ಸಭಾ ಪುಸ್ತಕ ಅಭ್ಯಾಸವು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ
1 ಯೆಹೋವನ ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಭಾ ಪುಸ್ತಕ ಅಭ್ಯಾಸವು ಒಂದು ಅತ್ಯಾವಶ್ಯಕವಾದ ಪಾತ್ರವನ್ನು ವಹಿಸುತ್ತದೆ. ಎಲ್ಲರೂ ಹಾಜರಾಗಲು ಅನುಕೂಲವಾಗುವಂತೆ ಮಾಡುತ್ತಾ, ಪುಸ್ತಕ ಅಭ್ಯಾಸದ ಗುಂಪುಗಳು ಟೆರಿಟೊರಿಯಲ್ಲೆಲ್ಲಾ ಚದರಿರುತ್ತವೆ. ತಮ್ಮ ಸ್ವಂತ ನೆರೆಹೊರೆಯಲ್ಲಿ ಒಂದು ಅಭ್ಯಾಸವು ಇರುವುದರಿಂದ, ಆಸಕ್ತಿಯುಳ್ಳವರು ಅದಕ್ಕೆ ಹಾಜರಾಗಲು ಕೊಡಲ್ಪಡುವ ಆಮಂತ್ರಣವನ್ನು ಹೆಚ್ಚು ಸುಲಭವಾಗಿ ಸ್ವೀಕರಿಸಬಹುದು.
2 ಪ್ರತಿಯೊಂದು ಗುಂಪನ್ನು ಗಾತ್ರದಲ್ಲಿ ಚಿಕ್ಕದಾಗಿ ಇಡಲಿಕ್ಕಾಗಿ ಪ್ರಯತ್ನವನ್ನು ಮಾಡಲಾಗುತ್ತದೆ. ಇದು ಪ್ರತಿಯೊಬ್ಬರಿಗೆ ವೈಯಕ್ತಿಕ ನೆರವನ್ನು ನೀಡಲು ನಿರ್ವಾಹಕನಿಗೆ ಅವಕಾಶಕೊಡುತ್ತದೆ. ಎಲ್ಲರೂ ಒಂದೇ ರೀತಿಯ ವೇಗದಲ್ಲಿ ಕಲಿಯುವುದಿಲ್ಲ. ಪಾಠವನ್ನು ಮುಂದಾಗಿಯೇ ಅಭ್ಯಸಿಸಿದ ಬಳಿಕವೂ ಒಂದು ವಿಷಯವನ್ನು ತಿಳಿದುಕೊಳ್ಳುವುದರಲ್ಲಿ ಯಾರಿಗಾದರೂ ತೊಂದರೆಯಿರುವಲ್ಲಿ, ಅಭ್ಯಾಸದ ಬಳಿಕ ನಿರ್ವಾಹಕನು ಅದನ್ನು ಇನ್ನೂ ಹೆಚ್ಚಾಗಿ ಚರ್ಚಿಸಬಹುದು. ಅದಲ್ಲದೆ, ಒಂದು ಸಣ್ಣ ಗುಂಪಿನೊಂದಿಗೆ, ಹೇಳಿಕೆಗಳನ್ನು ಮಾಡಲಿಕ್ಕಾಗಿ ಮತ್ತು ಶಾಸ್ತ್ರವಚನಗಳನ್ನು ಓದಲಿಕ್ಕಾಗಿ ಹೆಚ್ಚು ಅವಕಾಶಗಳಿರುತ್ತವೆ. ಕ್ರಮವಾಗಿ ಹೇಳಿಕೆ ನೀಡುವುದರ ಮೂಲಕ ನೀವು ಚರ್ಚೆಗೆ ನೆರವಾಗುತ್ತೀರೊ? ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರಿಸಲು ನೀವು ಪ್ರಯತ್ನಿಸುತ್ತೀರೊ? ಭಾಗವಹಿಸಲಿಕ್ಕಾಗಿ ನಿಮ್ಮ ಸಿದ್ಧ ಸ್ಥಿತಿಯು ನಿಮಗೆ ಮತ್ತು ಇತರರಿಗೆ ಪ್ರಯೋಜನಕರವಾಗಿರಬಲ್ಲದು. ನೀವು ತಯಾರಿಸುತ್ತಿರುವಂತೆ, ಪಾಠದಲ್ಲಿರುವ ನಿರ್ದಿಷ್ಟ ಅಂಶಗಳನ್ನು ನೀವು ವೈಯಕ್ತಿಕವಾಗಿ ಹೇಗೆ ಅನ್ವಯಿಸಬಲ್ಲಿರಿ ಎಂಬುದರ ಕುರಿತು ವಿವೇಚಿಸಲು ನಿಮ್ಮ ಗ್ರಹಿಸುವ ಶಕ್ತಿಗಳನ್ನು ಉಪಯೋಗಿಸಿರಿ.—ಇಬ್ರಿ. 5:14.
