ನಾವು ಭಿನ್ನರಾಗಿದ್ದೇವೆಂಬುದನ್ನು ಅವರು ನೋಡಬಲ್ಲರು
1 ಕಳೆದ ವರ್ಷ, 3,00,000ಕ್ಕಿಂತಲೂ ಹೆಚ್ಚಿನ ಹೊಸಬರು ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಮ್ಮನ್ನು ಜೊತೆಗೂಡಿದರು. ಅವರು ದೇವರ ಸಂಸ್ಥೆಯ ಭಾಗವಾಗುವಂತೆ ಮಾಡುವ ಯಾವ ವಿಷಯಗಳನ್ನು ಈ ಜನರು ಯೆಹೋವನ ಸಾಕ್ಷಿಗಳಲ್ಲಿ ನೋಡಿದ್ದಾರೆ? ಇತರ ಎಲ್ಲ ಧರ್ಮಗಳಿಗಿಂತ ನಾವು ಭಿನ್ನರಾಗಿ ಕಂಡುಬರುತ್ತೇವೆ ಏಕೆ? ಇಲ್ಲಿ ಕೆಲವು ಸ್ಪಷ್ಟ ಉತ್ತರಗಳಿವೆ:
—ನಾವು ವೈಯಕ್ತಿಕ ಅಭಿಪ್ರಾಯಗಳನ್ನಲ್ಲ ಬೈಬಲನ್ನು ಪಾಲಿಸುತ್ತೇವೆ: ಯೇಸು ಕ್ರಿಸ್ತನು ಮಾಡಲು ಹೇಳಿದಂತೆಯೇ, ನಾವು ಯೆಹೋವ ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸುತ್ತೇವೆ. ಇದು ಧಾರ್ಮಿಕ ಸುಳ್ಳುಗಳನ್ನು ತಿರಸ್ಕರಿಸುತ್ತಾ, ದೇವರ ಲಿಖಿತ ವಾಕ್ಯಕ್ಕನುಸಾರವಾಗಿ ನಡೆಯುವುದನ್ನು ಅರ್ಥೈಸಿದೆ.—ಯೋಹಾ. 4:23, 24, NW; 2 ತಿಮೊ. 3:15-17.
—ಜನರು ನಮ್ಮ ಬಳಿಗೆ ಬರುವಂತೆ ನಿರೀಕ್ಷಿಸುವ ಬದಲು, ನಾವು ಅವರ ಬಳಿ ಹೋಗುತ್ತೇವೆ: ಸಾರಲು ಮತ್ತು ಕಲಿಸಲು ನಮಗೆ ನೀಡಲ್ಪಟ್ಟಿರುವ ಕ್ರಿಸ್ತನ ನೇಮಕವನ್ನು ನಾವು ಸ್ವೀಕರಿಸಿದ್ದೇವೆ ಮತ್ತು ಪ್ರಾಮಾಣಿಕ ಹೃದಯದ ಜನರನ್ನು ಹುಡುಕುವುದರಲ್ಲಿ ಅವನ ಮಾದರಿಯನ್ನು ಅನುಕರಿಸುತ್ತೇವೆ. ನಾವು ಅಂತಹವರನ್ನು ಮನೆಗಳಲ್ಲಿ, ಬೀದಿಯಲ್ಲಿ, ಅಥವಾ ಅವರು ಇರುವಲ್ಲೆಲ್ಲ ಭೇಟಿಯಾಗುತ್ತೇವೆ.—ಮತ್ತಾ. 9:35; 10:11; 28:19, 20; ಅ.ಕೃ. 10:42.
—ನಾವು ಪ್ರತಿಯೊಬ್ಬರಿಗೂ ಬೈಬಲಿನ ಉಪದೇಶವನ್ನು ಉಚಿತವಾಗಿ ನೀಡುತ್ತೇವೆ: ದೇವರ ಸೇವೆಯಲ್ಲಿ ಪ್ರತಿ ವರ್ಷ ಶತಕೋಟಿಗಿಂತಲೂ ಹೆಚ್ಚಿನ ತಾಸುಗಳನ್ನು ವಿನಿಯೋಗಿಸುತ್ತಾ, ನಾವು ನಮ್ಮ ನಿಧಿಗಳನ್ನು ಮತ್ತು ಶಕ್ತಿಯನ್ನು ಉಚಿತವಾಗಿ ವ್ಯಯಿಸುತ್ತೇವೆ. ಯಾವುದೇ ಭೇದಭಾವವಿಲ್ಲದೆ, ನಾವು ಎಲ್ಲ ರೀತಿಯ ಜನರೊಂದಿಗೆ ಬೈಬಲನ್ನು ಅಭ್ಯಾಸಿಸುತ್ತೇವೆ.—ಮತ್ತಾ. 10:8; ಅ.ಕೃ. 10:34, 35; ಪ್ರಕ. 22:17.
