ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/00 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2000 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 9ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 16ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 23ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 30ರಿಂದ ಆರಂಭವಾಗುವ ವಾರ
  • ನವೆಂಬರ್‌ 6ರಿಂದ ಆರಂಭವಾಗುವ ವಾರ
2000 ನಮ್ಮ ರಾಜ್ಯದ ಸೇವೆ
km 10/00 ಪು. 2

ಸೇವಾ ಕೂಟದ ಶೆಡ್ಯೂಲ್‌

ಅಕ್ಟೋಬರ್‌ 9ರಿಂದ ಆರಂಭವಾಗುವ ವಾರ

ಸಂಗೀತ 9 (37)

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ: “ನಾನು ಬೇರೆ ದೇಶಕ್ಕೆ ಹೋಗಿ ನೆಲೆಸಬೇಕೋ?” ಹಿರಿಯನಿಂದ ಭಾಷಣ. ಬೇರೆ ದೇಶಕ್ಕೆ ವಲಸೆ ಹೋಗುವ ನಿರ್ಧಾರವನ್ನು ಮಾಡುವ ಮೊದಲು, ವಿವೇಕವನ್ನು ಏಕೆ ಉಪಯೋಗಿಸಬೇಕು ಎಂಬುದನ್ನು ವಿವರಿಸಿರಿ. ಜ್ಞಾನೋಕ್ತಿ 22:3ರಲ್ಲಿರುವ ಸಲಹೆಯನ್ನು ಅನ್ವಯಿಸುವುದರ ಬಗ್ಗೆ ಚರ್ಚಿಸಿರಿ. ಆಗಸ್ಟ್‌ 15, 1988ರ ವಾಚ್‌ಟವರ್‌ ಪತ್ರಿಕೆಯ 22ನೇ ಪುಟದಲ್ಲಿರುವ ಎಚ್ಚರಿಕೆಗಳ ಬಗ್ಗೆ ತಿಳಿಸಿರಿ.

20 ನಿ: ಕೂಟಗಳಿಗಾಗಿ ಚೆನ್ನಾಗಿ ತಯಾರಿಮಾಡಿರಿ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಕೂಟಗಳಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುವುದು, ನಾವು ಎಷ್ಟು ಚೆನ್ನಾಗಿ ತಯಾರಿಮಾಡುತ್ತೇವೋ ಅದರ ಮೇಲೆ ಹೊಂದಿಕೊಂಡಿದೆ. ಮಾರ್ಚ್‌ 1, 1998ರ ಕಾವಲಿನಬುರುಜು, 15-16 ಪುಟಗಳು, 8-11ನೇ ಪ್ಯಾರಗ್ರಾಫ್‌ಗಳಲ್ಲಿ ನೀಡಲ್ಪಟ್ಟಿರುವ ಪ್ರಾಯೋಗಿಕ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಅಗತ್ಯವಾದ ಆರಂಭದ ಹೆಜ್ಜೆಯನ್ನು ಹೇಗೆ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಚೆನ್ನಾಗಿ ತಯಾರಿಮಾಡಲು ಸಮಯವನ್ನು ಹೇಗೆ ಕಂಡುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಸುವಂತೆ ಸಭಿಕರಿಗೆ ಕರೆಕೊಡಿರಿ.

ಸಂಗೀತ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 16ರಿಂದ ಆರಂಭವಾಗುವ ವಾರ

ಸಂಗೀತ 16 (143)

