ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/00 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2000 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಮಾರ್ಚ್‌ 13ರಿಂದ ಆರಂಭವಾಗುವ ವಾರ
  • ಮಾರ್ಚ್‌ 20ರಿಂದ ಆರಂಭವಾಗುವ ವಾರ
  • ಮಾರ್ಚ್‌ 27ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 3ರಿಂದ ಆರಂಭವಾಗುವ ವಾರ
2000 ನಮ್ಮ ರಾಜ್ಯದ ಸೇವೆ
km 3/00 ಪು. 2

ಸೇವಾ ಕೂಟದ ಶೆಡ್ಯೂಲ್‌

ಮಾರ್ಚ್‌ 13ರಿಂದ ಆರಂಭವಾಗುವ ವಾರ

ಸಂಗೀತ 118

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ: “ನಾವು ಶುಭ ವಾರ್ತೆಯನ್ನು ಸಾರುತ್ತೇವೆ.” ಆರಂಭದ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯಕ್ಕೆ ಸೀಮಿತಗೊಳಿಸಿ, ಪ್ರಶ್ನೋತ್ತರ ಚರ್ಚೆಯನ್ನು ಮುಂದುವರಿಸಿರಿ. ಜ್ಞಾನ ಪುಸ್ತಕವನ್ನು ಶುಶ್ರೂಷೆಯಲ್ಲಿ ನೀಡುವಾಗ, ಆ ಪುಸ್ತಕದಿಂದ ಎತ್ತಿ ತೋರಿಸಸಾಧ್ಯವಿರುವ ಸಕಾರಾತ್ಮಕವಾದ ಶಾಸ್ತ್ರೀಯ ಅಂಶಗಳ ಉದಾಹರಣೆಗಳನ್ನು ಕೊಡಿರಿ.

20 ನಿ: “ನಾವು 2000 ಇಸವಿಯ ಏಪ್ರಿಲ್‌ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೊ?” (1-11ನೆಯ ಪ್ಯಾರಗ್ರಾಫ್‌ಗಳು) ಪ್ರಶ್ನೋತ್ತರಗಳು. ಇತ್ತೀಚಿಗೆ ಸಭೆಯಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಿರುವವರ ಉಚ್ಚಾಂಕವನ್ನು ತಿಳಿಸಿರಿ. ಇವರಲ್ಲಿ ಕೆಲವರು, ಶುಶ್ರೂಷೆಯಲ್ಲಿ ಅಧಿಕವಾಗಿ ಪಾಲ್ಗೊಳ್ಳುವ ಮೂಲಕ ತಮಗೆ ಪ್ರಾಪ್ತವಾಗುವ ವೈಯಕ್ತಿಕ ಪ್ರಯೋಜನಗಳ ಕುರಿತು ತಿಳಿಸುವಂತೆ ಏರ್ಪಡಿಸಿರಿ. ಏಪ್ರಿಲ್‌ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರರ ಹೊಸ ಉಚ್ಚಾಂಕವನ್ನು ಸಾಧಿಸಲು ಕಾರ್ಯನಡಿಸುವಂತೆ ಸಭೆಯನ್ನು ಉತ್ತೇಜಿಸಿರಿ. ನಮ್ಮ ಶುಶ್ರೂಷೆ ಪುಸ್ತಕದ 113-14ನೆಯ ಪುಟಗಳಲ್ಲಿ ತಿಳಿಸಲ್ಪಟ್ಟಿರುವ ಅರ್ಹತೆಗಳನ್ನು ಪುನರ್ವಿಮರ್ಶಿಸಿರಿ. ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಬಯಸುವ ಪ್ರಚಾರಕರು, ಕೂಟದ ಬಳಿಕ ಅರ್ಜಿಯನ್ನು ಪಡೆದುಕೊಳ್ಳಬಹುದು.

