ಯುವಕರಿಗೆ ಒಬ್ಬ ಆದರ್ಶಪ್ರಾಯನೋಪಾದಿ ಕ್ರಿಸ್ತನು
1 ದೀರ್ಘವಾದೊಂದು ಬೈಬಲ್ ಚರ್ಚೆಯ ಅನಂತರ, ಒಬ್ಬ ಯುವಕನು ಹೇಳಿದ್ದು: “ಯೇಸು ಕ್ರಿಸ್ತನ ಬಲವತ್ತಾದ ವ್ಯಕ್ತಿತ್ವದಿಂದ ನಾನು ಬೆರಗಾದೆ. ನಾನು ಭರವಸೆಯಿಡಸಾಧ್ಯವಿರುವ ನಾಯಕನು ಈತನಾಗಿದ್ದಾನೆ.” ರಾಜಕಾರಣಿಗಳ ಅಥವಾ ಕ್ರೀಡೆ ಮತ್ತು ಮನೋರಂಜನೆಯ ನಾಯಕರ ವಿಷಯದಲ್ಲಿ ಇದೇ ರೀತಿಯಲ್ಲಿ ಹೇಳಲು ಸಾಧ್ಯವಿಲ್ಲ. ಯಾರು ಲೌಕಿಕ ಮಟ್ಟಗಳನ್ನು ಮತ್ತು ಅಕ್ರೈಸ್ತ ಜೀವನಶೈಲಿಗಳನ್ನು ಮುಚ್ಚುಮರೆಯಿಲ್ಲದೆ ಆಯ್ದುಕೊಳ್ಳುತ್ತಾರೋ, ಅವರನ್ನು ಸತ್ಯ ಕ್ರೈಸ್ತರು ಆದರ್ಶಪ್ರಾಯರಂತೆ ವೀಕ್ಷಿಸುವುದಿಲ್ಲ.—ಕೀರ್ತ. 146:3, 4.
2 ಯುವಜನರು ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವಂತಾಗುವಾಗ, ಅವರು ತಮ್ಮನ್ನು ಸ್ವತಃ ದೇವರ ಕುರಿಗಳಾಗಿ ಒಪ್ಪಿಸಿಕೊಳ್ಳುತ್ತಾರೆ ಮತ್ತು ಯೇಸು ಅವರನ್ನು ಅರಿಯುತ್ತಾನೆ ಎಂಬ ಆಶಾಸನ್ವೆಯನ್ನು ಅವರಿಗೆ ನೀಡಸಾಧ್ಯವಿದೆ. ಅವರಿಗಾಗಿ ಒಳ್ಳೆಯ ಕುರುಬನು ಕಾಳಜಿ ವಹಿಸುತ್ತಾನೆ. (ಯೋಹಾನ 10:14, 15, 27) ಕ್ರಿಸ್ತನನ್ನು ತಮ್ಮ ಆದರ್ಶದೋಪಾದಿ ಅನುಸರಿಸುವ ಯುವಕರು ಆಶೀರ್ವದಿತರು.
3 ಪ್ರಸ್ತುತವಾಗಿ ಬ್ರೂಕ್ಲಿನ್ ಬೆತೆಲ್ನಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಸಹೋದರರಿಗೆ, ಅವರು ಎಂಟು ವರ್ಷ ಪ್ರಾಯದವರಾಗಿದ್ದ ಸಮಯದಿಂದಲೂ ಈ ಸೇವಾ ಸುಯೋಗವು ಒಂದು ಗುರಿಯಾಗಿತ್ತು. ಅವರು ದೊಡ್ಡವರಾದಾಗ, ಕ್ರಿಸ್ತನ ಮಾದರಿಯನ್ನು ಅನುಸರಿಸಲು, ಬೆತೆಲ್ ಸೇವೆಯನ್ನು ಒಂದು ಪ್ರಾಯೋಗಿಕ ವಿಧದೋಪಾದಿ ವೀಕ್ಷಿಸಲು ಉತ್ತೇಜಿಸಲ್ಪಟ್ಟಿದ್ದರು. ಅವರ ಹೆತ್ತವರು, ಹಾಗೂ ಸಂಚರಣ ಮೇಲಿಚಾರ್ವಕರು, ಈ ಗುರಿಯನ್ನು ಅವರ ಮುಂದಿಟ್ಟರು. ಅದಕ್ಕಾಗಿ ಅವರನ್ನು ತಯಾರಿಸಲು, ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ರಾಜ್ಯಸಭಾಗೃಹವನ್ನು ದುರಸಾಗಿಡ್ತುತ್ತಾ, ಶುಶ್ರೂಷೆಯಲ್ಲಿನ ನೈಪುಣ್ಯಗಳನ್ನು ವಿಕಸಿಸುತ್ತಾ, ತಮ್ಮನ್ನು ಸ್ವತಃ ಬೆತೆಲ್ ಕುಟುಂಬದ ಒಬ್ಬ ಸದಸ್ಯರಂತೆ ಶ್ರದ್ಧಾಪೂರ್ವಕವಾಗಿ ಅನ್ವಯಿಸಿಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು. ಈಗ ಹಲವಾರು ವರ್ಷಗಳ ತನಕ ಬೆತೆಲ್ ಸೇವೆಯನ್ನು ಆನಂದಿಸಿದ ಅನಂತರ, ತಾವು ಬೆಳೆಯುತಿದ್ದ ಹಾಗೆ, ಕ್ರಿಸ್ತನ ಮಾದರಿಯನ್ನು ಅನುಕರಿಸಲು ತಾವು ಮಾಡಿದ ಪ್ರಯತ್ನಕ್ಕಾಗಿ ಅವರು ಕೃತಜ್ಞರಾಗಿದ್ದಾರೆ.
