ಮಾರ್ಚ್ಗಾಗಿ ಸೇವಾ ಕೂಟಗಳು
ಮಾರ್ಚ್ 2ರಿಂದ ಆರಂಭವಾಗುವ ವಾರ
ಸಂಗೀತ 3 (16)
8 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” ಹಿರಿಯನೊಬ್ಬನಿಂದ ಭಾಷಣ. ಜ್ಞಾಪಕಕ್ಕೆ ಹಾಜರಾಗುವ ಪ್ರಾಮುಖ್ಯವನ್ನು ಒತ್ತಿ ಹೇಳುತ್ತಾ, ನಮ್ಮ ಶುಶ್ರೂಷೆ ಪುಸ್ತಕದ, 80-1ನೆಯ ಪುಟಗಳ ಕುರಿತು ಸಂಕ್ಷಿಪ್ತವಾಗಿ ಹೇಳಿಕೆಯನ್ನು ನೀಡಿರಿ.
22 ನಿ: “ಇತರರಲ್ಲಿ ನಿತ್ಯಜೀವದ ನಿರೀಕ್ಷೆಯನ್ನು ತುಂಬಿಸಿರಿ.” ಸಭಿಕರೊಂದಿಗೆ ಲೇಖನದ ಚರ್ಚೆ. ಒಂದು ಸಂಭಾಷಣೆಯನ್ನು ಮುಂದುವರಿಸಿಕೊಂಡು ಹೋಗಲಿಕ್ಕಾಗಿ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದೆಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ. ಒಂದು ನಿರೂಪಣೆಯಲ್ಲಿ ಉಪಯೋಗಿಸಬಹುದಾದ ಮಾರ್ಗದರ್ಶಕ ಹಾಗೂ ದೃಷ್ಟಿಕೋನ ಪ್ರಶ್ನೆಗಳ ಕೆಲವೊಂದು ಉದಾಹರಣೆಗಳನ್ನು ಕೊಡಿರಿ. (ಸ್ಕೂಲ್ ಗೈಡ್ಬುಕ್, 51-2ನೆಯ ಪುಟಗಳು, 10-12ನೆಯ ಪ್ಯಾರಗ್ರಾಫ್ಗಳನ್ನು ನೋಡಿರಿ.) ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಡುತ್ತಿರುವುದನ್ನು ತೋರಿಸುತ್ತಾ, ಒಬ್ಬ ಸಮರ್ಥ ಪ್ರಚಾರಕನು, ಆರಂಭದ ಭೇಟಿಯೊಂದಿಗೆ ಪುನರ್ಭೇಟಿಗಳಿಗಾಗಿ ಸೂಚಿಸಲ್ಪಟ್ಟಿರುವ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಲಿ.
ಸಂಗೀತ 88 (6) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 9ರಿಂದ ಆರಂಭವಾಗುವ ವಾರ
ಸಂಗೀತ 60 (17)
8 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: 1998ರ ವರ್ಷಪುಸ್ತಕ (ಇಂಗ್ಲಿಷ್)ದಿಂದ ಪೂರ್ಣವಾಗಿ ಪ್ರಯೋಜನಪಡೆದುಕೊಳ್ಳಿರಿ. ಗತವರ್ಷದ ಲೋಕವ್ಯಾಪಕ ದೇವಪ್ರಭುತ್ವ ಸಾಧನೆಗಳನ್ನು ತೋರಿಸುತ್ತಾ, ತಂದೆಯು ತನ್ನ ಕುಟುಂಬದೊಂದಿಗೆ 3-6, 31ನೆಯ ಪುಟಗಳನ್ನು ಪುನರ್ವಿಮರ್ಶಿಸುತ್ತಾನೆ. ಊಟದ ಸಮಯಗಳಲ್ಲಿ ಜೊತೆಯಾಗಿ ದಿನನಿತ್ಯದ ವಚನವನ್ನು ಮತ್ತು ವರ್ಷಪುಸ್ತಕದ ಭಾಗಗಳನ್ನು ಓದಿ, ಚರ್ಚಿಸುವುದರಿಂದ ಕುಟುಂಬವು ಪಡೆದುಕೊಂಡಿರುವ ಪ್ರಯೋಜನಗಳನ್ನು ಪರಿಗಣಿಸಿರಿ. ಮತ್ತು ವರ್ಷವಿಡೀ ಹೀಗೆ ಮಾಡುತ್ತಾ ಇರಲು ದೃಢಚಿತ್ತವುಳ್ಳವರಾಗಿದ್ದಾರೆ.
