ಪ್ರಶ್ನಾ ರೇಖಾಚೌಕ
◼ ನೀವು ಒಂದು ತುರ್ತುಪರಿಸ್ಥಿತಿಗೆ ಸಿದ್ಧರಾಗಿದ್ದೀರೋ?
ಆಧುನಿಕ ಲೋಕದಲ್ಲಿ, “ಕಾಲ ಮತ್ತು ಮುಂಗಾಣದ ಸಂಭವವು,” ವೈದ್ಯಕೀಯ ತುರ್ತುಪರಿಸ್ಥಿತಿಯೊಂದನ್ನು ಅನೇಕವೇಳೆ ಉಂಟುಮಾಡುತ್ತಾ, ರಕ್ತಪೂರಣವನ್ನು ತೆಗೆದುಕೊಳ್ಳುವ ಒತ್ತಡಕ್ಕೊಳಗಾಗುವಂತೆ ಮಾಡುತ್ತದೆ. (ಪ್ರಸಂ. 9:11, NW) ಸಂಭವಿಸಬಹುದಾದ ಇಂತಹ ತುರ್ತುಪರಿಸ್ಥಿತಿಗೆ ನಾವು ಸಿದ್ಧರಾಗಿದ್ದೇವೆಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ, ಯೆಹೋವನು ತನ್ನ ಸಂಸ್ಥೆಯ ಮೂಲಕ ಅನೇಕ ವಿಧಗಳಲ್ಲಿ ನಮಗೆ ಸಹಾಯವನ್ನು ಒದಗಿಸಿರುವುದಾದರೂ, ನಾವು ನಮ್ಮ ಪಾಲನ್ನು ಮಾಡುವಂತೆ ಆತನು ನಿರೀಕ್ಷಿಸುತ್ತಾನೆ. ನಿಮ್ಮ ಸಹಾಯಕ್ಕಾಗಿ, ನೀವೇ ಪರೀಕ್ಷಿಸಿ ನೋಡುವಂತೆ ಒಂದು ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇವೆ.
• ಸದ್ಯದ ಅಡ್ವಾನ್ಸ್ ಮೆಡಿಕಲ್ ಡಿರೆಕ್ಟಿವ್/ರಿಲೀಸ್ ಕಾರ್ಡನ್ನು ಎಲ್ಲ ಸಮಯಗಳಲ್ಲಿಯೂ ನಿಮ್ಮೊಂದಿಗೆ ಒಯ್ಯಿರಿ.
• ನಿಮ್ಮ ಮಕ್ಕಳು ಸದ್ಯದ ಐಡೆಂಟಿಟಿ ಕಾರ್ಡನ್ನು ಒಯ್ಯುತ್ತಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.
• ಅಕ್ಟೋಬರ್ 1992 ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ವಿಷಯಗಳನ್ನು ಪುನರ್ವಿಮರ್ಶಿಸುತ್ತಾ ನಿಮ್ಮ ಮಗುವಿಗಾಗಿ ನೀಡುವ ಚಿಕಿತ್ಸೆಯ ಕುರಿತು ಡಾಕ್ಟರರೊಂದಿಗೆ ಮತ್ತು ನ್ಯಾಯಾಧೀಶರೊಂದಿಗೆ ಹೇಗೆ ಸಮರ್ಥಿಸಬಹುದೆಂಬುದನ್ನು ಪೂರ್ವಾಭ್ಯಾಸಮಾಡಿರಿ.
• ರಕ್ತದ ಘಟಕಾಂಶಗಳ ಕುರಿತು ಮತ್ತು ರಕ್ತದ ಬದಲಿಗಳ ಕುರಿತಿರುವ ಲೇಖನಗಳನ್ನು ಪುನರ್ವಿಮರ್ಶಿಸಿರಿ. (ಶಿಫಾರಸ್ಸು ಮಾಡಲ್ಪಟ್ಟಿದ್ದು: ಅಕ್ಟೋಬರ್ 1, 1994ರ ಕಾವಲಿನಬುರುಜು ಪತ್ರಿಕೆಯ 31ನೆಯ ಪುಟ; ಜೂನ್ 1, 1990ರ ವಾಚ್‌ಟವರ್ ಪತ್ರಿಕೆಯ 30-1ನೆಯ ಪುಟಗಳು; ಮಾರ್ಚ್ 1, 1989ರ ವಾಚ್‌ಟವರ್ ಪತ್ರಿಕೆಯ 30-1ನೆಯ ಪುಟಗಳು; ಡಿಸೆಂಬರ್ 8, 1994ರ ಎಚ್ಚರ! ಪತ್ರಿಕೆಯ ಪುಟಗಳು 23-7; ನವೆಂಬರ್ 8, 1993ರ ಎಚ್ಚರ! ಪತ್ರಿಕೆಯ 24-7ನೆಯ ಪುಟಗಳು; ಡಿಸೆಂಬರ್ 8, 1992ರ ಎಚ್ಚರ! ಪತ್ರಿಕೆಯ 10ನೆಯ ಪುಟ; ಮತ್ತು ನಮ್ಮ ರಾಜ್ಯದ ಸೇವೆಯ ಅಕ್ಟೋಬರ್ 1992 ಮತ್ತು ಡಿಸೆಂಬರ್ 1990ರ ಪುರವಣಿಗಳು. ಸುಲಭವಾಗಿ ಕೈಗೆ ಸಿಗುವಂತೆ ಇವುಗಳನ್ನು ಒಂದು ಫೋಲ್ಡರಿನಲ್ಲಿ ಇಡಿರಿ.)