ಸಂಗೀತ 187 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 20ರಿಂದ ಆರಂಭವಾಗುವ ವಾರ

ಸಂಗೀತ 21

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

15 ನಿ: “ನಾನೇನು ಮಾಡಬಲ್ಲೆ?” ಒಬ್ಬ ಪುಸ್ತಕಾಭ್ಯಾಸ ಚಾಲಕನು, ಒಬ್ಬರು ಅಥವಾ ಇಬ್ಬರು ಶುಶ್ರೂಷಾ ಸೇವಕರೊಂದಿಗೆ ಈ ಲೇಖನವನ್ನು ಚರ್ಚಿಸುತ್ತಾನೆ. ಬೇರೆ ಬೇರೆ ರೀತಿಯ ಕಾರಣಗಳಿಂದಾಗಿ, ಸಭೆಯ ಚಟುವಟಿಕೆಗೆ ಹೆಚ್ಚು ನೆರವು ನೀಡಲು ತಾವು ಅಶಕ್ತರಾಗಿದ್ದೇವೆ ಎಂದು ಕೆಲವು ಪ್ರಚಾರಕರಿಗೆ ಅನಿಸಬಹುದು. ಸಭೆಯನ್ನು ಬಲಪಡಿಸುವ ಹಾಗೂ ರಾಜ್ಯದ ಕೆಲಸವನ್ನು ಅಭಿವೃದ್ಧಿಗೊಳಿಸುವ ವಿಷಯದಲ್ಲಿ ನಾವೆಲ್ಲರೂ ಅಮೂಲ್ಯವಾದ ಸಹಾಯವನ್ನು ನೀಡಸಾಧ್ಯವಿರುವ ಅನೇಕ ವಿಧಗಳಲ್ಲಿ ಕೆಲವನ್ನು ಪುನರ್ವಿಮರ್ಶಿಸಿರಿ. ಪ್ರತಿಯೊಬ್ಬರೂ ಹೇಗೆ “ಅಂತಿಮ ವರದಿಯಲ್ಲಿ ಪಾಲಿಗರಾಗಿರ”ಸಾಧ್ಯವಿದೆ ಎಂಬುದನ್ನು ತೋರಿಸುವ ಮೂಲಕ ಈ ಭಾಗವನ್ನು ಮುಕ್ತಾಯಗೊಳಿಸಿರಿ.—ನಮ್ಮ ಶುಶ್ರೂಷೆ 108-10ನೆಯ ಪುಟಗಳು.

20 ನಿ: “ನಾವು 2000 ಇಸವಿಯ ಏಪ್ರಿಲ್‌ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೊ?” (12-18ನೆಯ ಪ್ಯಾರಗ್ರಾಫ್‌ಗಳು) ಪ್ರಶ್ನೋತ್ತರಗಳು. ಒಬ್ಬ ಪರಿಚಯಸ್ಥನನ್ನು ಜ್ಞಾಪಕಾಚರಣೆಗೆ ಹೇಗೆ ಆಮಂತ್ರಿಸುವುದು ಎಂಬುದರ ಕುರಿತು ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಒಳಗೂಡಿಸಿರಿ. 2000 ಕ್ಯಾಲೆಂಡರ್‌ನಲ್ಲಿರುವ ಏಪ್ರಿಲ್‌ ತಿಂಗಳನ್ನು ಪುನರ್ವಿಮರ್ಶಿಸಿರಿ, ಮತ್ತು ಸ್ಥಳಿಕವಾಗಿ ಯೋಜಿಸಲ್ಪಟ್ಟಿರುವ ಸೇವೆಗಾಗಿರುವ ಕೂಟಗಳ ಕುರಿತು ತಿಳಿಯಪಡಿಸಿರಿ. ಏಪ್ರಿಲ್‌ ತಿಂಗಳಿನಲ್ಲಿ ಶುಶ್ರೂಷೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಪಾಲ್ಗೊಳ್ಳಲಿಕ್ಕಾಗಿ, ಒಂದು ಪ್ರಾಯೋಗಿಕ ಕಾರ್ಯತಖ್ತೆಯನ್ನು ಮಾಡಲು ಪ್ರತಿಯೊಬ್ಬರಿಗೂ ನೆನಪುಹುಟ್ಟಿಸಿರಿ. ಹೀಗೆ ಸಭೆಯು 100 ಪ್ರತಿಶತ ಪಾಲ್ಗೊಳ್ಳುವಿಕೆಯನ್ನು ಗುರಿಯಾಗಿಟ್ಟುಕೊಳ್ಳಸಾಧ್ಯವಿದೆ. ಸಾಧ್ಯವಿರುವವರೆಲ್ಲರೂ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡುವಂತೆ ಹಾಗೂ ಕೂಟದ ಬಳಿಕ ಒಂದು ಅರ್ಜಿಯನ್ನು ಪಡೆದುಕೊಳ್ಳುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿರಿ.