4 ಯೇಸು ಒಂದು ಲೌಕಿಕ ವೃತ್ತಿಯನ್ನು ಬೆನ್ನಟ್ಟಲ್ಲಿಲ; ಆತನು ಶುಶ್ರೂಷೆಯನ್ನು ಆಯ್ದುಕೊಂಡನು. ಒಬ್ಬ ಯುವ ಸಹೋದರಿಯು ಶಾಲೆಯಿಂದ ಪದವಿ ಪಡೆದಾಗ ಪಯನೀಯರ್ ಸೇವೆಯನ್ನು ಮಾಡಲು ಬಯಸಿದಳು, ಆದರೆ ತಕ್ಕದಾದ ಅಂಶಕಾಲಿಕ ಉದ್ಯೋಗವಿಲ್ಲದ ಕಾರಣ ಹಿಂಜರಿದಳು. ಆಕೆ ಯೋಚಿಸುತ್ತಾ ಇದ್ದದ್ದು: ‘ಮೊದಲಾಗಿ ನಾನು ಒಂದು ಕೆಲಸವನ್ನು ಕಂಡುಹಿಡಿಯುತ್ತೇನೆ, ಅನಂತರ ನನ್ನ ಪಯನೀಯರ್ ಅರ್ಜಿಯನ್ನು ಒಪ್ಪಿಸುತ್ತೇನೆ.’ ಆಕೆ ಹೆಚ್ಚು ಕಾದಷ್ಟು, ಪೂರ್ಣ ಸಮಯದ ಕೆಲಸವು ಹೆಚ್ಚು ಆಕರ್ಷಕವಾಗುವುದೆಂದು, ಯಾಕೆಂದರೆ ಅದನ್ನು ಅಂಗೀಕರಿಸುವುದರಿಂದ ಆಕೆಯನ್ನು ಯಾವುದೇ ಒಂದು ವಿಷಯವು ತಡೆಗಟ್ಟುವುದಿಲ್ಲವೆಂದೂ ಒಬ್ಬ ಹಿರಿಯನು ಹೇಳಿದನು. ಆಕೆ ತಿಳಿಸಿದ್ದು: “ನನ್ನನ್ನು ಮಾರ್ಗದರ್ಶಿಸಲು ಯೆಹೋವನ ಆತ್ಮಕ್ಕಾಗಿ ನಾನು ಆತನಲ್ಲಿ ಪ್ರಾರ್ಥಿಸಿದೆ.” ತತ್ಕಣವ್ಷೇ ಆಕೆ ಒಬ್ಬ ಆಕ್ಸಿಲಿಯರಿ ಪಯನೀಯರಳಾಗಿ ನೊಂದಾಯಿಸಿಕೊಂಡಳು ಮತ್ತು ಅನಂತರ ಒಬ್ಬ ಕ್ರಮದ ಪಯನೀಯರಳಾಗಿ ಪರಿಣಮಿಸಿದಳು. ಅದಾದ ಸ್ವಲ್ಪ ಸಮಯದಲ್ಲೇ, ತನ್ನ ಪಯನೀಯರ್ ಸೇವೆಯ ಕಾಲತಖ್ತೆಗೆ ಎಡೆಮಾಡಿಕೊಟ್ಟ ಆದರ್ಶ ಧ್ಯೇಯದ ಉದ್ಯೋಗವನ್ನು ಆಕೆ ಕಂಡುಕೊಂಡಳು.
