ಸೇವಾ ಕೂಟದ ಶೆಡ್ಯೂಲ್
ಸೂಚನೆ: ಬರಲಿರುವ ತಿಂಗಳುಗಳಲ್ಲಿ ನಮ್ಮ ರಾಜ್ಯದ ಸೇವೆಯು, ಪ್ರತಿಯೊಂದು ವಾರಕ್ಕಾಗಿಯೂ ಒಂದು ಸೇವಾ ಕೂಟವನ್ನು ಶೆಡ್ಯೂಲ್ ಮಾಡುವುದು. “ದೇವರ ವಾಕ್ಯದ ಪ್ರಕಾರ ನಡೆಯುವವರು” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಸಭೆಗಳು ಬೇಕಾಗಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲೆಲ್ಲಾ, ಅಧಿವೇಶನದ ಹಿಂದಿನ ವಾರದ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿ ಕೊಡಲ್ಪಟ್ಟಿರುವ ಸ್ಪಷ್ಟವಾದ ಸಲಹೆಯನ್ನು ಪುನರ್ವಿಮರ್ಶಿಸಲಿಕ್ಕಾಗಿ 15 ನಿಮಿಷಗಳನ್ನು ಉಪಯೋಗಿಸಿರಿ. ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನದ ಕಾರ್ಯಕ್ರಮವು ಆರಂಭವಾಗುವ ಮುಂಚೆ ಎಲ್ಲರೂ ತಮ್ಮ ಬಳಿಯಿರುವ ಮುದ್ರಿತ ಕಾರ್ಯಕ್ರಮವನ್ನು ನೋಡಿ, ಏನನ್ನು ಚರ್ಚಿಸಲಾಗಬಹುದೆಂಬುದನ್ನು ನಿರೀಕ್ಷಿಸಲು ಕೆಲವೊಂದು ನಿಮಿಷಗಳನ್ನು ಬದಿಗಿರಿಸಲು ಉತ್ತೇಜಿಸಿರಿ. ಇದನ್ನು ಮಾಡುವುದರಿಂದ ಕಾರ್ಯಕ್ರಮದ ಮೇಲೆ ಗಮನವನ್ನಿಡಲು ಮತ್ತು ಚುಟುಕಾದ ಅರ್ಥಭರಿತ ನೋಟ್ಸ್‌ಗಳನ್ನು ಬರೆದುಕೊಳ್ಳಲು ಸುಲಭವಾಗುವುದು. ಅಧಿವೇಶನ ಮುಗಿದ ಎರಡು ಇಲ್ಲವೇ ನಾಲ್ಕು ವಾರಗಳ ನಂತರ, ಸೇವಾ ಕೂಟದಲ್ಲಿ ಅಧಿವೇಶನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ 30 ನಿಮಿಷಗಳನ್ನು ಶೆಡ್ಯೂಲ್ ಮಾಡಬೇಕು. ಆ ಸಮಯದಲ್ಲಿ, ಈ ಭಾಗವನ್ನು ನಿರ್ವಹಿಸಲು ಮೂವರು ಅರ್ಹ ಸಹೋದರರು ನೇಮಿಸಲ್ಪಡುವರು. ಇವರು ಕೇಳುವಾಗಲೆಲ್ಲಾ, ಚುಟುಕಾದ ಹೇಳಿಕೆಯನ್ನು ನೀಡಲಿಕ್ಕಾಗಿ ಮುಂದೆಬರಲು ಪ್ರತಿಯೊಬ್ಬರೂ ಮುನ್‌ತಯಾರಿಯನ್ನು ಮಾಡಿಕೊಂಡು ಬರಬಹುದು. ಇಂತಹ ಹೇಳಿಕೆಗಳಲ್ಲಿ, ಅವರು ಅಧಿವೇಶನದಲ್ಲಿ ಕಲಿತಂತಹ ವಿಷಯಗಳು ತಮ್ಮ ಸ್ವಂತ ಜೀವನಕ್ಕೆ ಮತ್ತು ಕ್ಷೇತ್ರ ಸೇವೆಗೆ ಹೇಗೆ ಅನ್ವಯಿಸುತ್ತವೆಂಬುದನ್ನು ವ್ಯಕ್ತಪಡಿಸಬಹುದು. ಆಯ್ಕೆಮಾಡಲ್ಪಟ್ಟ ಒಂದು ಅಥವಾ ಎರಡು ಸಂಕ್ಷಿಪ್ತ ಅನುಭವಗಳನ್ನು ತಿಳಿಸಬಹುದು. ಈ ಸೇವಾ ಕೂಟವು ಆಸಕ್ತಿಕರವೂ, ಉಪಯುಕ್ತ ಮಾಹಿತಿಯನ್ನು ಕೊಡುವಂಥದ್ದೂ ಆಗಿರಲಿಕ್ಕಾಗಿ, ಎಲ್ಲರೂ ಒಳ್ಳೆಯ ತಯಾರಿಯನ್ನು ಮಾಡಿಕೊಂಡು ಬರುವುದು ಪ್ರಾಮುಖ್ಯ.