22 ನಿ: “ನಾವದನ್ನು ಪುನಃ ಮಾಡುವೆವೊ?” (1-11ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. 1998ರ ವರ್ಷಪುಸ್ತಕದಲ್ಲಿ ವರದಿಸಲ್ಪಟ್ಟಿರುವಂತೆ, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಕಳೆದ ವರ್ಷ ಏರ್ಪಡಿಸಲ್ಪಟ್ಟ ಕಾರ್ಯಾಚರಣೆಯ ಮುಖ್ಯಾಂಶಗಳನ್ನು ತಿಳಿಸಿರಿ. ಆ ಅವಧಿಯಲ್ಲಿ ಸ್ಥಳಿಕವಾಗಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದವರ ಸಂಖ್ಯೆಯನ್ನು ತಿಳಿಸಿರಿ. ಪಯನೀಯರ್ ಸೇವೆಯಿಂದ ನಾವು ಪಡೆದುಕೊಳ್ಳುವಂತಹ ತತ್ಕ್ಷಣದ ವೈಯಕ್ತಿಕ ಪ್ರಯೋಜನಗಳನ್ನು ಚರ್ಚಿಸಿರಿ, ಮತ್ತು ಈ ಹೆಚ್ಚಿನ ಪ್ರಯತ್ನವು ಸಭೆಯ ಪ್ರಗತಿಗೆ ಹೇಗೆ ನೆರವನ್ನೀಯುತ್ತದೆಂಬುದನ್ನು ಚರ್ಚಿಸಿರಿ. ಹೆಚ್ಚು ಮಂದಿ ಪಯನೀಯರ್ ಸೇವೆಯನ್ನು ಮಾಡಲು ನೆರವನ್ನು ನೀಡುವಂತೆ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸ್ಥಳಿಕವಾಗಿ ಯೋಜಿಸಲ್ಪಟ್ಟ ಸೇವಾ ಏರ್ಪಾಡುಗಳನ್ನು ತಿಳಿಸಿರಿ. ಪ್ರಚಾರಕರು ಕೂಟದ ನಂತರ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಸಂಗೀತ 195 (8) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 16ರಿಂದ ಆರಂಭವಾಗುವ ವಾರ
ಸಂಗೀತ 43 (4)
8 ನಿ: ಸ್ಥಳಿಕ ತಿಳಿಸುವಿಕೆಗಳು. ಮಾರ್ಚ್ 29ರಂದು ಇರುವ ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾಗಲು ಎಲ್ಲ ಆಸಕ್ತರನ್ನು ಆಮಂತ್ರಿಸಿರಿ. ಭಾಷಣದ ಶೀರ್ಷಿಕೆಯು, “ನೀವು ಬೈಬಲಿನಲ್ಲಿ ಭರವಸೆಯನ್ನಿಡಸಾಧ್ಯವಿರುವುದರ ಕಾರಣ” ಆಗಿದೆ.
15 ನಿ: ಸ್ಥಳಿಕ ಅಗತ್ಯಗಳು.
