ಮಾರ್ಚ್ಗಾಗಿ ಸೇವಾ ಕೂಟಗಳು
ಮಾರ್ಚ್ 3ರಿಂದ ಆರಂಭವಾಗುವ ವಾರ
ಸಂಗೀತ 53
10 ನಿ: ಸ್ಥಳಿಕ ತಿಳಿಸುವಿಕೆಗಳು. ಸಾಹಿತ್ಯ ನೀಡುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳನ್ನು ಆವರಿಸಿರಿ. ಮಾರ್ಚ್ 23ರಂದು ಇರುವ ಜ್ಞಾಪಕಕ್ಕೆ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸುವುದನ್ನು ಆರಂಭಿಸುವಂತೆ ಎಲ್ಲರನ್ನು ಉತ್ತೇಜಿಸಿರಿ. ಜ್ಞಾಪಕದ ಆಮಂತ್ರಣದ ಒಂದು ಪ್ರತಿಯನ್ನು ತೋರಿಸಿರಿ, ಮತ್ತು ಒಂದು ಸರಬರಾಯಿಯನ್ನು ಪಡೆದು, ಅವುಗಳನ್ನು ಈ ವಾರದಲ್ಲಿ ಹಂಚುವುದನ್ನು ಆರಂಭಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
15 ನಿ: ‘ನಿಮ್ಮ ಮನೆವಾರ್ತೆಯನ್ನು ಬಲಪಡಿಸಿರಿ.’ ಪ್ರಶ್ನೋತ್ತರಗಳು. 1995 ವರ್ಷಪುಸ್ತಕದ (ಇಂಗ್ಲಿಷ್) 228ನೆಯ ಪುಟದಿಂದ ಅನುಭವಗಳನ್ನು ಸೇರಿಸಿರಿ.
20 ನಿ: “ಒಂದು ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳುವಂತೆ ಕುಟುಂಬಗಳಿಗೆ ಸಹಾಯ ಮಾಡುವುದು.” (1-5ನೆಯ ಪ್ಯಾರಗ್ರಾಫ್ಗಳು) 1ನೆಯ ಪ್ಯಾರಗ್ರಾಫ್ನ ಕುರಿತಾಗಿ ಸಂಕ್ಷಿಪ್ತ ಹೇಳಿಕೆಗಳನ್ನು ಮಾಡಿರಿ. ಅನಂತರ, ಅಧ್ಯಾಯದ ಶೀರ್ಷಿಕೆಗಳು, ವರ್ಣಮಯ ಚಿತ್ರಗಳು ಮತ್ತು ಪುನರ್ವಿಮರ್ಶೆಯ ರೇಖಾಚೌಕಗಳನ್ನು ಉಪಯೋಗಿಸುವ ಮೂಲಕ, ಕುಟುಂಬ ಸಂತೋಷ ಪುಸ್ತಕದಲ್ಲಿ ಆಸಕ್ತಿಯನ್ನು ಹೇಗೆ ವಿಕಸಿಸಸಾಧ್ಯವಿದೆಯೆಂಬುದನ್ನು ಚರ್ಚಿಸಿರಿ. 2-5ನೆಯ ಪ್ಯಾರಗ್ರಾಫ್ಗಳಲ್ಲಿರುವ ನಿರೂಪಣೆಗಳನ್ನು ಸಮರ್ಥ ಪ್ರಚಾರಕರು ಪ್ರತ್ಯಕ್ಷಾಭಿನಯಿಸಲಿ. ಈ ಹಿಂದೆ ಆಸಕ್ತಿಯನ್ನು ತೋರಿಸಿರುವ ಕುಟುಂಬಗಳಿಗೆ ಪುಸ್ತಕವನ್ನು ನೀಡಲು ಒಂದು ವಿಶೇಷ ಪ್ರಯತ್ನವನ್ನು ಮಾಡುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ.
