ಒಂದು ಸಂಪೂರ್ಣ ಸಾಕ್ಷಿಯನ್ನು ಕೊಡುವುದರಲ್ಲಿ ಹರ್ಷಿಸಿರಿ
1 ನಾವು ಚೆನ್ನಾಗಿ ಮಾಡುವ ವಿಷಯಗಳಲ್ಲಿ ನಾವೆಲ್ಲರೂ ಆನಂದಿಸುತ್ತೇವೆ. “ಎಲ್ಲಾ ಚೆನ್ನಾಗಿ ಮಾಡಿದ್ದಾನೆ” ಎಂದು ಯೇಸುವಿನ ಕುರಿತಾಗಿ ಜನಸಮೂಹಗಳು ಘೋಷಿಸಿದವೆಂದು ಮಾರ್ಕ 7:37 ಹೇಳುತ್ತದೆ. ಯೆಹೋವನ ಚಿತ್ತವನ್ನು ಮಾಡಲು ಯೇಸು ಹರ್ಷಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ! (ಕೀರ್ತನೆ 40:8ನ್ನು ಹೋಲಿಸಿರಿ.) ಮುಂದಿನ ಸಲಹೆಗಳ ಕುರಿತು ಆಲೋಚಿಸುವ ಮೂಲಕ, “ಜನರಿಗೆ ಸಾರಲು ಮತ್ತು ಒಂದು ಸಂಪೂರ್ಣ ಸಾಕ್ಷಿಯನ್ನು” (NW) ಕೊಡಬೇಕೆಂಬ ಯೇಸುವಿನ ಅಪ್ಪಣೆಗೆ ನಾವು ವಿಧೇಯರಾಗುವಾಗ ತದ್ರೀತಿಯಲ್ಲಿ ಆನಂದವನ್ನು ಕಂಡುಕೊಳ್ಳುವೆವು. (ಅ. ಕೃ. 10:42) ಜನವರಿಯಲ್ಲಿ ನಾವು, ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳೆಂದು ಪಟ್ಟಿಮಾಡಲ್ಪಟ್ಟಿರುವ 192 ಪುಟಗಳ ಪುಸ್ತಕಗಳಲ್ಲಿ ಯಾವುದೇ ಪುಸ್ತಕವನ್ನು ನೀಡುವೆವು. ಅಂತಹ ಪುಸ್ತಕಗಳು ಸ್ಥಳಿಕ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ನಾವು ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳನ್ನು, ಪ್ರತಿ ಪುಸ್ತಕವನ್ನು ರೂ. 20.00ರಂತೆ ನೀಡುವೆವು. ಒಂದು ಸಂಪೂರ್ಣ ಸಾಕ್ಷಿಯನ್ನು ಕೊಡಲಿಕ್ಕಾಗಿ ನಾವು ಈ ಪ್ರಕಾಶನಗಳನ್ನು ಹೇಗೆ ಉಪಯೋಗಿಸಬಹುದು?
2 ಆರೋಗ್ಯದ ವಿಷಯಗಳ ಕುರಿತು ಜನರು ಅನೇಕವೇಳೆ ಚಿಂತಿತರಾಗಿರುವುದರಿಂದ, ನೀವು ಹೀಗೆ ಹೇಳಬಹುದು:
◼“ಔಷಧದ ಕ್ಷೇತ್ರದಲ್ಲಿ ಮಾಡಲ್ಪಟ್ಟಿರುವ ಮಹತ್ವದ ಸಾಧನೆಗಳ ಎದುರಿನಲ್ಲೂ, ಅಸ್ವಸ್ಥತೆಯಿಂದಾಗಿ ತುಂಬ ಕಷ್ಟಾನುಭವವಿದೆ. ನಿಮ್ಮ ಅಭಿಪ್ರಾಯದಲ್ಲಿ ಇದು ಹೀಗೇಕೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅಂಟುರೋಗವು ಕಡೇ ದಿವಸಗಳ ಒಂದು ವೈಶಿಷ್ಟ್ಯವಾಗಿರುವುದೆಂದು ಯೇಸು ಕ್ರಿಸ್ತನು ಹೇಳಿದನು. (ಲೂಕ 21:11) ಆದರೆ, ಅಸ್ವಸ್ಥತೆಯು ಇನ್ನಿಲ್ಲದಿರುವಂತಹ ಒಂದು ಸಮಯದ ಕುರಿತೂ ಬೈಬಲ್ ವರ್ಣಿಸುತ್ತದೆ. [ಯೆಶಾಯ 33:24ನ್ನು ಓದಿರಿ.] ಈ ಕೈಪಿಡಿಯು, ಆ ಮೂಲಭೂತ ಬೈಬಲ್ ಬೋಧನೆಯಲ್ಲಿ ನಿರೀಕ್ಷೆಯನ್ನು ಹೇಗೆ ಪ್ರೇರಿಸುತ್ತದೆಂಬುದನ್ನು ಗಮನಿಸಿರಿ.” ನೀವು ಪ್ರದರ್ಶಿಸುತ್ತಿರುವ ಪುಸ್ತಕದಲ್ಲಿ ಸೂಕ್ತವಾದಂತಹ ಹೇಳಿಕೆಗಳನ್ನು ಎತ್ತಿತೋರಿಸಿರಿ ಮತ್ತು ಅದನ್ನು ನೀಡಿರಿ.