3 ಪುಸ್ತಕ ಅಭ್ಯಾಸ ನಿರ್ವಾಹಕನಿಂದ ಉಪಯೋಗಿಸಲ್ಪಡುವ ಬೋಧನಾ ವಿಧಾನಗಳನ್ನು ಗಮನಿಸುವ ಮೂಲಕ, ಹೆಚ್ಚು ಆಸಕ್ತಿಭರಿತವಾದ ಮತ್ತು ಬೋಧನಾತ್ಮಕ ವಿಧಾನದಲ್ಲಿ ಮನೆ ಬೈಬಲ್ ಅಭ್ಯಾಸಗಳನ್ನು ಹೇಗೆ ನಡೆಸುವುದೆಂಬುದನ್ನು ನೀವು ಕಲಿಯಬಲ್ಲಿರಿ. ಅರ್ಹನಾದ ಸಹೋದರನೊಬ್ಬನು ಪ್ಯಾರಗ್ರಾಫ್ಗಳನ್ನು ಓದಿದ ಬಳಿಕ, ಪ್ರಶ್ನೆಗಳು ಚರ್ಚಿಸಲ್ಪಡುತ್ತವೆ. ಎಲ್ಲರೂ ಸಾಕಷ್ಟು ದೊಡ್ಡ ಧ್ವನಿಯಿಂದ ಮಾತಾಡುವಂತೆ ಅಭ್ಯಾಸ ನಿರ್ವಾಹಕನು ಉತ್ತೇಜಿಸುತ್ತಾನೆ. ಸಮಯವು ಅನುಮತಿಸಿದಂತೆ, ಅವು ನಮಗೆ ಹೇಗೆ ಅನ್ವಯವಾಗುತ್ತವೆಂಬುದನ್ನು ನಾವು ತಿಳಿಯುವಂತೆ ಸಹಾಯ ಮಾಡಲಿಕ್ಕಾಗಿ ಉಲ್ಲೇಖಿಸಲ್ಪಟ್ಟ ಶಾಸ್ತ್ರವಚನಗಳ ಮೇಲೆ ಹೇಳಿಕೆಗಳನ್ನು ಸೆಳೆಯಲು ಅವನು ಪ್ರಯತ್ನಿಸುತ್ತಾನೆ. (ಹೋಲಿಸಿ ನೆಹೆಮೀಯ 8:8.) ಕೆಲವೊಮ್ಮೆ ಒಂದು ಸಂಕ್ಷಿಪ್ತವಾದ ಸ್ಫುಟಗೊಳಿಸುವ ಸ್ವಂತ ಹೇಳಿಕೆಯನ್ನು ಅವನು ಕೂಡಿಸಬಹುದು ಅಥವಾ ಮುಖ್ಯ ಅಂಶವೊಂದನ್ನು ಹೊರಪಡಿಸಲಿಕ್ಕಾಗಿ ಸಹಾಯಕ ಪ್ರಶ್ನೆಗಳನ್ನು ಉಪಯೋಗಿಸಬಹುದು. ಸಮಾಚಾರವು ನಮ್ಮ ಜೀವಿತಗಳಿಗೆ ಹೇಗೆ ಸಂಬಂಧಿಸುತ್ತದೆಂಬುದನ್ನು ಕಾಣಲಿಕ್ಕಾಗಿ ಉದಾಹರಣೆಯೊಂದು ಅಥವಾ ಒಂದು ದೃಷ್ಟಾಂತವು ನಮಗೆ ಸಹಾಯ ಮಾಡಬಹುದು.
