ಮಾರ್ಚ್ಗಾಗಿ ಸೇವಾ ಕೂಟಗಳು
ಮಾರ್ಚ್ 6ರ ವಾರ
ಸಂಗೀತ 25 (30)
13 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. ಪ್ರಶ್ನಾ ಪೆಟ್ಟಿಗೆಯನ್ನು ಚರ್ಚಿಸಿರಿ.
15 ನಿ: “ಹೆಚ್ಚು ಕೊಡಲ್ಪಟ್ಟಿದೆ—ಹೆಚ್ಚು ಕೇಳಿಕೊಳ್ಳಲ್ಪಡುತ್ತದೆ.” ಪ್ರಶ್ನೋತ್ತರಗಳು. ಎಪ್ರಿಲ್ ಮತ್ತು ಮೇ ಯಲ್ಲಿ ಸಹಾಯಕ ಪಯನೀಯರರಾಗಿ ನಮೂದಿಸಿಕೊಳ್ಳಲು ಅರ್ಹರಾಗಿರುವವರನ್ನು ಪ್ರೋತ್ಸಾಹಿಸಿರಿ.
17 ನಿ: “ಯುವಕರು ‘ಆನಂದಿಸ’ ಬಹುದಾದ ವಿಧವನ್ನು ಅವರಿಗೆ ತಿಳಿಸುವುದು.” ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. ಯುವ ಜನರು ಕೇಳುವ ಪ್ರಶ್ನೆಗಳು ಪುಸ್ತಕವನ್ನು ಉಪಯೋಗಿಸಿದರ್ದಿಂದ ಅಥವಾ ನೀಡಿದರ್ದಿಂದ ಆನಂದಿಸಿದಂತಹ ಅನುಭವಗಳನ್ನು ತಿಳಿಸಲು ಸಭಿಕರನ್ನು ಆಮಂತ್ರಿಸಿರಿ. ಪುಸ್ತಕವನ್ನು ನೀಡುವದರಲ್ಲಿ ಸಕಾರಾತ್ಮಕರಾಗಿರಲು ಎಲ್ಲರನ್ನು ಉತ್ತೇಜಿಸಿರಿ, ಯಾಕಂದರೆ ಅದು ಎಲ್ಲರಿಗೆ ಸಂಬಂಧಿಸುವ ಪರಿಸ್ಥಿತಿಗಳೊಂದಿಗೆ ವ್ಯವಹರಿಸುತ್ತದೆ. ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 31 (51) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 13ರ ವಾರ
ಸಂಗೀತ 24 (70)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: “ಸಮಯೋಚಿತವಾದ ರಾಜ್ಯ ವಾರ್ತೆಯು ಲೋಕವ್ಯಾಪಕವಾಗಿ ಹಂಚಲ್ಪಡುವುದು.” ಹಿರಿಯನಿಂದ ಭಾಷಣ. ಎಪ್ರಿಲ್ ಮತ್ತು ಮೇ ಯಲ್ಲಿ ಸಮೀಪಿಸುತ್ತಿರುವ ಈ ವಿಶೇಷ ಚಟುವಟಿಕೆಯ ಮಹತ್ವವನ್ನು ಒತ್ತಿಹೇಳಿರಿ. ಹೊಸಬರನ್ನು ಒಳಗೂಡಿಸಿ, ಎಲ್ಲರೂ ಒಂದು ಪೂರ್ಣ ಪಾಲನ್ನು ತೆಗೆದುಕೊಳ್ಳುವಂತೆ ಉತ್ತೇಜಿಸಿರಿ.
20 ನಿ: “ಹೊಸ ಬ್ರೋಷರನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು.” ಲೇಖನವನ್ನು ಸಭಿಕರೊಂದಿಗೆ ಚರ್ಚಿಸಿರಿ. ಬ್ರೋಷರಿನ ವೈಶಿಷ್ಟ್ಯಗಳನ್ನು ತೋರಿಸಿರಿ, ಮತ್ತು ವಿಯೋಗ ಹೊಂದಿದವರನ್ನು ಸಾಂತ್ವನಗೊಳಿಸಲು ಅದನ್ನು ಉಪಯೋಗಿಸಬಹುದಾದ ವಿಧದ ಕುರಿತಾಗಿ ಸಲಹೆಗಳನ್ನು ಕೊಡಿರಿ. ಸಭೆಯಲ್ಲಿ ಅದು ಯಾವ ಭಾಷೆಗಳಲ್ಲಿ ಲಭ್ಯವಿದೆಯೆಂಬದನ್ನು ತಿಳಿಸಿರಿ ಮತ್ತು ಕೂಟದ ನಂತರ ಪ್ರಚಾರಕರು ಪ್ರತಿಗಳನ್ನು ಕೊಂಡೊಯ್ಯುವಂತೆ ಪ್ರೋತ್ಸಾಹಿಸಿರಿ.
