ಪ್ರವಾದನೆಗಳು, ಅದರ ವಿವೇಕವು, ಜನರ ಜೀವಿತಗಳಲ್ಲಿ ಪ್ರಯೋಜನಗಳನ್ನು ತರುವ ಅದರ ಪ್ರಬಲವಾದ ಪ್ರಚೋದನಾ ಶಕ್ತಿಯು, ಇವೆಲ್ಲವು ಬೈಬಲ್ “ದೈವ ಪ್ರೇರಿತ” ವಾದದ್ದು ಎಂಬುದನ್ನು ತೋರಿಸುತ್ತವೆ. (2 ತಿಮೊ. 3:16) ಇತರರು ಅದರ ನಿಜ ಮೌಲ್ಯವನ್ನು ಪರೀಕ್ಷಿಸುವಂತೆ ನಾವು ಉತ್ತೇಜನವನ್ನು ನೀಡಲು, ನಮ್ಮ ವೈಯಕ್ತಿಕ ಅನುಭವ ಮತ್ತು ಅದ್ಭುತಕರವಾದ ಈ ಕೊಡುಗೆಗಾಗಿರುವ ನಮ್ಮ ಗಣ್ಯತೆಯು ನಮ್ಮನ್ನು ಪ್ರೇರೇಪಿಸಬೇಕು.
3 ಒಂದು ಸಮೀಪಿಸುವ ಮಾರ್ಗವು ಹೀಗಿರಬಲ್ಲದು:
▪ “ಮಾನವವರ್ಗಕ್ಕೆ ಎದುರಾಗಿರುವ ಗಂಭೀರ ಸಮಸ್ಯೆಗಳ ನೋಟದಲ್ಲಿ, ದೇವರಲ್ಲಿ ನಂಬಿಕೆಯನ್ನು ಇಡುವುದು ಕಷ್ಟಕರವೆಂದು ಅನೇಕ ಜನರು ಕಾಣುತ್ತಾರೆ, ಯಾ ನಾವು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಇರುವ ದೇವರ ಸಾಮರ್ಥ್ಯವನ್ನು ಅವರು ಪ್ರಶ್ನಿಸುತ್ತಾರೆ. ಅದರ ಕುರಿತು ನಿಮಗೆ ಹೇಗೆ ಅನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಎಂಬ ಈ ಕಿರುಹೊತ್ತಗೆಯ ಶೀರ್ಷಿಕೆಯನ್ನು ಗಮನಿಸಿರಿ.” ಮುಖಪುಟದ ಮೇಲಿರುವ ದೃಷ್ಟಾಂತದ ಕಡೆಗೆ ಗಮನವನ್ನು ಸೆಳೆಯಿರಿ, ಆಮೇಲೆ ಪುಟ 2 ರಲ್ಲಿರುವ ಒಂದನೆಯ ಮತ್ತು ಎರಡನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ಮನೆಯವನು ಅಭಿರುಚಿಯನ್ನು ತೋರಿಸುವುದಾದರೆ, ಎರಡನೆಯ ಪ್ಯಾರಗ್ರಾಫ್ನಲ್ಲಿ ನಮೂದಿಸಲಾದ ವಚನಗಳನ್ನು ನೀವು ಓದಿ ಚರ್ಚಿಸಬಹುದು. ಆಸಕ್ತಿಯನ್ನು ಪ್ರಚೋದಿಸುವ ಸಲುವಾಗಿ, ಉಪಶೀರ್ಷಿಕೆಗಳಲ್ಲಿ ಒಂದನ್ನು ಬಹುಶಃ ಒಂದು ಪ್ರಶ್ನೆಯ ರೂಪದಲ್ಲಿ ಉಪಯೋಗಿಸುತ್ತಾ, ಕಿರುಹೊತ್ತಗೆಯನ್ನು ಇನ್ನು ಹೆಚ್ಚಾಗಿ ಪರಿಗಣಿಸಲು ಹಿಂದಿರುಗುವುದಕ್ಕೆ ಏರ್ಪಾಡುಗಳನ್ನು ಮಾಡಿರಿ.