ಸೆಪ್ಟೆಂಬರ್ 11ರಿಂದ ಆರಂಭವಾಗುವ ವಾರ
ಸಂಗೀತ 16 (143)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ಯೆಹೋವನ ಆಶೀರ್ವಾದವು ನಮ್ಮನ್ನು ಐಶ್ವರ್ಯವಂತರನ್ನಾಗಿ ಮಾಡುತ್ತದೆ.” ಆರಂಭದ ಹೇಳಿಕೆಗಳಿಗಾಗಿ ಕೇವಲ ಒಂದು ನಿಮಿಷವನ್ನು ಉಪಯೋಗಿಸಿ, ಅನಂತರ ಪ್ರಶ್ನೋತ್ತರ ಚರ್ಚೆಯೊಂದಿಗೆ ಮುಂದುವರಿಸಿರಿ.—ಇನ್‌ಸೈಟ್, ಸಂಪುಟ 2, ಪುಟ 804, ಪ್ಯಾರಗ್ರಾಫ್ 6-7ನ್ನು ನೋಡಿರಿ.
20 ನಿ: “ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಟ್ರ್ಯಾಕ್ಟ್‌ಗಳನ್ನು ಉಪಯೋಗಿಸಿರಿ.” ಟೆರಿಟೊರಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ಯಾವುದೇ ನಾಲ್ಕು ಟ್ರ್ಯಾಕ್ಟ್‌ಗಳನ್ನು ಪುನರ್ವಿಮರ್ಶಿಸಿರಿ. ಪ್ರತಿಯೊಂದು ಟ್ರ್ಯಾಕ್ಟ್‌ನಲ್ಲಿ ಉತ್ತರಿಸಲಾಗಿರುವಂತಹ ಒಂದು ಪ್ರಶ್ನೆಯನ್ನು ಕೇಳಿರಿ. ಈ ಪ್ರಶ್ನೆಯನ್ನು ಉಪಯೋಗಿಸಿ ಒಂದು ಸಂಭಾಷಣೆಯನ್ನು ಹೇಗೆ ಆರಂಭಿಸಬಹುದು ಮತ್ತು ಸಾಧ್ಯವಾದರೆ ಬೈಬಲ್ ಅಭ್ಯಾಸಕ್ಕೆ ಹೇಗೆ ನಡೆಸಬಹುದು ಎಂಬುದನ್ನು ಹೇಳುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಈ ತಿಂಗಳಿನ ನೀಡುವಿಕೆಯೊಂದಿಗೆ, ಎರಡು ಟ್ರ್ಯಾಕ್ಟ್‌ಗಳ ವಿಷಯದಲ್ಲಿ ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 9 (37) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 18ರಿಂದ ಆರಂಭವಾಗುವ ವಾರಸಂಗೀತ 7 (51)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಕಳೆದ ವರ್ಷ ನಾವೇನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕನಿಂದ ಭಾಷಣ. 2000 ಸೇವಾ ವರ್ಷದ ಸಭೆಯ ವರದಿಯಿಂದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. ಸಾಧಿಸಲಾಗಿರುವ ಒಳ್ಳೆಯ ಕೆಲಸಗಳಿಗಾಗಿ ಪ್ರಶಂಸಿಸಿರಿ. ಎಲ್ಲೆಲ್ಲಿ ಸುಧಾರಣೆಯನ್ನು ಮಾಡಬಹುದೆಂಬುದನ್ನು ತಿಳಿಸಿರಿ. ಕೂಟದ ಹಾಜರಿಯಲ್ಲಿ, ಬೈಬಲ್ ಅಭ್ಯಾಸಗಳನ್ನು ಆರಂಭಿಸಿ ಮುಂದುವರಿಸುವುದರಲ್ಲಿ, ಮತ್ತು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿರುವುದರ ವಿಷಯದಲ್ಲಿ ಸಭೆಯು ಏನನ್ನು ಮಾಡಿದೆಯೆಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಮುಂದಿನ ವರ್ಷಕ್ಕಾಗಿ ಇಡಲಾಗಿರುವ ಪ್ರಾಯೋಗಿಕ ಗುರಿಗಳನ್ನು ತಿಳಿಸಿರಿ.