—ಜನರಿಗೆ ಆತ್ಮಿಕವಾಗಿ ಸಹಾಯಮಾಡಲು ನಾವು ಉತ್ತಮ ತರಬೇತಿಯನ್ನು ಪಡೆದಿದ್ದೇವೆ: ನಮ್ಮ ವೈಯಕ್ತಿಕ ಬೈಬಲ್ ಅಧ್ಯಯನದ ಮೂಲಕ ಮತ್ತು ಸಭಾ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ನೀಡಲ್ಪಡುವ ಉಪದೇಶದ ಮೂಲಕ, ನಾವು ಇತರರ ಮನಸ್ಸಿನಲ್ಲಿ ಆತ್ಮಿಕ ಜ್ಞಾನೋದಯವನ್ನು ಉಂಟುಮಾಡಲಿಕ್ಕಾಗಿ ಅಮೂಲ್ಯವೂ, ಕ್ರಮವೂ ಆದ ದೇವಪ್ರಭುತ್ವ ಶಿಕ್ಷಣವನ್ನು ಪಡೆದುಕೊಳ್ಳುತ್ತೇವೆ.—ಯೆಶಾ. 54:13; 2 ತಿಮೊ. 2:15; 1 ಪೇತ್ರ 3:15.
—ನಾವು ಸತ್ಯವನ್ನು ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಂಡು, ಅದನ್ನು ನಮ್ಮ ದಿನನಿತ್ಯದ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುತ್ತೇವೆ: ನಾವು ದೇವರನ್ನು ಪ್ರೀತಿಸುವುದರಿಂದ, ಬದಲಾವಣೆಗಳನ್ನು ಮಾಡಿಕೊಂಡು, ಆತನ ಚಿತ್ತಕ್ಕನುಸಾರವಾಗಿ ನಮ್ಮ ಜೀವಿತಗಳನ್ನು ಹೊಂದಿಸಿಕೊಳ್ಳುತ್ತೇವೆ. ನಮ್ಮ ಕ್ರಿಸ್ತಸದೃಶ ಹೊಸ ವ್ಯಕ್ತಿತ್ವವು, ಇತರರನ್ನು ಸತ್ಯದೆಡೆಗೆ ಬರುವಂತೆ ಮಾಡುತ್ತದೆ.—ಕೊಲೊ. 3:9, 10; ಯಾಕೋ. 1:22, 25; 1 ಯೋಹಾ. 5:3.
—ಇತರರೊಂದಿಗೆ ಶಾಂತಿಯಿಂದ ಜೀವಿಸಲು ಮತ್ತು ಕೆಲಸಮಾಡಲು ನಾವು ಪ್ರಯತ್ನಿಸುತ್ತೇವೆ: ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವುದು, ನಮ್ಮ ನಡೆನುಡಿಗಳ ಕುರಿತು ಜಾಗರೂಕರಾಗಿರುವಂತೆ ಸಹಾಯಮಾಡುತ್ತದೆ. ನಾವು ಎಲ್ಲ ಜನರೊಂದಿಗೆ “ಶಾಂತಿಯನ್ನು ಹುಡುಕಿ, ಅದನ್ನು ಬೆನ್ನಟ್ಟಿ”ಕೊಂಡು ಹೋಗುತ್ತೇವೆ.”—1 ಪೇತ್ರ 3:10, 11, NW; ಎಫೆ. 4:1-3.
2 ಯೆಹೋವನ ಸಂಸ್ಥೆಯಲ್ಲಿ ನೋಡುವ ಕ್ರೈಸ್ತ ಜೀವಿತದ ಮಾದರಿಗಳು, ಅನೇಕರನ್ನು ಸತ್ಯಕ್ಕೆ ಬರುವಂತೆ ಪ್ರೇರೇಪಿಸುತ್ತದೆ. ಆದುದರಿಂದ ನಮ್ಮ ಮಾದರಿಯು, ನಮ್ಮ ಪರಿಚಯವಿರುವ ಮತ್ತು ನಮ್ಮನ್ನು ಗಮನಿಸುವವರ ಮೇಲೆ ಅದೇ ರೀತಿಯ ಪರಿಣಾಮವನ್ನು ಬೀರುವಂತಾಗಲಿ.