• ದೇಹದ ಹೊರಗೆ ರಕ್ತ ಸಂಚಾರವನ್ನು ಮಾಡಿಸುವ ಯಂತ್ರಗಳ ಉಪಯೋಗವನ್ನು ನೀವು ಅನುಮತಿಸುವಿರೊ ಅಥವಾ ರಕ್ತದ ಘಟಕಾಂಶಗಳನ್ನು ಒಳಗೂಡಿರುವ ಉತ್ಪನ್ನಗಳನ್ನು ನೀವು ಸ್ವೀಕರಿಸುವಿರೊ ಎಂಬುದನ್ನು ಶುದ್ಧಾಂತಃಕರಣದಿಂದ ನಿರ್ಣಯಿಸಿರಿ.
• ಸಾಧ್ಯವಿರುವುದಾದರೆ ಆಸ್ಪತ್ರೆಗೆ ಹೋಗುವುದಕ್ಕೆ ಮೊದಲು, ನಿಮಗೆ ಬೆಂಬಲ ನೀಡಲು ಸಾಧ್ಯವಾಗುವಂತೆ ಮತ್ತು ಆವಶ್ಯಕವಾಗಿರುವಲ್ಲಿ, ಹಾಸ್ಪಿಟಲ್ ಲೈಏಸನ್ ಕಮಿಟಿ (ಏಚ್‌ಎಲ್‌ಸಿ)ಯನ್ನು ಸಂಪರ್ಕಿಸುವಂತೆ ಹಿರಿಯರಿಗೆ ತಿಳಿಸಿರಿ. ಎಳೆಯ ಮಗುವು ಇದರಲ್ಲಿ ಒಳಗೂಡಿರುವುದಾದರೆ, ಏಚ್‌ಎಲ್‌ಸಿಗೆ ಮುಂಚಿತವಾಗಿಯೇ ವಿಷಯವನ್ನು ತಿಳಿಸುವಂತೆ ಹಿರಿಯರನ್ನು ಕೇಳಿಕೊಳ್ಳಿರಿ.
ರಕ್ತದ ನಿಮ್ಮ ನಿರಾಕರಣೆಯನ್ನು ಸ್ಪಷ್ಟವಾಗಿ ತಿಳಿಸಿರಿ: ಕೆಲವು ಸಹೋದರ ಸಹೋದರಿಯರು ತಮ್ಮನ್ನು ಉಪಚರಿಸುವ ವೈದ್ಯರಿಗೆ ತಾವು ರಕ್ತವನ್ನು ತೆಗೆದುಕೊಳ್ಳಲು ಬಯಸುವುದಿಲ್ಲವೆಂಬುದನ್ನು ತಿಳಿಸಲು ಕೊನೆಯ ಗಳಿಗೆಯ ವರೆಗೆ ಕಾಯುತ್ತಾರೆಂದು ವರದಿಗಳು ತೋರಿಸುತ್ತವೆ. ಇದು ವೈದ್ಯಕೀಯ ಸಿಬ್ಬಂದಿಗಳಿಗೆ ಅನ್ಯಾಯಮಾಡಿದಂತಾಗುತ್ತದೆ ಮತ್ತು ರಕ್ತಪೂರಣವು ಕೊಡಲ್ಪಡುವ ಅಪಾಯಕ್ಕೆ ನಿಮ್ಮನ್ನು ಒಡ್ಡುತ್ತದೆ. ವೈದ್ಯರಿಗೆ ನಿಮ್ಮ ನಂಬಿಕೆಗಳ ಬಗ್ಗೆ ಗೊತ್ತಿರುವುದಾದರೆ ಮತ್ತು ನಿಮ್ಮ ಇಚ್ಛೆಗಳನ್ನು ತಿಳಿಯಪಡಿಸುವ ನಿರ್ದಿಷ್ಟ ಮಾರ್ಗದರ್ಶನಗಳನ್ನು ಒದಗಿಸುವಂತಹ ಸಹಿಮಾಡಲ್ಪಟ್ಟ ದಾಖಲೆಪತ್ರಗಳಿಂದ ಅವು ಬೆಂಬಲಿಸಲ್ಪಟ್ಟಿದ್ದರೆ, ಆಗ ಅವರು ತಡವಿಲ್ಲದೆ ತಮ್ಮ ಕಾರ್ಯವನ್ನು ಮುಂದುವರಿಸುವಂತೆ ಅದು ಸಹಾಯಮಾಡುವುದು ಮಾತ್ರವಲ್ಲ, ರಕ್ತರಹಿತ ವೈದ್ಯಕೀಯ ಚಿಕಿತ್ಸೆಗಾಗಿರುವ ಹೆಚ್ಚಿನ ಆಯ್ಕೆಗಳನ್ನು ಮಾಡುವಂತೆ ಅನೇಕವೇಳೆ ಅದು ಅವರಿಗೆ ಅವಕಾಶವನ್ನು ಕೊಡುತ್ತದೆ.
ಒಂದು ವೈದ್ಯಕೀಯ ತುರ್ತುಪರಿಸ್ಥಿಯು ಯಾವುದೇ ಸಮಯದಲ್ಲಿ, ಸಾಮಾನ್ಯವಾಗಿ ನಾವು ಅದನ್ನು ನಿರೀಕ್ಷಿಸದೇ ಇದ್ದ ಸಮಯದಲ್ಲೇ ಸಂಭವಿಸಬಹುದು. ಆದುದರಿಂದ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ರಕ್ತಪೂರಣದಿಂದ ಸಂರಕ್ಷಿಸಲಿಕ್ಕಾಗಿ ಈಗಲೇ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ.—ಜ್ಞಾನೋ. 16:20; 22:3.