20 ನಿ: “ಜೀವಗಳು ಅಪಾಯದಲ್ಲಿವೆ!” ಸಭಿಕರೊಂದಿಗೆ ಚರ್ಚೆ. ಈ ಲೇಖನದಲ್ಲಿ ಕೊಡಲ್ಪಟ್ಟಿರುವ ವಚನಗಳನ್ನು ಎತ್ತಿತೋರಿಸಿರಿ.
ಸಂಗೀತ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 25ರಿಂದ ಆರಂಭವಾಗುವ ವಾರ
ಸಂಗೀತ 20 (93)
15 ನಿ: ಸ್ಥಳಿಕ ತಿಳಿಸುವಿಕೆಗಳು. ಸೆಪ್ಟೆಂಬರ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಪ್ರಶ್ನಾ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.
15 ನಿ: “ನೀವು ಪವಿತ್ರ ವಿಷಯಗಳನ್ನು ಗಣ್ಯಮಾಡುತ್ತೀರೊ?” ಹಿರಿಯನೊಬ್ಬನಿಂದ ಭಾಷಣ. ಜಿಲ್ಲಾ ಅಧಿವೇಶನಕ್ಕೆ ಮೂರೂ ದಿನ ಹಾಜರಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ.
15 ನಿ: “ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.” ಪ್ರಶ್ನೋತ್ತರ ಚರ್ಚೆ. ರೂಮುಗಳನ್ನು ಪಡೆಯುವುದರ ವಿಷಯದಲ್ಲಿ ಕೊಡಲಾಗಿರುವ ನಿರ್ದೇಶನಗಳನ್ನು ಕೆಲವರು ಪಾಲಿಸಲು ತಪ್ಪಿಹೋಗುವಾಗ ಆಗುವಂತಹ ತೊಂದರೆಗಳನ್ನು ತಿಳಿಸಿರಿ. ಸ್ಥಳಿಕವಾಗಿ ಅನ್ವಯವಾಗುವಂಥ ವಿಷಯಗಳನ್ನು ಸೇರಿಸಿರಿ.
ಸಂಗೀತ 8 (53) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 2ರಿಂದ ಆರಂಭವಾಗುವ ವಾರ
ಸಂಗೀತ 17 (187)
5 ನಿ: ಸ್ಥಳಿಕ ತಿಳಿಸುವಿಕೆಗಳು.