5 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

20 ನಿ: “ಆಸಕ್ತಿಯನ್ನು ಕೆರಳಿಸಲು ಸದ್ಯದ ಘಟನೆಗಳನ್ನು ಉಪಯೋಗಿಸಿ.” ಸಭಿಕರೊಂದಿಗೆ ಚರ್ಚೆ ಮತ್ತು ಪ್ರತ್ಯಕ್ಷಾಭಿನಯಗಳು. ಸ್ಥಳಿಕವಾಗಿ ಆಸಕ್ತಿಯನ್ನು ಕೆರಳಿಸಿರುವಂತಹ ಹಲವಾರು ಸದ್ಯದ ಘಟನೆಗಳನ್ನು ತಿಳಿಸಿ. ಇವು ಭವಿಷ್ಯತ್ತಿನ ಬಗ್ಗೆ ಯಾವ ಚಿಂತೆವ್ಯಾಕುಲತೆಗಳನ್ನು ಉಂಟುಮಾಡಿವೆ? ರೀಸನಿಂಗ್‌ ಪುಸ್ತಕದ 10-11ನೆಯ ಪುಟಗಳನ್ನು ಉಪಯೋಗಿಸುತ್ತಾ, ಬೈಬಲ್‌ ಚರ್ಚೆಗೆ ನಡೆಸುವ ಒಂದು ಪೀಠಿಕೆಯನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಕೆಲವು ಸಲಹೆಗಳನ್ನು ನೀಡಿರಿ. ಎರಡು ಪ್ರಾಯೋಗಿಕವಾದ ಹಾಗೂ ಚೆನ್ನಾಗಿ ತಯಾರಿಸಿದ ಪ್ರತ್ಯಕ್ಷಾಭಿನಯಗಳಿರಲಿ.

20 ನಿ: ಪಯನೀಯರ್‌ ಮನೋಭಾವವನ್ನು ನಾವೆಲ್ಲರೂ ತೋರಿಸಸಾಧ್ಯವಿದೆ. ಪುಸ್ತಕ ಅಭ್ಯಾಸ ಚಾಲಕ ಹಾಗೂ ಅವನ ಸಹಾಯಕನ ನಡುವೆ ಚರ್ಚೆ. ಇದು ಅಕ್ಟೋಬರ್‌ 15, 1997ರ ಕಾವಲಿನಬುರುಜು, 22-3 ಪುಟಗಳ ಮೇಲಾಧಾರಿತವಾಗಿರುತ್ತದೆ. ಸಭೆಯಲ್ಲಿ ಹೆಚ್ಚಿನ ಪಯನೀಯರರು ಇರುವುದು ಯಾವ ರೀತಿಯಲ್ಲಿ ಉತ್ತೇಜನದಾಯಕವಾಗಿದೆ ಹಾಗೂ ಈ ಗುರಿಯನ್ನು ತಲುಪಲು ಇದಕ್ಕೆ ಎಲ್ಲರೂ ಹೇಗೆ ಬೆಂಬಲ ನೀಡಸಾಧ್ಯವಿದೆ ಎಂಬುದನ್ನು ಚರ್ಚಿಸಿರಿ. ಸದ್ಯದಲ್ಲಿ ಪಯನೀಯರ್‌ ಸೇವೆಯನ್ನು ಮಾಡುತ್ತಿರುವವರಿಗೆ ಹೇಗೆ ಉತ್ತೇಜನವನ್ನು ನೀಡಬಹುದು ಹಾಗೂ ಸಭೆಯಲ್ಲಿರುವವರೆಲ್ಲರೂ ಶುಶ್ರೂಷೆಗಾಗಿ ಹೇಗೆ ಹುರುಪನ್ನು ಬೆಳೆಸಿಕೊಳ್ಳಸಾಧ್ಯವಿದೆ ಎಂಬುದನ್ನು ಸಹ ಚರ್ಚಿಸಿರಿ.

ಸಂಗೀತ 12 (113) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 23ರಿಂದ ಆರಂಭವಾಗುವ ವಾರ

ಸಂಗೀತ 20 (93)

5 ನಿ: ಸ್ಥಳಿಕ ತಿಳಿಸುವಿಕೆಗಳು.