3 ಶಾಪಿಂಗ್ ಕ್ಷೇತ್ರಗಳ ಬಳಿ ಅನೌಪಚಾರಿಕವಾಗಿ ಸಾಕ್ಷಿ ನೀಡುತ್ತಿರುವಾಗ, ನೀವು ಅಭಿವಂದಿಸಿದ ನಂತರ ಹೀಗೆ ಕೇಳಸಾಧ್ಯವಿದೆ:
◼“ಈಗೀಗ ವಸ್ತುಗಳು ಎಷ್ಟು ದುಬಾರಿಯಾಗುತ್ತಿವೆಯೆಂದರೆ, ಖರ್ಚುಗಳಿಗೆ ಸಾಲುವಷ್ಟು ಹಣವನ್ನು ಸಂಪಾದಿಸುವುದು ಕಷ್ಟಕರವಾಗುತ್ತಿರುವಂತೆ ನಿಮಗೆ ತೋರುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಿಜವಾದ ಆರ್ಥಿಕ ಭದ್ರತೆಯು ಇರುವ ಒಂದು ಸಮಯವು ಎಂದಾದರೂ ಬರುವುದೆಂದು ನೀವು ನೆನಸುತ್ತೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ, ನೀವು ನೀಡುತ್ತಿರುವ ಪುಸ್ತಕದಿಂದ ಒಂದು ಸೂಕ್ತವಾದ ಶಾಸ್ತ್ರವಚನದ ಉಲ್ಲೇಖವನ್ನು ತೋರಿಸಿರಿ. ಹೀಗೆ ಹೇಳುತ್ತಾ ಮುಂದುವರಿಸಿರಿ: “ಇಂದು ಜೀವನವನ್ನು ಇಷ್ಟೊಂದು ಕಷ್ಟಕರವನ್ನಾಗಿ ಮಾಡುವ ಸಮಸ್ಯೆಗಳನ್ನು ದೇವರು ತನ್ನ ರಾಜ್ಯದ ಮೂಲಕ ಹೇಗೆ ಬಗೆಹರಿಸುವನು ಎಂಬುದನ್ನು ಈ ಪುಸ್ತಕವು ತೋರಿಸುತ್ತದೆ.” ಪುಸ್ತಕವನ್ನು ನೀಡಿರಿ. ನೀವು ಸಂಭಾಷಣೆಯಲ್ಲಿ ಎಷ್ಟೊಂದು ಆನಂದಿಸಿದ್ದೀರೆಂಬುದನ್ನು ತಿಳಿಸಿ, ಅನಂತರ ಹೀಗೆ ಕೇಳಬಹುದು: “ಈ ಸಂಭಾಷಣೆಯನ್ನು ನಾವು ಬೇರೊಂದು ಸಮಯದಲ್ಲಿ ಯಾವುದಾದರೂ ವಿಧದಲ್ಲಿ ಮುಂದುವರಿಸಸಾಧ್ಯವಿದೆಯೋ?” ಈ ವಿಧದಲ್ಲಿ ನೀವು ಆ ವ್ಯಕ್ತಿಯ ಟೆಲಿಫೋನ್ ನಂಬರ್ ಅಥವಾ ಮನೆಯ ವಿಳಾಸವನ್ನು ಪಡೆದುಕೊಳ್ಳಲು ಶಕ್ತರಾಗಬಹುದು.
4 “ಜ್ಞಾನ” ಪುಸ್ತಕವನ್ನು ಉಪಯೋಗಿಸುವ ಮೂಲಕ, ಲೋಕ ಶಾಂತಿಯ ಕುರಿತಾದ ಈ ನಿರೂಪಣೆಯನ್ನು ಪ್ರಯತ್ನಿಸಿನೋಡುವ ಅವಕಾಶ ನಿಮಗಿರಬಹುದು:
◼“ನಿಮ್ಮ ಅಭಿಪ್ರಾಯಕ್ಕನುಸಾರ, ಲೋಕ ಶಾಂತಿಯನ್ನು ಸಾಧಿಸುವುದು ಅಷ್ಟೊಂದು ಕಷ್ಟಕರವೇಕೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅನಂತರ 188-9ನೆಯ ಪುಟಗಳಲ್ಲಿರುವ ಚಿತ್ರವನ್ನು ತೋರಿಸಿರಿ.] ಈ ಚಿತ್ರವು ಇವುಗಳಂತಹ ವಿವಿಧ ಬೈಬಲ್ ವರ್ಣನೆಗಳ ಮೇಲೆ ಆಧರಿಸಲ್ಪಟ್ಟಿದೆ. [ಯೆಶಾಯ 65:21ನ್ನು ಓದಿರಿ.] ಇಂದು ಲೋಕದ ಶಾಂತಿಯ ಕೊರತೆಯು, ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ಸತ್ಯ ಜ್ಞಾನದ ಕೊರತೆಯಿಂದಾಗಿದೆ. ಆ ಜ್ಞಾನವು ಬೇಗನೆ ಭೂಮಿಯನ್ನು ತುಂಬುವುದು. [ಯೆಶಾಯ 11:9ನ್ನು ಓದಿರಿ.] ಈ ಪುಸ್ತಕವು ಆ ಜ್ಞಾನವನ್ನು ಪಡೆದುಕೊಳ್ಳುವಂತೆ ಆರಂಭಿಸಲು ನಿಮಗೆ ಸಹಾಯ ಮಾಡುವುದು, ಆದುದರಿಂದ ನೀವು ಇದನ್ನು ತೆಗೆದುಕೊಳ್ಳುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಷ್ಟಪಡುತ್ತೇನೆ.” ಪುಸ್ತಕವನ್ನು ನೀಡಿರಿ.—ಜ್ಞಾನ ಮತ್ತು ಕುಟುಂಬ ಸಂತೋಷ ಪುಸ್ತಕಗಳನ್ನು ನೀಡುವಂತಹ ಇತರ ಪರಿಣಾಮಕಾರಿ ವಿಧಗಳಿಗಾಗಿ, ನಮ್ಮ ರಾಜ್ಯದ ಸೇವೆಯ ಸೆಪ್ಟೆಂಬರ್ 1997, ಜೂನ್ 1997, ಮಾರ್ಚ್ 1997, ನವೆಂಬರ್ 1996 ಮತ್ತು ಜೂನ್ 1996ರ ಸಂಚಿಕೆಗಳ ಹಿಂದಿನ ಪುಟವನ್ನು ನೋಡಿರಿ.
5 ಆಸಕ್ತಿ ತೋರಿಸಿದವರನ್ನು ಭೇಟಿಯಾಗಲು ಹಿಂದಿರುಗುವಾಗ, ಈ ಪ್ರಸ್ತಾವವನ್ನು ತಕ್ಕಂತೆ ಸರಿಹೊಂದಿಸುವ ಮೂಲಕ ನೀವು ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲು ಪ್ರಯತ್ನಿಸಸಾಧ್ಯವಿದೆ:
◼“ನಾವು ಕಳೆದ ಸಲ ಮಾತಾಡಿದಾಗ, ನೀವು ಒಂದು ಆಸಕ್ತಿಕರವಾದ ಅಭಿಪ್ರಾಯವನ್ನು ತಿಳಿಸಿದ್ದೀರಿ. [ಆ ವ್ಯಕ್ತಿಯು ಮಾಡಿದ ಒಂದು ಹೇಳಿಕೆಯನ್ನು ತಿಳಿಸಿರಿ.] ನಾನು ಅದರ ಕುರಿತಾಗಿ ಯೋಚಿಸುತ್ತಾ ಇದ್ದೆ, ಮತ್ತು ಆ ವಿಷಯದ ಕುರಿತು ನಾನು ಮಾಡಿದ ಸಂಶೋಧನೆಯ ಫಲಿತಾಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. [ಒಂದು