10 ನಿ: ನಮ್ಮ ಪತ್ರಿಕೆಗಳು ತಮ್ಮ ಮೌಲ್ಯವನ್ನು ಎಂದೂ ಕಳೆದುಕೊಳ್ಳುವುದಿಲ್ಲ. ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳ ಹಳೆಯ ಸಂಚಿಕೆಗಳು ರಾಶಿಬಿದ್ದಿರುವಾಗ ನೀವೇನು ಮಾಡುತ್ತೀರಿ? ಅವುಗಳಲ್ಲಿರುವ ವಿಷಯಗಳು ಪ್ರಚಲಿತವಾದವುಗಳಲ್ಲವೆಂದು ನೆನಸುತ್ತಾ ಕೆಲವು ಪ್ರಚಾರಕರು ಅವುಗಳನ್ನು ಬಿಸಾಡುತ್ತಾರೆ. ಹಾಗೆ ಮಾಡುವ ಬದಲು, ಸೆಪ್ಟೆಂಬರ್ 1993ರ ನಮ್ಮ ರಾಜ್ಯದ ಸೇವೆಯು, ಪುಟ 3ರಲ್ಲಿ, ನಾವು ಈ ಹಳೆಯ ಸಂಚಿಕೆಗಳನ್ನು ನಮ್ಮೊಂದಿಗೆ ಕೊಂಡೊಯ್ದು, ಸೂಕ್ತವಾಗಿರುವಲ್ಲೆಲ್ಲ ಅವುಗಳನ್ನು ನೀಡುವ ಸಲಹೆಯನ್ನು ಕೊಟ್ಟಿತು. ಗಂಡಸರಿಗೆ, ಹೆಂಗಸರಿಗೆ, ವೃತ್ತಿಪರರಿಗೆ, ವೃದ್ಧರಿಗೆ, ಮತ್ತು ಹದಿವಯಸ್ಕರಿಗೆ ಆಕರ್ಷಕವಾಗಿ ತೋರುವ ಸಮಯೋಚಿತ ಲೇಖನಗಳನ್ನು ನೀವು ಆಯ್ಕೆಮಾಡಿಡಬಹುದು. ಅನಂತರ, ಸಂದರ್ಭ ಸಿಕ್ಕಿದಾಗಲೆಲ್ಲಾ ಆ ಪತ್ರಿಕೆಗಳನ್ನು ನೀಡಲು ಅವುಗಳನ್ನು ಸಿದ್ಧವಾಗಿಡಿರಿ. ಅಂತಹ ಲೇಖನಗಳನ್ನು ಹೇಗೆ ಆಯ್ಕೆಮಾಡಬಹುದು ಮತ್ತು ಹೇಗೆ ಪ್ರಸ್ತುತಪಡಿಸಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಹಳೆಯ ಪತ್ರಿಕೆಗಳನ್ನು ನೀಡುವುದರಲ್ಲಿ ಪ್ರಚಾರಕರಿಗೆ ಸಿಕ್ಕಿರುವ ಒಳ್ಳೆಯ ಅನುಭವಗಳನ್ನು ತಿಳಿಸಿರಿ.
15 ನಿ: “ದೈವೋಕ್ತಿಗಳಿಗೆ ಹೆಚ್ಚು ಗಮನವನ್ನು ಕೊಡುವವರಾಗಿರಿ.” ಪ್ರಶ್ನೋತ್ತರಗಳು. ಬೆಳಗ್ಗೆ ಮತ್ತು ಮಧ್ಯಾಹ್ನದ ಕಾರ್ಯಕ್ರಮವು ಆರಂಭವಾಗುವ ಮುಂಚೆ ನಾವೆಲ್ಲರೂ ನಮ್ಮ ಆಸನಗಳಲ್ಲಿ ಏಕೆ ಕುಳಿತಿರಬೇಕೆಂಬುದರ ಕಾರಣಗಳನ್ನು ಒತ್ತಿಹೇಳಿರಿ.
15 ನಿ: “ದೇವರಿಗೆ ಘನತೆ ತರುವಂತಹ ಯೋಗ್ಯ ನಡವಳಿಕೆಯುಳ್ಳವರಾಗಿರಿ.” ಒಂದು ಕುಟುಂಬದೊಂದಿಗೆ ಒಬ್ಬ ಹಿರಿಯನು ಈ ಲೇಖನವನ್ನು ಚರ್ಚಿಸುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಕ್ರಮಬದ್ಧತೆ, ಶಿಷ್ಟಾಚಾರಗಳನ್ನು ತೋರಿಸಲು, ಶುಚಿತ್ವವನ್ನು ಕಾಪಾಡಿಕೊಳ್ಳಲು ಮತ್ತು ಒಳ್ಳೆಯ ತೋರಿಕೆ ಹಾಗೂ ನಡತೆಯುಳ್ಳವರಾಗಿರಲು ತಾವು ಏನು ಮಾಡಬೇಕೆಂಬುದನ್ನು ಅವರು ಪುನರ್ವಿಮರ್ಶಿಸುತ್ತಾರೆ.
ಸಂಗೀತ 5 (46) ಮತ್ತು ಸಮಾಪ್ತಿಯ ಪ್ರಾರ್ಥನೆ.