ಯೆಹೋವನ ಆರಾಧನಾ ಸ್ಥಳಕ್ಕಾಗಿ ಗೌರವವನ್ನು ತೋರಿಸಿರಿ
1 ನಾವು ಯಾರೋ ಒಬ್ಬರ ಮನೆಯಲ್ಲಿ ಅತಿಥಿಗಳಾಗಿರುವಾಗ, ನಾವು ಆ ವ್ಯಕ್ತಿಯ ಸ್ವತ್ತುಗಳಿಗೆ ಗೌರವವನ್ನು ತೋರಿಸುತ್ತೇವೆ, ಅವುಗಳಿಗೆ ಹಾನಿಯಾಗುವಂಥದ್ದೇನನ್ನೂ ಮಾಡುವುದಿಲ್ಲ, ಮತ್ತು ಆ ಮನೆವಾರ್ತೆಯ ಕ್ರಮಬದ್ಧ ನಿಯತಕ್ರಮವನ್ನು ಭಂಗಪಡಿಸುವುದಿಲ್ಲ. ನಾವು ಯೆಹೋವನ ಅತಿಥಿಗಳಾಗಿರುವಾಗ ನಾವು ಇನ್ನೆಷ್ಟು ಹೆಚ್ಚು ಗೌರವಪೂರ್ವಕವಾಗಿ ನಡೆದುಕೊಳ್ಳಬೇಕು! ಆತನ ಮನೆವಾರ್ತೆಯಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೆಂಬುದು ನಮಗೆ ತಿಳಿದಿರತಕ್ಕದ್ದು. (ಕೀರ್ತ. 15:1; 1 ತಿಮೊ. 3:15) ನಮ್ಮ ಕ್ರೈಸ್ತ ಕೂಟವು ರಾಜ್ಯ ಸಭಾಗೃಹದಲ್ಲಿ, ಒಂದು ಖಾಸಗಿ ಮನೆಯಲ್ಲಿ, ಅಥವಾ ಒಂದು ಸಾರ್ವಜನಿಕ ಕಟ್ಟಡದಲ್ಲಿ ನಡೆಸಲ್ಪಡಲಿ, ನಮ್ಮಲ್ಲಿ ಹೆಚ್ಚಿನವರು ನಮ್ಮ ಆರಾಧನಾ ಸ್ಥಳವು, ಯಾರ “ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತ”ದೊ ಆ ಯೆಹೋವನ ಆಲಯವೇ ಆಗಿದೆಯೊ ಎಂಬಂತೆ ಅದಕ್ಕೆ ಗೌರವವನ್ನು ತೋರಿಸುತ್ತೇವೆ.—ಕೀರ್ತ. 148:13.
2 ಆದರೂ, ಕೆಲವು ಸಹೋದರರು ಗದ್ದಲವನ್ನು ಮಾಡುವ ಮೂಲಕ ಅಥವಾ ಪ್ರಸ್ತುತಪಡಿಸಲಾಗುತ್ತಿರುವ ಮಾಹಿತಿಯು ಅಪ್ರಾಮುಖ್ಯವಾಗಿರುವಂತೆ ವರ್ತಿಸುವ ಮೂಲಕ ಗೌರವದ ಕೊರತೆಯನ್ನು ತೋರಿಸುತ್ತಾರೆ. ಕೆಲವು ವಯಸ್ಕರು ಕೂಟವು ನಡೆಯುತ್ತಿರುವಾಗಲೇ ಮೊಗಸಾಲೆಯಲ್ಲಿ, ಸಾಹಿತ್ಯ ಅಥವಾ ಪತ್ರಿಕೆಯ ಕೌಂಟರ್ಗಳ ಸುತ್ತಲೂ, ಶೌಚಾಲಯಗಳಲ್ಲಿ ಅಥವಾ ರಾಜ್ಯ ಸಭಾಗೃಹದ ಹೊರಗೆ ಅನಗತ್ಯವಾದಂತಹ ಸಂಭಾಷಣೆಗಳನ್ನು ನಡೆಸುತ್ತಾ ಇರುತ್ತಾರೆ. ಒಂದು ದೊಡ್ಡ ಮಗು, ಒಂದು ಚಿಕ್ಕ ಮಗುವಿನ ಮೇಲ್ವಿಚಾರಣೆಯನ್ನು ಮಾಡಲು ಅನುಮತಿಸಲ್ಪಡುವಾಗ ಕೆಲವೊಮ್ಮೆ ಇಬ್ಬರೂ ಆಟವಾಡಲು ಆರಂಭಿಸಿ, ಕಾರ್ಯಕ್ರಮದಿಂದ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳುವುದಿಲ್ಲ. ಕೆಲವು ಯುವ ಜನರು ಕೂಟಗಳ ಬಳಿಕ ಆಟವಾಡುತ್ತಿರುವುದು, ವಿಪರೀತ ಗದ್ದಲಮಾಡುವುದು, ಒಬ್ಬರು ಇನ್ನೊಬ್ಬರ ಕಡೆಗೆ ಕರಾಟೆಯಂತಹ ಭಂಗಿಗಳನ್ನೂ ಮಾಡುತ್ತಿರುವುದನ್ನು ನೋಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಅವರು ನೆರೆಹೊರೆಯವರನ್ನು ಕ್ಷೋಭೆಗೊಳಿಸಿದ್ದಾರೆ ಅಥವಾ ಬೀದಿಯಲ್ಲಿನ ವಾಹನಸಂಚಾರಕ್ಕೆ ಅಡ್ಡಿಯನ್ನುಂಟುಮಾಡಿದ್ದಾರೆ.
