ಜನರು ಇರುವಲ್ಲೆಲ್ಲಾ ಸಾಕ್ಷಿನೀಡಿರಿ
1 ಅಪೊಸ್ತಲ ಪೌಲನು, ತನ್ನ ಶುಶ್ರೂಷೆಯಲ್ಲಿ ದೇವರಾತ್ಮವು ವಹಿಸಿದ ಪಾತ್ರವನ್ನು ಗ್ರಹಿಸುತ್ತಾ ತಿಳಿಸಿದ್ದು: “ಬೆಳೆಸುತ್ತಾ ಬಂದವನು ದೇವರು.” “ನಾವು ದೇವರ ಜೊತೆಕೆಲಸದವರು” ಎಂಬುದನ್ನೂ ಅವನು ಅಂಗೀಕರಿಸಿದನು. (1 ಕೊರಿಂ. 3:5-9) ಇದೊಂದು ಅದ್ಭುತಕರವಾದ ಸುಯೋಗ. ದೇವರೊಂದಿಗೆ ಜೊತೆಕೆಲಸದವರಾಗಿರುವುದನ್ನು ನಾವು ಗಣ್ಯಮಾಡುತ್ತೇವೆಂಬುದನ್ನು ನಾವು ಬಹಿರಂಗವಾಗಿ ಹೇಗೆ ಪ್ರದರ್ಶಿಸಬಲ್ಲೆವು? ಮನೆಯಿಂದ ಮನೆಯ ಕಾರ್ಯದಲ್ಲಿ ಮತ್ತು ಬೇರೆ ಎಲ್ಲೆಡೆಯಲ್ಲೂ ನಾವು ಭೇಟಿಯಾಗುವವರೆಲ್ಲರಿಗೆ ಸುವಾರ್ತೆಯನ್ನು ಪ್ರಕಟಿಸುವ ಮೂಲಕವೇ.
2 ‘ಜನರನ್ನು ಶಿಷ್ಯರನ್ನಾಗಿ ಮಾಡು’ವಂತೆ ನಮ್ಮನ್ನು ಆಜ್ಞಾಪಿಸಲಾಗಿದೆ. (ಮತ್ತಾ. 28:19) ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವಾಗ ಕೇವಲ ಕೆಲವೇ ಜನರನ್ನು ಸಂಪರ್ಕಿಸುವಲ್ಲಿ, ನಾವು ಬೇಗನೆ ದಣಿದು, ನಾವೇನನ್ನೂ ಸಾಧಿಸಿಲ್ಲವೆಂಬ ಅನಿಸಿಕೆ ನಮಗಾಗಬಹುದು. ಇನ್ನೊಂದು ಕಡೆ, ಅನೇಕ ಜನರನ್ನು ಭೇಟಿಯಾಗಿ, ಅವರೊಂದಿಗೆ ಸಂಭಾಷಿಸಲು ಶಕ್ತರಾಗುವಾಗ ನಾವು ನಮ್ಮ ಶುಶ್ರೂಷೆಯಲ್ಲಿ ಅತಿ ಹೆಚ್ಚಾಗಿ ಆನಂದಿಸುತ್ತೇವೆ. ಇದು ಪಂಥಾಹ್ವಾನಕಾರಿಯಾಗಿರಬಲ್ಲದು, ಯಾಕಂದರೆ ಅದು ನಾವು ಜನರನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಅವರು ಇರುವಲ್ಲೆಲ್ಲಾ ಹೋಗುವಂತೆ ನಮ್ಮ ವತಿಯಿಂದ ಆರಂಭದ ಹೆಜ್ಜೆಯನ್ನು ಕೇಳಿಕೊಳ್ಳುತ್ತದೆ.