22 ನಿ: “ನಾವದನ್ನು ಪುನಃ ಮಾಡುವೆವೊ?” (12-19ನೆಯ ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. ನಮ್ಮ ಶುಶ್ರೂಷೆ ಪುಸ್ತಕದ 113-14ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಅರ್ಹತೆಗಳನ್ನು ಪುನರ್ವಿಮರ್ಶಿಸಿರಿ. ಆಕ್ಸಿಲಿಯರಿ ಪಯನೀಯರ್ ಸೇವೆಯು, ಒಬ್ಬ ವ್ಯಕ್ತಿಯನ್ನು ಕ್ರಮದ ಪಯನೀಯರ್ ಸೇವೆಗೆ ಹೇಗೆ ಸಿದ್ಧಗೊಳಿಸುತ್ತದೆಂಬುದನ್ನು ವಿವರಿಸಿರಿ. ಕಳೆದ ವಸಂತಕಾಲದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದವರಲ್ಲಿ ಕೆಲವರು, 60 ತಾಸುಗಳ ಆವಶ್ಯಕತೆಯನ್ನು ತಲಪಲಿಕ್ಕಾಗಿ ತಮ್ಮ ಕಾರ್ಯತಖ್ತೆಯನ್ನು ಏರ್ಪಡಿಸಿದ ವಿಧವನ್ನು ತಿಳಿಸುವಂತೆ ಆಮಂತ್ರಿಸಿರಿ. ಪುರವಣಿಯ ಕೊನೆಯ ಪುಟದಲ್ಲಿರುವ, ಯಾವ ಮಾದರಿ ಕಾರ್ಯತಖ್ತೆಯು ಅವರಿಗೆ ಅತ್ಯುತ್ತಮವಾಗಿ ಕಾರ್ಯನಡಿಸಿತು? ಸಮಯವು ಅನುಮತಿಸಿದಂತೆ, 1987ರ ವರ್ಷಪುಸ್ತಕದ 48-9, 245-6ನೆಯ ಪುಟಗಳಲ್ಲಿರುವ ಅನುಭವಗಳನ್ನು ತಿಳಿಸಿರಿ. ಕೂಟದ ನಂತರ ಅರ್ಜಿಗಳನ್ನು ತೆಗೆದುಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
ಸಂಗೀತ 224 (28) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 23ರಿಂದ ಆರಂಭವಾಗುವ ವಾರ
ಸಂಗೀತ 94 (5)
10 ನಿ: ಸ್ಥಳಿಕ ತಿಳಿಸುವಿಕೆಗಳು. ಏಪ್ರಿಲ್ 11ರಂದು ಇರುವ ಜ್ಞಾಪಕಕ್ಕೆ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಲು ಆರಂಭಿಸುವಂತೆ ಎಲ್ಲರನ್ನು ಉತ್ತೇಜಿಸಿರಿ. ಆಮಂತ್ರಣದ ಒಂದು ಪ್ರತಿಯನ್ನು ಪ್ರದರ್ಶಿಸಿ, ಅದರ ಸಂಗ್ರಹವನ್ನು ಪಡೆದು, ಈ ವಾರ ಅದನ್ನು ವಿತರಿಸುವುದನ್ನು ಆರಂಭಿಸುವಂತೆ ಎಲ್ಲರನ್ನು ಪ್ರೇರಿಸಿರಿ. ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವವರೆಲ್ಲರ ಹೆಸರುಗಳನ್ನು ಪ್ರಕಟಿಸಿರಿ. ಒಂದು ಅರ್ಜಿಯನ್ನು ಸಲ್ಲಿಸಲಿಕ್ಕಾಗಿ ಇನ್ನೂ ತಡವಾಗಿಲ್ಲವೆಂಬುದನ್ನು ವಿವರಿಸಿರಿ. ಏಪ್ರಿಲ್ ತಿಂಗಳಿಗಾಗಿ ಯೋಜಿಸಲ್ಪಟ್ಟಿರುವ ಸೇವೆಗಾಗಿ ಕೂಟಗಳ ಇಡೀ ಶೆಡ್ಯೂಲನ್ನು ತಿಳಿಸಿರಿ.
