ನನಗೆ ಒಂದು ಬೈಬಲ್ ಅಭ್ಯಾಸ ಬೇಕು!
1 ನಮ್ಮಲ್ಲಿ ಹೆಚ್ಚಿನವರು ಒಂದು ಬೈಬಲ್ ಅಭ್ಯಾಸವನ್ನು ಹೊಂದುವ ಆಸೆಯನ್ನು ವ್ಯಕ್ತಪಡಿಸಿದ್ದೇವೆ ಮತ್ತು ಇದಕ್ಕೆ ಒಳ್ಳೆಯ ಕಾರಣವೂ ಇದೆ. ನಾವು ಬೈಬಲ್ ಅಭ್ಯಾಸವನ್ನು ಮಾಡುವಾಗಲೇ, ಹೊಸ ಶಿಷ್ಯರನ್ನು ಮಾಡುವ ನಮ್ಮ ಗುರಿಯನ್ನು ನಾವು ತಲುಪುವೆವು. (ಮತ್ತಾ. 28:19, 20) ಆದರೆ ನಮ್ಮಲ್ಲಿ ಅನೇಕರು ಸತ್ಯವನ್ನು ಬೇರೆಯವರಿಗೆ ಕಲಿಸುವುದರಿಂದ ಬರುವ ಅತ್ಯಾನಂದವನ್ನು ಅನುಭವಿಸದೆ ಅನೇಕ ತಿಂಗಳುಗಳು ಇಲ್ಲವೇ ಅನೇಕ ವರ್ಷಗಳೇ ಆಗಿರಬಹುದು. ಆದರೆ ಇದರ ವಿಷಯದಲ್ಲಿ ನಾವು ನವೆಂಬರ್ ತಿಂಗಳಿನಲ್ಲಿ ಜ್ಞಾ ಪುಸ್ತಕವನ್ನು ನೀಡಲಾಗುವುದರಿಂದ, ಹೊಸ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲಿಕ್ಕಾಗಿ ಈ ಪುಸ್ತಕವನ್ನು ಉಪಯೋಗಿಸಲು ನಾವು ವಿಶೇಷ ಪ್ರಯತ್ನವನ್ನು ಮಾಡಸಾಧ್ಯವಿದೆ.
2 ಒಂದು ಅಥವಾ ಹೆಚ್ಚು ವಾರಾಂತ್ಯಗಳನ್ನು ಬದಿಗಿಡಿರಿ: ಒಂದು ಹೊಸ ಬೈಬಲ್ ಅಭ್ಯಾಸವನ್ನು ಪ್ರಾರಂಭಿಸುವುದಕ್ಕೆ ಹೆಚ್ಚು ಗಮನವನ್ನು ಕೊಡಲಿಕ್ಕಾಗಿ, ಈ ತಿಂಗಳು ಸ್ವಲ್ಪ ಸಮಯವನ್ನು ಬದಿಗಿಡುವಂತೆ ನಾವು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತೇವೆ. ಸಭಾ ಪುಸ್ತಕ ಅಭ್ಯಾಸ ನಿರ್ವಾಹಕರು ವಿಶೇಷವಾಗಿ ಈ ಉದ್ದೇಶಕ್ಕಾಗಿಯೇ ಬಳಸಲಿಕ್ಕಾಗಿ ವಾರಾಂತ್ಯಗಳನ್ನು) ಆರಿಸಿಕೊಳ್ಳಬೇಕು ಮತ್ತು ಆನಂತರ ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಒಟ್ಟುಗೂಡಿ ಪ್ರಯತ್ನವನ್ನು ಮಾಡುವಂತೆ ತಮ್ಮ ಗುಂಪುಗಳನ್ನು ಸಂಘಟಿಸಬೇಕು.
3 ಸೇವೆಗಾಗಿರುವ ಈ ಕೂಟಗಳಿಗೆ ಬರುವಾಗ, ಪುನರ್ಭೇಟಿಯ ರೆಕಾರ್ಡ್ಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಬನ್ನಿರಿ. ಆಸಕ್ತಿ ತೋರಿಸಿದವರನ್ನು, ಸಾಹಿತ್ಯವನ್ನು ತೆಗೆದುಕೊಂಡಿರುವವರನ್ನು, ಅಥವಾ ಕೂಟಗಳಿಗೆ ಹಾಜರಾದವರನ್ನು–ಇವರೆಲ್ಲರನ್ನೂ–ಭೇಟಿಮಾಡಿರಿ. ಒಂದು ಅಭ್ಯಾಸವನ್ನು ಪ್ರಾರಂಭಿಸುವ ನಿರ್ದಿಷ್ಟವಾದ ಉದ್ದೇಶದೊಂದಿಗೆ ಪ್ರತಿಯೊಂದು ಭೇಟಿಯನ್ನು ಮಾಡಿರಿ.
