ಸೇವಾ ಕೂಟದ ಶೆಡ್ಯೂಲ್
ಮೇ 8ರಿಂದ ಆರಂಭವಾಗುವ ವಾರ
ಸಂಗೀತ 125 (9)
8 ನಿ:ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
17 ನಿ:ಮೇ ತಿಂಗಳಿನಲ್ಲಿ ಉತ್ಸುಕ ಮನೋಭಾವದವರಾಗಿರಿ. ಸೇವಾ ಮೇಲ್ವಿಚಾರಕನಿಂದ ಭಾಷಣ ಮತ್ತು ಇಂಟರ್‌ವ್ಯೂಗಳು. ಏಪ್ರಿಲ್ ತಿಂಗಳಿನಲ್ಲಿ ಸಭೆಯು ಮಾಡಿದಂತಹ ಸೇವಾ ಪ್ರಯತ್ನಗಳನ್ನು ಎತ್ತಿಹೇಳಿರಿ. ಕ್ಷೇತ್ರ ಸೇವೆಯಲ್ಲಿ ಹೆಚ್ಚಿನ ಮಟ್ಟಿಗೆ ಭಾಗವಹಿಸಿದ ಅಥವಾ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದ ಇಬ್ಬರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಅವರು ಯಾವ ಆಶೀರ್ವಾದಗಳಲ್ಲಿ ಆನಂದಿಸಿದರು? ಸಭೆಯ ಈ ಉತ್ಸುಕ ಚಟುವಟಿಕೆಯನ್ನು ಮೇ ತಿಂಗಳಿನಲ್ಲಿಯೂ ಪುನಃ ಮಾಡಸಾಧ್ಯವಿದೆಯೊ? ಶುಶ್ರೂಷೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನು ಉತ್ತೇಜಿಸಿರಿ. ಈ ತಿಂಗಳಿನಲ್ಲಿ ರಜೆಯಿರುವ ಎಳೆಯ ಪ್ರಚಾರಕರು, ಕ್ಷೇತ್ರ ಸೇವಾ ಚಟುವಟಿಕೆಯಲ್ಲಿ ಹೆಚ್ಚಿನ ಮಟ್ಟಿಗೆ ಭಾಗವಹಿಸುವಂತೆ ಅವರನ್ನು ಹುರಿದುಂಬಿಸಿರಿ. ಈ ತಿಂಗಳಿನಲ್ಲಿ ನಮ್ಮ ಸಭೆಯಲ್ಲಿ ಯಾರೂ ಅಕ್ರಮ ಪ್ರಚಾರಕರಾಗಿರದಂತೆ ಮಾಡಸಾಧ್ಯವಿದೆಯೋ? ಅಕ್ರಮ ಪ್ರಚಾರಕರಿಗೆ ಸಹಾಯ ಮಾಡಲಿಕ್ಕಾಗಿರುವ ಏರ್ಪಾಡುಗಳ ಕುರಿತು ತಿಳಿಸಿರಿ. ಜ್ಞಾಪಕಾಚರಣೆಗೆ ಹಾಜರಾಗುವವರೆಲ್ಲರ ಆಸಕ್ತಿಯನ್ನು ಪುನಃ ಕೆರಳಿಸಸಾಧ್ಯವಿದೆಯೊ? ಅಂಥವರ ಆತ್ಮಿಕ ಹಿತಕ್ಷೇಮದ ಕುರಿತು ಚಿಂತೆಯನ್ನು ವ್ಯಕ್ತಪಡಿಸಿರಿ, ಮತ್ತು ಬೈಬಲನ್ನು ಅಭ್ಯಾಸಿಸುವಂತೆ ಅವರಿಗೆ ಹೇಳಿರಿ. ಸಹೋದರರು ತೋರಿಸುವ ಹುರುಪು ಹಾಗೂ ಅತ್ಯುತ್ಸಾಹಕ್ಕಾಗಿ ಅವರನ್ನು ಪ್ರಶಂಸಿಸಿರಿ.
