ನಿಜವಾದ ಮಾರ್ಗದರ್ಶನವನ್ನು ಒದಗಿಸುವ ಗ್ರಂಥ
1 ಕಳೆದ ಶತಮಾನದಲ್ಲಿ ಲೋಕವು ನಾಟಕೀಯವಾಗಿ ಪರಿವರ್ತನೆ ಹೊಂದಿದೆ. ಸಂಸರ್ಗ, ಔಷಧಿ, ಮತ್ತು ಸಂಚಾರದ ಕ್ಷೇತ್ರಗಳಲ್ಲಿ ಅಭಿವೃದ್ಧಿಗಳು ಆಗಿದ್ದರೂ, ಕುಟುಂಬ ಜೀವನದ ಗುಣಮಟ್ಟವು ಏಕಪ್ರಕಾರವಾಗಿ ಪತನ ಹೊಂದಿದೆ. ಸಂತತವಾಗಿ ಬದಲಾಗುತ್ತಿರುವ ಮನುಷ್ಯರ ತತ್ವಜ್ಞಾನದ ಮೂಲಕ ತಾವು ಮಾರ್ಗದರ್ಶಿಸಲ್ಪಡುವಂತೆ ಲಕ್ಷಾಂತರ ಜನರು ಅನುಮತಿಸಿದ್ದಾರೆ.
2 ತೀವ್ರವಾಗಿ ಬದಲಾಗುತ್ತಿರುವ ಈ ಲೋಕ ದೃಶ್ಯದಲ್ಲಿ, ಆತನ ವಾಕ್ಯಕ್ಕೆ ಅಂಟಿಕೊಳ್ಳುವ ಮೂಲಕ ಯೆಹೋವನ ಜನರು ಮಹತ್ತರವಾಗಿ ಪ್ರಯೋಜನ ಹೊಂದಿದ್ದಾರೆ. ಸಾವಿರಾರು ವರ್ಷಗಳ ವರೆಗೆ, ಬೈಬಲ್ ಬದಲಾಗದೆ ಉಳಿದಿದೆ, ಮತ್ತು ನಾವು ಇಂದು ಎದುರಿಸುವ ಸಮಸ್ಯೆಗಳನ್ನು ನಿಭಾಯಿಸಲು ಅದರ ಬುದ್ಧಿವಾದವು ಇನ್ನೂ ಅತಿ ವ್ಯಾವಹಾರಿಕವಾಗಿದೆ. ನಮ್ಮ ಆಧುನಿಕ ದಿನಕ್ಕಾಗಿ ನಿಜವಾದ ಮಾರ್ಗದರ್ಶನವನ್ನು ಬೈಬಲ್ ಒದಗಿಸುತ್ತದೆ ಎಂಬುದನ್ನು ಆಸಕ್ತ ಜನರು ಗಣ್ಯಮಾಡುವಂತೆ ನಾವು ಹೇಗೆ ಸಹಾಯ ಮಾಡಬಲ್ಲೆವು?
3 “ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ” ಎಂಬ ಕಿರುಹೊತ್ತಗೆಯನ್ನು ಪ್ರಥಮ ಭೇಟಿಯಲ್ಲಿ ನೀಡಿದ್ದರೆ, ನೀವು ಹಿಂದಿರುಗಿ ಹೀಗನ್ನಬಹುದು:
▪ “ಅದು ಸ್ವತಃ ದೇವರಿಂದ ಬಂದ ಒಂದು ಸಂದೇಶವೆಂದು ಮತ್ತು ಅದು ಏನನ್ನು ಹೇಳುತ್ತದೊ ಅದನ್ನು ನಾವು ನಂಬಿ ಅದರಂತೆ ಜೀವಿಸುವುದಾದರೆ ಆತನು ನಮಗೆ ನಿತ್ಯ ಜೀವನವನ್ನು ನೀಡುತ್ತಾನೆಂದು ಬೈಬಲ್ ಸ್ಪಷ್ಟವಾಗಿಗಿ ಹೇಳುವುದರಿಂದ, ಈ ಹೇಳಿಕೆಗಳ ಕುರಿತು ಹೆಚ್ಚನ್ನು ಕಂಡುಹಿಡಿಯುವುದು ಪ್ರಯೋಜನಕಾರಿಯಾಗಿರುವುದೆಂದು ನಿಮಗೆ ಅನಿಸುತ್ತದೊ? [ಹೇಳಿಕೆಗಾಗಿ ಅನುಮತಿ ನೀಡಿರಿ.] ಪ್ರಚಲಿತ ಲೋಕದ ವಿಷಯ ವ್ಯವಸ್ಥೆಯ ಕುರಿತು ಬೈಬಲ್ ಏನನ್ನು ಮುಂತಿಳಿಸುತ್ತದೆ ಎಂಬುದನ್ನು ಗಮನಿಸಿರಿ. [ನೇರವಾಗಿ ಕಿರುಹೊತ್ತಗೆಯ ಪುಟ 5 ರಿಂದ 2 ತಿಮೊಥೆಯ 3:1-5ನ್ನು ಓದಿರಿ.] ಈ ವಿವರಣೆಯು ಇಂದಿನ ಲೋಕವನ್ನು ಹೋಲುತ್ತದೆ ಎಂದು ನೀವು ನೆನಸುತ್ತೀರೊ? [ಹೇಳಿಕೆಗಾಗಿ ಅನುಮತಿ ನೀಡಿರಿ.] ಭವಿಷ್ಯತ್ತಿನಲ್ಲಿ ಉತ್ತಮ ಪರಿಸ್ಥಿತಿಗಳನ್ನು ನಿರೀಕ್ಷಿಸುವ ಒಳ್ಳೆಯ ಕಾರಣವಿದೆಯೋ?” ಮಾನವವರ್ಗಕ್ಕಾಗಿ ಬೈಬಲ್ ನೀಡುವ ಅದ್ಭುತಕರವಾದ ನಿರೀಕ್ಷೆಯನ್ನು ಎತ್ತಿತೋರಿಸುತ್ತಾ, ಕಿರುಹೊತ್ತಗೆಯ ಕೊನೆಯ ಎರಡು ಪ್ಯಾರಗ್ರಾಫ್ಗಳನ್ನು ಚರ್ಚಿಸುವ ಮೂಲಕ ಯಾ ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಪುಸ್ತಕದ ಪುಟ 161ನ್ನು ಉಪಯೋಗಿಸುವ ಮೂಲಕ, ಇನ್ನೊಂದು ಭೇಟಿಗಾಗಿ ಆಧಾರವನ್ನು ನೀವು ಹಾಕಬಲ್ಲಿರಿ.
4 ಮನೆಯವನು ಬೈಬಲಿನ ವ್ಯಾವಹಾರಿಕ ಯೋಗ್ಯತೆಯಲ್ಲಿ ಆಸಕ್ತನಾಗಿದ್ದು ಮತ್ತು “ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್?” ಎಂಬ ಪುಸ್ತಕದ 12 ನೆಯ ಅಧ್ಯಾಯಲ್ಲಿರುವ ನಿರ್ದಿಷ್ಟ ತತ್ವಗಳನ್ನು ನೀವು ಸೂಚಿಸಿದ್ದಲ್ಲಿ, ನೀವು ಹೀಗೆ ಹೇಳಬಹುದು:
▪ “ಇಂದು ನಮಗೆ ವ್ಯಾವಹಾರಿಕವಾಗಿರುವ ವಿಷಯಗಳಲ್ಲಿ ನಾವು ಆಸಕ್ತರಾಗಿದ್ದೇವೆ, ಅಲ್ಲವೆ? ಯುದ್ಧಕ್ಕೆ ಅಂತ್ಯವನ್ನು ತರುವುದು ವ್ಯಾವಹಾರಿಕವಾಗಿರುವುದೆಂದು ನೀವು ಒಪ್ಪುವಿರೊ? [ಹೇಳಿಕೆಗಾಗಿ ಅನುಮತಿ ನೀಡಿರಿ.] ಬೇರೆ ರಾಷ್ಟ್ರಗಳ ಜನರೊಂದಿಗೆ ಶಾಂತಿಯಲ್ಲಿ ಒಟ್ಟಾಗಿ ಜೀವಿಸಲು ಜನರು ಕಲಿತರೆ, ಇದೊಂದು ಒಳ್ಳೆಯ ಆರಂಭವಾಗಿರುವುದು, ಅಲ್ಲವೆ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ಬೈಬಲ್ ನಿಖರವಾಗಿ ಅದನ್ನೇ ಮುಂತಿಳಿಸಿದೆ. [ಯೆಶಾಯ 2:2, 3 ಓದಿ.] ಇದು ಹೇಗೆ ಮತ್ತು ಯಾವಾಗ ಸಂಭವಿಸುವುದೆಂದು ನೀವು ಎಂದಾದರೂ ಯೋಚಿಸಿದ್ದೀರೊ?” ಮನೆಯವನಿಗೆ ಮುಂದೆ ಅನುಕೂಲವಾದ ಒಂದು ಸಮಯದಲ್ಲಿ ಈ ಪ್ರಶ್ನೆಯನ್ನು ನೀವು ಚರ್ಚಿಸಲು ಇಷ್ಟಪಡುತೀರ್ತೆಂದು ವಿವರಿಸಿರಿ.
