ನಂಬಿಗಸ್ತಿಕೆಗೆ ಪ್ರತಿಫಲವು ಕೊಡಲ್ಪಡುತ್ತದೆ
1 ದೇವರು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಇಬ್ರಿಯ 11:6ರಲ್ಲಿ ನಮಗೆ ಹೇಳಲಾಗಿದೆ. ‘ಸ್ವಲ್ಪ ಕೆಲಸದಲ್ಲಿ ನಂಬಿಗಸ್ತರಾಗಿರುವ’ ತನ್ನ ಶ್ರದ್ಧಾಳು ಸೇವಕರಿಗೆ ಆತನು ಪ್ರತಿಫಲವನ್ನು ಕೊಡುವ ಒಂದು ವಿಧವು, ‘ಅವರನ್ನು ದೊಡ್ಡ [“ಅನೇಕ,” NW] ಕೆಲಸಗಳಲ್ಲಿ ಇಡು’ವುದರ ಮೂಲಕವೇ. (ಮತ್ತಾ. 25:23) ಬೇರೆ ಮಾತುಗಳಲ್ಲಿ ಹೇಳುವುದಾದರೆ, ತನ್ನ ನಂಬಿಗಸ್ತ ಸಾಕ್ಷಿಗಳಿಗೆ ಹೆಚ್ಚಿನ ಸೇವಾ ಸುಯೋಗಗಳನ್ನು ಕೊಡುವ ಮೂಲಕ ಯೆಹೋವನು ಅನೇಕವೇಳೆ ಶ್ರದ್ಧಾಪೂರ್ವಕ ಕೆಲಸಕ್ಕೆ ಪ್ರತಿಫಲವನ್ನು ಕೊಡುತ್ತಾನೆ.
2 ಅಪೊಸ್ತಲ ಪೌಲನ ನಂಬಿಗಸ್ತಿಕೆಗೆ, ಅವನನ್ನು ಯೂರೋಪ್ ಮತ್ತು ಏಷಿಯಾ ಮೈನರ್ನಲ್ಲಿರುವ ನಗರಗಳು ಮತ್ತು ಹಳ್ಳಿಗಳಿಗೆ ಕೊಂಡೊಯ್ದದಂತಹ ಒಂದು ಶುಶ್ರೂಷೆಗೆ ನೇಮಿಸುವ ಮೂಲಕ ಪ್ರತಿಫಲವನ್ನು ಕೊಡಲಾಯಿತು. (1 ತಿಮೊ. 1:12) ತನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವುದರಲ್ಲಿ ಬಹಳ ಪ್ರಯತ್ನವು ಒಳಗೂಡಿದ್ದರೂ, ಪೌಲನು ತನಗೆ ಸಿಕ್ಕಿದಂತಹ ಸುಯೋಗಕ್ಕೆ ಉಚ್ಚ ಮಾನ್ಯತೆಯನ್ನು ನೀಡಿದನು. (ರೋಮಾ. 11:13; ಕೊಲೊ. 1:25) ಸಾರಲಿಕ್ಕಾಗಿ ಅವಕಾಶಗಳನ್ನು ಶ್ರದ್ಧಾಪೂರ್ವಕವಾಗಿ ಹುಡುಕುವ ಮೂಲಕ ಅವನು ತನ್ನ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸಿದನು. ತನ್ನ ಹುರುಪಿನ ಚಟುವಟಿಕೆಯ ಮೂಲಕ, ಅವನು ತನ್ನ ನಂಬಿಕೆಯನ್ನು ತನ್ನ ಕ್ರಿಯೆಗಳ ಮೂಲಕ ಸ್ಪಷ್ಟವಾಗಿ ತೋರಿಸಿದನು. ಅವನ ಮಾದರಿಯು, ನಾವು ನಮ್ಮ ಸೇವಾ ಸುಯೋಗಗಳನ್ನು ಅಮೂಲ್ಯವಾಗಿ ಎಣಿಸುವಂತೆ ಪ್ರಚೋದಿಸುತ್ತದೆ.