20 ನಿ:“ದೇವರ ವಾಕ್ಯದ ಪ್ರಕಾರ ನಡೆಯುವವರು” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ. ಪುರವಣಿಯಲ್ಲಿರುವ ಈ ಲೇಖನದ ಪ್ರಶ್ನೋತ್ತರ ಭಾಗವನ್ನು ಸೆಕ್ರಿಟರಿಯು ನಿರ್ವಹಿಸುತ್ತಾನೆ. ನಾವೆಲ್ಲರೂ ಸೊಸೈಟಿಯ ಮಾರ್ಗದರ್ಶನವನ್ನು ನಿಕಟವಾಗಿ ಅನುಸರಿಸುವ ಅಗತ್ಯ ಏಕಿದೆ ಎಂಬುದನ್ನು ತೋರಿಸಲು, ಆಧಾರವಾಗಿ ಕೊಡಲ್ಪಟ್ಟಿರುವ ವಚನಗಳನ್ನು ಉಪಯೋಗಿಸಿರಿ. ಶುಕ್ರವಾರವನ್ನು ಒಳಗೊಂಡು ಪ್ರತಿ ದಿನದ ಅಧಿವೇಶನವನ್ನು ಹಾಜರಾಗಲಿಕ್ಕಾಗಿ, ಯಾವ ತಾರೀಖುಗಳಲ್ಲಿ ನಿಮಗೆ ರಜೆ ಬೇಕು ಎಂಬುದನ್ನು ಮುಂಚಿತವಾಗಿಯೇ ಏರ್ಪಡಿಸುವುದರ ಪ್ರಮುಖತೆಯನ್ನು ಒತ್ತಿಹೇಳಿರಿ. ಸೊಸೈಟಿಯ ಏರ್ಪಾಡುಗಳೊಂದಿಗೆ ಸಹಕರಿಸುತ್ತಿರುವುದಕ್ಕಾಗಿ ಸಹೋದರರನ್ನು ಶ್ಲಾಘಿಸಿರಿ.
ಸಂಗೀತ 201 (8) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 15ರಿಂದ ಆರಂಭವಾಗುವ ವಾರ
ಸಂಗೀತ 134 (28)
10 ನಿ:ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
20 ನಿ:“ಟೆಲಿಫೋನ್ ಸಾಕ್ಷಿಕಾರ್ಯವು ಅನೇಕರನ್ನು ತಲಪಲಿಕ್ಕಾಗಿರುವ ಒಂದು ಮಾರ್ಗವಾಗಿದೆ.” ಈ ಪುರವಣಿಯ ಮೊದಲ 13 ಪ್ಯಾರಗ್ರಾಫ್‌ಗಳ ಪ್ರಶ್ನೋತ್ತರ ಆವರಿಸುವಿಕೆ. ಸಮಯವು ಅನುಮತಿಸಿದಂತೆ ಆಯ್ದ ಪ್ಯಾರಗ್ರಾಫ್‌ಗಳನ್ನು ಓದಿರಿ. 12 ಮತ್ತು 13ನೆಯ ಪ್ಯಾರಗ್ರಾಫ್‌ಗಳಲ್ಲಿ ತಿಳಿಸಲ್ಪಟ್ಟಿರುವ ಪೂರ್ವಸಿದ್ಧತೆಯ ಹಂತಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಮುಂದಿನ ವಾರ ಉಳಿದ ಏಳು ಪ್ಯಾರಗ್ರಾಫ್‌ಗಳ ಚರ್ಚೆಗಾಗಿ ಅವುಗಳನ್ನು ತಯಾರಿಸಿಕೊಂಡು ಬರುವಂತೆ ಮತ್ತು ಮುಂದಿನ ವಾರ ತಮ್ಮೊಂದಿಗೆ ರೀಸನಿಂಗ್ ಪುಸ್ತಕಗಳನ್ನು ಸಹ ತರುವಂತೆ ಸಭೆಗೆ ಜ್ಞಾಪಕಹುಟ್ಟಿಸಿರಿ.
15 ನಿ:“ನಿಮ್ಮ ಕುರಿತು ನಿಮಗೆ ಯಾವ ಅಭಿಪ್ರಾಯವಿದೆ?” 2000, ಜನವರಿ 15ರ ಕಾವಲಿನಬುರುಜು ಪತ್ರಿಕೆಯ 20-22ನೆಯ ಪುಟಗಳ ಮೇಲಾಧಾರಿಸಿ ಒಬ್ಬ ಹಿರಿಯನಿಂದ ಭಾಷಣ.