ಸಂಗೀತ 36 (14) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 20ರ ವಾರ
ಸಂಗೀತ 40 (31)
15 ನಿ: ಸ್ಥಳಿಕ ತಿಳಿಸುವಿಕೆಗಳು. 1995 ವರ್ಷಪುಸ್ತಕದ ಕುಟುಂಬದ ಬಳಸುವಿಕೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಕುಟುಂಬಗುಂಪು ಪುಸ್ತಕಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತದೆ; ತಂದೆಯು ಪುಟ 3-11 ರಲ್ಲಿರುವ ಪೀಠಿಕಾ ವಿಷಯದ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸುತ್ತಾನೆ. ಪ್ರತಿ ವಾರ ವರ್ಷಪುಸ್ತಕದ ಕೆಲವು ಪುಟಗಳನ್ನು ಜೊತೆಯಾಗಿ ಓದಲು ಅವರು ಪ್ರಯತ್ನಿಸುವ ಮತ್ತು ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು ಇದರಲ್ಲಿ ಕೊಡಲ್ಪಟ್ಟಿರುವ ನಿಗದಿತ ಬೈಬಲ್ ವಚನಕ್ಕೆ ಪ್ರತಿ ದಿನ ಗಮನವನ್ನು ಕೊಡಲು ಅವರು ಖಚಿತಪಡಿಸಿಕೊಳ್ಳುವ ವಿಧವನ್ನು ಅವರು ಚರ್ಚಿಸುತ್ತಾರೆ.
15 ನಿ: ಸ್ಥಳಿಕ ಅಗತ್ಯಗಳು ಅಥವಾ ನವಂಬರ 15, 1994ರ ಕಾವಲಿನಬುರುಜು ಪುಟ 26-8 ರಲ್ಲಿರುವ “ನಿಮಗೆ ತೆರಿಗೆಗಳನ್ನು ಸಲ್ಲಿಸಲಿಕ್ಕಿರುವದಾದರೆ, ತೆರಿಗೆಗಳನ್ನು ಸಲ್ಲಿಸಿರಿ” ಲೇಖನದ ಮೇಲೆ ಒಂದು ಭಾಷಣವನ್ನು ಕೊಡಿರಿ.
15 ನಿ: “‘ಈಗ, ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸಲು’ ಯುವಕರಿಗೆ ನೆರವು ನೀಡುವುದು.” ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿರಿ, ಮತ್ತು ಅನಂತರ ಒಂದು ಅಥವಾ ಎರಡು ಪುನರ್ಭೇಟಿಗಳು ಪ್ರತ್ಯಕ್ಷಾಭಿನಯಿಸಲ್ಪಡಲಿ.
ಸಂಗೀತ 52 (59) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 27ರ ವಾರ
ಸಂಗೀತ 205 (118)
5 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “ಮಾನವ ಇತಿಹಾಸದಲ್ಲಿ ಅತಿ ಪ್ರಮುಖ ಘಟನೆ.” ಸಭಿಕರೊಂದಿಗೆ ಚರ್ಚೆ. ಜ್ಞಾಪಕಾಚರಣೆಗಾಗಿ ಸ್ಥಳಿಕ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ. ಆಸಕ್ತರನ್ನು ಆಮಂತ್ರಿಸುವ ಮತ್ತು ಹಾಜರಾಗಲು ಅವರಿಗೆ ಸಹಾಯ ಮಾಡುವ ಅಗತ್ಯವೇಕೆ ಇದೆಯೆಂದು ವಿವರಿಸಿರಿ.
15 ನಿ: “ಸಮಸ್ಯೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಒಂದು ಪಾಠ.” ಒಬ್ಬ ಹಿರಿಯನಿಂದ ಫೆಬ್ರವರಿ 15, 1995ರ ಕಾವಲಿನಬುರುಜು ವಿನ ಪುಟ 26 ರಲ್ಲಿರುವ ಲೇಖನದ ಮೇಲೆ ಆಧರಿತವಾದ ಭಾಷಣ. ಒಂದು ದಯಾಪೂರ್ಣ ವಿಧದಲ್ಲಿ ಪ್ರಸ್ತುತಪಡಿಸಲ್ಪಡಬೇಕು, ವ್ಯವಹಾರ್ಯ ಅನ್ವಯವನ್ನು ಮಾಡತಕ್ಕದ್ದು ಆದರೆ ಸ್ಥಳಿಕವಾಗಿ ಅಸ್ತಿತ್ವದಲ್ಲಿದ್ದ ಅಥವಾ ಅಸ್ತಿತ್ವದಲ್ಲಿವೆಯೆಂದು ತಿಳಿದಿರುವ ಸಮಸ್ಯೆಗಳ ಕುರಿತಾಗಿ ಟೀಕಾತ್ಮಕವಾಗಿ ಧ್ವನಿಸದಂತೆ ಜಾಗ್ರತರಾಗಿರಬೇಕು.