ಸಂಗೀತ 71 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 10ರಿಂದ ಆರಂಭವಾಗುವ ವಾರ
ಸಂಗೀತ 56
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಕದಲ್ಲಿ ಕೊಡಲ್ಪಟ್ಟಿರುವಂತೆ, ಮಾರ್ಚ್ 18-23ಕ್ಕಾಗಿ ಶೆಡ್ಯೂಲ್ ಮಾಡಲ್ಪಟ್ಟಿರುವ ಜ್ಞಾಪಕದ ಬೈಬಲ್ ವಾಚನವನ್ನು ಮಾಡುವುದರ ಕುರಿತಾಗಿ ಖಚಿತರಾಗಿರುವಂತೆ ಎಲ್ಲರಿಗೆ ಜ್ಞಾಪಕ ಹುಟ್ಟಿಸಿರಿ.
20 ನಿ: “ಕೃತಜ್ಞತೆಯುಳ್ಳವರಾಗಿರಿ.” ಪ್ರಶ್ನೋತ್ತರಗಳು. ಬೈಬಲ್ ವಿದ್ಯಾರ್ಥಿಗಳು, ಆಸಕ್ತ ವ್ಯಕ್ತಿಗಳು, ಪ್ರಸನ್ನಕರವಾದ ಮನೋಭಾವವುಳ್ಳ ಕುಟುಂಬ ಸದಸ್ಯರು ಮತ್ತು ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವ ಸಹೋದರಸಹೋದರಿಯಲ್ಲಿ ಯಾರನ್ನೇ ಆಗಲಿ, ಜ್ಞಾಪಕಕ್ಕೆ ಹಾಜರಾಗುವಂತೆ ಆಮಂತ್ರಿಸುವುದರಲ್ಲಿ ಎಲ್ಲರೂ ಒಂದು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಬೇಕು. ಜ್ಞಾಪಕದ ಆಮಂತ್ರಣವನ್ನು ಉಪಯೋಗಿಸುತ್ತಾ, ಪ್ರಚಾರಕನು ಆಸಕ್ತ ವ್ಯಕ್ತಿಯನ್ನು ಜ್ಞಾಪಕಕ್ಕೆ ಆಮಂತ್ರಿಸುತ್ತಿರುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವು ಇರಲಿ. ಜುಲೈ 1, 1988ರ ವಾಚ್ಟವರ್ ಪತ್ರಿಕೆಯ 11ನೆಯ ಪುಟದ, 16-17ನೆಯ ಪ್ಯಾರಗ್ರಾಫ್ಗಳ ಮೇಲೆ ಆಧರಿಸಿ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ. ಸಾಧ್ಯವಿರುವವರೆಲ್ಲರೂ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ಪ್ರೋತ್ಸಾಹಿಸಿರಿ.
15 ನಿ: “ಒಂದು ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳುವಂತೆ ಕುಟುಂಬಗಳಿಗೆ ಸಹಾಯ ಮಾಡುವುದು.” (6-8ನೆಯ ಪ್ಯಾರಗ್ರಾಫ್ಗಳು) ಉದ್ಯೋಗದ ಸ್ಥಳದಲ್ಲಿ, ಶಾಲೆಯಲ್ಲಿ, ಉದ್ಯಾನವನದಲ್ಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ, ಹಾಗೂ ಸಂಬಂಧಿಕರನ್ನು ಸಂದರ್ಶಿಸುವಾಗ ಮಾಡುವ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ, ಕುಟುಂಬ ಸಂತೋಷ ಪುಸ್ತಕವನ್ನು ನೀಡುವ ವಿಧವನ್ನು ತೋರಿಸುವ ಕೆಲವು ಸಲಹೆಗಳನ್ನು ನೀಡಿರಿ. 6 ಮತ್ತು 7ನೆಯ ಪ್ಯಾರಗ್ರಾಫ್ಗಳಲ್ಲಿರುವ ನಿರೂಪಣೆಗಳನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ. ಪುನರ್ಭೇಟಿಯಲ್ಲಿ ಮಾಡಲ್ಪಡುವ ಚರ್ಚೆಯು, ಬೈಬಲಿನ ಒಂದು ಅಭ್ಯಾಸವು ಕುಟುಂಬ ಸಂಬಂಧಗಳನ್ನು ಹೇಗೆ ಬಲಪಡಿಸಬಲ್ಲದೆಂಬುದನ್ನು ಗಣ್ಯಮಾಡುವಂತೆ ಆ ವ್ಯಕ್ತಿಗೆ ಸಹಾಯ ಮಾಡಬೇಕು. ಜ್ಞಾನ ಪುಸ್ತಕಕ್ಕೆ ಬದಲಾಯಿಸುವ ಗುರಿಯೊಂದಿಗೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನಲ್ಲಿ ಅಭ್ಯಾಸಗಳು ನಡೆಸಲ್ಪಡಬೇಕು, ಅಥವಾ ಅಭ್ಯಾಸವನ್ನು ಜ್ಞಾನ ಪುಸ್ತಕದಲ್ಲೇ ಆರಂಭಿಸಬಹುದು.
