ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/97 ಪು. 2
  • ಜುಲೈಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈಗಾಗಿ ಸೇವಾ ಕೂಟಗಳು
  • 1997 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 7ರಿಂದ ಆರಂಭವಾಗುವ ವಾರ
  • ಜುಲೈ 14ರಿಂದ ಆರಂಭವಾಗುವ ವಾರ
  • ಜುಲೈ 21ರಿಂದ ಆರಂಭವಾಗುವ ವಾರ
  • ಜುಲೈ 28ರಿಂದ ಆರಂಭವಾಗುವ ವಾರ
1997 ನಮ್ಮ ರಾಜ್ಯದ ಸೇವೆ
km 7/97 ಪು. 2

ಜುಲೈಗಾಗಿ ಸೇವಾ ಕೂಟಗಳು

ಜುಲೈ 7ರಿಂದ ಆರಂಭವಾಗುವ ವಾರ

ಸಂಗೀತ 6 (16)

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ತಿಳಿಸುವಿಕೆಗಳು. ದೇಶದ ಮತ್ತು ಸ್ಥಳಿಕ ಸಭೆಯ ಮಾರ್ಚ್‌ ಕ್ಷೇತ್ರ ಸೇವಾ ವರದಿಯ ಕುರಿತಾಗಿ ಹೇಳಿಕೆ ನೀಡಿರಿ.

15 ನಿ: “ನಂಬಿಗಸ್ತಿಕೆಗೆ ಪ್ರತಿಫಲವು ಕೊಡಲ್ಪಡುತ್ತದೆ.” ಪ್ರಶ್ನೋತ್ತರಗಳು. ಜನವರಿ 22, 1993ರ ಅವೇಕ್‌! ಪತ್ರಿಕೆಯ 18-21ನೆಯ ಪುಟಗಳಲ್ಲಿ ತಿಳಿಸಲ್ಪಟ್ಟಿರುವ ಉದಾಹರಣೆಯನ್ನು ಸೇರಿಸಿರಿ.

20 ನಿ: “ಸಾಂತ್ವನವನ್ನು ಕಂಡುಕೊಳ್ಳುವಂತೆ ಇತರರಿಗೆ ಸಹಾಯಮಾಡಿರಿ.” ಸಭಿಕರೊಂದಿಗೆ ಚರ್ಚೆ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಅದೇ ಬ್ರೋಷರುಗಳನ್ನು ಉಪಯೋಗಿಸುತ್ತಾ ಅವರು ಸಂಭಾಷಣೆಗಳನ್ನು ಆರಂಭಿಸಿರುವ ಇತರ ವಿಧಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಆಸಕ್ತಿಯನ್ನು ಕೆರಳಿಸಲು ಸರಳವಾದ, ಚೆನ್ನಾಗಿ ಆರಿಸಲ್ಪಟ್ಟ ಮಾತುಗಳನ್ನು ಉಪಯೋಗಿಸುವಂತೆ ಉತ್ತೇಜಿಸಿರಿ. (ಸ್ಕೂಲ್‌ ಗೈಡ್‌ಬುಕ್‌, 7ನೆಯ ಪುಟ, 9-11ನೆಯ ಪ್ಯಾರಗ್ರಾಫ್‌ಗಳನ್ನು ನೋಡಿರಿ.) ನೀಡಲ್ಪಡಬಹುದಾದ ಇತರ ಬ್ರೋಷರುಗಳು ಮತ್ತು ಸಭೆಯಲ್ಲಿ ಸ್ಟಾಕ್‌ ಇರುವ ಬ್ರೋಷರುಗಳ ಕುರಿತಾಗಿ ತಿಳಿಸಿರಿ.