10 ನಿ: ಎಪ್ರಿಲ್ನಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳನ್ನು ನೀಡುವುದು. ಮನೆಬಾಗಲುಗಳಲ್ಲೂ ಮತ್ತು ಅನೌಪಚಾರಿಕ ಸಾಕ್ಷಿಕಾರ್ಯದಲ್ಲೂ ಚಂದಾಗಳನ್ನು ನೀಡಲು ಸಕಾರಾತ್ಮಕರಾಗಿರಲು ಸಭಿಕರನ್ನು ಪ್ರೋತ್ಸಾಹಿಸಿರಿ. ಮನೆಯಿಂದ ಮನೆಯಲ್ಲಿ ಚಂದಾಗಳನ್ನು ನೀಡಲು ಮುಂದಿನ ಸಲಹೆಗಳನ್ನು ಪುನರ್ವಿಮರ್ಶಿಸಿರಿ: ಒಂದು ಸ್ನೇಹಭಾವದ ಮಂದಹಾಸವಿರಲಿ. ಉತ್ಸಾಹದಿಂದಿರ್ರಿ. ನಿಧಾನವಾಗಿ ಮಾತಾಡಿರಿ. ಒಂದು ಪತ್ರಿಕೆಯ ಕೇವಲ ಒಂದು ಲೇಖನವನ್ನು ಚರ್ಚಿಸಿರಿ, ಆದರೆ ಪತ್ರಿಕೆಯನ್ನು ಕ್ರಮವಾಗಿ ಪಡೆಯುವುದರ ಪ್ರಯೋಜನಗಳನ್ನು ವಿವರಿಸಿರಿ. ಪತ್ರಿಕೆಗಳನ್ನು ಮನೆಯವರಿಗೆ ಹಸ್ತಾಂತರಿಸಿರಿ. ಚಂದಾ ನಿರಾಕರಿಸಲ್ಪಟ್ಟಲ್ಲಿ, ಕಾವಲಿನಬುರುಜು ಅಥವಾ ಎಚ್ಚರ! ಪ್ರತಿಯೊಂದರ ಒಂದು ಅಥವಾ ಹೆಚ್ಚಿನ ಪ್ರತಿಗಳನ್ನು ನೀಡಲು ನಿಶ್ಚಿತರಾಗಿರ್ರಿ. ಪತ್ರಿಕೆಗಳು ನಿರಾಕರಿಸಲ್ಪಟ್ಟಲ್ಲಿ, ಒಂದು ಸಕಾರಾತ್ಮಕ ಸಮಾಪ್ತಿ ಹೊಂದಿದವರಾಗಿರಿ. ಏಕ ಪ್ರತಿಗಳು ಸ್ವೀಕರಿಸಲ್ಪಟ್ಟಲ್ಲಿ, ನೀವು ಮುಂದಿನ ಸಂಚಿಕೆಗಳೊಂದಿಗೆ ಹಿಂದಿರುಗುವಿರಿ ಎಂದು ಅವರಿಗೆ ತಿಳಿದಿರಲಿ. ಎಲ್ಲಾ ಆಸಕ್ತಿ ಮತ್ತು ನೀಡುವಿಕೆಗಳ ಕುರಿತಾಗಿ ಒಂದು ರೆಕಾರ್ಡನ್ನು ಇಡಿರಿ. ಪುನರ್ಭೇಟಿಯಲ್ಲಿ ಪುನಃ ಒಮ್ಮೆ ಚಂದಾವನ್ನು ನೀಡಿರಿ. ಚಂದಾಗಳನ್ನು ನೀಡಲು ಪತ್ರಿಕೆಗಳ ಸದ್ಯದ ಸಂಚಿಕೆಗಳನ್ನು ಬಳಸುತ್ತಾ ಒಂದೆರಡು ಸಂಕ್ಷಿಪ್ತ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 176 (16) ಮತ್ತು ಸಮಾಪ್ತಿಯ ಪ್ರಾರ್ಥನೆ.