5 “ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್” ಅನ್ನು ನೀವು ಬಿಟ್ಟದ್ದಲ್ಲಿ, ನೀವು ಹಿಂದಿರುಗಿ ಹೀಗೆ ಹೇಳಬಹುದು:
▪ “ನಾನು ನಿಮ್ಮೊಂದಿಗೆ ಬಿಟ್ಟು ಹೋದ ಬೈಬಲನ್ನು ಓದುವ ಸಮಯದಲ್ಲಿ, ಎಲ್ಲೆಡೆಯೂ ಅದು ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸುತ್ತದೆ ಎಂದು ನೀವು ಗಮನಿಸಿರಬಹುದು. ಬೇರೆ ಅನೇಕ ಬೈಬಲ್ ಭಾಷಾಂತರಗಳ ಮೇಲೆ ಇದೊಂದು ಪ್ರಾಮುಖ್ಯವಾದ ಅಭಿವೃದ್ಧಿಯಾಗಿದೆ. ಕೆಲವು ಜನರು ಯೆಹೋವ ಎಂಬ ಹೆಸರನ್ನು ಉಪಯೋಗಿಸಲು ಹಿಂಜರಿಯಬಹುದಾದರೂ, ಆತನು ತನ್ನ ಹೆಸರನ್ನು ಅನೇಕ ವರ್ಷಗಳ ಹಿಂದೆಯೇ ಪ್ರಕಟಿಸಿದನು ಎಂಬುದನ್ನು ಮತ್ತು ಆತನನ್ನು ನಿಜವಾದ ಹಾಗೂ ಜೀವಸ್ವರೂಪನಾದ ದೇವರೆಂದು ಗುರುತಿಸಲು ಅದನ್ನು ಉಪಯೋಗಿಸಬೇಕೆಂದು ಆತನ ಸೇವಕರನ್ನು ಉತ್ತೇಜಿಸಿದನೆಂಬುದನ್ನು ನಾವು ಮನಸ್ಸಿನಲ್ಲಿ ಇಡಬೇಕು. ಕೀರ್ತನೆ 83:18 ರಲ್ಲಿ ಕೀರ್ತನೆಗಾರನು ಏನನ್ನು ಬರೆದನು ಎಂಬುದನ್ನು ಗಮನಿಸಿರಿ.” ವಚನವನ್ನು ಓದಿ, ಮನೆಯವನು ಹೇಳಿಕೆಯನ್ನು ನೀಡುವಂತೆ ಅನುಮತಿಸಿರಿ. ವ್ಯಕ್ತಪಡಿಸಲಾದ ಆಸಕ್ತಿಗನುಸಾರ, ರೀಸನಿಂಗ್ ಪುಸ್ತಕದ ಪುಟ 191 ರಲ್ಲಿ ಪ್ರಾರಂಭವಾಗುವ “ಯೆಹೋವ,” ಎಂಬ ತಲೆಬರಹದ ಕೆಳಗೆ ಸಿಗುವ ಹೆಚ್ಚಿನ ಮಾಹಿತಿಯನ್ನು ನೀವು ಉಪಯೋಗಿಸಬಹುದು.
6 ಮನುಷ್ಯನಿಗೆ ಬೇಕಾಗಿರುವ ಮಾರ್ಗದರ್ಶನವನ್ನು ಬೈಬಲ್ ಮಾತ್ರ ಒದಗಿಸುತ್ತದೆ. (ಯೆರೆ. 10:23) ದೇವರ ವಾಕ್ಯವನ್ನು ಅಭ್ಯಾಸಿಸುವುದು, ಆತನ ಉದ್ದೇಶಗಳ ಕುರಿತು ಕಲಿಯುವ ಮತ್ತು ಆತನ ಅನುಗ್ರಹವನ್ನು ಪಡೆಯುವ ಏಕಮಾತ್ರ ಮಾರ್ಗವಾಗಿದೆ. ಆದುದರಿಂದ, ಅದರ ವಿವೇಕವುಳ್ಳ ಬುದ್ಧಿವಾದ ಮತ್ತು ವ್ಯಾವಹಾರಿಕ ಸಲಹೆಯಿಂದ ಪ್ರಯೋಜನ ಪಡೆಯಲು ನಾವು ಇತರರನ್ನು ಶ್ರದ್ಧಾಪೂರ್ವಕವಾಗಿ ಆಮಂತ್ರಿಸೋಣ.