20 ನಿ: ಕ್ಷೇತ್ರ ಸೇವೆಗಾಗಿ ಹೊಸಬರನ್ನು ತಯಾರಿಸಿರಿ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಜ್ಞಾನ ಪುಸ್ತಕದಲ್ಲಿ ಒಂದು ಅಭ್ಯಾಸವನ್ನು ನಡಿಸುತ್ತಿರುವವರು, ತಮ್ಮ ವಿದ್ಯಾರ್ಥಿಯು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತೆ ತಯಾರಿಸುವ ವಿಚಾರವನ್ನು ಪರಿಗಣಿಸಬೇಕು. ಜ್ಞಾನ ಪುಸ್ತಕದ 105-6ನೆಯ ಪುಟಗಳಲ್ಲಿ, 14ನೆಯ ಪ್ಯಾರಗ್ರಾಫ್ನಲ್ಲಿ, ಮತ್ತು 179ನೆಯ ಪುಟ, 20ನೆಯ ಪ್ಯಾರಗ್ರಾಫ್ನಲ್ಲಿ ತಿಳಿಸಲ್ಪಟ್ಟಿರುವ ವಿಷಯವನ್ನು ತೋರಿಸಿರಿ. ಹೊಸಬರು ಅಸ್ನಾನಿತ ಪ್ರಚಾರಕರಾಗಿ ಗುರುತಿಸಲ್ಪಡಲಿಕ್ಕಾಗಿ, ನವೆಂಬರ್ 15, 1988ರ ವಾಚ್ಟವರ್ ಪತ್ರಿಕೆಯ 16-17ನೆಯ ಪುಟಗಳು, 7-10ನೆಯ ಪ್ಯಾರಗ್ರಾಫ್ಗಳಲ್ಲಿರುವ ಕಾರ್ಯವಿಧಾನವನ್ನು ಪುನರ್ವಿಮರ್ಶಿಸಿರಿ. ಹೊಸ ಅಸ್ನಾನಿತ ಪ್ರಚಾರಕರು ಸೇವೆಯನ್ನು ಆರಂಭಿಸುವಂತೆ ಸಹಾಯಮಾಡಲಿಕ್ಕಾಗಿ, ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ, 19ನೆಯ ಪ್ಯಾರಗ್ರಾಫ್ನಲ್ಲಿರುವ ಸಲಹೆಗಳನ್ನು ಪರಿಗಣಿಸಿರಿ.
15 ನಿ: ಪ್ರಶ್ನಾ ರೇಖಾಚೌಕ. ಪ್ರಶ್ನೋತ್ತರಗಳು. ನಮ್ಮ ಶುಶ್ರೂಷೆ ಪುಸ್ತಕದ 131ನೆಯ ಪುಟದ 1 ಮತ್ತು 2ನೆಯ ಪ್ಯಾರಗ್ರಾಫ್ಗಳಲ್ಲಿರುವ ವಿಷಯವನ್ನು ಹಿರಿಯನು ಪುನರ್ವಿಮರ್ಶಿಸುತ್ತಾನೆ.