ಸೂಕ್ತ ಶಾಸ್ತ್ರವಚನವನ್ನು ತೋರಿಸಿರಿ.] ಸ್ವಲ್ಪ ಸಮಯಾವಧಿಯಲ್ಲೇ ಬೈಬಲಿನ ಮೂಲಭೂತ ಬೋಧನೆಗಳನ್ನು ಪರಿಶೋಧಿಸಲು ಕೋಟಿಗಟ್ಟಲೆ ಜನರನ್ನು ಶಕ್ತರನ್ನಾಗಿ ಮಾಡಿರುವ ಒಂದು ಉಚಿತ ಅಭ್ಯಾಸ ಕ್ರಮವನ್ನು ನಡೆಸುವ ನೀಡಿಕೆಯನ್ನು ನಾವು ಮಾಡುತ್ತಿದ್ದೇವೆ. ಅಂತಹ ಒಂದು ಶೋಧನೆಯು, ದೇವರ ವಾಗ್ದಾನಗಳ ನಿಶ್ಚಿತ ನೆರವೇರಿಕೆಯಲ್ಲಿ ನಿಮ್ಮ ಭರವಸೆಯನ್ನು ಬೆಳೆಸಸಾಧ್ಯವಿದೆ.” ಉತ್ತರಿಸಲ್ಪಡಲಿರುವ ಕೆಲವು ಪ್ರಶ್ನೆಗಳನ್ನು ಎತ್ತಿತೋರಿಸಿರಿ. ಬೈಬಲ್ ಅಭ್ಯಾಸದ ನೀಡಿಕೆಯನ್ನು ವ್ಯಕ್ತಿಯು ನಿರಾಕರಿಸುವಲ್ಲಿ, 16 ವಾರಗಳ ವರೆಗೆ, ಒಂದು ವಾರದಲ್ಲಿ ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುವ ಒಂದು ವಿಶೇಷವಾದ ತ್ವರಿತ ಕ್ರಮವೂ ನಮ್ಮಲ್ಲಿದೆಯೆಂಬುದನ್ನು ವಿವರಿಸಿರಿ. ಅಪೇಕ್ಷಿಸು ಬ್ರೋಷರನ್ನು ತೋರಿಸಿರಿ, ಪುಟ 1ಕ್ಕೆ ತಿರುಗಿಸಿರಿ ಮತ್ತು ನೀವು ಪ್ರಥಮ ಪಾಠವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಬಹುದೊ ಎಂದು ಕೇಳಿರಿ.
6 ಕರಪತ್ರಗಳನ್ನು ಉಪಯೋಗಿಸಲು ಮರೆಯಬೇಡಿರಿ: ಆತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ನಿಮ್ಮ ಪೀಠಿಕೆಯಲ್ಲಿ ಕರಪತ್ರಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ, ಅಥವಾ ಯಾವುದೇ ಸಾಹಿತ್ಯವು ಸ್ವೀಕರಿಸಲ್ಪಡದಿರುವ ಸ್ಥಳದಲ್ಲಿ ಅವುಗಳನ್ನು ನೀಡಬಹುದು. ಎಲ್ಲಿ ಆಸಕ್ತಿಯು ತೋರಿಸಲ್ಪಟ್ಟಿದೆಯೊ ಅಲ್ಲಿ, ಒಂದು ಮನೆ ಬೈಬಲ್ ಅಭ್ಯಾಸವನ್ನು ಸ್ವೀಕರಿಸಲು ಮತ್ತು ನಮ್ಮ ಕೂಟಗಳಿಗೆ ಬರಲು ಆ ವ್ಯಕ್ತಿಯನ್ನು ಉತ್ತೇಜಿಸಲಿಕ್ಕಾಗಿ ಕರಪತ್ರದ ಹಿಂಬದಿಯಲ್ಲಿರುವ ಮುದ್ರಿತ ಸಂದೇಶವನ್ನು ಉಪಯೋಗಿಸಿರಿ.
7 ನಿಮ್ಮ ಕೆಲಸವನ್ನು ಕೌಶಲಭರಿತರಾಗಿ ಮಾಡಿರಿ, ಆಗ ನೀವು ಅದರಲ್ಲಿ ಆನಂದವನ್ನು ಕಂಡುಕೊಳ್ಳುವಿರಿ. ಒಂದು ಸಂಪೂರ್ಣ ಸಾಕ್ಷಿಯನ್ನು ಕೊಡುವುದಕ್ಕೆ ಸತತವಾದ ಗಮನವನ್ನು ಕೊಡಿರಿ, ಮತ್ತು ಶುಶ್ರೂಷೆಯ ಎಲ್ಲ ಅಂಶಗಳನ್ನು ಚೆನ್ನಾಗಿ ಮಾಡುವುದರಲ್ಲಿ ಹರ್ಷಿಸಿರಿ.—1 ತಿಮೊ. 4:16.