ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/00 ಪು. 1
  • ‘ನಾನೇನು ಮಾಡಬಲ್ಲೆ?’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಾನೇನು ಮಾಡಬಲ್ಲೆ?’
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿಮ್ಮ ಸಭೆಗೆ ಸಾಧ್ಯವಾದಷ್ಟು ಬೆಂಬಲ ಕೊಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಪ್ರತಿಯೊಂದು ಸತ್ಕಾರ್ಯಕ್ಕೆ ಇಷ್ಟಪೂರ್ವಕವಾಗಿ ನಮ್ಮನ್ನು ನೀಡಿಕೊಳ್ಳುವುದು
    1995 ನಮ್ಮ ರಾಜ್ಯದ ಸೇವೆ
  • ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಸಭೆಯು ಭಕ್ತಿಯಲ್ಲಿ ಬೆಳೆಯಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 3/00 ಪು. 1

‘ನಾನೇನು ಮಾಡಬಲ್ಲೆ?’

1 ‘ನಾನೇನು ಮಾಡಬಲ್ಲೆ?’ ಎಂಬ ಈ ಪ್ರಶ್ನೆಯು, 1870ಗಳಲ್ಲಿ ಚಾರ್ಲ್ಸ್‌ ಟೇಸ್‌ ರಸ್ಸಲ್‌ರಿಂದ ಸಂಘಟಿಸಲ್ಪಟ್ಟ ಚಿಕ್ಕ ಬೈಬಲ್‌ ಅಭ್ಯಾಸ ಗುಂಪಿನ ಸದಸ್ಯರ ಮನಸ್ಸುಗಳಲ್ಲಿತ್ತು ಎಂಬುದರಲ್ಲಿ ಸಂದೇಹವಿಲ್ಲ. ದೇವರ ಚಿತ್ತದ ಕುರಿತಾದ ತಿಳುವಳಿಕೆಯಲ್ಲಿ ಅವರು ಪ್ರಗತಿ ಮಾಡಿದಂತೆ, ದೇವರ ಉದ್ದೇಶದ ಕುರಿತು ಕಲಿತುಕೊಳ್ಳುವಂತೆ ಇತರರಿಗೆ ಸಹಾಯ ಮಾಡಲು ತಾವು ಏನು ಮಾಡಸಾಧ್ಯವಿದೆ ಎಂದು ಆ ಆರಂಭದ ಬೈಬಲ್‌ ವಿದ್ಯಾರ್ಥಿಗಳು ಚಿಂತಿಸಿದ್ದಿರಬೇಕು. ಅವರು ಪಡೆದುಕೊಳ್ಳುತ್ತಿದ್ದ ಬೈಬಲ್‌ ಜ್ಞಾನವನ್ನು ಇಡೀ ಲೋಕಕ್ಕೆ ತಲಪಿಸುವುದು ಖಂಡಿತವಾಗಿಯೂ ಒಂದು ಭಾರೀ ಕೆಲಸವಾಗಿತ್ತು.

2 ಸಂತೋಷಕರವಾಗಿಯೇ, ಅವರು ಆ ಸವಾಲನ್ನು ತೃಪ್ತಿಕರವಾಗಿ ನಿಭಾಯಿಸಿದರು. ಹೇಗೆ? ಹೇಗೆಂದರೆ, ಪ್ರತಿಯೊಬ್ಬ ವ್ಯಕ್ತಿಯೂ ಅಲ್ಪವೆಂದು ತೋರುವಂತಹ ತನ್ನ ಪಾತ್ರವನ್ನು ವಹಿಸಿದನು. ಮತ್ತು ಇದರಿಂದಾಗಿ ಇಂದು ಯೆಹೋವನ ಸಾಕ್ಷಿಗಳು 234 ದೇಶದ್ವೀಪಗಳಲ್ಲಿರುವ ಸುಮಾರು 90,000 ಸಭೆಗಳಲ್ಲಿ ಸೇವೆಮಾಡುತ್ತಾ, ಹೆಚ್ಚುಕಡಿಮೆ ಅರುವತ್ತು ಲಕ್ಷ ರಾಜ್ಯ ಪ್ರಚಾರಕರಿಂದ ಕೂಡಿರುವ ಒಂದು ಸಂಸ್ಥೆಯೋಪಾದಿ ಜಗತ್ಪ್ರಸಿದ್ಧರಾಗಿದ್ದಾರೆ!—ಯೆಶಾ. 60:22.