ಸಂಗೀತ 70 (22) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 14ರಿಂದ ಆರಂಭವಾಗುವ ವಾರ

ಸಂಗೀತ 5 (6)

17 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ. “ಕಿಂಗ್‌ಡಮ್‌ ಹಾಲ್‌ ಫಂಡ್‌” ರೇಖಾಚೌಕದಲ್ಲಿರುವ ವಸ್ತುವಿಷಯವನ್ನು ಸೇರಿಸಿರಿ. “ನಾವು ಕುಟುಂಬ ಸಂತೋಷ ಪುಸ್ತಕವನ್ನು ಅಭ್ಯಾಸಿಸುವೆವು” ಎಂಬ ವಿಷಯವನ್ನು ಪುನರ್ವಿಮರ್ಶಿಸಿರಿ. ಪ್ರತಿಯೊಬ್ಬ ವ್ಯಕ್ತಿಯು ಅಭ್ಯಾಸಕ್ಕಾಗಿ ಪುಸ್ತಕದ ತಮ್ಮ ಸ್ವಂತ ವೈಯಕ್ತಿಕ ಪ್ರತಿಯನ್ನು ಹೊಂದಿರುವ ಅಗತ್ಯವನ್ನು ಒತ್ತಿಹೇಳಿರಿ ಮತ್ತು ಎಲ್ಲರೂ ಪಾಠಗಳನ್ನು ಮುಂಚೆಯೇ ತಯಾರಿಸುವಂತೆ ಉತ್ತೇಜಿಸಿರಿ.

13 ನಿ: “ಜನರು ಇರುವಲ್ಲೆಲ್ಲಾ ಸಾಕ್ಷಿನೀಡಿರಿ.” ಒಂದು ಭಾಷಣ. ಸಮಯವು ಅನುಮತಿಸಿದಂತೆ, 1997 ವರ್ಷಪುಸ್ತಕದ, 43-6ನೆಯ ಪುಟಗಳಲ್ಲಿರುವ ಹೆಚ್ಚಿನ ಅನುಭವಗಳನ್ನು ಹಂಚಿಕೊಳ್ಳಸಾಧ್ಯವಿದೆ.

15 ನಿ: ಹೆತ್ತವರೇ—ನಿಮ್ಮ ಮಕ್ಕಳಿಗೆ ಶೈಶವದಿಂದಲೇ ಕಲಿಸಿರಿ. ಹೆತ್ತವರು ತಮ್ಮ ಮಕ್ಕಳಿಗೆ ಶೈಶವದಿಂದಲೇ ಕಲಿಸುವ ಅಗತ್ಯವನ್ನು ರೇಖಿಸುವ ಶಾಸ್ತ್ರೀಯ ಮೂಲತತ್ತ್ವಗಳನ್ನು ಹಿರಿಯನು ಚರ್ಚಿಸುತ್ತಾನೆ. (ಜ್ಞಾನೋ. 22:6; 2 ತಿಮೊ. 3:14, 15) ಮಕ್ಕಳು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಷ್ಟು ದೊಡ್ಡವರಾಗುವ ತನಕ ಅವರಿಗೆ ಗಂಭೀರವಾದ ಬೈಬಲ್‌ ಶಿಕ್ಷಣವು ಒದಗಿಸಲ್ಪಡಬಾರದೆಂದು ಕೆಲವು ಹೆತ್ತವರಿಗೆ ಅನಿಸುತ್ತದೆ. ಅಂತಹ ವಿದ್ಯಮಾನಗಳಲ್ಲಿ, ಅನೇಕ ಮಕ್ಕಳು ಲೋಕದವರಂತೆ ವರ್ತಿಸಲು ಆರಂಭಿಸಿದ್ದಾರೆ. ಆತ್ಮಿಕ ಉಪದೇಶವು ಶೈಶವದಲ್ಲೇ ಆರಂಭವಾಗಬೇಕು. (ಎಚ್ಚರ!97 4/8 14-15; w88 8/1 12-13) ತಮ್ಮ ಮಕ್ಕಳ ಆತ್ಮಿಕತೆಯ ಕುರಿತಾಗಿ ಚಿಂತೆಯನ್ನು ತೋರಿಸುವ ವಿವಾಹಿತ ದಂಪತಿಗಳ ಸಂದರ್ಶನ ಮಾಡಿರಿ. ತಂದೆಯು ಮುಂದಾಳುತ್ವವನ್ನು ವಹಿಸುವುದಾದರೂ, ಇಬ್ಬರೂ ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ನಿರಂತರವಾದ, ಕೂಲಂಕಷ ಕಾರ್ಯಕ್ರಮವನ್ನು ಒದಗಿಸಲು ತಮ್ಮ ಪಾತ್ರವನ್ನು ವಹಿಸುವ ವಿಧವನ್ನು ತೋರಿಸಿರಿ. ಮನೆಯಲ್ಲಿ ಕಲಿಸುವಿಕೆಗಾಗಿ ಒಂದು ಉತ್ತಮ, ವ್ಯಾವಹಾರಿಕ ಕಾರ್ಯಕ್ರಮವನ್ನು ಹೊಂದುವುದರ ಕುರಿತಾಗಿ ಸಂಸ್ಥೆಯು ಒದಗಿಸಿರುವ ಸಲಹೆಗಳನ್ನು ಅನ್ವಯಿಸುತ್ತಾ, ತಮ್ಮ ಮಕ್ಕಳಿಗೆ ಸತ್ಯವನ್ನು ಕಲಿಸುವ ಪ್ರಯತ್ನದಲ್ಲಿ ಅವರು ಮಾಡುತ್ತಿರುವ ಸಂಗತಿಗಳನ್ನು ದಂಪತಿಗಳು ತಿಳಿಸುತ್ತಾರೆ. ಹೆತ್ತವರು ಏನನ್ನು ಮಾಡಬೇಕೆಂದು ದೇವರ ವಾಕ್ಯವು ಪ್ರಬೋಧಿಸುತ್ತದೊ ಅದನ್ನು ಅನ್ವಯಿಸಿಕೊಳ್ಳುವ ಮಹತ್ತ್ವವನ್ನು ಹಿರಿಯನು ಒತ್ತಿಹೇಳುತ್ತಾನೆ.—w85 4/1 23; ಎಫೆ. 6:1-4.

