ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/98 ಪು. 2
  • ಜನವರಿಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿಗಾಗಿ ಸೇವಾ ಕೂಟಗಳು
  • 1998 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 5ರಿಂದ ಆರಂಭವಾಗುವ ವಾರ
  • ಜನವರಿ 12ರಿಂದ ಆರಂಭವಾಗುವ ವಾರ
  • ಜನವರಿ 19ರಿಂದ ಆರಂಭವಾಗುವ ವಾರ
  • ಜನವರಿ 26ರಿಂದ ಆರಂಭವಾಗುವ ವಾರ
1998 ನಮ್ಮ ರಾಜ್ಯದ ಸೇವೆ
km 1/98 ಪು. 2

ಜನವರಿಗಾಗಿ ಸೇವಾ ಕೂಟಗಳು

ಜನವರಿ 5ರಿಂದ ಆರಂಭವಾಗುವ ವಾರ

ಸಂಗೀತ 10 (21)

8 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ತಿಳಿಸುವಿಕೆಗಳು. ಜನವರಿ 13 ಮತ್ತು/ಅಥವಾ 14ಕ್ಕಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ತಿಳಿಸಿರಿ.

17 ನಿ: “ಒಂದು ಸಂಪೂರ್ಣ ಸಾಕ್ಷಿಯನ್ನು ಕೊಡುವುದರಲ್ಲಿ ಹರ್ಷಿಸಿರಿ.” ಸಭಿಕರೊಂದಿಗೆ ಲೇಖನದ ಚರ್ಚೆ. ಒಂದು ಪರಿಣಾಮಕಾರಿ ನಿರೂಪಣೆಯ ಅತ್ಯಾವಶ್ಯಕ ಅಂಶಗಳನ್ನು ಎತ್ತಿಹೇಳಿರಿ: (1) ಸ್ನೇಹಪೂರ್ವಕವಾಗಿ ಅಭಿವಂದಿಸಿರಿ, (2) ಪ್ರಸ್ತುತದಲ್ಲಿ ಆಸಕ್ತಿಕರವಾಗಿರುವ ವಿಷಯದ ಕುರಿತಾಗಿ ಹೇಳಿಕೆಯನ್ನು ನೀಡಿರಿ ಅಥವಾ ಪ್ರಶ್ನೆಯನ್ನು ಕೇಳಿರಿ, (3) ಒಂದು ಸೂಕ್ತ ಶಾಸ್ತ್ರವಚನವನ್ನು ತೋರಿಸಿರಿ, ಮತ್ತು (4) ನೀಡಲ್ಪಡುತ್ತಿರುವ ಪ್ರಕಾಶನಕ್ಕೆ ಆಸಕ್ತಿಯನ್ನು ತಿರುಗಿಸಿರಿ. ಒಬ್ಬ ಸಮರ್ಥ ಪ್ರಚಾರಕನು, ಸೂಚಿಸಲ್ಪಟ್ಟಿರುವ ಆರಂಭದ ನಿರೂಪಣೆ ಮತ್ತು ಅನುರೂಪವಾಗಿರುವ ಪುನರ್ಭೇಟಿಯನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ.

