ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/00 ಪು. 1
  • ಜೀವಗಳು ಅಪಾಯದಲ್ಲಿವೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವಗಳು ಅಪಾಯದಲ್ಲಿವೆ!
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಾವು ಸಾರಲೇಬೇಕಾದಂಥ ಸಂದೇಶ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಾರುತ್ತಾ ಇರಿ!
    2000 ನಮ್ಮ ರಾಜ್ಯದ ಸೇವೆ
  • ದೇವರ ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡುತ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ‘ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 9/00 ಪು. 1

ಜೀವಗಳು ಅಪಾಯದಲ್ಲಿವೆ!

1 ‘ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಬೇಕೆಂಬುದು’ ಯೆಹೋವನ ಚಿತ್ತವಾಗಿದೆಯೆಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ಅದೇ ಸಮಯದಲ್ಲಿ ಭೂಮಿಯಲ್ಲಿರುವ ನೂರಾರು ಕೋಟಿ ಜನರಿಗೆ, ನಿತ್ಯ ಜೀವದ ಪ್ರತೀಕ್ಷೆಯು ಬೇರೊಂದು ವಿಷಯದ ಮೇಲೂ ಅವಲಂಬಿಸಿರುತ್ತದೆ. ಅದು, ಯೆಹೋವ ದೇವರ ಕಡೆಗೆ ಮತ್ತು ಯೇಸು ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯದ ಕಡೆಗೆ ಅವರಿಗಿರುವ ಮನೋಭಾವವಾಗಿದೆ. ಈ ಯೋಗ್ಯ ಮನೋಭಾವವನ್ನು, ಅವರು “ಸತ್ಯದ ಜ್ಞಾನ”ವನ್ನು ಪಡೆದುಕೊಳ್ಳುವ ಮೂಲಕ ಮಾತ್ರ ಹೊಂದಬಲ್ಲರು. (1 ತಿಮೊ. 2:3, 4) ದೇವರ ನೀತಿಯ ಹೊಸ ಲೋಕಕ್ಕೆ ದಾರಿ ಮಾಡಿಕೊಡುವುದಕ್ಕಾಗಿ ಈ ಭೂಮಿಯಿಂದ ಎಲ್ಲ ದುಷ್ಟತನವು ತೆಗೆದುಹಾಕಲ್ಪಡುವುದೆಂಬ ಎಚ್ಚರಿಕೆಯನ್ನು ಜನರಿಗೆ ಕೊಡುವ ನೇಮಕವು ನಮಗಿದೆ. ಅದೇ ಸಮಯದಲ್ಲಿ, ಅತ್ಯಾವಶ್ಯಕವಾದ ಒಂದು ಜೀವರಕ್ಷಕ ಕೆಲಸವನ್ನು ನಡೆಸುವಂತಹ ನೇಮಕವೂ ನಮಗೆ ಕೊಡಲ್ಪಟ್ಟಿದೆ.—ಮತ್ತಾ. 24:14; 28:19, 20; ರೋಮಾ. 10:13-15.

2 ಅಷ್ಟು ತುರ್ತಿನದ್ದೇಕೆ? ‘ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಿರದ, ಇನ್ನು ಮೇಲೆಯೂ ಆಗದ ಸಂಕಟದ [“ಮಹಾ ಸಂಕಟದ,” NW]’ ಕುರಿತಾಗಿ ಯೇಸು ಎಚ್ಚರಿಕೆಯನ್ನು ಕೊಟ್ಟನು. (ಮತ್ತಾ. 24:21) ಆ ಮಹಾ ಸಂಕಟವು, ಅರ್ಮಗೆದೋನಿನಲ್ಲಿ ಅಂತ್ಯಗೊಳ್ಳುವುದು. (ಪ್ರಕ. 16:16) ಸುವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸದಿರುವಲ್ಲಿ ಜನರು ನಾಶನಕ್ಕೆ ತುತ್ತಾಗುವರು. ಇವರಲ್ಲಿ ನಮ್ಮ ಅವಿಶ್ವಾಸಿ ಸಂಬಂಧಿಕರು, ನೆರೆಹೊರೆಯವರು, ಸಹಕಾರ್ಮಿಕರು, ಶಾಲಾಸಂಗಾತಿಗಳು ಮತ್ತು ಪರಿಚಯಸ್ಥರೂ ಸೇರಿರಸಾಧ್ಯವಿದೆ. ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನು ಎಲ್ಲರಿಗಾಗಿ ಪ್ರಾಯಶ್ಚಿತ್ತವಾಗಿ ಕೊಡುವ ಮೂಲಕ, ಇಡೀ ಮಾನವಜಾತಿಗಾಗಿದ್ದ ತನ್ನ ಪ್ರೀತಿಯನ್ನು ತೋರಿಸಿದನು. ಮತ್ತು ಆತನನ್ನು ಅನುಕರಿಸುವ ನಮಗೂ, ‘ಎಲ್ಲಾ ಮನುಷ್ಯರಿಗೆ’ ಈ ಸಂದೇಶವನ್ನು ತಲಪಿಸುವುದೇ ಮುಖ್ಯ ಚಿಂತೆಯಾಗಿರುತ್ತದೆ. (ಯೋಹಾ. 3:16) ದೇವರ ಸುರಕ್ಷಾ ಸ್ಥಳಕ್ಕೆ ಓಡಿಹೋಗುವ ಆಮಂತ್ರಣವನ್ನು ಎಲ್ಲರಿಗೂ ನೀಡಲು ನಾವು ಹುರುಪಿನಿಂದ ಪ್ರಯತ್ನಿಸಬೇಕು. ಸಾರುವ ಕೆಲಸವನ್ನು ಪೂರ್ಣವಾಗಿ ಮಾಡುವ ಮೂಲಕ, ನಾವು ರಕ್ತಾಪರಾಧದಿಂದ ತಪ್ಪಿಸಿಕೊಳ್ಳಬಹುದು.—ಯೆಹೆ. 33:1-7; 1 ಕೊರಿಂ. 9:16.