15 ನಿ: “ಶಿಕ್ಷಣ ನೀಡುವ, ಪ್ರಚೋದಿಸುವ ಹಾಗೂ ಬಲಪಡಿಸುವ ಸಾಧನಗಳು.” (1 ಮತ್ತು 2 ಪ್ಯಾರಗ್ರಾಫ್‌ಗಳು ಮಾತ್ರ.) ಒಂದು ಭಾಷಣ. ವಿಡಿಯೋವನ್ನು ತಯಾರಿಸುವುದರ ಬಗ್ಗೆ ಸೊಸೈಟಿಯ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. (ಪ್ರೋಕ್ಲೈಮರ್ಸ್‌ ಪುಸ್ತಕ, 600-601ನೆಯ ಪುಟಗಳನ್ನು ನೋಡಿರಿ.) ಅಕ್ಟೋಬರ್‌ 30ರ ಸೇವಾಕೂಟದಲ್ಲಿ ಚರ್ಚೆಮಾಡಲ್ಪಡುವ ವಿಷಯಕ್ಕಾಗಿ ತಯಾರಿಮಾಡಲಿಕ್ಕಾಗಿ, ಜೆಹೋವಾಸ್‌ ವಿಟ್ನೆಸಸ್‌—ದ ಆರ್ಗನೈಸೇಷನ್‌ ಬಿಹೈಂಡ್‌ ದ ನೇಮ್‌ ವಿಡಿಯೋವನ್ನು ನೋಡುವಂತೆ ಪ್ರತಿಯೊಬ್ಬರಿಗೂ ಉತ್ತೇಜನವನ್ನು ನೀಡಿರಿ. ವಿಡಿಯೋ ಅನ್ನು ಹೊಂದಿರುವವರು ಅದನ್ನು ನೋಡುವಾಗ, ಯಾರ ಬಳಿ ವಿಡಿಯೋ ಇಲ್ಲವೋ ಅವರನ್ನು ಸಹ ಕರೆಯಬಹುದು.

25 ನಿ: “ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?” ಸೇವಾ ಮೇಲ್ವಿಚಾರಕನಿಂದ ಉತ್ಸಾಹಭರಿತ ಚರ್ಚೆ. ಜುಲೈ 3, 2000ದ, ಹಿರಿಯರಿಗೆ ಬರೆದ ಸೊಸೈಟಿಯ ಪತ್ರದಲ್ಲಿರುವ ಪ್ರಕಟನೆಯನ್ನು ಓದಿದ ಅನಂತರ, ಅಲ್ಲಿ ಹಾಜರಿರುವ ಪ್ರತಿಯೊಬ್ಬರಿಗೂ ಒಂದೊಂದು ರಾಜ್ಯ ವಾರ್ತೆ ನಂ. 36ನ್ನು ನೀಡಿರಿ. ಅನಂತರ ಲೇಖನದ ಪ್ರಶ್ನೋತ್ತರ ಚರ್ಚೆಯನ್ನು ಮುಂದುವರಿಸಿ. ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸಲು ಮಾಡಲ್ಪಟ್ಟಿರುವ ಸ್ಥಳಿಕ ಏರ್ಪಾಡುಗಳ ಬಗ್ಗೆ ತಿಳಿಸಿರಿ. ಅಸ್ನಾತ ಪ್ರಚಾರಕರಾಗಿ ಅರ್ಹರಾಗಲು ಹೊಸಬರಿಗೆ ಮತ್ತು ಮಕ್ಕಳಿಗೆ ಯಾವ ರೀತಿಯಲ್ಲಿ ಸಹಾಯಮಾಡಬಹುದು ಎಂಬುದನ್ನು ತಿಳಿಸಿರಿ. ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ. ಈ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಇರುವ ಅಗತ್ಯವನ್ನು ಒತ್ತಿಹೇಳಿರಿ.

ಸಂಗೀತ 8 (53) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 30ರಿಂದ ಆರಂಭವಾಗುವ ವಾರ

ಸಂಗೀತ 26 (212)

8 ನಿ: ಸ್ಥಳಿಕ ತಿಳಿಸುವಿಕೆಗಳು. ಅಕ್ಟೋಬರ್‌ ತಿಂಗಳಿನ ಕ್ಷೇತ್ರ ಸೇವಾ ವರದಿಯನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಿಸಿರಿ. ವಾರಾಂತ್ಯದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳೊಂದಿಗೆ ರಾಜ್ಯ ವಾರ್ತೆ ನಂ. 36ನ್ನು ವಿತರಿಸಬೇಕು ಎಂದು ಸಭೆಗೆ ಉತ್ತೇಜನವನ್ನು ನೀಡಿರಿ.