4 ಒಂದು ಬೈಬಲ್ ಅಭ್ಯಾಸವನ್ನು ಹೇಗೆ ನಡೆಸುವುದೆಂಬುದನ್ನು ತೋರಿಸಿರಿ: ಕ್ಷೇತ್ರಸೇವೆಗಾಗಿರುವ ಆಯ್ಕೆಮಾಡಲ್ಪಟ್ಟ ಕೂಟಗಳಲ್ಲಿ, ಒಂದು ಪುನರ್ಭೇಟಿಯನ್ನು ಮಾಡುವಾಗ ಬೈಬಲ್ ಅಭ್ಯಾಸವನ್ನು ಹೇಗೆ ಪ್ರಾರಂಭಿಸುವುದು ಎಂಬುದನ್ನು ತೋರಿಸುತ್ತಾ, ಚೆನ್ನಾಗಿ ತಯಾರಿಸಿದ ಪ್ರತ್ಯಕ್ಷಾಭಿನಯವನ್ನು ಮಾಡಬೇಕು. ನೀವು ಹೀಗೆ ಹೇಳಬಹುದು: “ಅನೇಕರ ಬಳಿ ಒಂದು ಬೈಬಲ್ ಇದೆ. ಆದರೆ ನಾವೆಲ್ಲರೂ ಜೀವನದಲ್ಲಿ ಎದುರಿಸಬಹುದೆಂತಹ ಪ್ರಮುಖ್ಯ ಪ್ರಶ್ನೆಗಳಿಗೆ ಇದು ಉತ್ತರಗಳನ್ನು ಕೊಡುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. [ಜ್ಞಾ ಪುಸ್ತಕದಲ್ಲಿರುವ ಪರಿವಿಡಿಯನ್ನು ತೋರಿಸಿ, 3, 5, 6, 8, ಮತ್ತು 9ನೇ ಅಧ್ಯಾಯಗಳ ಶೀರ್ಷಿಕೆಗಳನ್ನು ಓದಿರಿ] ಈ ಅಧ್ಯಯನದ ಪುಸ್ತಕವನ್ನು, ವಾರಕ್ಕೊಂದಾವರ್ತಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಉಪಯೋಗಿಸುವಲ್ಲಿ, ಬೈಬಲಿನ ಮೂಲಭೂತ ತಿಳುವಳಿಕೆಯನ್ನು ನೀವು ಕೇಲವೇ ತಿಂಗಳುಗಳಲ್ಲಿ ಪಡೆದುಕೊಳ್ಳಬಲ್ಲಿರಿ. ಈ ವಿಷಯಗಳಲ್ಲಿ ಯಾವುದಾದರೂ ಒಂದನ್ನು ನೀವು ಆರಿಸಿಕೊಳ್ಳಲು ಇಷ್ಟಪಡುವಲ್ಲಿ, ಅಭ್ಯಾಸವು ಹೇಗೆ ನಡೆಸಲ್ಪಡುತ್ತದೆ ಎಂಬುದನ್ನು ನಾನು ತೋರಿಸಲು ಸಂತೋಷಿಸುವೆ.” ತುಂಬ ಕಾರ್ಯಮಗ್ನ ಶೆಡ್ಯೂಲ್ ಇರುವುದರಿಂದ ಆ ವ್ಯಕ್ತಿಯು ಅಭ್ಯಾಸಕ್ಕಾಗಿ ಹಿಂದೇಟು ಹಾಕುವುದಾದರೆ, ನಮ್ಮಲ್ಲಿ ಒಂದು ಚುಟುಕಾದ ಅಭ್ಯಾಸ ಕಾರ್ಯಕ್ರಮವು ಸಹ ಇದೆ ಎಂಬುದನ್ನು ವಿವರಿಸಿರಿ. ಅಪೇಕ್ಷಿಸು ಬ್ರೋಷರ್ನ್ನು ತೋರಿಸಿರಿ ಮತ್ತು ವಾರದಲ್ಲಿ 15-30 ನಿಮಿಷಗಳಿಗಾಗಿ ಒಂದು ಸಂಕ್ಷಿಪ್ತ ಪಾಠವನ್ನು ಅಭ್ಯಾಸಿಸುವಿರಿ ಎಂದು ಹೇಳಿರಿ.
5 ಅಭ್ಯಾಸಗಳನ್ನು ಪ್ರಾರಂಭಿಸಲು ನಾವೆಲ್ಲರೂ ಐಕ್ಯದಿಂದ ಕೆಲಸಮಾಡುವಲ್ಲಿ ಮತ್ತು ನಾವು ಮಾಡುವ ಪ್ರಯತ್ನದ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ಪ್ರಾರ್ಥಿಸುವಲ್ಲಿ, ನಮಗೆ ಖಂಡಿತವಾಗಿಯೂ ಹೊಸ ಅಭ್ಯಾಸಗಳು ಸಿಕ್ಕೇ ಸಿಗುವವು! (1 ಯೋಹಾ. 5:14, 15) ನಿಮಗೆ ಒಂದು ಬೈಬಲ್ ಅಭ್ಯಾಸವು ಬೇಕಾಗಿರುವುದಾದರೆ, ಆರಂಭಿಸಲು ಇದೇ ತಕ್ಕ ಸಮಯವಾಗಿರಬಹುದು.