ಸಂಗೀತ 65 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 27ರಿಂದ ಆರಂಭವಾಗುವ ವಾರ

ಸಂಗೀತ 119

10 ನಿ: ಸ್ಥಳಿಕ ತಿಳಿಸುವಿಕೆಗಳು. ಮಾರ್ಚ್‌ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ. ಏಪ್ರಿಲ್‌ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲಿರುವವರ ಹೆಸರುಗಳನ್ನು ಸಭೆಗೆ ತಿಳಿಸಿರಿ. ಅರ್ಜಿಯನ್ನು ಹಾಕಲು ಈಗಲೂ ಸಮಯವಿದೆ ಎಂಬುದನ್ನು ವಿವರಿಸಿರಿ. ಆ ತಿಂಗಳಿನಲ್ಲಿ ಯೋಜಿಸಲ್ಪಟ್ಟಿರುವ ಕ್ಷೇತ್ರ ಸೇವೆಗಾಗಿರುವ ಕೂಟಗಳ ಇಡೀ ಕಾರ್ಯತಖ್ತೆಯನ್ನು ಸಭೆಗೆ ತಿಳಿಸಿರಿ. ಈ ವಾರಾಂತ್ಯದಲ್ಲಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮೂಲಕ, ಏಪ್ರಿಲ್‌ ತಿಂಗಳನ್ನು ಆರಂಭಿಸುವಂತೆ ಪ್ರತಿಯೊಬ್ಬರನ್ನೂ ಉತ್ತೇಜಿಸಿರಿ. ಆ ತಿಂಗಳಿನಲ್ಲಿ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಲಿದ್ದೇವೆ. ನಮ್ಮ ನಿರೂಪಣೆಗಳಲ್ಲಿ ಪರಿಣಾಮಕರವಾಗಿ ಉಪಯೋಗಿಸಸಾಧ್ಯವಿರುವ ಪ್ರಚಲಿತ ಸಂಚಿಕೆಗಳಲ್ಲಿರುವ ಒಂದು ಲೇಖನವನ್ನು ಹಾಗೂ ಸೂಕ್ತವಾದ ಸಂಭಾಷಣಾ ವಿಷಯವನ್ನು ಎತ್ತಿ ತೋರಿಸಿರಿ. ಪ್ರತಿಯೊಬ್ಬರ ಬಳಿಯೂ ಅಪೇಕ್ಷಿಸು ಬ್ರೋಷರ್‌ನ ಒಂದು ಪ್ರತಿಯಿರಬೇಕು ಮತ್ತು ಆಸಕ್ತ ಜನರೊಂದಿಗೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲು ಅದನ್ನು ಉಪಯೋಗಿಸಬೇಕು.

13 ನಿ: “ಸಹಾಯವನ್ನು ಕೇಳಿಕೊಳ್ಳಿರಿ.” ಒಬ್ಬ ಹಿರಿಯನಿಂದ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ನಿಯತಕಾಲಿಕವಾಗಿ ಹೇಗೆ ನಮಗೆಲ್ಲರಿಗೆ ಒಂದಲ್ಲ ಒಂದು ರೀತಿಯ ಸಹಾಯದ ಅಗತ್ಯವು ಏಳುತ್ತದೆ ಎಂಬುದನ್ನು ವಿವರಿಸಿರಿ. ಪ್ರತಿಯೊಬ್ಬರೂ ತಮ್ಮ ಸ್ವಂತ ಹೊರೆಯನ್ನು ಹೊರಬೇಕೆಂಬುದು ನಿಜ. (ಗಲಾ. 6:5) ಆದರೂ, ನಾವು ಆ ಹೊರೆಯನ್ನು ಹೊರಲು ಅಶಕ್ತರಾಗಿರುವಾಗ, ಸಭೆಯಲ್ಲಿ ಆತ್ಮಿಕವಾಗಿ ಪ್ರೌಢರಾಗಿರುವ ಒಬ್ಬ ಸದಸ್ಯರ ಸಹಾಯವನ್ನು ಪಡೆದುಕೊಳ್ಳಲು ನಾವು ಹಿಂಜರಿಯಬಾರದು. ಇತರರಿಂದ ಕೊಡಲ್ಪಟ್ಟ ದಯಾಪರ ಸಹಾಯವು ತಮ್ಮನ್ನು ಹೇಗೆ ಉತ್ತೇಜಿಸಿತು ಎಂಬುದನ್ನು ತೋರಿಸುವ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