ಸಂಗೀತ 203 (5) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 22ರಿಂದ ಆರಂಭವಾಗುವ ವಾರ
ಸಂಗೀತ 36 (23)
10 ನಿ:ಸ್ಥಳಿಕ ತಿಳಿಸುವಿಕೆಗಳು. ಪ್ರಶ್ನಾ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.
15 ನಿ:“ಎಚ್ಚರವಾಗಿರ್ರಿ.” ಪ್ರಶ್ನೋತ್ತರ ಚರ್ಚೆ. ಆ ದಿನ ಅಥವಾ ಗಳಿಗೆಯು ನಮಗೆ ಗೊತ್ತಿಲ್ಲವಾದರೂ, ನಾವು ಆತ್ಮಿಕವಾಗಿ ಎಚ್ಚರವಾಗಿರುವುದು ಏಕೆ ಜರೂರಿಯದ್ದಾಗಿದೆ ಎಂಬುದನ್ನು ವಿವರಿಸಿರಿ.—1995, ನವೆಂಬರ್ 1ರ ಕಾವಲಿನಬುರುಜು ಪತ್ರಿಕೆಯ 20ನೆಯ ಪುಟವನ್ನು ನೋಡಿರಿ.
20 ನಿ:“ಟೆಲಿಫೋನ್ ಸಾಕ್ಷಿಕಾರ್ಯವು ಅನೇಕರನ್ನು ತಲಪಲಿಕ್ಕಾಗಿರುವ ಒಂದು ಮಾರ್ಗವಾಗಿದೆ.” 14-20ನೆಯ ಪ್ಯಾರಗ್ರಾಫ್‌ಗಳ ಪ್ರಶ್ನೋತ್ತರ ಆವರಿಸುವಿಕೆ. ಸಮಯವು ಅನುಮತಿಸಿದಂತೆ ಆಯ್ದ ಪ್ಯಾರಗ್ರಾಫ್‌ಗಳನ್ನು ಓದಿರಿ. 16ನೆಯ ಪ್ಯಾರಗ್ರಾಫ್‌ನಲ್ಲಿ ತಿಳಿಸಲ್ಪಟ್ಟಿರುವ ರೀಸನಿಂಗ್ ಪುಸ್ತಕದ ರೆಫರೆನ್ಸ್‌ನ ಕುರಿತು ಹೇಳಿಕೆ ನೀಡುವಂತೆ ಸಭಿಕರಿಗೆ ತಿಳಿಸಿರಿ. 1990ರ ಆಗಸ್ಟ್ ತಿಂಗಳ ನಮ್ಮ ರಾಜ್ಯದ ಸೇವೆಯ 4ನೆಯ ಪುಟದಿಂದ ತೆಗೆದ ಹೆಚ್ಚಿನ ಅಂಶಗಳನ್ನು ಒತ್ತಿಹೇಳಿರಿ. 16ನೆಯ ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಸರಳವಾದ ನಿರೂಪಣೆಗಳಲ್ಲಿ ಒಂದನ್ನು ಉಪಯೋಗಿಸುತ್ತಾ, ಒಂದು ನಿಜವಾದ ಟೆಲಿಫೋನ್ ಸಾಕ್ಷಿಕಾರ್ಯವನ್ನು ಪ್ರತ್ಯಕ್ಷಾಭಿನಯಿಸಿರಿ. ಈ ರೀತಿಯ ಸಾಕ್ಷಿಕಾರ್ಯವನ್ನು ಉಪಯೋಗಿಸಲು ಇರುವ ಅನೇಕ ಸಾಧ್ಯತೆಗಳನ್ನು ಪುನರ್ವಿಮರ್ಶಿಸುತ್ತಾ, ಈ ಭಾಗವನ್ನು ಉತ್ಸಾಹದಿಂದ ಕೊನೆಗೊಳಿಸಿರಿ.
