ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/98 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 1998 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿಷ್ಕ್ರಿಯರಾಗಿರುವವರನ್ನು ಮರೆಯದಿರಿ
    2007 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ರೇಖಾಚೌಕ
    2000 ನಮ್ಮ ರಾಜ್ಯದ ಸೇವೆ
  • “ನನ್ನ ಬಳಿಗೆ ಮರಳಿ ಬನ್ನಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಅವರು ತಡಮಾಡದೇ ಮರಳುವಂತೆ ನೆರವಾಗಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
1998 ನಮ್ಮ ರಾಜ್ಯದ ಸೇವೆ
km 11/98 ಪು. 7

ಪ್ರಶ್ನಾ ರೇಖಾಚೌಕ

◼ ಸಭಾ ಸೇವಾ ಕಮಿಟಿಯ ಸದಸ್ಯರಲ್ಲಿ ಒಬ್ಬರ ನಿರ್ದೇಶನದ ಮೇರೆಗೆ, ಅಕ್ರಿಯ ಸಹೋದರ ಅಥವಾ ಸಹೋದರಿಯೊಬ್ಬಳೊಂದಿಗೆ ಒಂದು ಗೃಹ ಬೈಬಲ್‌ ಅಭ್ಯಾಸವನ್ನು ನಡೆಸುವುದು ಸೂಕ್ತವಾಗಿದೆಯೋ?

ಅಕ್ರಿಯರಾಗಿರುವ ಸದಸ್ಯರನ್ನು ಒಳಗೊಂಡು, ಸಭೆಯಲ್ಲಿರುವ ಇತರರಿಗೆ ಕುರಿಪಾಲನಾ ಭೇಟಿಯನ್ನು ಮಾಡುವ ಜವಾಬ್ದಾರಿ ಹಿರಿಯರಿಗಿದೆ. ಅವರು ಅಂಥ ವ್ಯಕ್ತಿಗಳನ್ನು ಭೇಟಿಮಾಡಿ, ಯಾವ ವೈಯಕ್ತಿಕ ಸಹಾಯವು ಬೇಕಾಗಿದೆ ಎಂಬುದನ್ನು ಅವರು ನಿರ್ಧರಿಸುತ್ತಾರೆ. ಅವಶ್ಯವಿರುವಲ್ಲಿ, ಇದು ಅಕ್ರಿಯ ವ್ಯಕ್ತಿಗೆ ಒಂದು ವೈಯಕ್ತಿಕ ಬೈಬಲ್‌ ಅಭ್ಯಾಸವನ್ನು ಒದಗಿಸುವುದನ್ನು ಒಳಗೊಳ್ಳಸಾಧ್ಯವಿದೆ. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು, ಪುಟ 103, ಯಾರು ಅಂಥ ಏರ್ಪಾಡಿನಿಂದ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸಭಾ ಸೇವಾ ಕಮಿಟಿಯು ನಿರ್ಧರಿಸುವುದೆಂದು ವಿವರಿಸುತ್ತದೆ.

ಸೇವಾ ಮೇಲ್ವೀಚಾರಕನು, ಯಾರು ನೆರವನ್ನು ಅತ್ಯುತ್ತಮವಾಗಿ ನೀಡಬಲ್ಲದು. ಯಾವ ವಿಷಯಗಳು ಅಭ್ಯಾಸ ಮಾಡಲ್ಪಡಬೇಕು, ಮತ್ತು ಯಾವ ಪ್ರಕಾಶನವು ಅತ್ಯಂತ ಸಹಾಯಕಾರಿಯಾಗಿರುವುದು ಎಂಬುದನ್ನು ನಿರ್ಧರಿಸುತ್ತಾನೆ. ಆ ವ್ಯಕ್ತಿಯೊಂದಿಗೆ ಈ ಮುಂಚೆ ಅಭ್ಯಾಸ ಮಾಡುತ್ತಿದ್ದವನು ಅಥವಾ ಈ ವ್ಯಕ್ತಿಗೆ ಪರಿಚಯವಿದ್ದು, ಅವನು ಗೌರವಿಸುತ್ತಿಡುವ ವ್ಯಕ್ತಿಯು ಸಹಾಯಮಾಡಲು ಅರ್ಹನಾಗಿರುವನು. ಒಬ್ಬ ಆಕ್ರಿಯ ಸಹೋದರಿಗೆ ನೆರವನ್ನು ನೀಡಲು ಒಬ್ಬ ಸಮರ್ಥ ಹಾಗೂ ಹಾಗೂ ಪ್ರೌಢ ಸಹೋದರಿಯನ್ನು ಕೇಳಿಕೊಳ್ಳಬಹುದು. ಸಾಮಾನ್ಯವಾಗಿ ಆ ನೇಮಿತ ನಿರ್ವಾಹಕನೊಂದಿಗೆ ಮತ್ತೊಬ್ಬ ಪ್ರಚಾರಕನು ಹೋಗುವ ಅವಶ್ಯವಿರುವುದಿಲ್ಲ. ಅಭ್ಯಾಸವನ್ನು ನಡೆಸಲು ನೇಮಿಸಲ್ಪಟ್ಟಾಗ, ಆ ಪ್ರಚಾರಕರನು ಸಮಯ, ಪುನರ್ಭೇಟಿಗಳು ಮತ್ತು ಅಭ್ಯಾಸವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು.–ನವೆಂಬರ್‌ 1987 ನಮ್ಮ ರಾಜ್ಯದ ಸೇವೆ, ಪುಟಗಳು 1-2ನ್ನು ನೋಡಿರಿ.

ವಿದ್ಯಾರ್ಥಿಯು ಒಬ್ಬ ದೀಕ್ಷಾಸ್ನಾನಿತ ವ್ಯಕ್ತಿಯಾಗಿರುವುದರಿಂದ, ಅಭ್ಯಾಸವನ್ನು ದೀರ್ಘ ಸಮಯದ ವರೆಗೆ ನಡೆಸುವ ಅಗತ್ಯವಿರುವುದಿಲ್ಲ. ಅದರ ಮುಖ್ಯ ಗುರಿಯು, ಆ ಅಕ್ರಿಯ ವ್ಯಕ್ತಿಯು ಪುನಃ ಸಭೆಯ ಎಲ್ಲ ಕೂಟಗಳನ್ನು ಹಾಜರಾಗಿ, ಸುವಾರ್ತೆಯ ಒಬ್ಬ ಕ್ರಮದ ಪ್ರಚಾರಕನಾಗುವುದೇ. ಅಂಥ ಅಭ್ಯಾಸಗಳ ಪ್ರಗತಿಗೆ ಸೇವಾ ಮೇಲ್ವಿಚಾರಕನು ಗಮನ ಕೊಡುವನು. ಈ ಸಹೋದರ ಸಹೋದರಿಯರು ಯೆಹೋವನ ಮುಂದೆ ತಮ್ಮ ಜವಾಬ್ದಾರಿಯ ಸ್ವಂತ ಹೊರೆಯನ್ನು ಹೊತ್ತುಕೊಳ್ಳಲು ಶಕ್ತರಾಗುವುದು ಮತ್ತು ಸತ್ಯದಲ್ಲಿ ಬಲವಾಗಿ “ಬೇರೂರಿ, ಕಟ್ಟಲ್ಪಡು”ವವರಾಗುವುದೇ ಈ ಪ್ರೀತಿಪರ ನೆರವಿನ ಫಲಿತಾಂಶವಾಗಿರಬೇಕು.–ಎಫೆ. 3:17 (NW); ಗಲಾ. 6:5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