3 ನಿಮ್ಮ ಪೂರ್ಣ ಬೆಂಬಲವನ್ನು ನೀಡಿರಿ: ಈ ಕಡೇ ದಿವಸಗಳಲ್ಲಿ ಮಾಡಲ್ಪಡುವುದೆಂದು ಯೇಸು ಮುಂತಿಳಿಸಿದ ಮಹತ್ತರವಾದ ಕೆಲಸದಲ್ಲಿ ನಮ್ಮಿಂದಾದಷ್ಟು ಮಟ್ಟಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಅತ್ಯಾವಶ್ಯಕವಾಗಿದೆ. (ಮಾರ್ಕ 13:10) ಸೀಮಿತ ಸಂಖ್ಯೆಯಲ್ಲಿರುವ ಹಿರಿಯರ ಮೇಲೆ ಈ ಕೆಲಸವನ್ನು ಸಂಪೂರ್ಣವಾಗಿ ಬಿಡಸಾಧ್ಯವಿಲ್ಲ ಎಂಬುದು ನಿಶ್ಚಯ; ಅಥವಾ ಸಾರುವ ಚಟುವಟಿಕೆಯು ಪಯನೀಯರರ ಮೇಲೆ ಮಾತ್ರ ಹೊರಿಸಲ್ಪಡುವ ಒಂದು ಜವಾಬ್ದಾರಿಯಾಗಿರುವುದಿಲ್ಲ. ವಾಸ್ತವದಲ್ಲಿ, ಪ್ರತಿಯೊಬ್ಬ ಸಮರ್ಪಿತ ಕ್ರೈಸ್ತನು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿಕ್ಕಿದೆ. ನಾವೆಲ್ಲರೂ ಸಾರುವ ಚಟುವಟಿಕೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಸಾಧ್ಯವಿದೆ. (1 ತಿಮೊ. 1:12) ನಾವು ಈ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡಿದರೂ, ಇದರಿಂದ ನಮಗೂ ಇತರರಿಗೂ ಪ್ರಯೋಜನವಾಗುತ್ತದೆ.—1 ತಿಮೊ. 4:16.

4 ನಮ್ಮಲ್ಲಿ ಪ್ರತಿಯೊಬ್ಬರೂ, ನಮ್ಮ ಕ್ರೈಸ್ತ ಸಹೋದರತ್ವಕ್ಕೆ ಇನ್ನಿತರ ಗಮನಾರ್ಹ ವಿಧಗಳಲ್ಲೂ ಸಂಪೂರ್ಣ ಬೆಂಬಲವನ್ನು ನೀಡಸಾಧ್ಯವಿದೆ. ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ಮತ್ತು ಅತ್ಯುತ್ಸಾಹದಿಂದ ಭಾಗವಹಿಸುವ ಮೂಲಕ ನಾವು ಸಭಾ ಕೂಟಗಳಿಗೆ ಬೆಂಬಲವನ್ನು ನೀಡಸಾಧ್ಯವಿದೆ. (ಕೀರ್ತ. 122:1, 8, 9) ಸಭೆಯನ್ನು ನೈತಿಕವಾಗಿ ಶುದ್ಧವಾಗಿಡಲಿಕ್ಕಾಗಿ ನಾವು ನಮ್ಮ ಪಾತ್ರವನ್ನು ನಿರ್ವಹಿಸಸಾಧ್ಯವಿದೆ. ನಮ್ಮ ಆದಾಯಕ್ಕನುಸಾರ ನಾವು ಲೋಕವ್ಯಾಪಕವಾದ ಕೆಲಸಕ್ಕೆ ಹಣಕಾಸಿನ ಬೆಂಬಲವನ್ನು ನೀಡಬಲ್ಲೆವು. ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿಯೂ ನಾವು ಒಳಗೂಡಸಾಧ್ಯವಿದೆ. ಹೊಸಬರಿಗೆ, ಎಳೆಯರಿಗೆ ಮತ್ತು ವೃದ್ಧರಿಗೆ ಸಹಾಯ ಮಾಡುವ ಮೂಲಕ, ಪ್ರತಿಯೊಬ್ಬರೂ ಸಭೆಯಲ್ಲಿ ಪ್ರೀತಿ ಮತ್ತು ಐಕ್ಯಭಾವದ ಹೃತ್ಪೂರ್ವಕ ವಾತಾವರಣಕ್ಕೆ ನೆರವು ನೀಡಸಾಧ್ಯವಿದೆ.—ಕೊಲೊ. 3:12, 14.

5 ಆದುದರಿಂದ ‘ನಾನೇನು ಮಾಡಬಲ್ಲೆ?’ ಎಂದು ನೀವು ಕೇಳಬಹುದು. ನಿಮ್ಮ ವೈಯಕ್ತಿಕ ಪ್ರಯತ್ನಗಳು ಅಲ್ಪವೆಂದು ನಿಮಗನಿಸುವುದಾದರೂ, ನಿಮ್ಮ ಪಾತ್ರವನ್ನು ನಿರ್ವಹಿಸುವ ಮೂಲಕ ಸದೃಢವಾದ, ಕ್ರಿಯಾಶೀಲವಾದ ಹಾಗೂ ಸ್ವಸ್ಥಕರವಾದ ಸಭೆಯನ್ನು ಕಟ್ಟಲು ನೀವು ಸಹಾಯ ಮಾಡುತ್ತೀರಿ. ಹೀಗೆ, ಯೆಹೋವನ ಹೆಸರಿಗೆ ಘನತೆಯನ್ನು ತರುವುದರಲ್ಲಿ ನಮಗೆಲ್ಲರಿಗೂ ಮುಖ್ಯವಾದ ಪಾತ್ರವನ್ನು ವಹಿಸಲಿಕ್ಕಿದೆ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