ಸಂಗೀತ 83 (17) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 29ರಿಂದ ಆರಂಭವಾಗುವ ವಾರ
ಸಂಗೀತ 135 (6)
12 ನಿ:ಸ್ಥಳಿಕ ತಿಳಿಸುವಿಕೆಗಳು. ಮೇ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಜೂನ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಮಾಡಿತೋರಿಸಿರಿ. ಅಪೇಕ್ಷಿಸು ಬ್ರೋಷರಿನಲ್ಲಿರುವ 13ನೆಯ ಪಾಠವನ್ನು ಉಪಯೋಗಿಸಿ, ಬೈಬಲ್ ಅಭ್ಯಾಸವನ್ನು ಹೇಗೆ ಆರಂಭಿಸಸಾಧ್ಯವಿದೆ ಎಂಬುದನ್ನು ತೋರಿಸಿರಿ.
15 ನಿ:“ನಿಮ್ಮ ಪವಿತ್ರ ಸೇವೆಯಲ್ಲಿ ಸಂತೋಷವನ್ನು ಕಂಡುಕೊಳ್ಳುವುದು.” ಒಂದು ಭಾಷಣ. ನಮ್ಮ ಶುಶ್ರೂಷೆಯಲ್ಲಿ ನಾವು ಸಂತೋಷಿಸುವುದಕ್ಕಿರುವ ಕಾರಣಗಳನ್ನು ಚರ್ಚಿಸಿರಿ.—ಒಳನೋಟ (ಇಂಗ್ಲಿಷ್) ಪುಸ್ತಕದ ಸಂಪುಟ 2ರ 120ನೆಯ ಪುಟವನ್ನು ನೋಡಿರಿ.
18 ನಿ:ಪ್ರತಿಫಲದಾಯಕವಾಗಿರುವ ಬೈಬಲ್ ವಾಚನ. ಸ್ಕೂಲ್ ಗೈಡ್‌ಬುಕ್‌ನ 34-5ನೆಯ ಪುಟಗಳಲ್ಲಿರುವ 6-7ನೆಯ ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಭಾಷಣ ಹಾಗೂ ಪ್ರತ್ಯಕ್ಷಾಭಿನಯ. ಬೈಬಲ್ ಮುಖ್ಯಾಂಶಗಳು ಯಾವುದರ ಮೇಲಾಧಾರಿತವಾಗಿವೆಯೋ ಆ ಸ್ಟ್ಯಾಂಡರ್ಡ್ ಬೈಬಲ್ ವಾಚನ ಕಾರ್ಯಕ್ರಮವು, ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪಾಠಕ್ರಮದ ಒಂದು ಭಾಗವಾಗಿದೆ. (ಡಿಸೆಂಬರ್ 1999ರ ನಮ್ಮ ರಾಜ್ಯದ ಸೇವೆಯ 7ನೆಯ ಪುಟ) ದೇವಪ್ರಭುತ್ವ ಶಾಲೆಗಾಗಿರುವ ಈ ವಾರದ ಬೈಬಲ್ ವಾಚನದ ಭಾಗವನ್ನು ಒಂದು ಕುಟುಂಬವು ಹೇಗೆ ಪರಿಗಣಿಸಸಾಧ್ಯವಿತ್ತೆಂಬುದನ್ನು ಒಂದು ಕುಟುಂಬ ಗುಂಪು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಆ ಕುಟುಂಬವು ಆಸಕ್ತಿಕರವಾಗಿರುವ ಒಂದೆರಡು ಅಂಶಗಳನ್ನು ಆರಿಸಿಕೊಂಡು, ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅಥವಾ ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಪುಸ್ತಕಗಳಲ್ಲಿ ಹೆಚ್ಚಿನ ರಿಸರ್ಚ್ ಮಾಡುತ್ತದೆ. ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರಾಗಿರುವಂತೆ’ ನಮ್ಮನ್ನು ಸಜ್ಜುಗೊಳಿಸುತ್ತಾ, ಬೈಬಲನ್ನು ಓದುವುದು ಹೇಗೆ ಹೆಚ್ಚು ಅರ್ಥಭರಿತವಾದದ್ದಾಗಿ ಪರಿಣಮಿಸಸಾಧ್ಯವಿದೆ ಎಂಬುದನ್ನು ತೋರಿಸಿರಿ.—2 ತಿಮೊ. 2:15.
ಸಂಗೀತ 95 (28) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 5ರಿಂದ ಆರಂಭವಾಗುವ ವಾರ
ಸಂಗೀತ 37 (9)
5 ನಿ:ಸ್ಥಳಿಕ ತಿಳಿಸುವಿಕೆಗಳು.