3 ನಮ್ಮ ಗುರಿಯೇನು? ಸಾರುವ ಕೆಲಸವು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ದೇವರ ವಾಕ್ಯದಾದ್ಯಂತ ಒತ್ತಿಹೇಳಲಾಗಿದೆ. ಅಪೊಸ್ತಲ ಪೌಲನು ಹೇಳಿದಂತೆ, ದೇವರ ಮಾರ್ಗಗಳಿಗನುಸಾರ ಜೀವಿಸುವಂತೆ “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ.” (2 ಕೊರಿಂ. 5:14) ಅಷ್ಟೇ ಅಲ್ಲದೆ, ಕಾವಲಿನಬುರುಜು ಪತ್ರಿಕೆಯು, ಸಾರುವ ನಮ್ಮ ಹಂಗಿನ ಕುರಿತಾಗಿ ಪದೇ ಪದೇ ಹೇಳುತ್ತಾ ಇರುತ್ತದೆ. ನಮ್ಮ ರಾಜ್ಯದ ಸೇವೆಯು, ಸಾರುವ ಕೆಲಸವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಮಾರ್ಗದರ್ಶನವನ್ನು ಕೊಡುತ್ತಾ ಇರುತ್ತದೆ. ಮತ್ತು ಹಿರಿಯರು ಈ ಕೆಲಸವನ್ನು ಏರ್ಪಡಿಸಿ, ಅದರಲ್ಲಿ ಪಾಲ್ಗೊಳ್ಳುವಂತೆ ನಮ್ಮನ್ನು ಉತ್ತೇಜಿಸುತ್ತಾ ಇರುತ್ತಾರೆ. ಜೊತೆ ಪ್ರಚಾರಕರು, ನಾವು ಅವರೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡುವಂತೆ ಆಮಂತ್ರಿಸುತ್ತಾರೆ. ನಮ್ಮ ನಿರೂಪಣೆಗಳನ್ನು ತಯಾರಿಸುವ ವಿಷಯದಲ್ಲಿ, ಪತ್ರಿಕೆಗಳನ್ನು ಹಾಗೂ ಇತರ ಸಾಹಿತ್ಯವನ್ನು ನೀಡುವುದರ ಬಗ್ಗೆ, ಪುನರ್‌ಭೇಟಿಗಳನ್ನು ಮಾಡುವುದರ ಬಗ್ಗೆ ಹಾಗೂ ಬೈಬಲ್‌ ಅಭ್ಯಾಸಗಳನ್ನು ನಡೆಸುವುದರ ಬಗ್ಗೆ ಮತ್ತು ಪ್ರತಿಯೊಂದು ಸಂದರ್ಭದಲ್ಲಿ ಸಾಕ್ಷಿಯನ್ನು ಕೊಡುವುದರ ಕುರಿತು ನಮಗೆ ಬಹಳಷ್ಟು ಸಲಹೆಸೂಚನೆಗಳು ಸಿಗುತ್ತವೆ. ಇವೆಲ್ಲವೂ, ಜೀವಗಳನ್ನು ರಕ್ಷಿಸುವ ನಮ್ಮ ಗುರಿಯನ್ನು ತಲಪಲು ನಮಗೆ ಸಹಾಯಮಾಡುತ್ತವೆ.—1 ಕೊರಿಂ. 9:22, 23; ಎಫೆ. 1:13.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