20 ನಿ: ರಕ್ತದ ಕುರಿತಾದ ದೇವರ ನಿಯಮವನ್ನು ಎತ್ತಿಹಿಡಿಯಲು ಈಗ ತಯಾರಿಸಿರಿ. ಅಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌/ರಿಲೀಸ್‌ ಕಾರ್ಡ್‌ ಅನ್ನು ತುಂಬಿಸುವ ಮಹತ್ವವನ್ನು ಅರ್ಹ ಹಿರಿಯನು ಚರ್ಚಿಸುತ್ತಾನೆ. ಅ. ಕೃತ್ಯಗಳು 15:28, 29, ರಕ್ತದ ಕುರಿತಾದ ದೇವರ ಪರಿಪೂರ್ಣ ನಿಯಮದ ಒಂದು ಅಭಿವ್ಯಕ್ತಿಯಾಗಿದೆಯೆಂದು ಕೀರ್ತನೆ 19:7ರಲ್ಲಿರುವ ಪ್ರೇರಿತ ನಿರ್ದೇಶನವು ತೋರಿಸುತ್ತದೆ. ನಿಷ್ಠಾವಂತ ಆರಾಧಕರು ಆ ನಿಯಮವನ್ನು ಎತ್ತಿಹಿಡಿಯಲು ಶ್ರಮಪಡುತ್ತಾರೆ. ಹಾಗೆ ಮಾಡಲು ನಿಮಗಿರುವ ದೃಢನಿರ್ಧಾರವನ್ನು ಈ ಡಾಕ್ಯುಮೆಂಟ್‌ ತಿಳಿಯಪಡಿಸುತ್ತದೆ ಮತ್ತು ನೀವು ನಿಮಗಾಗಿ ಮಾತಾಡಲು ಅಶಕ್ತರಾಗಿರುವಾಗ ಅದು ನಿಮ್ಮ ಪರವಾಗಿ ಮಾತಾಡುತ್ತದೆ. (ಜ್ಞಾನೋಕ್ತಿ 22:3ನ್ನು ಹೋಲಿಸಿರಿ.) ಒಂದು ಹೊಸ ಕಾರ್ಡ್‌, ರಕ್ತವನ್ನು ತೆಗೆದುಕೊಳ್ಳುವ ನಿಮ್ಮ ನಿರಾಕರಣೆಯ ಕುರಿತು ಪ್ರಚಲಿತ ಪ್ರಕಟನೆಯನ್ನು ಒದಗಿಸುತ್ತದೆ. ಈ ಕೂಟದ ನಂತರ, ಒಂದು ಹೊಸ ಕಾರ್ಡನ್ನು ಪಡೆದುಕೊಳ್ಳಲು ಅಪೇಕ್ಷಿಸುವ ದೀಕ್ಷಾಸ್ನಾನಿತ ಸಾಕ್ಷಿಗಳು ಸಾಹಿತ್ಯ ಕೌಂಟರ್‌ನಿಂದ ಒಂದನ್ನು ಪಡೆದುಕೊಳ್ಳಬಹುದು, ಮತ್ತು ಅಸ್ನಾನಿತ ಚಿಕ್ಕ ಮಕ್ಕಳಿರುವವರು, ಪ್ರತಿಯೊಬ್ಬ ಮಗುವಿಗಾಗಿ ಒಂದು ಐಡೆಂಟಿಟಿ ಕಾರ್ಡನ್ನು ಪಡೆದುಕೊಳ್ಳಸಾಧ್ಯವಿದೆ. ಈ ಕಾರ್ಡ್‌ಗಳು ಈ ರಾತ್ರಿಯೇ ತುಂಬಿಸಲ್ಪಡಬಾರದು. ಅವುಗಳನ್ನು ಮನೆಯಲ್ಲಿ ಜಾಗರೂಕತೆಯಿಂದ ತುಂಬಿಸಬೇಕು, ಆದರೆ ಸಹಿಮಾಡಬಾರದು. ಎಲ್ಲ ಕಾರ್ಡುಗಳ ಸಹಿಹಾಕುವಿಕೆ, ಸಾಕ್ಷಿಗಳ ಹಸ್ತಾಕ್ಷರ ಹಾಕುವಿಕೆ, ಮತ್ತು ತಾರೀಖು ಹಾಕುವಿಕೆ, ಸಭಾ ಪುಸ್ತಕ ಚಾಲಕನ ಮೇಲ್ವಿಚಾರಣೆಯ ಕೆಳಗೆ, ಮುಂದಿನ ಸಭಾ ಪುಸ್ತಕ ಅಭ್ಯಾಸದ ನಂತರ ಮಾಡಲ್ಪಡುವುದು. ತನ್ನ ಗುಂಪಿಗೆ ನೇಮಿಸಲ್ಪಟ್ಟಿದ್ದು, ಈ ಮೆಡಿಕಲ್‌ ಡೈರೆಕ್ಟಿವ್‌ಗೆ ಸಹಿಹಾಕಿಸಲು ಅಪೇಕ್ಷಿಸುವವರೆಲ್ಲರಿಗೆ ಅಗತ್ಯವಿರುವ ನೆರವು ಸಿಗುವುದನ್ನು ಇದು ಖಚಿತಪಡಿಸುವುದು. ಸಾಕ್ಷಿಗಳಾಗಿ ಸಹಿಹಾಕುವವರು, ಕಾರ್ಡನ್ನು ಹೊಂದಿರುವವನು ಡಾಕ್ಯುಮೆಂಟಿಗೆ ಸಹಿಹಾಕುವಾಗ ಅದನ್ನು ವಾಸ್ತವವಾಗಿ ನೋಡಬೇಕು. ಆ ಸಮಯದಲ್ಲಿ ಉಪಸ್ಥಿತರಿರದಿರುವ ಮತ್ತು ಒಂದು ಕಾರ್ಡನ್ನು ತುಂಬಿಸಿ ಸಹಿಹಾಕಿಸಿಕೊಳ್ಳಲು ಬಯಸುವ ಯಾವುದೇ ವ್ಯಕ್ತಿಗೆ, ಅಭ್ಯಾಸ ಚಾಲಕರು/ಹಿರಿಯರು ಮುಂದಿನ ಸೇವಾ ಕೂಟದಲ್ಲಿ ನೆರವು ನೀಡುವರು. ಎಲ್ಲ ದೀಕ್ಷಾಸ್ನಾನಿತ ಪ್ರಚಾರಕರು ತಮ್ಮ ಕಾರ್ಡುಗಳನ್ನು ಸರಿಯಾಗಿ ತುಂಬಿಸಿ, ಸಹಿಹಾಕುವ ವರೆಗೆ ನೆರವು ನೀಡಲ್ಪಡುವುದು. (ಅಕ್ಟೋಬರ್‌ 15, 1991ರ ಪತ್ರವನ್ನು ಪುನರ್ವಿಮರ್ಶಿಸಿರಿ.) ಅಸ್ನಾನಿತ ಪ್ರಚಾರಕರು ಈ ಕಾರ್ಡ್‌ನ ವಿಷಯವನ್ನು ತಮ್ಮ ಸ್ವಂತ ಪರಿಸ್ಥಿತಿಗಳು ಮತ್ತು ನಿಶ್ಚಿತಾಭಿಪ್ರಾಯಗಳಿಗೆ ಹೊಂದಿಸಿಕೊಂಡು, ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ತಮ್ಮ ಸ್ವಂತ ಡೈರೆಕ್ಟಿವ್‌ ಅನ್ನು ಬರೆದುಕೊಳ್ಳಬಹುದು.