3 ಯೆಹೋವನು ನಮಗೊಂದು ಶುಶ್ರೂಷೆಯನ್ನು ಕೊಟ್ಟಿದ್ದಾನೆ: ಈ ಸೇವಾ ಸುಯೋಗದ ಕಡೆಗೆ ಪೌಲನು ತೋರಿಸಿದಂತಹ ವೀಕ್ಷಣೆಯನ್ನೇ ನಾವು ಹೇಗೆ ತೋರಿಸುವೆವು? ಶುಶ್ರೂಷೆಯಲ್ಲಿನ ನಮ್ಮ ಪಾಲನ್ನು ಹೆಚ್ಚಿಸಲು ನಾವು ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ಅನೌಪಚಾರಿಕವಾಗಿಯೂ ಮನೆಯಿಂದ ಮನೆಗೂ ಸಾಕ್ಷಿನೀಡಲಿಕ್ಕಾಗಿ ನಾವು ಪ್ರತಿಯೊಂದು ಸಂದರ್ಭದ ಲಾಭವನ್ನು ತೆಗೆದುಕೊಳ್ಳುತ್ತೇವೆ. ಮನೆಯಲ್ಲಿಲ್ಲದವರ ಎಲ್ಲ ವಿಳಾಸಗಳನ್ನು ನಾವು ಪುನಃ ಸಂದರ್ಶಿಸುತ್ತೇವೆ ಮತ್ತು ಆಸಕ್ತರಾಗಿರುವವರೆಲ್ಲರಿಗೆ ಪುನರ್ಭೇಟಿಗಳನ್ನು ಮಾಡುತ್ತೇವೆ. ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುವುದಕ್ಕಾಗಿರುವ ನಮ್ಮ ಕಾರ್ಯನಿಶ್ಚಯಗಳನ್ನು ನಾವು ಕಾಪಾಡಿಕೊಂಡು ಹೋಗುತ್ತೇವೆ.
4 ನಮ್ಮ ಶುಶ್ರೂಷೆಯ ಕುರಿತಾಗಿ, ಪೌಲನು ಬುದ್ಧಿಹೇಳಿದ್ದು: “ಅದನ್ನು ತುರ್ತಾಗಿ ಮಾಡು” (NW). (2 ತಿಮೊ. 4:2) ತುರ್ತಾಗಿರುವ ಒಂದು ವಿಷಯಕ್ಕೆ ತತ್ಕ್ಷಣದ ಗಮನವು ಅಗತ್ಯ. ನಮ್ಮ ಜೀವಿತಗಳಲ್ಲಿ ನಮ್ಮ ಶುಶ್ರೂಷೆಗೆ ಪ್ರಾಧಾನ್ಯತೆಯನ್ನು ಕೊಡುತ್ತಾ, ನಾವು ಅದನ್ನು ಒಂದು ತುರ್ತುಭಾವದಿಂದ ಪೂರೈಸುತ್ತಿದ್ದೇವೊ? ಉದಾಹರಣೆಗಾಗಿ, ವಾರಾಂತ್ಯದಲ್ಲಿ ನಾವು ಕ್ಷೇತ್ರ ಸೇವೆಗಾಗಿ ಮೀಸಲಾಗಿಡಬೇಕಾದ ಸಮಯದೊಂದಿಗೆ ನಮ್ಮ ಮನೋರಂಜನೆಯ ಚಟುವಟಿಕೆಗಳು ಅಥವಾ ಇತರ ವೈಯಕ್ತಿಕ ಬೆನ್ನಟ್ಟುವಿಕೆಗಳು ಅಡ್ಡಬರುವಂತೆ ನಾವು ಅನುಮತಿಸಲು ಬಯಸದಿರುವೆವು. ಈ ವ್ಯವಸ್ಥೆಯ ಅಂತ್ಯವು ವೇಗವಾಗಿ ಸಮೀಪಿಸುತ್ತಿದೆಯೆಂದು ನಮಗೆ ಮನವರಿಕೆಯಾಗಿರುವುದರಿಂದ, ನಾವು ಮಾಡಸಾಧ್ಯವಿರುವ ಅತ್ಯಂತ ಪ್ರಾಮುಖ್ಯ ಕೆಲಸವು ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆಯೆಂದೂ ನಮಗೆ ಮನವರಿಕೆಯಾಗಿದೆ.
5 ದೇವರ ಕಡೆಗಿನ ನಮ್ಮ ನಂಬಿಗಸ್ತಿಕೆಯು, ನಾವು ಆತನ ಕಡೆಗೆ ಸತ್ಯವಂತರೂ ನಿಷ್ಠಾವಂತರೂ ಆಗಿರುವುದು ಮತ್ತು ಆತನು ನಮಗೆ ನೇಮಿಸಿರುವ ಕೆಲಸವನ್ನು ಸತತವಾಗಿ ಮಾಡುವುದರ ಮೂಲಕ ಸೂಚಿಸಲ್ಪಡುತ್ತದೆ. ಯೆಹೋವನು ನಮ್ಮ ನಂಬಿಗಸ್ತಿಕೆಗೆ ಒಂದು ದೊಡ್ಡ ರೀತಿಯಲ್ಲಿ ಪ್ರತಿಫಲವನ್ನು ಕೊಡುವಂತೆ, ನಾವು ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸೋಣ.