ದೇವಪ್ರಭುತ್ವ ವಾರ್ತೆಗಳು
ಸೈಪ್ರಸ್: ಫೆಬ್ರವರಿಯಲ್ಲಿ 1,626 ಪ್ರಚಾರಕರ ಒಂದು ಹೊಸ ಉಚ್ಚಾಂಕವನ್ನು ಮುಟ್ಟಲಾಯಿತು. ಅವರ ವಿಶೇಷ ಸಮ್ಮೇಳನ ದಿನದ ಹಾಜರಿಯು 2,249 ಆಗಿತ್ತು.
ಇಥಿಯೋಪಿಯ: ಫೆಬ್ರವರಿಯಲ್ಲಿ 4,587 ಪ್ರಚಾರಕರು ವರದಿಮಾಡುತ್ತಿದ್ದರು. ಇದೊಂದು ಹೊಸ ಉಚ್ಚಾಂಕ. ಅಲ್ಲಿ ಎರಡು ಹೊಸ ರಾಜ್ಯ ಸಭಾಗೃಹಗಳನ್ನು ಆ ತಿಂಗಳಿನಲ್ಲಿ ಸಮರ್ಪಿಸಲಾಯಿತು.
ಫಿಲಿಪ್ಪೀನ್ಸ್: ಫೆಬ್ರವರಿಯಲ್ಲಿ 1,19,549 ಪ್ರಚಾರಕರ ಒಂದು ಹೊಸ ಉಚ್ಚಾಂಕವು ವರದಿಯಾಯಿತು.
ರುಆಂಡ: “ದಿವ್ಯ ಭಯ” ಜಿಲ್ಲಾ ಅಧಿವೇಶನವನ್ನು ಇತ್ತೀಚೆಗೆ ಸಣ್ಣ ಗುಂಪುಗಳಲ್ಲಿ ನಡೆಸಲಾಯಿತು. ಒಟ್ಟು ಹಾಜರಿಯು 6,062 ಆಗಿದ್ದು 178 ಜನರು ದೀಕ್ಷಾಸ್ನಾನವನ್ನು ಪಡೆದುಕೊಂಡರು.
ಟೈವಾನ್: 2,523 ಪ್ರಚಾರಕರ ಉಚ್ಚಾಂಕವಲ್ಲದೆ, ನವಂಬರ್ ವರದಿಯು 44,514 ಪುನರ್ಭೇಟಿಗಳ ಹಾಗೂ 4,234 ಬೈಬಲ್ ಅಧ್ಯಯನಗಳ ಹೊಸ ಉಚ್ಚಾಂಕವನ್ನು ತೋರಿಸಿತು.
ಟ್ರಿನಿಡಾಡ್: ಫೆಬ್ರವರಿಯಲ್ಲಿ 6,786 ಪ್ರಚಾರಕರ ಒಂದು ಹೊಸ ಉಚ್ಚಾಂಕವು ವರದಿಸಿತು.
ವರ್ಜಿನ್ ಐಲೆಂಡ್ಸ್ (ಯು.ಎಸ್.): 647 ಪ್ರಚಾರಕರ ಹೊಸ ಉಚ್ಚಾಂಕದೊಂದಿಗೆ 778 ಬೈಬಲ್ ಅಧ್ಯಯನಗಳ ಮೊತ್ತವು ನವಂಬರ್ ತಿಂಗಳಿನಲ್ಲಿ ಮಹಾ ಹರ್ಷವನ್ನು ತಂದಿತು.