ಸಂಗೀತ 71 (4) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 21ರಿಂದ ಆರಂಭವಾಗುವ ವಾರ

ಸಂಗೀತ 14 (8)

15 ನಿ: ಸ್ಥಳಿಕ ತಿಳಿಸುವಿಕೆಗಳು. “ಹಳೆಯ ಪುಸ್ತಕಗಳನ್ನು ಉಪಯೋಗಿಸುವುದು” ಎಂಬ ವಿಷಯವನ್ನು ಚರ್ಚಿಸಿರಿ. ಪ್ರಚಾರಕರು ಈ ವಾರದೊಳಗೆ ತಮ್ಮ ವೈಯಕ್ತಿಕ ಲೈಬ್ರರಿಗಳನ್ನು ಪರೀಕ್ಷಿಸಿ, ಈ ಪ್ರಕಾಶನಗಳ ವಿಷಯದಲ್ಲಿ ತಮ್ಮ ಅಗತ್ಯಗಳನ್ನು ಗೊತ್ತುಮಾಡಲು ಮತ್ತು ಅನಂತರ, ಸಭೆಯು ಅವುಗಳನ್ನು ಈ ತಿಂಗಳ ಅಂತ್ಯದಲ್ಲಿ ಸೊಸೈಟಿಯಿಂದ ವಿನಂತಿಸಿಕೊಳ್ಳಸಾಧ್ಯವಾಗುವಂತೆ ಅವುಗಳಿಗಾಗಿ ಲಿಟರೇಚರ್‌ ಕೌಂಟರ್‌ನಿಂದ ಆರ್ಡರ್‌ ಮಾಡುವಂತೆ ಉತ್ತೇಜಿಸಿರಿ.