ಸಂಗೀತ 142 (17) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 12ರಿಂದ ಆರಂಭವಾಗುವ ವಾರ

ಸಂಗೀತ 125 (3)

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

15 ನಿ: “ಕರಪತ್ರಗಳನ್ನು ಸದುಪಯೋಗಿಸಿರಿ.” ಸಭಿಕರೊಂದಿಗೆ ಚರ್ಚೆ. ಡಿಸೆಂಬರ್‌ 1, 1996ರ ಕಾವಲಿನಬುರುಜು ಪತ್ರಿಕೆಯ ಪುಟ 13, ಪ್ಯಾರಗ್ರಾಫ್‌ 15ರಲ್ಲಿರುವ ಅನುಭವವನ್ನು ಒಳಗೂಡಿಸಿರಿ. ಸಭೆಯು ಕರಪತ್ರಗಳನ್ನು ಉಪಯೋಗಿಸದೆ ಇರುವುದಾದರೂ ಅವುಗಳನ್ನು ಇತ್ತೀಚೆಗೆ ಆರ್ಡರ್‌ ಮಾಡಿರುವಲ್ಲಿ, ಅವು ಬೇಗನೆ ಬರುವವೆಂದು ತಿಳಿಸಿರಿ.

20 ನಿ: “ಯೆಹೋವನು ಸಾಧಾರಣವಾಗಿರುವುದಕ್ಕಿಂತಲೂ ಅತೀತವಾದ ಶಕ್ತಿಯನ್ನು ಕೊಡುತ್ತಾನೆ.” ಪ್ರಶ್ನೋತ್ತರಗಳು. (w90 7/15 19, ಪ್ಯಾರಗ್ರಾಫ್‌ 15-16ನ್ನು ನೋಡಿರಿ.) ಯೆಹೋವನು ತಮ್ಮನ್ನು ಹೇಗೆ ಬಲಪಡಿಸಿದ್ದಾನೆಂಬುದನ್ನು ತೋರಿಸುವ ಪ್ರೋತ್ಸಾಹದಾಯಕ ಅನುಭವಗಳನ್ನು ತಿಳಿಸುವಂತೆ ಕೆಲವರೊಂದಿಗೆ ಏರ್ಪಾಡನ್ನು ಮಾಡಿರಿ.

ಸಂಗೀತ 81 (26) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 19ರಿಂದ ಆರಂಭವಾಗುವ ವಾರ

ಸಂಗೀತ 1 (6)

10 ನಿ: ಸ್ಥಳಿಕ ತಿಳಿಸುವಿಕೆಗಳು. ಜನವರಿ 26ಕ್ಕಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ತಿಳಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: ಆನಂದವನ್ನು ತರುವ ಕುಟುಂಬ ಅಭ್ಯಾಸ. ವಿವಾಹಿತ ದಂಪತಿಗಳು, ತಮ್ಮ ಕುಟುಂಬದ ಆತ್ಮಿಕ ಅಗತ್ಯಗಳ ಕುರಿತು ಚರ್ಚಿಸುತ್ತಾರೆ. ತಮ್ಮ ಮಕ್ಕಳನ್ನು ಒಂದು ನಕಾರಾತ್ಮಕ ವಿಧದಲ್ಲಿ ಬಾಧಿಸುತ್ತಿರುವ ಲೌಕಿಕ ಪ್ರಭಾವಗಳ ಕುರಿತು ಚಿಂತಿತರಾಗಿದ್ದು, ತಮ್ಮ ಮಕ್ಕಳ ಆತ್ಮಿಕತೆಯನ್ನು ಬಲಪಡಿಸುವ ಅಗತ್ಯವಿದೆಯೆಂದು ಅವರಿಗನಿಸುತ್ತದಾದರೂ ತಮ್ಮ ಕುಟುಂಬ ಅಭ್ಯಾಸವು ಅಪರೂಪವಾಗಿದ್ದು, ಅನೇಕವೇಳೆ ಪರಿಣಾಮಕಾರಿಯಾಗಿರದೇ ಇರುವುದನ್ನು ಅವರು ಅಂಗೀಕರಿಸುತ್ತಾರೆ. ಆಗಸ್ಟ್‌ 1, 1997ರ ಕಾವಲಿನಬುರುಜು ಪತ್ರಿಕೆಯ ಪುಟಗಳು 26-9ರಲ್ಲಿ ಕೊಡಲ್ಪಟ್ಟಿದ್ದ, ಅರ್ಥಪೂರ್ಣ ಕುಟುಂಬ ಅಭ್ಯಾಸವನ್ನು ನಡಿಸುವ ವಿಧದ ಕುರಿತಾದ ಸಲಹೆಗಳನ್ನು ಅವರು ಜೊತೆಯಾಗಿ ಪುನರ್ವಿಮರ್ಶಿಸುತ್ತಾರೆ. ತಮ್ಮ ಮಕ್ಕಳ ಆತ್ಮಿಕ ಹಿತವನ್ನು ಕಾಪಾಡುವುದರಲ್ಲಿ ಪಟ್ಟುಹಿಡಿಯಲು ಅವರಿಬ್ಬರೂ ದೃಢನಿರ್ಧಾರವುಳ್ಳವರಾಗಿದ್ದಾರೆ.