4 ಕೆಲವು ಸಭಾ ಪುಸ್ತಕ ಅಭ್ಯಾಸಗಳಲ್ಲಿ ಕೂಟದ ಹಾಜರಿಯು ಖಚಿತವಾಗಿ ಕಡಿಮೆಯಾಗಿದೆ. ನೀವು ಕ್ರಮವಾಗಿ ಹಾಜರಾಗುತ್ತೀರೊ? ಹಾಜರಾಗುತ್ತಿಲ್ಲವಾದರೆ, ಪ್ರಾಮುಖ್ಯವಾದ ಒದಗಿಸುವಿಕೆಯನ್ನು ನೀವು ಕಳೆದುಕೊಳ್ಳುತ್ತಿದ್ದೀರಿ. ನಮಗಾಗಿ ಯೆಹೋವನು ಪ್ರದರ್ಶಿಸುವ ಆತನ ಪರಾಮರಿಕೆಯ ವಿಧಗಳಲ್ಲಿ ಪುಸ್ತಕ ಅಭ್ಯಾಸದ ಏರ್ಪಾಡು ಒಂದಾಗಿದೆ. (1 ಪೇತ್ರ 5:7) ನಾವು ಆತ್ಮಿಕವಾಗಿ ಬಲಿಷ್ಠರಾಗಿರುವಂತೆ, ಜ್ಞಾನ ಮತ್ತು ವಿವೇಕದಲ್ಲಿ ನಾವು ಪ್ರಗತಿಯನ್ನು ಮಾಡುವಂತೆ ಯೆಹೋವನು ಬಯಸುತ್ತಾನೆ. ಇನ್ನೊಂದು ಕಡೆಯಲ್ಲಿ, ನಾವು ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಕಡಿಮೆ ಪ್ರಯೋಜನವುಳ್ಳವರಾಗುವಂತೆ, ಸೈತಾನನು ನಮ್ಮ ಆತ್ಮಿಕ ಬೆಳವಣಿಗೆಯನ್ನು ನಿಧಾನಗೊಳಿಸಲು ಮತ್ತು ನಮ್ಮನ್ನು ಬಲಹೀನಗೊಳಿಸಲು ಇಷ್ಟಪಡುತ್ತಾನೆ. ಇದು ಸಂಭವಿಸುವಂತೆ ಬಿಡಬೇಡಿರಿ! ಈ ಅನ್ಯೋನ್ಯವಾದ ಗುಂಪಿನ ಹೃತ್ಪೂರ್ವಕವಾದ, ಪ್ರೀತಿಯ ವಾತಾವರಣವು ನಿಮ್ಮ ಹೃದಯವನ್ನು ಸ್ಪರ್ಶಿಸಲಿ ಮತ್ತು ಯೆಹೋವನನ್ನು ಸ್ತುತಿಸುವುದನ್ನು ಮುಂದುವರಿಸಲು ನಿಮ್ಮನ್ನು ಪ್ರಚೋದಿಸಲಿ.—ಹೋಲಿಸಿ ಕೀರ್ತನೆ 111:1.
5 ಪ್ರಚಾರಕರಿಗೆ ಅನುಕೂಲವಾದ ಸೇವೆಗಾಗಿ ಕೂಟಗಳು ಅಧಿಕಾಂಶ ಪುಸ್ತಕ ಅಭ್ಯಾಸ ಸ್ಥಳಗಳಲ್ಲಿ ಏರ್ಪಡಿಸಲ್ಪಡುತ್ತವೆ. ಇವು ಬಹುಶಃ ವಾರದಮಧ್ಯೆ, ವಾರಾಂತ್ಯ, ಅಥವಾ ಸಂಜೆ ಸಾಕ್ಷಿಕಾರ್ಯಕ್ಕಾಗಿರಬಹುದು. ಸಾಕಷ್ಟು ಟೆರಿಟೊರಿಯಿದೆ ಮತ್ತು ಕ್ಷೇತ್ರದಲ್ಲಿ ಮುಂದಾಳುತ್ವವನ್ನು ತೆಗೆದುಕೊಳ್ಳಲು ಯಾರಾದರು ಹಾಜರಿರುತ್ತಾರೆ ಎಂಬುದನ್ನು ಪುಸ್ತಕ ಅಭ್ಯಾಸ ನಿರ್ವಾಹಕನು ದೃಢಪಡಿಸಿಕೊಳ್ಳುತ್ತಾನೆ. ಕ್ಷೇತ್ರ ಸೇವೆಗಾಗಿ ಕೂಟಗಳು 10-15 ನಿಮಿಷಗಳಿಗಿಂತ ಹೆಚ್ಚಾಗಿರಬಾರದು. ನಮ್ಮ ಸಾರುವಿಕೆಯ ಚಟುವಟಿಕೆಗೆ ಅದು ಸಂಬಂಧಿಸುತ್ತದಾದರೆ ನಿರ್ವಾಹಕನು ಸಂಕ್ಷಿಪ್ತವಾಗಿ ದಿನದ ವಚನವನ್ನು ಪರಿಗಣಿಸಬಹುದು ಮತ್ತು ಒಂದು ಅಥವಾ ಎರಡು ನಿರ್ದಿಷ್ಟವಾದ ಕ್ಷೇತ್ರ ಸೇವೆಯ ಸಲಹೆಗಳನ್ನು ಕೊಡಬಹುದು ಅಥವಾ ಪ್ರಸ್ತುತ ನೀಡುವಿಕೆಯ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸಾದರಪಡಿಸಬಹುದು.
6 ಯೋಗ್ಯವಾದ ಉತ್ತೇಜನ ಮತ್ತು ತರಬೇತಿಯನ್ನು ಕೊಡುವ ಮೂಲಕ, ತನ್ನ ಗುಂಪಿನಲ್ಲಿರುವ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಕೆಲಸಮಾಡಲು ಕಾಲಗತಿಯಲ್ಲಿ ನಿರ್ವಾಹಕನು ಪ್ರಯತ್ನಿಸುತ್ತಾನೆ.—ಹೋಲಿಸಿ ಮಾರ್ಕ 3:14; ಲೂಕ 8:1.