ಜೂನ್‌ಗಾಗಿ ಸೇವಾ ಕೂಟಗಳು
ಜೂನ್ 6ರ ವಾರ
ಸಂಗೀತ 9 (19)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಸ್ಥಳೀಯವಾಗಿ ಅನ್ವಯಿಸುವಂತಹ ಪ್ರಕಟನೆಗಳು. ವಾರಾಂತ್ಯದಲ್ಲಿ ಮನೆಯಿಂದ ಮನೆಗೆ ಇತ್ತೀಚಿನ ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ. ಈ ವಾರಾಂತ್ಯದಲ್ಲಿ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಮಹಾನ್ ಪುರುಷ ಮತ್ತು ಸೃಷ್ಟಿ ಪುಸ್ತಕಗಳ ಪ್ರತಿಗಳನ್ನು ಆರಿಸಿಕೊಳ್ಳುವಂತೆ ಸಭಿಕರಿಗೆ ಜ್ಞಾಪಿಸಿರಿ.
20 ನಿ: “ನೀವು ಸಮೃದ್ಧವಾಗಿ ಬಿತ್ತುತ್ತಿದ್ದೀರೊ?” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, ಹೇಗೆ ಅವರು ತಮ್ಮ ಸೇವೆಯ ಕೆಲವು ಮುಖಗಳಲ್ಲಿ ಹೆಚ್ಚಿನ ಪ್ರಯತ್ನವನ್ನು ಹಾಕಿದ್ದಾರೆ ಮತ್ತು ಅದಕ್ಕಾಗಿ ಆಶೀರ್ವದಿಸಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುವ ವೈಯಕ್ತಿಕ ಅನುಭವಗಳನ್ನು ವಿವರಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
15 ನಿ: “ನಮ್ಮ ನಿರ್ಮಾಣಿಕನನ್ನು ಗೌರವಿಸಲಿಕ್ಕಾಗಿ ಇತರರಿಗೆ ಸಹಾಯಮಾಡುವುದು.” ಸಭಿಕರೊಂದಿಗೆ ಚರ್ಚಿಸಿರಿ. ಸೂಚಿಸಲ್ಪಟ್ಟ ನೀಡುವಿಕೆಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸುವ ಎರಡು ಪ್ರತ್ಯಕ್ಷಾಭಿನಯಗಳನ್ನು ಮಾಡಿರಿ.
ಸಂಗೀತ 30 (58) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 13ರ ವಾರ
ಸಂಗೀತ 28 (5)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ರಿಪೋರ್ಟ್ ಮತ್ತು ಸೊಸೈಟಿಯ ದಾನದ ಅಂಗೀಕಾರಗಳನ್ನು ಓದಿರಿ. ಉದಾರ ಆತ್ಮವಿರುವ ಒಬ್ಬನು ಹೇಗೆ ಆಶೀರ್ವದಿಸಲ್ಪಡುತ್ತಾನೆಂಬುದನ್ನು ತೋರಿಸುವ ಸಂಕ್ಷಿಪ್ತ ಹೇಳಿಕೆಗಳನ್ನು ಒಳಗೂಡಿಸಿರಿ.—ಜ್ಞಾನೋ. 11:24ಎ.
15 ನಿ: “ಮಾನವಕುಲದ ಸೃಷ್ಟಿಕರ್ತನಲ್ಲಿ ನಂಬಿಕೆಯನ್ನು ಕಟ್ಟುವುದು.” ಸಭಿಕರೊಂದಿಗೆ ಚರ್ಚಿಸಿರಿ. ಸಮಯವು ಅನುಮತಿಸಿದಂತೆ, ಸೂಚಿಸಲ್ಪಟ್ಟಿರುವ ಪುನರ್ಭೇಟಿಗಳಲ್ಲಿ ಒಂದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ: “ಸಭಾ ಪುಸ್ತಕ ಅಭ್ಯಾಸವು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.” ಅಭ್ಯಾಸ ನಿರ್ವಾಹಕನೊಬ್ಬನು ಸಭಿಕರೊಂದಿಗೆ ಚರ್ಚಿಸುತ್ತಾನೆ. ಲೇಖನವು (1) ಪುಸ್ತಕ ಅಭ್ಯಾಸದ ಅಧಿಕ ಹಾಜರಿಯನ್ನು, (2) ಅಭ್ಯಾಸದಲ್ಲಿ ಹೆಚ್ಚಿನ ಹೇಳಿಕೆ ನೀಡುವುದನ್ನು, ಮತ್ತು (3) ಕ್ಷೇತ್ರ ಸೇವೆಗಾಗಿ ಕೂಟಗಳಿಗಾಗಿ ಉತ್ತಮ ಬೆಂಬಲವನ್ನು ಹೇಗೆ ಉತ್ತೇಜಿಸುತ್ತದೆಂಬುದನ್ನು ಒತ್ತಿಹೇಳಿರಿ.
