ಸೇವಾ ಕೂಟದ ಶೆಡ್ಯೂಲ್
ಜನವರಿ 10ರಿಂದ ಆರಂಭವಾಗುವ ವಾರ
ಸಂಗೀತ 107 (4)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ಯೆಹೋವನ ನಾಮವನ್ನು ಭೂಮಂಡಲದಲ್ಲೆಲ್ಲ ತಿಳಿಯಪಡಿಸುವುದು.” ಪ್ರಶ್ನೋತ್ತರ ಚರ್ಚೆ. ಅನೌಪಚಾರಿಕ ಸಾಕ್ಷಿಯ ಕುರಿತು ನಮ್ಮ ಶುಶ್ರೂಷೆ ಪುಸ್ತಕದ 93-4ನೆಯ ಪುಟಗಳಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ.
20 ನಿ: ಆರೋಗ್ಯ ಆರೈಕೆಯ ರಕ್ತರಹಿತ ಚಿಕಿತ್ಸೆಗಾಗಿ ಒಂದು ಶಾಸನಬದ್ಧ ಆಯ್ಕೆಯನ್ನು ಮಾಡುವುದು. (ಅ. ಕೃ. 15:28, 29) ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಭರ್ತಿಮಾಡುವ ಮತ್ತು ಎಲ್ಲ ಸಮಯಗಳಲ್ಲಿ ಅದನ್ನು ನಮ್ಮೊಂದಿಗೆ ಇಟ್ಟುಕೊಳ್ಳುವುದರ ಮಹತ್ವದ ಕುರಿತು ಅರ್ಹನಾದ ಒಬ್ಬ ಹಿರಿಯನು ಚರ್ಚಿಸುತ್ತಾನೆ. ಒಂದು ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಸ್ವತಃ ಮಾತಾಡಲು ಸಾಧ್ಯವಾಗದಿದ್ದಾಗ, ಈ ಡಾಕ್ಯುಮೆಂಟ್ ನಿಮ್ಮ ಪರವಾಗಿ ಮಾತಾಡುವುದು. (ಜ್ಞಾನೋಕ್ತಿ 22:3ನ್ನು ಹೋಲಿಸಿರಿ.) ರಕ್ತದ ನಿರಾಕರಣೆಯ ಕುರಿತು ನಿಮ್ಮ ಸದ್ಯದ ಹೇಳಿಕೆಯನ್ನು ನೀಡುವುದಕ್ಕಾಗಿ, ಪ್ರತಿ ವರ್ಷ ಒಂದು ಹೊಸ ಕಾರ್ಡನ್ನು ಭರ್ತಿಮಾಡಬೇಕು. ಯಾಕೆಂದರೆ, ಒಂದು ವರ್ಷಕ್ಕಿಂತ ಹಳೆಯದಾದ ಡಾಕ್ಯುಮೆಂಟ್‌ಗಳು, ಒಬ್ಬ ವ್ಯಕ್ತಿಯ ಸದ್ಯದ ದೃಢನಂಬಿಕೆಯನ್ನು ವ್ಯಕ್ತಪಡಿಸದೆ ಇರಬಹುದೆಂದು ಕೆಲವು ವೈದ್ಯರು ಮತ್ತು ಇತರರು ವಾದಿಸಿದ್ದಾರೆ. ಈ ಕೂಟದ ನಂತರ, ಎಲ್ಲಾ ದೀಕ್ಷಾಸ್ನಾನಿತ ಪ್ರಚಾರಕರಿಗೆ ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಕೊಡಲಾಗುವುದು ಮತ್ತು ಅಸ್ನಾತರಾದ ಚಿಕ್ಕ ಮಕ್ಕಳಿರುವ ಹೆತ್ತವರಿಗೆ, ತಮ್ಮ ಪ್ರತಿಯೊಬ್ಬ ಮಗುವಿಗಾಗಿ ಒಂದು ಐಡೆಂಟಿಟಿ ಕಾರ್ಡನ್ನು ಕೊಡಲಾಗುವುದು. ಈ ಕಾರ್ಡ್‌ಗಳನ್ನು ಅದೇ ರಾತ್ರಿಯಂದು ಭರ್ತಿಮಾಡಬಾರದು ಎಂಬುದನ್ನು ವಿವರಿಸಿರಿ. ಮನೆಯಲ್ಲಿ ಅವುಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ, ತದನಂತರ ಭರ್ತಿಮಾಡಬೇಕು, ಆದರೆ ಸಹಿಹಾಕಬಾರದು. ಯಾರು ಸಹಿಗೆ ಸಾಕ್ಷಿಗಳಾಗಿರುತ್ತಾರೋ ಅಂತಹ ವ್ಯಕ್ತಿಗಳ ಸಮಕ್ಷಮದಲ್ಲಿ ಕಾರ್ಡಿನ ಮೇಲೆ ಸಹಿಹಾಕಬೇಕು ಮತ್ತು ತಾರೀಖನ್ನು ಬರೆಯಬೇಕು. ಕಾರ್ಡಿಗೆ ಸಹಿಹಾಕಲು ತಕ್ಕ ಸಾಕ್ಷಿಗಳನ್ನು ಕಂಡುಕೊಳ್ಳಲು ಅಥವಾ ಬೇರೆ ಯಾವ ರೀತಿಯಲ್ಲಾದರೂ ಸಹೋದರರಿಗೆ ಸಹಾಯವು ಬೇಕಾಗಿರುವುದಾದರೆ, ಅಂಥ ಸಹೋದರರು ಮುಂದಿನ ಸಭಾ ಪುಸ್ತಕ ಅಭ್ಯಾಸಕ್ಕೆ ಆ ಕಾರ್ಡನ್ನು ತರುವಂತೆ ನಾವು ಸಲಹೆ ನೀಡುತ್ತೇವೆ. ಏಕೆಂದರೆ, ಅಭ್ಯಾಸದ ನಂತರ ಅಭ್ಯಾಸಚಾಲಕನು ಬೇಕಾದ ಸಹಾಯ ಮತ್ತು ನೆರವನ್ನು ನೀಡಲು ಶಕ್ತನಾಗುವನು. ತನ್ನ ಗುಂಪಿಗೆ ನೇಮಿಸಲ್ಪಟ್ಟಿರುವವರೆಲ್ಲರಿಗೆ ಕಾರ್ಡ್ ಸಿಕ್ಕಿದೆಯೇ ಮತ್ತು ಅಗತ್ಯವಿರುವ ನೆರವು ನೀಡಲ್ಪಟ್ಟಿದೆಯೇ ಎಂಬುದನ್ನು ಅವನು ಪರಿಶೀಲಿಸುವನು. ಸಾಕ್ಷಿಗಳಾಗಿ ಸಹಿಹಾಕುವವರು, ಕಾರ್ಡನ್ನು ಪಡೆದುಕೊಂಡಿರುವ ವ್ಯಕ್ತಿಯು ಡಾಕ್ಯುಮೆಂಟಿಗೆ ಸಹಿಹಾಕುವುದನ್ನು ವಾಸ್ತವವಾಗಿ ನೋಡಬೇಕು. ಅಸ್ನಾತ ಪ್ರಚಾರಕರು, ತಮ್ಮ ಸ್ವಂತ ಸಂದರ್ಭಗಳು ಮತ್ತು ನಂಬಿಕೆಗಳಿಗೆ ಅನುಸಾರವಾಗಿ ಈ ಕಾರ್ಡಿನಲ್ಲಿ ಸೂಚಿಸಲ್ಪಟ್ಟಿರುವ ವಿಷಯಕ್ಕೆ ತಕ್ಕಂತೆ, ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಸ್ವಂತ ಡೈರೆಕ್ಟಿವ್ ಅನ್ನು ಬರೆದುಕೊಳ್ಳಬಹುದು. ಈ ಭಾಗವನ್ನು ನಿರ್ವಹಿಸುವ ಹಿರಿಯನು ಅಕ್ಟೋಬರ್ 15, 1991ರ ಸೊಸೈಟಿಯ ಪತ್ರವನ್ನು ಸಹ ಪುನರ್ವಿಮರ್ಶಿಸುವನು.