15 ನಿ: “ಹೊಸ ಬ್ರೋಷರ್‌ ಮತ್ತು ಅದರ ಕ್ಯಾಸೆಟ್ಟನ್ನು ಉಪಯೋಗಿಸುವ ಮೂಲಕ ಇತರರು ದೇವರ ಆವಶ್ಯಕತೆಗಳನ್ನು ಕಲಿಯುವಂತೆ ಸಹಾಯಮಾಡಿರಿ.” ಭಾಷಣ. ಲಭ್ಯವಿರುವಲ್ಲಿ, ಅಪೇಕ್ಷಿಸು ಬ್ರೋಷರಿನ ಆಡಿಯೊ ಕ್ಯಾಸೆಟ್ಟನ್ನು ಉಪಯೋಗಿಸುತ್ತಾ ಒಂದು ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ಅನೌಪಚಾರಿಕ ಸಾಕ್ಷಿಕಾರ್ಯವನ್ನು ಮಾಡಲು ತಯಾರಾಗಿರಿ. ಪ್ರತಿದಿನ, ನಾವು ಭೇಟಿಯಾಗುವ ಜನರಿಗೆ ಸಾಕ್ಷಿಯನ್ನು ನೀಡಲು ನಮಗೆ ಅವಕಾಶಗಳು ಎದುರುಗೊಳ್ಳುತ್ತವೆ. ಒಂದು ಅವಕಾಶವಿರುವಾಗ, ನಮ್ಮಲ್ಲಿ ಉಪಯೋಗಿಸಲಿಕ್ಕಾಗಿ ಬೈಬಲ್‌ ಅಥವಾ ಪ್ರಕಾಶನಗಳು ಇಲ್ಲದಿರುವುದನ್ನು ನಾವು ಕಂಡುಕೊಳ್ಳಬಹುದು. ಮುಂದಾಗಿ ಯೋಜಿಸಿರಿ. ಮನೆಯಲ್ಲಿ, ನೀವು ಸಂದರ್ಶಕರನ್ನು ವಂದಿಸುವ ಬಾಗಿಲಿನ ಹತ್ತಿರ ನಿಮಗೆ ಸುಲಭವಾಗಿ ಸಿಗುವಂತೆ ಸ್ವಲ್ಪ ಸಾಹಿತ್ಯವನ್ನಿಡಿರಿ. ಒಂದು ಬ್ರೀಫ್‌ಕೇಸ್‌ ಅಥವಾ ಪರ್ಸ್‌ನಲ್ಲಿ ವಿವಿಧ ಸಾಹಿತ್ಯ ಐಟಮ್‌ಗಳನ್ನು ಇಟ್ಟು, ಅದನ್ನು ನಿಮ್ಮೊಂದಿಗಿಟ್ಟುಕೊಳ್ಳಿರಿ ಅಥವಾ ನಿಮ್ಮ ಕಾರ್‌ನಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ, ಅಥವಾ ಶಾಲೆಯಲ್ಲಿ ನಿಮ್ಮ ಲಾಕರ್‌ನಲ್ಲಿ ಇಟ್ಟುಕೊಳ್ಳಿರಿ. ನೀವು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವಾಗ ನಿಮ್ಮೊಂದಿಗೆ ಏನನ್ನಾದರೂ ಒಯ್ಯಿರಿ. ನೀವು ಒಂದು ವ್ಯಾಪಾರ ಸಂಚಾರಕ್ಕೆ ಹೋಗುವಾಗ, ಒಂದು ಅಧಿವೇಶನಕ್ಕೆ ಪ್ರಯಾಣಿಸುವಾಗ, ಅಥವಾ ರಜೆಯಲ್ಲಿ ಹೋಗುವಾಗ ಸ್ವಲ್ಪ ಸಾಹಿತ್ಯವನ್ನು ತೆಗೆದುಕೊಂಡು ಹೋಗಿರಿ. ಸ್ಕೂಲ್‌ ಗೈಡ್‌ಬುಕ್‌ ಪುಟಗಳು 80-2, ಪ್ಯಾರಗ್ರಾಫ್‌ಗಳು 11-16ರಲ್ಲಿರುವ ಹೆಚ್ಚಿನ ಸಲಹೆಗಳನ್ನು ಚರ್ಚಿಸಿರಿ. ಒಬ್ಬ ಮಾರಾಟಗಾರ, ಒಬ್ಬ ಕೆಲಸದಸಂಗಾತಿ, ಒಬ್ಬ ಶಾಲಾಸಂಗಾತಿ, ಜೊತೆ ಪ್ರಯಾಣಿಕ, ಅಥವಾ ರಜೆಯಲ್ಲಿರುವ ಇನ್ನೊಬ್ಬ ವ್ಯಕ್ತಿಯನ್ನು ಸಮೀಪಿಸುವ ಹಲವಾರು ವಿಧಗಳನ್ನು ಪ್ರತ್ಯಕ್ಷಾಭಿನಯಿಸಿರಿ.