ಸಂಗೀತ 65 (36) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 20ರ ವಾರ
ಸಂಗೀತ 31 (51)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆಗಳು. ಇನ್ನೂ ಶಾಲೆಯ ರಜಾ ಸಮಯದಲ್ಲಿರುವ ಯುವ ಜನರು, ಶುಶ್ರೂಷೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅವರಿಗಿರುವ ಸಂದರ್ಭಗಳನ್ನು ಪುನರ್ವಿಮರ್ಶಿಸಬೇಕು; ಕೆಲವರು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಶಕ್ತರಿರಬಹುದು. ಶಾಲಾವಿದ್ಯಾಭ್ಯಾಸವನ್ನು ಮುಗಿಸಿರುವವರು, ರಾಜ್ಯ ಅಭಿರುಚಿಗಳನ್ನು ಪ್ರಥಮವಾಗಿ ಇಡುವುದರ ಗುರಿಯೊಂದಿಗೆ ತಮ್ಮ ಭವಿಷ್ಯತ್ತಿನ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು.
15 ನಿ: ಸ್ಥಳಿಕ ಅಗತ್ಯಗಳು. ಅಥವಾ ಜೂನ್ 1, 1994ರ ಕಾವಲಿನಬುರುಜು ವಿನ ಎಲ್ಲಾ ಮುದ್ರಣಗಳಲ್ಲಿ 3-7 ಪುಟಗಳಲ್ಲಿರುವ ‘ಯುಕ್ತವಾದ ಧರ್ಮ’ ಎಂಬ ಪ್ರಥಮ ಎರಡು ಲೇಖನಗಳ ಮೇಲಾಧಾರಿತವಾದ ಒಂದು ಭಾಷಣ.
20 ನಿ: “ನೀವು ದೇವರ ಚಿತ್ತವನ್ನು ಮಾಡುತ್ತಿದ್ದೀರೋ?” ಮಾರ್ಚ್ 1, 1994, ಕಾವಲಿನಬುರುಜು, (ಪಾಕ್ಷಿಕ ಮುದ್ರಣಗಳು) ಪುಟಗಳು 28-30ರ ಮೇಲಾಧಾರಿಸಿ ಹಿರಿಯನಿಂದ ಭಾಷಣ.
ಸಂಗೀತ 223 (22) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 27ರ ವಾರ
ಸಂಗೀತ 174 (90)
10 ನಿ: ಸ್ಥಳಿಕ ತಿಳಿಸುವಿಕೆಗಳು. ವಾರಾಂತ್ಯಕ್ಕಾಗಿ ಕ್ಷೇತ್ರ ಸೇವಾ ಕಾಲತಖ್ತೆಯನ್ನು ಪುನರ್ವಿಮರ್ಶಿಸಿರಿ. “ದಿವ್ಯ ಭಯ” ಅಧಿವೇಶನಕ್ಕಾಗಿ ಸಕಾಲದಲ್ಲಿ ರೂಮ್ ರಿಕ್ವೆಸ್ಟ್ ಫಾರ್ಮ್‌ಗಳನ್ನು ಭರ್ತಿಮಾಡುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ಸೆಕ್ರಿಟರಿಯು ಅವುಗಳನ್ನು ಪಡೆದುಕೊಳ್ಳುವನು ಮತ್ತು ಈ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವವರ ಸೂಕ್ತವಾದ ವಿಳಾಸಕ್ಕೆ ಅವುಗಳನ್ನು ಕಳುಹಿಸುವನು.
