“ಎಚ್ಚರವಾಗಿರ್ರಿ”
1 ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳನ್ನು ಗುರುತಿಸುವ ಮಹತ್ವಪೂರ್ಣ ಘಟನೆಗಳ ಕುರಿತು ವಿವರಿಸಿದ ನಂತರ, ಯೇಸು ತನ್ನ ಶಿಷ್ಯರಿಗೆ “ಎಚ್ಚರವಾಗಿರ್ರಿ” ಎಂದು ಪದೇ ಪದೇ ಒತ್ತಿಹೇಳಿದನು. (ಮಾರ್ಕ 13:33,NW) ಕ್ರೈಸ್ತರು ಯಾಕೆ ಎಚ್ಚರವಾಗಿರಬೇಕು? ಯಾಕೆಂದರೆ ಮಾನವ ಇತಿಹಾಸದಲ್ಲಿಯೇ ಅತ್ಯಂತ ಅಪಾಯಕರವಾದ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಆತ್ಮಿಕವಾಗಿ ತೂಕಡಿಸುವ ಸಮಯ ಇದಾಗಿರುವುದಿಲ್ಲ. ಹಾಗೆ ಮಾಡುವಲ್ಲಿ, ಈ ಅಂತ್ಯದ ಸಮಯದಲ್ಲಿ ಯೆಹೋವನು ನಮಗೆ ಮಾಡಲು ಕೊಟ್ಟಿರುವ ಕೆಲಸವನ್ನು ನಾವು ಗಣ್ಯಮಾಡಲು ತಪ್ಪುವೆವು. ಅದು ಯಾವ ಕೆಲಸ?
2 ಮಾನವಕುಲದ ಏಕೈಕ ನಿರೀಕ್ಷೆಯಾಗಿರುವ ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುವ ಕೆಲಸವನ್ನು ಯೆಹೋವನು ತನ್ನ ಜನರಿಗೆ ಕೊಟ್ಟಿದ್ದಾನೆ. ಮತ್ತು ಅದನ್ನು ಅವರು ಲೋಕದ ಸುತ್ತಲು ಮಾಡುತ್ತಿದ್ದಾರೆ. ದೇವರ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸಮಾಡುವುದರ ಮೂಲಕ, ಸಮಯದ ಜರೂರಿಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆಂಬುದನ್ನು ಮಾತ್ರವಲ್ಲ “ನಿತ್ಯಜೀವವನ್ನು ಉಂಟುಮಾಡುವ ವಾಕ್ಯ”ಗಳನ್ನು ಆಲಿಸುವಂತೆ ಇತರರಿಗೆ ಸಹಾಯಮಾಡುವ ಅಗತ್ಯವನ್ನು ಮನಗಾಣುವ ನಿಜ ಕ್ರೈಸ್ತರು ನಾವಾಗಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ. (ಯೋಹಾ. 6:68) ಅತಿ ಪ್ರಾಮುಖ್ಯವಾದ ಈ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವ ಮೂಲಕ, ಆತ್ಮಿಕವಾಗಿ ಎಚ್ಚರವಾಗಿದ್ದೇವೆ ಎಂಬುದನ್ನು ನಾವು ತೋರಿಸಿಕೊಡುತ್ತೇವೆ.