ಸಂಗೀತ 47 (11) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮಾರ್ಚ್ 30ರಿಂದ ಆರಂಭವಾಗುವ ವಾರ
ಸಂಗೀತ 29 (18)
12 ನಿ: ಸ್ಥಳಿಕ ತಿಳಿಸುವಿಕೆಗಳು. ಮಾರ್ಚ್ ತಿಂಗಳಿಗಾಗಿರುವ ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಸಲ್ಲಿಸುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ. ಪತ್ರಿಕೆಗಳ ಪ್ರಚಲಿತ ಸಂಚಿಕೆಗಳನ್ನು ಪ್ರದರ್ಶಿಸಿರಿ, ಅವುಗಳನ್ನು ನೀಡುವಾಗ ಯಾವ ಲೇಖನಗಳನ್ನು ಎತ್ತಿತೋರಿಸಬಹುದೆಂಬುದನ್ನು ಸೂಚಿಸಿರಿ, ಮತ್ತು ಮಾತಾಡುವ ಕೆಲವು ನಿರ್ದಿಷ್ಟ ಅಂಶಗಳನ್ನು ತಿಳಿಸಿರಿ. “ಜ್ಞಾಪಕದ ಜ್ಞಾಪನಗಳು” ಎಂಬ ವಿಷಯವನ್ನು ಪುನರ್ವಿಮರ್ಶಿಸಿರಿ ಮತ್ತು ಸ್ಥಳಿಕ ಜ್ಞಾಪಕದ ಏರ್ಪಾಡುಗಳನ್ನು ತಿಳಿಸಿರಿ. ಬೈಬಲ್ ವಿದ್ಯಾರ್ಥಿಗಳು ಮತ್ತು ಇತರ ಆಸಕ್ತ ವ್ಯಕ್ತಿಗಳು ಹಾಜರಾಗುವಂತೆ ಸಹಾಯಮಾಡಲು ಎಲ್ಲರೂ ಅಂತಿಮ ಯೋಜನೆಗಳನ್ನು ಮಾಡತಕ್ಕದ್ದು. ದಿನನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಿಕೆಯಲ್ಲಿ ಶೆಡ್ಯೂಲ್ ಮಾಡಲ್ಪಟ್ಟಿರುವಂತೆ, ಏಪ್ರಿಲ್ 6-11ಕ್ಕಾಗಿರುವ ಜ್ಞಾಪಕದ ಬೈಬಲ್ ವಾಚನವನ್ನು ಅನುಸರಿಸುವಂತೆ ಖಚಿತರಾಗಿರಲು ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ.
13 ನಿ: “ಮಕ್ಕಳೇ—ನೀವು ನಮ್ಮ ಆನಂದವಾಗಿದ್ದೀರಿ!” ಪ್ರಶ್ನೋತ್ತರಗಳು. ಆಗಸ್ಟ್ 1, 1987ರ ವಾಚ್ಟವರ್ ಪತ್ರಿಕೆಯ 25ನೆಯ ಪುಟದಿಂದ ಅನುಭವವನ್ನು ತಿಳಿಸಿರಿ.
20 ನಿ: ಆತ್ಮಿಕ ಬಳಲಿಕೆಯನ್ನು ಹೊಡೆದೋಡಿಸುವ ಮಾರ್ಗಗಳು. ಜನವರಿ 15, 1986ರ ವಾಚ್ಟವರ್ ಪತ್ರಿಕೆಯ 19ನೆಯ ಪುಟದಲ್ಲಿರುವ ರೇಖಾಚೌಕವನ್ನು ಇಬ್ಬರು ಹಿರಿಯರು ಚರ್ಚಿಸುತ್ತಾರೆ. “ಬಳಲಿಕೆಯ ಲಕ್ಷಣಗಳು” ಇವುಗಳಲ್ಲಿ ಪ್ರತಿಯೊಂದು ಲಕ್ಷಣದ ಅನಂತರ, ಅದಕ್ಕೆ ಅನುರೂಪವಾದ “ತಾಳ್ಮೆಗಾಗಿ ಸಹಾಯಕಗಳು” ಎಂಬುದರಿಂದ ಒಬ್ಬನು ಹೇಗೆ ಪ್ರಯೋಜನ ಪಡೆಯಸಾಧ್ಯವಿದೆಯೆಂಬುದನ್ನು ಶಾಸ್ತ್ರೀಯವಾಗಿ ವಿವರಿಸಿರಿ. ಅನಂತರ, ಅಂತಹ ಪಾಯಿಂಟ್ಗಳ ಅನ್ವಯವು, ತಮ್ಮ ಆತ್ಮಿಕ ಬಲವನ್ನು ಕಾಪಾಡಿಕೊಳ್ಳಲು ತಮಗೆ ಹೇಗೆ ಸಹಾಯಮಾಡಿತೆಂಬುದನ್ನು ತಿಳಿಸಲು ಇಬ್ಬರು ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ.
ಸಂಗೀತ 140 (26) ಮತ್ತು ಸಮಾಪ್ತಿಯ ಪ್ರಾರ್ಥನೆ.