3 ಅಗೌರವವನ್ನು ತೋರಿಸದಿರುವ ವಿಧ: ನಮ್ಮ ಆರಾಧನೆಯ ಘನತೆ ಮತ್ತು ಪಾವಿತ್ರ್ಯವನ್ನು ಗ್ರಹಿಸುತ್ತಾ, ನಾವು ಪಿಸುಗುಟ್ಟುವ ಮೂಲಕ, ತಿನ್ನುತ್ತಿರುವ ಮೂಲಕ, ಚೂಯಿಂಗ್ಗಮ್ ಅನ್ನು ಅಗಿಯುವ ಮೂಲಕ, ಕಾಗದಗಳ ಚರಚರ ಶಬ್ದವನ್ನು ಮಾಡುವ ಮೂಲಕ, ಶೌಚಾಲಯಕ್ಕೆ ಅನಗತ್ಯವಾಗಿ ಹೋಗುವ ಮೂಲಕ, ಅಥವಾ ಕೂಟಗಳಿಗೆ ಯಾವಾಗಲೂ ತಡವಾಗಿ ಬರುವ ಮೂಲಕ ನಿಸ್ಸಂದೇಹವಾಗಿಯೂ ನಾವು ಇತರರನ್ನು ಅಪಕರ್ಷಿಸಲು ಬಯಸದಿರುವೆವು. ಗೌರವಪೂರ್ವಕರೂ ಗಣ್ಯತಾಭಾವವುಳ್ಳವರೂ ಆದ ಹೆತ್ತವರು, ತಮ್ಮ ಮಕ್ಕಳು ನೆಲದ ಮೇಲೆ ಕಸವನ್ನು ಬಿಸಾಡುವಂತೆ ಅಥವಾ ರಾಜ್ಯ ಸಭಾಗೃಹದಲ್ಲಿ ಅಥವಾ ಎಲ್ಲಿ ಸಭಾ ಪುಸ್ತಕ ಅಭ್ಯಾಸವು ನಡೆಸಲ್ಪಡುತ್ತದೋ ಆ ಮನೆಯಲ್ಲಿರುವ ಕುರ್ಚಿಗಳನ್ನು ಅಥವಾ ಗೋಡೆಗಳನ್ನು ಗಲೀಜುಮಾಡುವಂತೆ ಬಿಡುವುದಿಲ್ಲ. ಮತ್ತು ನಮ್ಮ ಕೂಟಗಳಲ್ಲಿ ಯಾವುದೇ ರೀತಿಯ ಲಜ್ಜಾಸ್ಪದ ನಡತೆ, ಮೂರ್ಖ ಮಾತುಕತೆ, ಅಥವಾ ಹೊಲಸಾದ ಕುಚೋದ್ಯಮಾಡುವಿಕೆಯು ನಿಶ್ಚಯವಾಗಿ ಅನುಚಿತವೆಂಬುದನ್ನು ನಾವೆಲ್ಲರೂ ನಿಸ್ಸಂದೇಹವಾಗಿ ಒಪ್ಪಿಕೊಳ್ಳುತ್ತೇವೆ.—ಎಫೆ. 5:4.
4 ನಮ್ಮ ಕ್ರೈಸ್ತ ಕೂಟಗಳ ಉದ್ದೇಶವನ್ನು ನಾವು ಯಾವಾಗಲೂ ನೆನಪಿನಲ್ಲಿಡುವಲ್ಲಿ, ನಾವು “ನಿಂತುಕೊಳ್ಳಲು ಆಯ್ದುಕೊಂಡಿರುವ” (NW) ಸ್ಥಳದಲ್ಲಿ ನಾವೂ ನಮ್ಮ ಮಕ್ಕಳೂ ಯೆಹೋವನ ಆರಾಧನೆಗಾಗಿ ಯೋಗ್ಯವಾದ ಗೌರವವನ್ನು ತೋರಿಸುವುದನ್ನು ಖಚಿತಪಡಿಸಿಕೊಳ್ಳುವೆವು.—ಕೀರ್ತ. 84:10.