ಸಂಗೀತ 155 (23) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 17ರಿಂದ ಆರಂಭವಾಗುವ ವಾರ
ಸಂಗೀತ 12 (9)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಒಬ್ಬ ಮುಸ್ಲಿಮನಿಗೆ ನೀವು ಏನನ್ನು ಹೇಳುವಿರಿ?” ಪ್ರಶ್ನೋತ್ತರಗಳು. ವಿಭಿನ್ನ ಸಂಸ್ಕೃತಿಗಳ ಜನರೊಂದಿಗೆ ಸಂಭಾಷಿಸುವಾಗ ವಿವೇಚನೆಯನ್ನು ಉಪಯೋಗಿಸುವ ಅಗತ್ಯವನ್ನು ಎತ್ತಿತೋರಿಸಿರಿ. ಚೆನ್ನಾಗಿ ತಯಾರಿಸಲ್ಪಟ್ಟ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಇಸ್ಲಾಮ್ ಧರ್ಮದ ಕುರಿತು ಹೆಚ್ಚಿನ ಮಾಹಿತಿಗಾಗಿ, ಫೆಬ್ರವರಿ 1988ರ ನಮ್ಮ ರಾಜ್ಯದ ಸೇವೆಯ ಪುರವಣಿ, ರೀಸನಿಂಗ್ ಪುಸ್ತಕದ 23-4ನೇ ಪುಟಗಳನ್ನು ಹಾಗೂ ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಪುಸ್ತಕದ 12ನೇ ಅಧ್ಯಾಯವನ್ನು ನೋಡಿ.
ಸಂಗೀತ 57 (26) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 24ರಿಂದ ಆರಂಭವಾಗುವ ವಾರ
ಸಂಗೀತ 110 (23)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ಕ್ಷೇತ್ರ ಸೇವೆಯ ಅನುಭವಗಳು.
15 ನಿ: “ಯೆಹೋವನ ವಾಕ್ಯವನ್ನು ಪ್ರತಿದಿನವೂ ಪರಿಗಣಿಸಿರಿ!” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2000 ಎಂಬ ಪುಸ್ತಿಕೆಯ ಒಳ್ಳೆಯ ಉಪಯೋಗವನ್ನು ಮಾಡುವಂತೆ ಪ್ರತಿಯೊಬ್ಬರನ್ನು ಉತ್ತೇಜಿಸಿರಿ. 3-4ನೇ ಪುಟಗಳಲ್ಲಿರುವ ಮುನ್ನುಡಿಯಿಂದ ತೆಗೆದ ಹೇಳಿಕೆಗಳನ್ನು ನಿಮ್ಮ ಭಾಷಣದಲ್ಲಿ ಸೇರಿಸಿರಿ. ಪ್ರತಿದಿನ ದೈನಿಕ ವಚನವನ್ನು ಹಾಗೂ ಹೇಳಿಕೆಗಳನ್ನು ಪರಿಗಣಿಸಲಿಕ್ಕಾಗಿ ಕೆಲವರು ಹೇಗೆ ವಿಶೇಷ ಪ್ರಯತ್ನವನ್ನು ಮಾಡುತ್ತಾರೆಂಬುದನ್ನು ತಿಳಿಸುವಂತೆ ಪ್ರಚಾರಕರನ್ನು ಆಮಂತ್ರಿಸಿರಿ.