ಸಂಗೀತ 72 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 17ರಿಂದ ಆರಂಭವಾಗುವ ವಾರ
ಸಂಗೀತ 63
15 ನಿ: ಸ್ಥಳಿಕ ತಿಳಿಸುವಿಕೆಗಳು. “ಜ್ಞಾಪಕದ ಜ್ಞಾಪನಗಳು” ಲೇಖನವನ್ನು ಪುನರ್ವಿಮರ್ಶಿಸಿರಿ ಮತ್ತು ಸ್ಥಳಿಕ ಜ್ಞಾಪಕದ ಏರ್ಪಾಡುಗಳನ್ನು ತಿಳಿಸಿರಿ. ಬೈಬಲ್ ವಿದ್ಯಾರ್ಥಿಗಳು ಮತ್ತು ಆಸಕ್ತ ವ್ಯಕ್ತಿಗಳು ಹಾಜರಾಗುವಂತೆ ಸಹಾಯ ಮಾಡಲು ಎಲ್ಲರೂ ಕೊನೆಯ ಯೋಜನೆಗಳನ್ನು ಮಾಡಬೇಕು.
15 ನಿ: ಸ್ಥಳಿಕ ಅಗತ್ಯಗಳು. ಅಥವಾ ಸೆಪ್ಟಂಬರ್ 15, 1996ರ ಕಾವಲಿನಬುರುಜುವಿನ 22-4ನೆಯ ಪುಟಗಳಲ್ಲಿರುವ “ನೀವು ತಪ್ಪೊಪ್ಪಿಕೊಳ್ಳುವುದು ನಿಜವಾಗಿ ಅವಶ್ಯವೊ?” ಎಂಬ ಲೇಖನದ ಆಧಾರದ ಮೇಲೆ ಹಿರಿಯನೊಬ್ಬನಿಂದ ಭಾಷಣ.
15 ನಿ: 1997 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ದ ಸದುಪಯೋಗವನ್ನು ಮಾಡಿರಿ. 3-9ನೆಯ ಪುಟಗಳಲ್ಲಿ ಆವರಿಸಲ್ಪಟ್ಟಿರುವ ಮುಖ್ಯಾಂಶಗಳನ್ನು ತಂದೆಯು ಕುಟುಂಬದೊಂದಿಗೆ ಪುನರ್ವಿಮರ್ಶಿಸುತ್ತಾನೆ. ಲೋಕದಲ್ಲೆಲ್ಲಾ ಆಗುತ್ತಿರುವ ದೇವಪ್ರಭುತ್ವ ಪ್ರಗತಿಯನ್ನು ನೋಡಿ ನಾವು ಹರ್ಷಿಸುವ ಕಾರಣವನ್ನು ತೋರಿಸುತ್ತಾನೆ. ಬರುವ ವರ್ಷದಲ್ಲಿ, ಊಟದ ಸಮಯದಲ್ಲಿ ವರ್ಷಪುಸ್ತಕವನ್ನು ಪ್ರಗತಿಪರವಾಗಿ ಓದಲು ಹಾಗೂ ದಿನದ ವಚನವನ್ನು ಪರಿಗಣಿಸಲು ಕೆಲವು ನಿಮಿಷಗಳನ್ನು ಅವರು ಉಪಯೋಗಿಸಬಹುದಾದ ವಿಧವನ್ನು ತಂದೆಯು ವಿವರಿಸುತ್ತಾನೆ.