10 ನಿ: ಸ್ಥಳಿಕ ಅಗತ್ಯಗಳು.

12 ನಿ: 2000 ಯಿಯರ್‌ಬುಕ್‌ ಅನ್ನು ಪುನರ್ವಿಮರ್ಶಿಸಿರಿ. ಅದರ 31ನೆಯ ಪುಟದಲ್ಲಿರುವ “1999ರ ಒಟ್ಟು ಸಂಖ್ಯೆಗಳು” ಎಂಬ ವಿಚಾರದ ಮುಖ್ಯಾಂಶಗಳ ಕುರಿತು ಸಭಿಕರೊಂದಿಗೆ ಚರ್ಚೆ ಮತ್ತು ಪುನರ್ವಿಮರ್ಶೆ. ಹಾಗೂ 3-5ನೆಯ ಪುಟದಲ್ಲಿರುವ “ಆಡಳಿತ ಮಂಡಲಿಯಿಂದ ಒಂದು ಪತ್ರ”ವನ್ನು ಚರ್ಚಿಸಿರಿ. ಕೊಡಲ್ಪಟ್ಟಿರುವ ಉತ್ತೇಜನಕ್ಕೆ ತಾವು ಹೇಗೆ ಪ್ರತಿಕ್ರಿಯಿಸುವೆವು ಎಂಬುದರ ಕುರಿತು ಹೇಳಿಕೆ ನೀಡುವಂತೆ ಕೆಲವರಿಗೆ ಕರೆಕೊಡಿರಿ.

ಸಂಗೀತ 195 ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 3ರಿಂದ ಆರಂಭವಾಗುವ ವಾರ

ಸಂಗೀತ 72

10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ಕ್ಷೇತ್ರ ಸೇವೆಯ ಅನುಭವಗಳು. ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಇತರರನ್ನು ಪ್ರೋತ್ಸಾಹಿಸುವಂತಹ, ಸ್ಥಳಿಕ ಟೆರಿಟೊರಿಯಲ್ಲಿನ ಇತ್ತೀಚಿನ ಅನುಭವಗಳಲ್ಲಿ ಕೆಲವನ್ನು ಉಪಯೋಗಿಸಿರಿ.

17 ನಿ: “ದಾನಿಯೇಲನ ಪ್ರವಾದನೆ ಪುಸ್ತಕವನ್ನು ಅಭ್ಯಾಸಿಸುವುದು.” ಪ್ರಶ್ನೋತ್ತರಗಳು. ಬೈಬಲಿನ ದಾನಿಯೇಲ ಪುಸ್ತಕವನ್ನು ಅಭ್ಯಾಸಿಸುವ ಮೂಲಕ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ ಎಂಬುದರ ಕುರಿತು ಸಂಕ್ಷಿಪ್ತವಾಗಿ ಹೇಳಿಕೆ ನೀಡಿರಿ. (ದಾನಿಯೇಲನ ಪ್ರವಾದನೆ ಪುಸ್ತಕದ 1ನೆಯ ಅಧ್ಯಾಯದ 15-17ನೆಯ ಪ್ಯಾರಗ್ರಾಫ್‌ಗಳನ್ನು ನೋಡಿರಿ.) ಸಭಾ ಪುಸ್ತಕಾಭ್ಯಾಸಕ್ಕೆ ಕ್ರಮವಾಗಿ ಹಾಜರಾಗುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