12 ನಿ: ಹಾಡುವುದು—ನಮ್ಮ ಆರಾಧನೆಯ ಬಹುಮುಖ್ಯ ಭಾಗ. ಸಭಾ ಕೂಟಗಳಲ್ಲಿ ರಾಜ್ಯ ಗೀತೆಯನ್ನು ಹಾಡುವುದರ ಕುರಿತಾಗಿ ಇಬ್ಬರು ಪ್ರಚಾರಕರೊಂದಿಗೆ ಒಬ್ಬ ಪುಸ್ತಕ ಅಭ್ಯಾಸ ಚಾಲಕನು ಮಾತಾಡುತ್ತಾನೆ. ಅವರು ಸಭೆಯಲ್ಲಿ ಅಷ್ಟೇನೂ ಗಟ್ಟಿಯಾದ ಸ್ವರದಲ್ಲಿ ಹಾಗೂ ಹುರುಪಿನಿಂದ ಹಾಡುವುದಿಲ್ಲ ಎಂಬುದನ್ನು ಗಮನಿಸಿರುತ್ತಾನೆ. ಫೆಬ್ರವರಿ 1, 1997ರ ಕಾವಲಿನಬುರುಜು, ಪುಟಗಳು 27-8ರಿಂದ ಕೆಲವು ಅಂಶಗಳನ್ನು ಅವನು ಪ್ರಚಾರಕರೊಂದಿಗೆ ಹಂಚಿಕೊಳ್ಳುತ್ತಾನೆ. ಆ ವಾರದಲ್ಲಿ ಕಾವಲಿನಬುರುಜು ಅಭ್ಯಾಸದಲ್ಲಿ ಹಾಡಬೇಕಾಗಿರುವ ಗೀತೆಗಳಲ್ಲಿ ಒಂದರ ಲಹರಿಯ ಬಗ್ಗೆ ಅವರು ವಿಶ್ಲೇಷಿಸುತ್ತಾರೆ. ಜುಲೈ 1, 1999, ಕಾವಲಿನಬುರುಜು, ಪುಟ 20, ಪ್ಯಾರಗ್ರಾಫ್‌ 12 ಇದರ ಬಗ್ಗೆ ತಿಳಿಸುತ್ತದೆ. ಶ್ರದ್ಧೆಯಿಂದ ಹಾಡುವ ಮೂಲಕ, ನಾವು ಯೆಹೋವನಿಗೆ ಹೃದಯದಾಳದಿಂದ ಸ್ತುತಿಸುತ್ತೇವೆ.

25 ನಿ: ಜೆಹೋವಾಸ್‌ ವಿಟ್ನೆಸಸ್‌—ದ ಆರ್ಗನೈಸೇಷನ್‌ ಬಿಹೈಂಡ್‌ ದ ನೇಮ್‌. ಸಭಿಕರೊಂದಿಗೆ ಚರ್ಚೆ. “ಶಿಕ್ಷಣ ನೀಡುವ, ಪ್ರಚೋದಿಸುವ ಹಾಗೂ ಬಲಪಡಿಸುವ ಸಾಧನಗಳು” ಎಂಬ ಲೇಖನದ ಮೂರನೇ ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳ ಕುರಿತು ಚರ್ಚಿಸಿರಿ. ನಮ್ಮ ಸಂಸ್ಥೆಯ ಬಗ್ಗೆ ಆಸಕ್ತ ಜನರು ಚೆನ್ನಾಗಿ ತಿಳಿದುಕೊಳ್ಳುವಂತೆ ಸಹಾಯಮಾಡಲು ಈ ವಿಡಿಯೋವನ್ನು ಹೇಗೆ ಉಪಯೋಗಿಸಬಹುದು ಎಂಬ ವಿಷಯದಲ್ಲಿ ಸಲಹೆಗಳನ್ನು ನೀಡಿರಿ. ಒಂದೆರಡು ಸಂಕ್ಷಿಪ್ತ ಅನುಭವಗಳನ್ನು ಸೇರಿಸಿರಿ.—ಅಕ್ಟೋಬರ್‌ 1, 1992ರ ಕಾವಲಿನಬುರುಜು, 30-1ನೇ ಪುಟಗಳನ್ನು ನೋಡಿರಿ.