ಸಂಗೀತ 75 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 24ರಿಂದ ಆರಂಭವಾಗುವ ವಾರ
ಸಂಗೀತ 67
9 ನಿ: ಸ್ಥಳಿಕ ತಿಳಿಸುವಿಕೆಗಳು. ಎಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲಿಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಇನ್ನೂ ತಡವಾಗಿಲ್ಲವೆಂಬುದನ್ನು ವಿವರಿಸಿರಿ ಮತ್ತು ಅರ್ಜಿಯನ್ನು ಸಲ್ಲಿಸುವಂತೆ ಎಲ್ಲರನ್ನು ಉತ್ತೇಜಿಸಿರಿ. ಆ ತಿಂಗಳಿನಲ್ಲಿ ಸೇವೆಗಾಗಿ ಕೂಟಗಳಿಗಾಗಿ ಸ್ಥಳಿಕವಾಗಿ ಮಾಡಲ್ಪಡುತ್ತಿರುವ ಹೆಚ್ಚಿನ ಏರ್ಪಾಡುಗಳ ಕುರಿತಾಗಿ ತಿಳಿಸಿರಿ.
24 ನಿ: “ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಧೈರ್ಯವನ್ನು ಒಟ್ಟುಗೂಡಿಸಿರಿ.” (1-20ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. 16ನೆಯ ಪ್ಯಾರಗ್ರಾಫನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.
12 ನಿ: ಒಬ್ಬ ಹೊಸ ಪ್ರಚಾರಕನಿಗೆ ಆರಂಭಿಸುವಂತೆ ಸಹಾಯ ಮಾಡುವುದು. ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯ 19ನೆಯ ಪ್ಯಾರಗ್ರಾಫನ್ನು ಪುನರ್ವಿಮರ್ಶಿಸಿರಿ. ಒಬ್ಬ ಸಮರ್ಥ ಪ್ರಚಾರಕನು, ಒಬ್ಬ ಅಸ್ನಾನಿತ ಪ್ರಚಾರಕನಾಗಲು ಈಗ ತಾನೇ ಹಿರಿಯರಿಂದ ಸಮ್ಮತಿಸಲ್ಪಟ್ಟಿರುವ ಒಬ್ಬ ಬೈಬಲ್ ವಿದ್ಯಾರ್ಥಿಯನ್ನು ತಯಾರಿಸುವ ವಿಧವನ್ನು ಪ್ರತ್ಯಕ್ಷಾಭಿನಯಿಸಿರಿ. ಅವರು ನಮ್ಮ ಶುಶ್ರೂಷೆ ಪುಸ್ತಕದ ಪುಟ 111ರಲ್ಲಿ, 2ನೆಯ ಪ್ಯಾರಗ್ರಾಫನ್ನು ಜೊತೆಯಾಗಿ ಪುನರ್ವಿಮರ್ಶಿಸುತ್ತಾರೆ. ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವಾಗ ಸಂಭವನೀಯವಾಗಿ ಏನನ್ನು ಎದುರಿಸಬಹುದೆಂಬುದನ್ನು ಮತ್ತು ಹೆಚ್ಚಿನವರು ಪ್ರತಿಕ್ರಿಯೆ ತೋರಿಸದಿದ್ದಲ್ಲಿ ನಿರುತ್ಸಾಹಗೊಳ್ಳುವ ಅಗತ್ಯವಿಲ್ಲವೆಂಬುದನ್ನು ಅನುಭವಿ ಪ್ರಚಾರಕನೊಬ್ಬನು ತೋರಿಸುತ್ತಾನೆ. ಕಿವಿಗೊಡುವ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ನಾವು ಕಂಡುಕೊಳ್ಳುವಾಗ ಬರುವಂತಹ ಆನಂದವನ್ನು ತೋರಿಸುವ ಒಂದು ಪ್ರೋತ್ಸಾಹದಾಯಕ ಅನುಭವವನ್ನು ಪ್ರಚಾರಕನು ತಿಳಿಸುತ್ತಾನೆ. ಅವರು ಜೊತೆಗೂಡಿ ಒಂದು ಸಂಕ್ಷಿಪ್ತವಾದ, ಸರಳ ಪತ್ರಿಕಾ ನಿರೂಪಣೆಯನ್ನು ತಯಾರಿಸುತ್ತಾರೆ ಮತ್ತು ಅನಂತರ ಅದನ್ನು ಪ್ರ್ಯಾಕ್ಟೀಸ್ ಮಾಡುತ್ತಾರೆ. ಪ್ರೋತ್ಸಾಹದಾಯಕ ಪ್ರಶಂಸೆಯು ನೀಡಲ್ಪಡುತ್ತದೆ ಮತ್ತು ಈ ವಾರದಲ್ಲಿ ಜೊತೆಯಾಗಿ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳಲು ನಿಶ್ಚಿತವಾದ ಏರ್ಪಾಡುಗಳನ್ನು ಮಾಡಲಾಗುತ್ತದೆ.