18 ನಿ: ಗಂಭೀರವಾದ ತಪ್ಪು ಕೃತ್ಯವನ್ನು ನಾನು ವರದಿಸಬೇಕೊ? ಒಬ್ಬ ಹಿರಿಯನಿಂದ ಕೊಡಲ್ಪಡುವ ಒಂದು ಗಂಭೀರ ಭಾಷಣ; ವಿಶೇಷವಾಗಿ ಯುವ ಜನರಿಗೆ ನಿರ್ದೇಶಿಸಲ್ಪಡತಕ್ಕದ್ದು. ಆಧುನಿಕ ಸಮಾಜದಲ್ಲಿ ಅನೇಕ ಸಮಸ್ಯೆಗಳು ತಲೆದೋರಿ, ಇವು ಯುವ ಜನರ ಮೇಲೆ ಅಪಾಯಕರ ಪರಿಣಾಮವನ್ನು ಬೀರುತ್ತಿವೆ: ಅವನತಿಹೊಂದುತ್ತಿರುವ ನೈತಿಕ ಮಟ್ಟಗಳು, ಹೆಚ್ಚುತ್ತಿರುವ ಹಿಂಸಾಚಾರ, ಅಮಲೌಷಧಗಳ ಚಟ ಮತ್ತು ಅಧಿಕಾರಕ್ಕೆ ಅಗೌರವ. ಕೆಲವು ಹದಿವಯಸ್ಕರು ತಮ್ಮ ಕೆಟ್ಟ ನಡತೆಯನ್ನು ಗುಪ್ತವಾಗಿಡಲು ಪ್ರಯತ್ನಿಸುತ್ತಾ, ಇಬ್ಬಗೆಯ ಜೀವಿತವನ್ನು ನಡೆಸುತ್ತಾರೆ. ಇದು ಇಡೀ ಸಭೆಯ ಆತ್ಮಿಕ ಕ್ಷೇಮಕ್ಕೆ ನಿಜವಾದ ಬೆದರಿಕೆಯನ್ನು ಒಡ್ಡುತ್ತದೆ. ಕೆಲವರು ಗಂಭೀರವಾದ ತಪ್ಪು ಕೃತ್ಯವನ್ನು ಮಾಡುತ್ತಾರೆ ಮತ್ತು ಅದನ್ನು ಗುಪ್ತವಾಗಿಡಲು ಬಯಸುತ್ತಾರೆ. ಸಭೆಯಲ್ಲಿರುವ ಒಬ್ಬ ಸಹೋದರ ಅಥವಾ ಸಹೋದರಿಯು, ಗಂಭೀರವಾದ ರೀತಿಯಲ್ಲಿ ದೇವರ ನಿಯಮವನ್ನು ಉಲ್ಲಂಘಿಸುವಂತಹ ಯಾವುದೋ ಕೃತ್ಯವನ್ನು ನಡೆಸಿದ್ದಾರೆ ಎಂಬುದು ನಿಮಗೆ ಗೊತ್ತಾಗುವಲ್ಲಿ, ನೀವೇನು ಮಾಡಬೇಕು? ಯಾಜಕಕಾಂಡ 5:1ರಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ವವನ್ನು ಪರಿಗಣಿಸಿರಿ. (ಆಗಸ್ಟ್‌ 15, 1997ರ ಕಾವಲಿನಬುರುಜು ಪತ್ರಿಕೆಯ 27-30ನೆಯ ಪುಟಗಳನ್ನು ನೋಡಿರಿ.) ಯುವ ಜನರ ಪ್ರಶ್ನೆಗಳು ಪುಸ್ತಕದ 68-9ನೆಯ ಪುಟಗಳನ್ನು ಅವಲೋಕಿಸಿರಿ, ಮತ್ತು ಅಂತಹ ಒಂದು ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ಏನು ಮಾಡಬೇಕು ಎಂಬುದನ್ನು ವಿವರಿಸಿರಿ.

ಸಂಗೀತ 68 ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