4 ಇನ್ನೊಂದು ಮಾರ್ಗವು ಇದಕ್ಕೆ ಸಮಾನವಾಗಿರಬಹುದು:
▪ “ಜೀವನದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಮಾನವವರ್ಗಕ್ಕೆ ನಿರ್ದೇಶನದ ಅಗತ್ಯವಿದೆ ಎಂದು ನೀವು ಒಪ್ಪುವುದಿಲ್ಲವೊ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ಗತಕಾಲದಲ್ಲಿ, ಮಾರ್ಗದರ್ಶನಕ್ಕಾಗಿ ಜನರು ಅನೇಕ ಬಾರಿ ಬೈಬಲಿನ ಕಡೆಗೆ ಎದುರುನೋಡುತ್ತಿದ್ದರು, ಆದರೆ ಸಮಯಗಳು ಬದಲಾಗಿವೆ. ಬೈಬಲ್ ಇಂದು ವ್ಯಾವಹಾರಿಕ ಮೌಲ್ಯವುಳ್ಳದ್ದೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ಎರಡನೆಯ ತಿಮೊಥೆಯ 3:16 ರಲ್ಲಿ ಏನನ್ನು ಹೇಳಲಾಗಿದೆ ಎಂಬುದನ್ನು ಗಮನಿಸಿರಿ. [ಓದಿರಿ.] ದೇವರ ಲಿಖಿತ ವಾಕ್ಯವು ವಿವೇಕವುಳ್ಳ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡುತ್ತದೆ ಮಾತ್ರವಲ್ಲ ಭವಿಷ್ಯತ್ತಿಗಾಗಿ ವಿಶ್ವಾಸಾರ್ಹವಾದ ಒಂದು ನಿರೀಕ್ಷೆಯನ್ನು ಕೂಡ ಒದಗಿಸುತ್ತದೆ.” ಯೋಹಾನ 17:3ನ್ನು ಓದಿರಿ. ಮನೆಯವನು ಸಮ್ಮತಿ ಸೂಚಕವಾಗಿ ಪ್ರತಿಕ್ರಿಯಿಸುವುದಾದರೆ, ಬೈಬಲಿನ ವ್ಯಾವಹಾರಿಕ ಮೌಲ್ಯವನ್ನು ದೃಷ್ಟಾಂತಿಸಲು ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಪುಸ್ತಕದಿಂದ ನೀವು ಈ ಹಿಂದೆ ಆರಿಸಿದಂಥ ಒಂದು ಯಾ ಎರಡು ನಿರ್ದಿಷ್ಟ ಅಂಶಗಳನ್ನು ಸೂಚಿಸಿರಿ.
5 ರೀಸನಿಂಗ್ ಪುಸ್ತಕದ ಪುಟ 10 ರಲ್ಲಿ “ಬೈಬಲ್⁄ದೇವರು” ಎಂಬ ತಲೆಬರಹದ ಕೆಳಗೆ ನಿರೂಪಿಸಲಾದ ಕೆಲವೊಂದು ಪೀಠಿಕೆಗಳನ್ನು ಉಪಯೋಗಿಸುವುದು ಸಹಾಯಕಾರಿ ಎಂದು ನೀವು ಕಾಣಬಹುದು. ಮನೆಯವರ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಯಾ ಅವರ ಆಕ್ಷೇಪಣೆಗಳನ್ನು ಜಯಿಸುವುದರಲ್ಲಿ ಪುಟಗಳು 58-68 ರಲ್ಲಿ ಸಾದರಪಡಿಸಲಾದ ಹೆಚ್ಚಿನ ಮಾಹಿತಿಯು ಸಹಾಯಕಾರಿಯಾಗಿರಬಹುದು.
6 ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಅನ್ನು ನೀಡುವುದು: ಪ್ರಥಮ ಭೇಟಿಯಲ್ಲಿ ಯಾ ಒಂದು ಪುನಃ ಸಂದರ್ಶನದಲ್ಲಿ ಸಾಕಷ್ಟು ಆಸಕ್ತಿಯನ್ನು ಕೆರಳಿಸಿದ್ದರೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಅನ್ನು ಪರಿಚಯಿಸಬಹುದು. ಮನೆಯವನಲ್ಲಿ ಬೈಬಲಿನ ಒಂದು ಪ್ರತಿ ಇದೆಯೋ ಮತ್ತು ಅದನ್ನು ಓದಲು ಅವನು ಸುಲಭವೆಂದು ಕಾಣುತ್ತಾನೊ ಎಂದು ನೀವು ಕೇಳಬಹುದು. ಉತ್ತರದ ಮೇಲೆ ಅವಲಂಬಿಸುತ್ತಾ, ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ನ ಕೆಲವೊಂದು ಸಹಾಯಕಾರಿ ವೈಶಿಷ್ಟ್ಯಗಳ ಕಡೆಗೆ ಗಮನವನ್ನು ಸೆಳೆಯಿರಿ. ರೀಸನಿಂಗ್ ಪುಸ್ತಕದ ಪುಟಗಳು 276-80 ರಿಂದ ತೆಗೆಯಲಾದ ಒಂದು ಯಾ ಎರಡು ಅಂಶಗಳನ್ನು ನೀವು ಎತ್ತಿತೋರಿಸಬಲ್ಲಿರಿ.
7 ಬೈಬಲನ್ನು ಓದುವಂತೆ ಜನರಿಗೆ ಉತ್ತೇಜನವನ್ನು ನೀಡಲಿರುವ ಅವಕಾಶಗಳಿಗೆ ಎಚ್ಚರವಾಗಿರ್ರಿ. ಆಸಕ್ತ ವ್ಯಕ್ತಿಗಳು ದೇವರ ಲಿಖಿತ ವಾಕ್ಯಕ್ಕಾಗಿ ಗೌರವ ಮತ್ತು ಪ್ರೀತಿಯನ್ನು ಬೆಳೆಸುವಂತೆ ಸಹಾಯ ಮಾಡಿರಿ. ಅದರ ತತ್ವಗಳನ್ನು ತಮ್ಮ ವೈಯಕ್ತಿಕ ಜೀವಿತಗಳಲ್ಲಿ ಅನ್ವಯಿಸುವ ಮತ್ತು ಸತ್ಯದ ಜ್ಞಾನಕ್ಕೆ ಬರುವ ಮೂಲಕ, ಅವರು ಅನೇಕ ಪ್ರಯೋಜನಗಳನ್ನು ಈಗ ಮತ್ತು ಭವಿಷ್ಯತ್ತಿನಲ್ಲಿ ಪಡೆಯುವರು.—ಕೀರ್ತ. 119:105.