ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/98 ಪು. 7
  • ಇಪ್ಪತ್ತು ಸಾವಿರ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಪ್ಪತ್ತು ಸಾವಿರ!
  • 1998 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಆಗಸ್ಟ್‌ ತಿಂಗಳು ಒಂದು ಪ್ರಮುಖ ತಿಂಗಳಾಗಿರುವುದೊ?
    1998 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
  • ಆಗಸ್ಟ್‌ನಲ್ಲಿ ನಡೆಯುವ ಅಭಿಯಾನ
    2014 ನಮ್ಮ ರಾಜ್ಯದ ಸೇವೆ
  • ನಾವು 2000 ಇಸವಿಯ ಏಪ್ರಿಲ್‌ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೊ?
    2000 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1998 ನಮ್ಮ ರಾಜ್ಯದ ಸೇವೆ
km 7/98 ಪು. 7

ಇಪ್ಪತ್ತು ಸಾವಿರ!

ಈ ಸೇವಾ ವರ್ಷದ ಅಂತ್ಯದೊಳಗೆ, ಇಷ್ಟೊಂದು ಸಂಖ್ಯೆಯ ಪ್ರಚಾರಕರು ಭಾರತದಲ್ಲಿ ವರದಿಮಾಡುತ್ತಿರುವುದನ್ನು ನಾವು ನೋಡಲು ಬಯಸುತ್ತೇವೆ. ಆ ಸಂಖ್ಯೆಯನ್ನು ತಲಪುವ ಸಾಮರ್ಥ್ಯ ನಮಗಿದೆಯೆ? ಹೌದು, ಇದೆ! 1997ರ ಆಗಸ್ಟ್‌ ತಿಂಗಳಿನ ಅಂತ್ಯದಲ್ಲಿ ಭಾರತದಲ್ಲಿನ ಸಭೆಗಳ ನಮ್ಮ ಲೆಕ್ಕವು ತೋರಿಸಿದ್ದೇನೆಂದರೆ, ನಮ್ಮಲ್ಲಿ ಒಟ್ಟು 18,781 ಪ್ರಚಾರಕರಿದ್ದರು. ಆದರೆ, ಆ ತಿಂಗಳಿನ ವರೆಗಿನ ಸರ್ವಕಾಲಿಕ ಉಚ್ಚಾಂಕವು 17,534 ಆಗಿತ್ತು. ಇದರ ಅರ್ಥ, ಕಳೆದ ಸೇವಾ ವರ್ಷದಲ್ಲಿ ಯಾವುದೊ ಒಂದು ತಿಂಗಳಿನಲ್ಲಿ, 1,247 ಪ್ರಚಾರಕರು ರಿಪೋರ್ಟನ್ನು ಹಾಕುವುದರಲ್ಲಿ ಅಕ್ರಮರಾಗಿದ್ದರು! ಹೆಚ್ಚಿನ ಸಭೆಗಳಲ್ಲಿ, ಕೆಲವರು ರಿಪೋರ್ಟ್‌ ಹಾಕುವುದರಲ್ಲಿ ಅಕ್ರಮರಾಗಿರುತ್ತಾ ಮುಂದುವರಿಯುತ್ತಿರುವುದನ್ನು ಸರ್ಕಿಟ್‌ ಮೇಲ್ವಿಚಾರಕರ ವರದಿಗಳು ತೋರಿಸುತ್ತವೆ. ಪ್ರತಿಯೊಬ್ಬ ಪ್ರಚಾರಕನು ಮಳೆಗಾಲದ ತಿಂಗಳುಗಳಲ್ಲಿ ಶುಶ್ರೂಷೆಯಲ್ಲಿ ಭಾಗವಹಿಸಲು ನಿಶ್ಚಿತ ಏರ್ಪಾಡುಗಳನ್ನು ಮಾಡಿ, ಆ ಚಟುವಟಿಕೆಯನ್ನು ತಡವಿಲ್ಲದೆ ವರದಿಸುವಲ್ಲಿ, ನಾವು ನಿಶ್ಚಯವಾಗಿಯೂ 20,000 ಸಂಖ್ಯೆಯನ್ನು ದಾಟಬಲ್ಲೆವು. ತಿಂಗಳಿನ ಆರಂಭದಲ್ಲೇ ಸೇವೆಗೆ ಹೋಗುವ ಮೂಲಕ, ಸಾಕ್ಷಿ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ವ್ಯಯಿಸುವುದನ್ನು ನಾವು ತಪ್ಪದಿರುವೆವು. ಸಭಾ ಪುಸ್ತಕ ಅಭ್ಯಾಸ ಚಾಲಕರು, ತಮ್ಮ ಗುಂಪಿನಲ್ಲಿ ಇರಬಹುದಾದ ಯಾವುದೇ ಅಕ್ರಮ ಪ್ರಚಾರಕರಿಗೆ ಸಹಾಯಮಾಡಲು ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಮಾಡಬೇಕು. ಹಿಂದಿನ ತಿಂಗಳುಗಳಲ್ಲಿ ನೀವು ಒಬ್ಬ ಕ್ರಮದ ಪ್ರಚಾರಕರಾಗಿರದೆ ಇದ್ದಲ್ಲಿ, ನೀವು ನಿಮ್ಮ ಪುಸ್ತಕ ಅಭ್ಯಾಸ ಚಾಲಕನ ಸಹಾಯವನ್ನು ಕೋರುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ ಮತ್ತು ಅವನು ನಿಮ್ಮೊಂದಿಗೆ ಕೆಲಸಮಾಡಲಿಕ್ಕಾಗಿ ಒಬ್ಬ ಸಂಗಾತಿಯನ್ನು ಏರ್ಪಡಿಸಲು ಸಂತೋಷಿಸುವನು. ಐಕ್ಯ ಪ್ರಯತ್ನದೊಂದಿಗೆ, ಭಾರತದಲ್ಲಿ ಪ್ರಥಮ ಬಾರಿ, 20,000 ಸಂಖ್ಯೆಯನ್ನು ದಾಟುವ ಪ್ರಚಾರಕರ ಹೊಸ ಸರ್ವಕಾಲಿಕ ಉಚ್ಛಾಂಕವನ್ನು ನಾವು ನೋಡಬೇಕು. ಯೆಹೋವನಿಗೆ ಅದೆಷ್ಟು ದೊಡ್ಡದಾದ ಸ್ತುತಿಯ ಕೂಗು ಆಗಿರುವುದು!—ಕೀರ್ತ. 47:1.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