3 ಸಾರುವಂತೆ ಪ್ರಚೋದಿಸಲ್ಪಡುವುದು: ನಾವು ಯೆಹೋವನ ಸಾಕ್ಷಿಗಳಾಗಿರುವುದರಿಂದ, ನಮ್ಮ ಶುಶ್ರೂಷೆಯ ಬಗ್ಗೆ ನಮಗೆ ಸಕಾರಾತ್ಮಕ ಮನೋಭಾವವಿರಬೇಕು. ದೇವರ ಮತ್ತು ನೆರೆಹೊರೆಯವರ ಕಡೆಗಿನ ಪ್ರೀತಿಯು, ನಾವು ವೈಯಕ್ತಿಕವಾಗಿ ಸಾರುವ ಕೆಲಸದಲ್ಲಿ ಭಾಗವಹಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. (1 ಕೊರಿಂ. 9:16, 17) ಹೀಗೆ ಮಾಡುವುದರಿಂದ, ನಾವು ನಮ್ಮನ್ನು ಮತ್ತು ನಮಗೆ ಕಿವಿಗೊಡುವವರನ್ನು ರಕ್ಷಿಸುವೆವು. (1 ತಿಮೊ. 4:16) ಮಾನವರಿಂದ ರಚಿಸಲು ಸಾಧ್ಯವಿರದ ಮತ್ತು ಎಲ್ಲಕ್ಕಿಂತಲೂ ಶ್ರೇಷ್ಠವಾಗಿರುವ ಸರಕಾರವೇ ದೇವರ ರಾಜ್ಯವಾಗಿದೆ. ಈ ರಾಜ್ಯದ ಕುರಿತು ಸಾರುವುದರಲ್ಲಿ, ಸಾಧ್ಯವಿರುವಷ್ಟು ಕ್ರಮವಾಗಿರುವ ಅಗತ್ಯ ನಮಗಿದೆ ಮತ್ತು ಸಾಧ್ಯವಾದಷ್ಟು ಹೆಚ್ಚು ತಾಸುಗಳನ್ನು ವ್ಯಯಿಸುವುದಕ್ಕೆ ನಾವು ದೃಢ ನಿಶ್ಚಯವನ್ನು ಮಾಡೋಣ!
4 ಪ್ರಾಮುಖ್ಯವಾಗಿರುವ ಇನ್ನೊಂದು ನಿಜತ್ವವು ನಮ್ಮ ಶುಶ್ರೂಷೆಯ ಜರೂರಿಯನ್ನು ಇನ್ನಷ್ಟು ಒತ್ತಿಹೇಳುತ್ತದೆ. ಅದೇನಂದರೆ, ನಾವೀ ಕೆಲಸದಲ್ಲಿ ತೊಡಗಿರುವಾಗಲೇ ಮಹಾ ಸಂಕಟವು ಇದ್ದಕ್ಕಿದ್ದಂತೆ ಆರಂಭವಾಗುವುದು. ಆ ದಿನ ಮತ್ತು ಸಮಯದ ಕುರಿತು ನಮಗೆ ಏನೂ ಗೊತ್ತಿಲ್ಲದ ಕಾರಣ, ನಾವು ಯಾವಾಗಲೂ ಎಚ್ಚರವಾಗಿರಬೇಕು ಮತ್ತು ಸಿದ್ಧರಾಗಿರಬೇಕು ಮಾತ್ರವಲ್ಲ, ಪ್ರಾರ್ಥನೆಯನ್ನು ಮಾಡುತ್ತಾ ಯೆಹೋವನ ಮೇಲೆ ಆತುಕೊಳ್ಳಬೇಕು. (ಎಫೆ. 6:18) ಸಾರುವ ಕೆಲಸದ ವ್ಯಾಪ್ತಿಯು ವಿಸ್ತರಿಸುತ್ತಾ ಹೋಗುತ್ತಿದೆ. ಆದರೆ ಬಲು ಬೇಗನೆ ಒಂದು ದಿನ, ಮಾನವ ಇತಿಹಾಸದ ಅತ್ಯಂತ ಮಹಾನ್ ಸಾಕ್ಷಿ ಕಾರ್ಯವು ಮುಕ್ತಾಯಗೊಳ್ಳುವುದು.
5 “ಎಚ್ಚರವಾಗಿರ್ರಿ” ಎಂಬ ಯೇಸುವಿನ ಆಜ್ಞೆಯನ್ನು ನಂಬಿಗಸ್ತಿಕೆಯಿಂದ ಪಾಲಿಸಿರಿ. ಇದನ್ನು ಮಾಡುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯವಾಗಿದೆ. ಜರೂರಿಯ ಪ್ರಜ್ಞೆಯೊಂದಿಗೆ ನಾವು ಪ್ರತಿಕ್ರಿಯಿಸೋಣ! ಇಂದು ಮತ್ತು ಮುಂದೆ, ಪ್ರತಿ ದಿನ ನಾವು ಆತ್ಮಿಕವಾಗಿ ಗಂಭೀರರೂ, ಎಚ್ಚರವುಳ್ಳವರೂ ಆಗಿ ಉಳಿಯೋಣ ಮತ್ತು ಯೆಹೋವನ ಸೇವೆಯಲ್ಲಿ ಕ್ರಿಯಾಶೀಲರೂ ಆಗಿರೋಣ. ಹೌದು, ನಾವು “ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.”—1 ಥೆಸ. 5:6.