20 ನಿ: “ದೇವರ ಪ್ರವಾದನ ವಾಕ್ಯವೆಲ್ಲವೂ ಸತ್ಯವಾಗುವುದು!” ಲೇಖನದ ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ ಕೊಡಿರಿ ಮತ್ತು ನಂತರ ಪ್ರಶ್ನೋತ್ತರಗಳ ಚರ್ಚೆಯನ್ನು ನಡಿಸಿರಿ. ನಮ್ಮ ಸಮಯಗಳ ಮಹತ್ವವನ್ನು ಎತ್ತಿತೋರಿಸುವ ಕೆಲವು ವಿವರಗಳನ್ನು ಹೊಸ ಪುಸ್ತಕದಿಂದ ಆರಿಸಿ ಹೇಳಿರಿ.
ಸಂಗೀತ 157 (27) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 31ರಿಂದ ಆರಂಭವಾಗುವ ವಾರ
ಸಂಗೀತ 16 (22)
10 ನಿ: ಸ್ಥಳಿಕ ತಿಳಿಸುವಿಕೆಗಳು. ಜನವರಿ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ. ಫೆಬ್ರವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯು ಕುಟುಂಬ ಸಂತೋಷ ಪುಸ್ತಕವಾಗಿದೆಯೆಂದು ತಿಳಿಸಿರಿ. ಈ ಪುಸ್ತಕದ 12ನೇ ಪುಟದ ರೇಖಾಚೌಕದಲ್ಲಿರುವ ಮೂರು ಪ್ರಶ್ನೆಗಳನ್ನು ಉಪಯೋಗಿಸಿ ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆಯನ್ನು ಆರಂಭಿಸುವುದಕ್ಕೆ ಆಧಾರವಾಗಿ ಹೇಗೆ ಇಟ್ಟುಕೊಳ್ಳಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ‘ಗುರುತಿಸಿಡುವುದು’ ಎಂಬ ವಿಷಯದ ಕುರಿತಾದ ಪ್ರಶ್ನೆಗೆ ಉತ್ತರ. ಒಬ್ಬ ಹಿರಿಯನಿಂದ ಜುಲೈ 15, 1999ರ ಕಾವಲಿನಬುರುಜು ಪತ್ರಿಕೆಯ 29-31ನೇ ಪುಟಗಳಲ್ಲಿರುವ ವಿಷಯದ ಮೇಲಾಧಾರಿತವಾದ ಒಂದು ಭಾಷಣ.
18 ನಿ: ಸತ್ಯ ಧರ್ಮವನ್ನು ಗುರುತಿಸುವಂತೆ ನಾವು ಇತರರಿಗೆ ಸಹಾಯಮಾಡುವ ವಿಧ. ಜನರು ಯೆಹೋವನ ಸಾಕ್ಷಿಗಳಿಂದ ಪ್ರಭಾವಿತರಾಗಬಹುದಾದರೂ, ನಮ್ಮ ಧರ್ಮ ಮತ್ತು ಇತರ ಧರ್ಮಗಳ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿಲ್ಲ ಎಂಬ ವಿಷಯದ ಕುರಿತು ಒಬ್ಬ ಸಮರ್ಥ ಶುಶ್ರೂಷಾ ಸೇವಕ ಮತ್ತು ಇಬ್ಬರು ಅಥವಾ ಮೂವರು ಸಮರ್ಥ ಪ್ರಚಾರಕರ ಮಧ್ಯೆ ಚರ್ಚೆ. ಮೇ 8, 1995ರ ಅವೇಕ್! ಪತ್ರಿಕೆಯ 20ನೆಯ ಪುಟದಲ್ಲಿ ಸೂಚಿಸಲ್ಪಟ್ಟಿರುವ ಹತ್ತು ಅಂಶಗಳನ್ನು ಪುನರ್ವಿಮರ್ಶಿಸಿರಿ. ಸತ್ಯ ಮತ್ತು ಸುಳ್ಳು ಆರಾಧನೆಗಳ ನಡುವೆ ಇರುವ ವ್ಯತ್ಯಾಸವನ್ನು ನೋಡುವಂತೆ ಮತ್ತು ಯೆಹೋವನ ಜನರಿಂದ ಕಲಿತುಕೊಳ್ಳುವ ಹಾಗೂ ಅವರೊಂದಿಗೆ ಸಹವಾಸವನ್ನು ಮಾಡುವ ಅಗತ್ಯವನ್ನು ಒಬ್ಬ ಯಥಾರ್ಥ ವ್ಯಕ್ತಿಯು ತಿಳಿದುಕೊಳ್ಳುವಂತೆ ಈ ಅಂಶಗಳು ಹೇಗೆ ಸಹಾಯಮಾಡುತ್ತವೆ ಎಂಬುದನ್ನು ವಿವರಿಸಿರಿ.