ಸಂಗೀತ 146 (11) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 26ರಿಂದ ಆರಂಭವಾಗುವ ವಾರ

ಸಂಗೀತ 187 (17)

12 ನಿ: ಸ್ಥಳಿಕ ತಿಳಿಸುವಿಕೆಗಳು. ಫೆಬ್ರವರಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಸದಾ ಜೀವಿಸಬಲ್ಲಿರಿ, ಜ್ಞಾನ, ಮತ್ತು ಕುಟುಂಬ ಸಂತೋಷ ಪುಸ್ತಕಗಳನ್ನು ನೀಡುವಾಗ ಸಹಾಯಕಾರಿಯಾಗಿರುವ ಒಂದೆರಡು ಅಂಶಗಳನ್ನು ಆ ಪುಸ್ತಕಗಳಿಂದ ತಿಳಿಸಿರಿ.

15 ನಿ: “ಯೆಹೋವನ ಆರಾಧನಾ ಸ್ಥಳಕ್ಕಾಗಿ ಗೌರವವನ್ನು ತೋರಿಸಿರಿ.” ಪ್ರಶ್ನೋತ್ತರಗಳು. ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕು. ಅವನು ದಯಾಪರವಾಗಿ ಸ್ಥಳಿಕ ಅನ್ವಯವನ್ನು ಮಾಡಬೇಕು.

18 ನಿ: ಲೋಕವ್ಯಾಪಕವಾದ ಸಾಕ್ಷಿ ಕಾರ್ಯದಲ್ಲಿನ ನಮ್ಮ ಪಾಲನ್ನು ವರದಿಸುವುದು. (ನಮ್ಮ ಶುಶ್ರೂಷೆ ಪುಸ್ತಕದ 100-2, 106-10ನೆಯ ಪುಟಗಳ ಮೇಲೆ ಆಧರಿತ) ಸೆಕ್ರಿಟರಿಯಿಂದ ನಿರ್ವಹಿಸಲ್ಪಡುವ ಭಾಷಣ ಮತ್ತು ಚರ್ಚೆ. ನಮ್ಮ ಚಟುವಟಿಕೆಯನ್ನು ಕ್ರಮವಾಗಿ ವರದಿಸುವ ಶಾಸ್ತ್ರೀಯ ಪೂರ್ವನಿದರ್ಶನವನ್ನು ತೋರಿಸಿದ ಬಳಿಕ, “ನಾವು ಕ್ಷೇತ್ರ ಸೇವೆಯನ್ನು ವರದಿ ಮಾಡುವುದಕ್ಕೆ ಕಾರಣ” ಎಂಬ ಉಪಶೀರ್ಷಿಕೆಯನ್ನು ಪುನರ್ವಿಮರ್ಶಿಸಲಿಕ್ಕಾಗಿ ಅವನು ಇಬ್ಬರು ಶುಶ್ರೂಷಾ ಸೇವಕರನ್ನು ಆಮಂತ್ರಿಸುತ್ತಾನೆ. ನಿಷ್ಕೃಷ್ಟ ವರದಿಗಳನ್ನು ತಡವಿಲ್ಲದೆ ಒಪ್ಪಿಸುವ ಪ್ರಾಮುಖ್ಯವನ್ನು ಸೆಕ್ರಿಟರಿಯು ತದನಂತರ ಒತ್ತಿಹೇಳುತ್ತಾನೆ. ವೈಯಕ್ತಿಕ ಗುರಿಗಳನ್ನಿಡುವುದು ಏಕೆ ಉಪಯುಕ್ತವಾಗಿದೆ ಎಂಬುದಕ್ಕೆ ಅವನು ಕಾರಣಗಳನ್ನು ಕೊಡುತ್ತಾನೆ. ಸಾಕ್ಷಿ ಕಾರ್ಯದಲ್ಲಿ ಪೂರ್ಣ ಪಾಲನ್ನು ಹೊಂದಿರುವವರಿಗೆ ಬರುವಂತಹ ಆಶೀರ್ವಾದಗಳ ಕುರಿತು ಉತ್ತೇಜನದಾಯಕ ಹೇಳಿಕೆಗಳನ್ನು ಮಾಡುತ್ತಾ ಸಮಾಪ್ತಿಗೊಳಿಸುತ್ತಾನೆ.

ಸಂಗೀತ 189 (4) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