ಸಂಗೀತ 89 ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 31ರಿಂದ ಆರಂಭವಾಗುವ ವಾರ
ಸಂಗೀತ 70
15 ನಿ: ಸ್ಥಳಿಕ ತಿಳಿಸುವಿಕೆಗಳು. ಎಪ್ರಿಲ್ 6ರಂದು ಇರುವ ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾಗುವಂತೆ ಎಲ್ಲಾ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಿರಿ. ಮಾರ್ಚ್ ತಿಂಗಳಿನ ಕ್ಷೇತ್ರ ಸೇವಾ ರಿಪೋರ್ಟ್ಗಳನ್ನು ಹಾಕುವಂತೆ ಎಲ್ಲರಿಗೆ ಜ್ಞಾಪಕ ಹುಟ್ಟಿಸಿರಿ. ಎಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವವರೆಲ್ಲರ ಹೆಸರುಗಳನ್ನು ಪ್ರಕಟಿಸಿರಿ. ಪ್ರಶ್ನಾ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.
20 ನಿ: “ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಧೈರ್ಯವನ್ನು ಒಟ್ಟುಗೂಡಿಸಿರಿ.” (21-35ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. ಪುಟ 3ರಲ್ಲಿರುವ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ. ತಮ್ಮ ಕ್ಷೇತ್ರ ಸೇವೆಯನ್ನು ವರದಿಸುವಾಗ, ತಾವು ಮಾಡುವ ಪ್ರತಿಯೊಂದು ಪುನರ್ಭೇಟಿಯನ್ನು ಲೆಕ್ಕ ಮಾಡುವಂತೆ ಎಲ್ಲರನ್ನೂ ಉತ್ತೇಜಿಸಿರಿ.
10 ನಿ: ಎಪ್ರಿಲ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳನ್ನು ನೀಡಿರಿ. ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟದಲ್ಲಿರುವ 3, 4, ಮತ್ತು 8ನೆಯ ಪ್ಯಾರಗ್ರಾಫ್ಗಳಲ್ಲಿ ತೋರಿಬರುವ ಪತ್ರಿಕಾ ನಿರೂಪಣೆಗಳನ್ನು ತಯಾರಿಸುವ ವಿಧದ ಕುರಿತಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ. ಇಬ್ಬರು ಪ್ರಚಾರಕರು ಒಂದು ಅಥವಾ ಎರಡು ಚಿಕ್ಕ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಲಿ. ಚಂದಾ ನೀಡಿಕೆಯು ಸ್ವೀಕರಿಸಲ್ಪಡದಿದ್ದಲ್ಲಿ, ಪತ್ರಿಕೆಗಳ ಒಂದು ಅಥವಾ ಹೆಚ್ಚು ಬಿಡಿ ಪ್ರತಿಗಳು ನೀಡಲ್ಪಡಬೇಕು. ಚಂದಾ ಮಾಡದಿರುವುದಾದರೂ ಪತ್ರಿಕೆಗಳನ್ನು ಸ್ವೀಕರಿಸುವವರ ಒಂದು ರೆಕಾರ್ಡನ್ನು ಪ್ರಚಾರಕರು ಇಡಬೇಕು ಮತ್ತು ಅವುಗಳನ್ನು ತಮ್ಮ ಪತ್ರಿಕಾ ಮಾರ್ಗಕ್ಕೆ ಕೂಡಿಸಬೇಕು.
ಸಂಗೀತ 92 ಮತ್ತು ಸಮಾಪ್ತಿಯ ಪ್ರಾರ್ಥನೆ.