ಸಂಗೀತ 7 (51) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 6ರಿಂದ ಆರಂಭವಾಗುವ ವಾರ

ಸಂಗೀತ 6 (45)

5 ನಿ: ಸ್ಥಳಿಕ ತಿಳಿಸುವಿಕೆಗಳು.

15 ನಿ: ನಾವು ಏನನ್ನು ನಂಬುತ್ತೇವೆ? “ಬೇರೆ ಧರ್ಮಗಳಿಗಿಂತ ಭಿನ್ನವಾದ ಯಾವ ವಿಷಯವನ್ನು ಯೆಹೋವನ ಸಾಕ್ಷಿಗಳು ಕಲಿಸುತ್ತಾರೆ?” ಎಂದು ಕೇಳುವ ಒಬ್ಬ ವ್ಯಕ್ತಿಯನ್ನು ಒಬ್ಬ ಸಹೋದರನು ಪುನರ್ಭೇಟಿಮಾಡುತ್ತಾನೆ. ಅಕ್ಟೋಬರ್‌ 1, 1998ರ ಕಾವಲಿನಬುರುಜು ಪತ್ರಿಕೆಯ ಪುಟ 6ರ ರೇಖಾಚೌಕದಲ್ಲಿರುವ ಅಂಶಗಳ ಚರ್ಚೆ. ಬೇರೆ ಧರ್ಮಗಳು ಮನುಷ್ಯರ ಕಲಿಸುವಿಕೆಗಳಿಗೆ ಬೆಂಬಲವನ್ನು ಕೊಡುತ್ತಾ, ಯಾವ ರೀತಿಯಲ್ಲಿ ಬೈಬಲಿನ ಮೂಲಭೂತ ಸತ್ಯಗಳನ್ನು ಅಲಕ್ಷಿಸಿವೆ ಇಲ್ಲವೇ ತಿರಸ್ಕರಿಸಿವೆ ಎಂಬುದರ ಕುರಿತಾಗಿ ವಿವರಣೆಯನ್ನು ನೀಡಿರಿ.

15 ನಿ: ಸ್ಥಳಿಕ ತಿಳಿಸುವಿಕೆಗಳು.

10 ನಿ: ಸಂಭಾಷಣೆಗಳನ್ನು ಪ್ರಾರಂಭಿಸುವುದರ ಕುರಿತಾದ ಅನುಭವಗಳು. ಅಕ್ಟೋಬರ್‌ 16ರ ವಾರಕ್ಕಾಗಿರುವ ಸೇವಾ ಕೂಟ ಕಾರ್ಯಕ್ರಮದಲ್ಲಿ, ಆಸಕ್ತಿಯನ್ನು ಬಡಿದೆಬ್ಬಿಸಲು ಮತ್ತು ಶುಶ್ರೂಷೆಯಲ್ಲಿ ಸಂಭಾಷಣೆಗಳನ್ನು ಪ್ರಾರಂಭಿಸಲು ಸದ್ಯದ ಘಟನೆಗಳ ಕುರಿತು ಪೀಠಿಕೆಗಳನ್ನು ಕೊಡುವಂತೆ ಶಿಫಾರಸುಮಾಡಲಾಗಿತ್ತು. ಈ ಸಲಹೆಗಳನ್ನು ಅನ್ವಯಿಸಿಕೊಂಡಿರುವುದರಿಂದ ಇಷ್ಟರ ವರೆಗೆ ಪಡೆದುಕೊಂಡಿರುವ ಒಳ್ಳೆಯ ಫಲಿತಾಂಶಗಳ ಕುರಿತಾಗಿ ಹೇಳುವಂತೆ ಸಭಿಕರಿಗೆ ಕರೆಕೊಡಿರಿ.

ಸಂಗೀತ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