ಸಂಗೀತ 72 (22) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 28ರಿಂದ ಆರಂಭವಾಗುವ ವಾರ

ಸಂಗೀತ 15 (2)

12 ನಿ: ಸ್ಥಳಿಕ ತಿಳಿಸುವಿಕೆಗಳು. ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಆಗಸ್ಟ್‌ ತಿಂಗಳಿಗಾಗಿರುವ ಸಾಹಿತ್ಯ ನೀಡಿಕೆಯನ್ನು ಪುನರ್ವಿಮರ್ಶಿಸಿರಿ. ಜುಲೈ ತಿಂಗಳಿನಲ್ಲಿ ಬ್ರೋಷರುಗಳನ್ನು ನೀಡಿರುವಲ್ಲೆಲ್ಲಾ ಆಗಸ್ಟ್‌ ತಿಂಗಳಿನಲ್ಲಿ ಪುನರ್ಭೇಟಿಗಳನ್ನು ಮಾಡಿ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಾ, ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸಿರಿ. ಮಾರ್ಚ್‌ 1997ರ ನಮ್ಮ ರಾಜ್ಯದ ಸೇವೆಯ ಪುರವಣಿಯನ್ನು ಉಪಯೋಗಿಸುತ್ತಾ, ಒಂದು ಪರಿಣಾಮಕಾರಿ ಪುನರ್ಭೇಟಿಗಾಗಿ ಅವಶ್ಯವಾಗಿರುವ ಸಂಗತಿಗಳಲ್ಲಿ ಕೆಲವನ್ನು ಎತ್ತಿತೋರಿಸಿರಿ. ಅಭ್ಯಾಸಗಳನ್ನು ಅಪೇಕ್ಷಿಸು ಬ್ರೋಷರ್‌ ಅಥವಾ ಜ್ಞಾನ ಪುಸ್ತಕದಲ್ಲಿ ಆರಂಭಿಸಬೇಕು. “ಯಾವನು ನಮಗೋಸ್ಕರ ಹೋಗುವನು?” ರೇಖಾಚೌಕದಲ್ಲಿರುವ ಸಕಾರಾತ್ಮಕ ಹೇಳಿಕೆಗಳನ್ನು ಸೇರಿಸಿರಿ. ಕ್ರಮದ ಪಯನೀಯರರಾಗಲು ಸಾಧ್ಯವಿಲ್ಲದವರು, ಬರುವ ಸೇವಾ ವರ್ಷದಲ್ಲಿ ಯಾವ ತಿಂಗಳು ಅಥವಾ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡುವರೆಂಬುದನ್ನು ಯೋಜಿಸಲು ಬಯಸಬಹುದು.

18 ನಿ: “ವೈಯಕ್ತಿಕ ಅಭ್ಯಾಸವು ಆತ್ಮಿಕ ಪ್ರಗತಿಗೆ ನಡೆಸುತ್ತದೆ.” ಪ್ರಶ್ನೋತ್ತರಗಳು. ಸಮಯವು ಅನುಮತಿಸುವಂತೆ ಉಲ್ಲೇಖಿತ ಶಾಸ್ತ್ರವಚನಗಳನ್ನು ಓದಿರಿ. ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸಕ್ಕಾಗಿ ಒಂದು ಸಾಪ್ತಾಹಿಕ ಕಾರ್ಯತಖ್ತೆಯನ್ನು ಪಡೆದಿರುವಂತೆ ಮತ್ತು ಅದಕ್ಕೆ ಅಂಟಿಕೊಳ್ಳುವಂತೆ ಎಲ್ಲರನ್ನು ಉತ್ತೇಜಿಸಿರಿ.

15 ನಿ: ನಿಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಿರಿ. ಸೇವಾಮೇಲ್ವಿಚಾರಕನಿಂದ ನಮ್ಮ ಶುಶ್ರೂಷೆ ಪುಸ್ತಕದ ಪುಟ 5-8ರ ಮೇಲೆ ಆಧಾರಿತವಾದ ಭಾಷಣ. ಶುಶ್ರೂಷಕರೋಪಾದಿ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಎಲ್ಲರನ್ನು ಪ್ರಚೋದಿಸುತ್ತಾ, ಸಾರುವ ಕೆಲಸದ ಪ್ರಾಮುಖ್ಯತೆ ಮತ್ತು ತುರ್ತುಭಾವವನ್ನು ಒತ್ತಿಹೇಳಿರಿ.

ಸಂಗೀತ 75 (6) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