15 ನಿ: “ಕ್ಷೇತ್ರ ಸೇವೆಗಾಗಿ ಅರ್ಥಪೂರ್ಣ ಕೂಟಗಳು.” ಸೇವಾ ಮೇಲ್ವಿಚಾರಕನಿಂದ ಪ್ರಶ್ನೋತ್ತರಗಳು. ಪ್ಯಾರಗ್ರಾಫ್ 3ನ್ನು ಚರ್ಚಿಸುವಾಗ, ಈ ವಾರಾಂತ್ಯದ ಉಪಯೋಗಕ್ಕಾಗಿ ರೀಸನಿಂಗ್ ಪುಸ್ತಕದಿಂದ ಒಂದು ಅಥವಾ ಎರಡು ಪೀಠಿಕೆಗಳನ್ನು ನಿರ್ದೇಶಿಸಿರಿ. ಪ್ಯಾರಗ್ರಾಫ್ 5 ರಲ್ಲಿ, ಕ್ಷೇತ್ರ ಸೇವೆಯಲ್ಲಿ ಸ್ಥಳೀಯವಾಗಿ ಗಮನಿಸಲ್ಪಟ್ಟಿರುವ ನಡತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪ್ರಸ್ತಾಪಿಸಿರಿ; ಪ್ರಗತಿಗಾಗಿ ದಯಾಪರ ಸಲಹೆಗಳನ್ನು ಕೊಡಿರಿ.
20 ನಿ: ಜುಲೈ ತಿಂಗಳ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಸಭೆಯ ಸಂಗ್ರಹದಲ್ಲಿರುವ ಪುಸ್ತಿಕೆಗಳ ಪ್ರತಿಗಳನ್ನು ಪ್ರದರ್ಶಿಸಿರಿ. ಸಂಭಾಷಣೆಗಳನ್ನು ಆರಂಭಿಸಲು ಉಪಯೋಗಿಸಸಾಧ್ಯವಿರುವ ಕೆಲವು ಆಸಕ್ತಿಭರಿತ ವೈಲಕ್ಷಣ್ಯಗಳನ್ನು ಮತ್ತು ದೃಷ್ಟಾಂತಗಳನ್ನು ಪುನರ್ವಿಮರ್ಶಿಸಿರಿ. ವಿಭಿನ್ನ ರೀತಿಯ ವ್ಯಕ್ತಿಗಳೊಂದಿಗೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲಿಕ್ಕಾಗಿ ಯಾವ ಪುಸ್ತಿಕೆಗಳು ಅತ್ಯುತ್ತಮವಾಗಿ ಯೋಗ್ಯವಾಗಿವೆ ಎಂಬುದನ್ನು ಪ್ರಸ್ತಾಪಿಸಿರಿ. ಒಂದು ಬೈಬಲ್ ವಿಷಯದ ಮೇಲೆ ಚರ್ಚೆಯೊಂದನ್ನು ಹೇಗೆ ಆರಂಭಿಸುವುದು ಎಂಬುದನ್ನು ತೋರಿಸುವ ಎರಡು ಪ್ರತ್ಯಕ್ಷಾಭಿನಯಗಳನ್ನು ಮಾಡಿರಿ. (ರೀಸನಿಂಗ್ ಪುಸ್ತಕದ ಪುಟಗಳು 11-12 ರಲ್ಲಿರುವ “ಭವಿಷ್ಯತ್ತು ⁄ ಭದ್ರತೆ” ಮತ್ತು ಪುಟಗಳು 12-13 ರಲ್ಲಿರುವ “ರಾಜ್ಯ”ದ ಸಲಹೆಗಳನ್ನು ಉಪಯೋಗಿಸಿ.) ಬೈಬಲ್ ಅಭ್ಯಾಸವೊಂದನ್ನು ಆರಂಭಿಸುವ ಏರ್ಪಾಡಿನೊಂದಿಗೆ ಪ್ರತ್ಯಕ್ಷಾಭಿನಯಗಳು ಮುಕ್ತಾಯಗೊಳ್ಳಬೇಕು.
ಸಂಗೀತ 118 (99) ಮತ್ತು ಸಮಾಪ್ತಿಯ ಪ್ರಾರ್ಥನೆ.