10 ನಿ:ಸ್ಥಳಿಕ ಅಗತ್ಯಗಳು.
15 ನಿ:“ಎಳೆಯರಿಗೆ ಲಭ್ಯವಿರುವ ಒಂದು ಸುಯೋಗ.” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಡಿಸೆಂಬರ್ 1, 1996ರ ಕಾವಲಿನಬುರುಜು ಪತ್ರಿಕೆಯ 13ನೆಯ ಪುಟದಲ್ಲಿರುವ 15ನೆಯ ಪ್ಯಾರಗ್ರಾಫ್‌ನಲ್ಲಿ ಕಂಡುಬರುವ ಅನುಭವಗಳನ್ನು ತಿಳಿಸಿರಿ. ಪತ್ರಿಕೆಗಳನ್ನು ವಿತರಿಸುವುದರಲ್ಲಿ ಅವರು ಹೇಗೆ ಆನಂದವನ್ನು ಅನುಭವಿಸಿದ್ದಾರೆ ಎಂಬುದನ್ನು ತಿಳಿಸುವಂತೆ ಎಳೆಯರಿಗೆ ಕರೆಕೊಡಿರಿ. ಮನೆಯಿಂದ ಮನೆಯ ಸೇವೆಯಲ್ಲಿ ಉಪಯೋಗಿಸಬಹುದಾದ ಒಂದು ಸರಳವಾದ ಪತ್ರಿಕಾ ನಿರೂಪಣೆಯನ್ನು ಒಬ್ಬರು ಅಥವಾ ಇಬ್ಬರು ಯುವ ಜನರು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಪ್ರತಿ ವಾರ ಪತ್ರಿಕಾ ಕೆಲಸದಲ್ಲಿ ತಮ್ಮೊಂದಿಗೆ ಮಕ್ಕಳನ್ನು ಸಹ ಕರೆದುಕೊಂಡು ಹೋಗುವಂತೆ ಹೆತ್ತವರನ್ನು ಉತ್ತೇಜಿಸಿರಿ.
15 ನಿ:“‘ಅರ್ಹತೆಯ ಪರೀಕ್ಷೆಗೊಳಗಾಗುವುದು’—ಹೇಗೆ?” ಒಬ್ಬ ಹಿರಿಯನಿಂದ ಭಾಷಣ. ಸಭೆಯಲ್ಲಿ ಶುಶ್ರೂಷಾ ಸೇವಕರನ್ನು ಹೊಂದಿರುವುದಕ್ಕಾಗಿರುವ ಶಾಸ್ತ್ರೀಯ ಏರ್ಪಾಡನ್ನು ಪುನರ್ವಿಮರ್ಶಿಸಿರಿ. (ಒಳನೋಟ, ಸಂಪುಟ 2, 409ನೆಯ ಪುಟವನ್ನು ನೋಡಿರಿ.) ತಮ್ಮ ನೇಮಕವನ್ನು ಪಡೆಯಲಿಕ್ಕಾಗಿ ಅವರು ಯಾವ ಅರ್ಹತೆಗಳನ್ನು ಮುಟ್ಟಬೇಕು ಎಂಬುದನ್ನು ತೋರಿಸಿರಿ. (ನಮ್ಮ ಶುಶ್ರೂಷೆ ಪುಸ್ತಕದ 55-7ನೆಯ ಪುಟಗಳನ್ನು ನೋಡಿರಿ.) ಶುಶ್ರೂಷಾ ಸೇವಕರು ಯಾವ ರೀತಿಯಲ್ಲಿ ಸಹಾಯವನ್ನು ಮಾಡಬಲ್ಲರು ಎಂಬುದನ್ನು ತಿಳಿಸಿರಿ, ಮತ್ತು ಹೆಚ್ಚಿನ ಸಹೋದರರನ್ನು ಈ ಸುಯೋಗಕ್ಕಾಗಿ ತಮ್ಮನ್ನು ಎಟುಕಿಸಿಕೊಳ್ಳುವಂತೆ ಉತ್ತೇಜಿಸಿರಿ.
ಸಂಗೀತ 82 (10) ಮತ್ತು ಸಮಾಪ್ತಿಯ ಪ್ರಾರ್ಥನೆ.