ಸಂಗೀತ 60 (17) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 7ರಿಂದ ಆರಂಭವಾಗುವ ವಾರ
ಸಂಗೀತ 113 (12)
8 ನಿ: ಸ್ಥಳಿಕ ತಿಳಿಸುವಿಕೆಗಳು.
17 ನಿ: “ಪೂರ್ವ ಯೂರೋಪಿನಲ್ಲಿ ಸತ್ಯಾರಾಧನೆಯು ಹಬ್ಬುತ್ತಿದೆ.” ಪ್ರಶ್ನೆ ಮತ್ತು ಉತ್ತರಗಳನ್ನು ಕೇಳುವ ಮೂಲಕ ಹಿರಿಯನು ಈ ಭಾಗವನ್ನು ನಿರ್ವಹಿಸುತ್ತಾನೆ. ಇತ್ತೀಚಿನ ವರ್ಷಪುಸ್ತಕ (ಇಂಗ್ಲಿಷ್)ಗಳಲ್ಲಿ ವರದಿಸಲ್ಪಟ್ಟಿರುವಂತೆ, ಲೇಖನದಲ್ಲಿ ತೋರಿಸಲ್ಪಟ್ಟ ದೇಶಗಳಲ್ಲಾಗಿರುವ ಅಭಿವೃದ್ಧಿಯ ಸಾಕ್ಷ್ಯವನ್ನು ಅಥವಾ ಅನುಭವಗಳನ್ನು ತಿಳಿಸಿರಿ.
20 ನಿ: ಅವರು ವಿವೇಕಯುತವಾದ ಆಯ್ಕೆಯನ್ನು ಮಾಡಿದರು. ಅಕ್ಟೋಬರ್ 15, 1997ರ ಕಾವಲಿನಬುರುಜು ಪತ್ರಿಕೆಯ 19-21ನೆಯ ಪುಟಗಳಲ್ಲಿರುವ ಪ್ಯಾರಗ್ರಾಫ್ 3-16ರ ವರೆಗಿನ ಮಾಹಿತಿಯ ಮೇಲೆ ಆಧಾರಿತವಾದ ಭಾಷಣ. ತಮ್ಮ ಜೀವಿತಗಳು ಅತಿ ಪ್ರತಿಫಲದಾಯಕ ಮತ್ತು ಪ್ರಯೋಜನದಾಯಕ ರೀತಿಯಲ್ಲಿ ವ್ಯಯಿಸಲ್ಪಟ್ಟಿವೆಯೆಂದು ಅವರಿಗೆ ಏಕೆ ಅನಿಸುತ್ತದೆಂದು ತೋರಿಸುವ ಪಯನೀಯರರ ಅನುಭವಗಳನ್ನು ತಿಳಿಸಿರಿ. ಅವರ ಸ್ವಂತ ಪಯನೀಯರ್ ಪ್ರತೀಕ್ಷೆಗಳನ್ನು ತೂಗಿನೋಡುವಂತೆ ಹಾಜರಿರುವ ಎಲ್ಲರನ್ನು ಪ್ರೋತ್ಸಾಹಿಸಿರಿ.
ಸಂಗೀತ 182 (24) ಮತ್ತು ಸಮಾಪ್ತಿಯ ಪ್ರಾರ್ಥನೆ.