5 ಯೇಸು ಧೈರ್ಯವಾಗಿ ಪ್ರತಿಯೊಬ್ಬರಿಗೂ ರಾಜ್ಯ ಸಂದೇಶವನ್ನು ಘೋಷಿಸಿದನು. (ಮತ್ತಾ. 4:23) ಇತರರಿಂದ ಬೆದರಿಸಲ್ಪಡದೆ, ಸಾರುವಿಕೆಯಲ್ಲಿ ಧೈರ್ಯವಾಗಿರಲು ಯುವ ಕ್ರೈಸ್ತರು ಸಹ ಕಲಿಯಬಲ್ಲರು. 14 ವರ್ಷ ಪ್ರಾಯದ ಒಬ್ಬ ಸಾಕ್ಷಿಯು ವರದಿಸಿದ್ದು: “ಒಬ್ಬ ಕ್ರೈಸ್ತನೋಪಾದಿ, ನನ್ನ ನೋಟವೇನೆಂದು ಶಾಲೆಯಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ. . . . ಅವರಿಗೆ ಎಷ್ಟು ಚೆನ್ನಾಗಿ ತಿಳಿದಿದೆಯೆಂದರೆ, ನಾನು ಶುಶ್ರೂಷೆಯಲ್ಲಿ ಒಳಗೂಡಿರುವಾಗ ನನ್ನ ಸಹಪಾಠಿಯೊಬ್ಬನನ್ನು ನಾನು ಸಂಧಿಸುವುದಾದರೆ ಪೇಚಿಗೀಡಾಗುವ ಅನಿಸಿಕೆ ನನಗಾಗುವುದಿಲ್ಲ. ಸಹವಿದ್ಯಾರ್ಥಿಗಳು ಸಾಮಾನ್ಯವಾಗಿ ಕೇಳುತ್ತಾರೆ, ಮತ್ತು ಅನೇಕ ಬಾರಿ ಅವರು ಸಾಹಿತ್ಯವನ್ನು ಅಂಗೀಕರಿಸುತ್ತಾರೆ.”
6 ಕ್ರಿಸ್ತನ ಮಾದರಿಯನ್ನು ಪರಿಗಣಿಸುವುದು, ತಮ್ಮ ಭವಿಷ್ಯದ ಕುರಿತಾದ ವಿವೇಕಯುಕ್ತ ನಿರ್ಣಯಗಳನ್ನು ಮಾಡಲು ಯುವಜನರಿಗೆ ಸಹಾಯ ಮಾಡಬಲ್ಲದು. ಲೌಕಿಕ ಬೆನ್ನಟ್ಟುವಿಕೆಗಳಲ್ಲಿ ಮಗ್ನರಾಗಿರುವ ಬದಲು, ಯೆಹೋವನ ಸೇವೆಯಲ್ಲಿ ಹುರುಪನ್ನು ತೋರಿಸುವ ಮೂಲಕ ಅವರು ‘ತಮ್ಮ ಸೃಷ್ಟಿಕರ್ತನನ್ನು ಸ್ಮರಿಸುತ್ತಾರೆ.’ (ಪ್ರಸಂ. 12:1) ಯೇಸು ಕ್ರಿಸ್ತನಂತೆ, ಲೋಕದಿಂದ ನೀಡಲ್ಪಡುವ ಯಾವುದೇ ವಿಷಯಕ್ಕಿಂತ ಅತಿ ಹೆಚ್ಚು ಅಪೇಕ್ಷಣೀಯವಾಗಿರುವ ಆಶೀರ್ವಾದಗಳನ್ನು ತರುವ, ‘ತಂದೆಯ ಮೇಲಣ ಪ್ರೀತಿ,’ ಯನ್ನು ಅವರು ಹಸನುಗೊಳಿಸುತ್ತಾರೆ. ಹಳೆಯ ಲೋಕದೊಂದಿಗೆ ‘ಗತಿಸಿ ಹೋಗುವ’ ಬದಲು, “ಅನಂತಕಾಲ ಉಳಿಯುವುದನ್ನು” ಅವರು ಎದುರುನೋಡಬಲ್ಲರು.—1 ಯೋಹಾನ 2:15-17, NW.