3 ವ್ಯಾವಹಾರಿಕ ಮಾದರಿಗಳು: ನಾವು ಜನರಿಗೆ, ಮಾರುಕಟ್ಟೆಗಳಲ್ಲಿ, ಉದ್ಯಾನಗಳಲ್ಲಿ, ವಿಶ್ರಮ ತಂಗುದಾಣಗಳಲ್ಲಿ, ಮತ್ತು ಸಾರಿಗೆ ಕೊನೆದಾಣಗಳಲ್ಲಿ—ಅನುಮತಿಸಲ್ಪಡುವಲ್ಲಿ—ಸಾಕ್ಷಿನೀಡಸಾಧ್ಯವಿದೆ. ನೀವು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವಾಗ, ಮಾರ್ಗದಲ್ಲಿ ಸಾಕ್ಷಿನೀಡಲು ನೀವು ತಯಾರಾಗಿದ್ದೀರೊ? ಸೇವೆಗಾಗಿರುವ ಕೂಟಕ್ಕೆ ಹೋಗಲಿಕ್ಕಾಗಿ, ಜನರಿಂದ ಕಿಕ್ಕಿರಿದು ತುಂಬಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾಕ್ಷಿಗಳು, ಭವಿಷ್ಯತ್ತಿಗಾಗಿರುವ ದೇವರ ವಾಗ್ದಾನಗಳನ್ನು ಚರ್ಚಿಸುತ್ತಾ ಜ್ಞಾನ ಪುಸ್ತಕದಲ್ಲಿರುವ ಪ್ರಮೋದವನದ ಚಿತ್ರದ ಕುರಿತಾಗಿ ಸಂಭಾಷಣೆಯನ್ನು ನಡಿಸುತ್ತಾ ಇದ್ದರು. ಅವರು ನಿರೀಕ್ಷಿಸಿದಂತೆ, ಹತ್ತಿರದಲ್ಲಿಯೇ ನಿಂತಿದ್ದ ಒಬ್ಬ ಯುವಕನು ಆಲಿಸಿದನು ಮತ್ತು ಅವನೇನನ್ನು ಕೇಳಿದನೋ ಅದರಿಂದ ಪ್ರಭಾವಿತನಾದನು. ಬಸ್ಸಿನಿಂದ ಇಳಿಯುವ ಮುಂಚೆ, ಅವನು ಒಂದು ಪುಸ್ತಕವನ್ನು ಸ್ವೀಕರಿಸಿ, ಯಾರಾದರೂ ತನ್ನ ಮನೆಗೆ ಭೇಟಿ ನೀಡುವಂತೆ ವಿನಂತಿಸಿದನು.
4 ಅನೇಕ ಪ್ರಚಾರಕರು ಅನೌಪಚಾರಿಕ ಸಾಕ್ಷಿಕಾರ್ಯವನ್ನು ಮಾಡುವುದರಲ್ಲಿ ಆನಂದವನ್ನು ಕಂಡುಕೊಂಡಿದ್ದಾರೆ. ಒಬ್ಬಾಕೆ ಸಹೋದರಿಯು ಒಂದು ಮಧ್ಯಾಹ್ನ, ಸ್ಥಳಿಕ ಶಾಪಿಂಗ್ ಸೆಂಟರ್ಗೆ ಹೋಗಿ, ತಮ್ಮ ಖರೀದಿಯನ್ನು ಮುಗಿಸಿದಂತಹ ಆದರೆ ಅವಸರದಲ್ಲಿರುವಂತೆ ತೋರದಿದ್ದ ಜನರನ್ನು ಸಮೀಪಿಸಿದಳು. ಅವಳು ತನ್ನ ಬ್ಯಾಗ್ನಲ್ಲಿದ್ದ ಎಲ್ಲ ಸಾಹಿತ್ಯವನ್ನು ನೀಡಿದಳು. ಕಾರ್ನಲ್ಲಿ ಕಾಯುತ್ತಿದ್ದ ಒಬ್ಬ ಮನುಷ್ಯನು ಅವಳಿಂದ ಪತ್ರಿಕೆಗಳನ್ನು ಪಡೆದುಕೊಳ್ಳಲು ಸಂತೋಷಪಟ್ಟನು. ಅವನು ಈ ಮುಂಚೆ ಕೂಟಗಳಿಗೆ ಹಾಜರಾಗಿದ್ದನು, ಮತ್ತು ಅವರ ಸಂಭಾಷಣೆಯು ಅವನ ಆಸಕ್ತಿಯನ್ನು ಪುನಃ ಹೊತ್ತಿಸಿತು.
5 ಯೆಹೋವನ ನಾಮವನ್ನು ಉನ್ನತಕ್ಕೇರಿಸುವುದು ಒಂದು ಸುಯೋಗವಾಗಿದೆ. ಸಾರುವ ಕೆಲಸಕ್ಕಾಗಿ ನಮ್ಮ ಹುರುಪನ್ನು ಪ್ರದರ್ಶಿಸುವ ಮೂಲಕ, ನಮ್ಮ ಕಡೆಗೆ ದೇವರು ತೋರಿಸಿರುವ ಅಪಾತ್ರ ದಯೆಯ ಉದ್ದೇಶದ ಗುರಿಯನ್ನು ನಾವು ತಪ್ಪಲಿಲ್ಲವೆಂಬುದನ್ನು ನಾವು ತೋರಿಸುತ್ತೇವೆ. ಇತರರಿಗೆ ಸಹಾಯಮಾಡಲು “ಈಗಲೇ ಸುಪ್ರಸನ್ನತೆಯಕಾಲ” ಆಗಿರುವುದರಿಂದ, ನಾವು ಜನರು ಇರುವಲ್ಲೆಲ್ಲಾ ಹೋಗಿ, ಯೆಹೋವನ “ರಕ್ಷಣೆಯ ದಿನ”ದ ಕುರಿತಾಗಿ ಅವರಿಗೆ ಸಾಕ್ಷಿನೀಡೋಣ.—2 ಕೊರಿಂ. 6:1, 2.