ಆಸಕ್ತಿಯನ್ನು ಕೆರಳಿಸಲು ಸದ್ಯದ ಘಟನೆಗಳನ್ನು ಉಪಯೋಗಿಸಿ
ನಿಮ್ಮ ಶುಶ್ರೂಷೆಯನ್ನು ತಾಜಾ ಆಗಿ ಇಡಲು ಹಾಗೂ ಬೈಬಲಿನ ಸಂದೇಶದಲ್ಲಿ ಜನರ ಆಸಕ್ತಿಯನ್ನು ಕೆರಳಿಸಲು ಬೇಕಾದಂತಹ ಒಳ್ಳೊಳ್ಳೆ ವಿಚಾರಧಾರೆಯನ್ನು ನೀವು ಇಷ್ಟಪಡುತ್ತೀರೋ? ಹಾಗಾದರೆ ಒಂದು ಕೆಲಸಮಾಡಿ, ನೀವು ವಾಸಿಸುವ ಸ್ಥಳಗಳಲ್ಲಿರುವ ಜನರೊಂದಿಗೆ ಮಾತಾಡುವಾಗ, ಲೋಕದಲ್ಲಿ ಆಗುತ್ತಿರುವ ಸದ್ಯದ ಘಟನೆಗಳನ್ನು ಉಪಯೋಗಿಸಿರಿ. ಸ್ಥಳಿಕ ಮತ್ತು ರಾಷ್ಟ್ರ ಮಟ್ಟದ ಇಲ್ಲವೇ ಅಂತಾರಾಷ್ಟ್ರೀಯ ಮಟ್ಟದ ವಾರ್ತೆಗಳ ಮೇಲಾಧಾರಿಸಿ ನೀವು ಮಾತಾಡಬಹುದು. ಈ ಸಂಗತಿಗಳು ಯಾವಾಗಲೂ ಬದಲಾಗುತ್ತಿರುತ್ತವೆ. ಈ ಮುಂದಿನ ಉದಾಹರಣೆಗಳನ್ನು ಸ್ವಲ್ಪ ನೋಡಿ.
ಹಣಕಾಸಿನ ಸಮಸ್ಯೆಗಳು ಹಾಗೂ ಜೀವನದ ಮಟ್ಟವು ಜನರಿಗೆ ಚಿಂತೆಯನ್ನು ಉಂಟುಮಾಡುತ್ತದೆ. ಆದುದರಿಂದ ನೀವು ಹೀಗೆ ಹೇಳಬಹುದು:
◼ “[ಯಾವುದರ ದರ ಎಂಬುದನ್ನು ತಿಳಿಸಿ] ದರಗಳು ಮತ್ತೆ ಗಗನಕ್ಕೇರುತ್ತಿವೆ ಎಂಬ ಸುದ್ದಿಯನ್ನು ನೀವು ಕೇಳಿಸಿಕೊಂಡಿರೋ?” ಇಲ್ಲವೇ ಒಂದು ದೊಡ್ಡ ಕಂಪನಿಯು ಅನೇಕ ಕೆಲಸಗಾರರನ್ನು ತೆಗೆದುಹಾಕಿರುವಲ್ಲಿ, ನಿರುದ್ಯೋಗದ ಕುರಿತು ನೀವು ಮಾತಾಡಬಹುದು. ವಿಷಯವನ್ನು ಯಾವ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತೀರಿ ಎನ್ನುವುದರ ಮೇಲಾಧಾರಿಸಿ, “ಜೀವನ ಸಾಗಿಸುವುದು ಏಕೆ ಇಷ್ಟೊಂದು ಕಷ್ಟ ಎಂದು ನೀವು ಯೋಚಿಸಿ ನೋಡಿದ್ದೀರೋ?” ಇಲ್ಲವೇ “ಅನ್ನ, ವಸತಿ, ಬಟ್ಟೆಗಾಗಿ ಹೀಗೆ ಯಾವಾಗಲೂ ಕಷ್ಟಪಟ್ಟು ಒದ್ದಾಡುತ್ತಿರಬೇಕೋ?” ಎಂದು ನೀವು ಪ್ರಶ್ನಿಸಬಹುದು.
ಕುಟುಂಬಗಳಲ್ಲಿ ಇಲ್ಲವೇ ಶಾಲಾ ವಿದ್ಯಾರ್ಥಿಗಳ ಮಧ್ಯೆ ದುರಂತಗಳಂತಹ ಹಿಂಸೆಯ ವರದಿಗಳು ಚರ್ಚೆಗೆ ಅವಕಾಶವನ್ನು ನೀಡುತ್ತವೆ. ನೀವು ಹೀಗೆ ಕೇಳಬಹುದು:
◼ “[ಆದ ದುರಂತವನ್ನು ತಿಳಿಸಿ] ಇದರ ಬಗ್ಗೆ ನೀವು ವಾರ್ತಾಪತ್ರಿಕೆಯಲ್ಲಿ ಓದಿದಿರೋ?” ಅನಂತರ, “ಲೋಕದಲ್ಲಿ ನಡೆಯುತ್ತಿರುವ ಇಷ್ಟೊಂದು ಹಿಂಸೆಗೆ ಯಾವುದು ಕಾರಣವಾಗಿದೆ ಎಂದು ನೀವು ನೆನಸುತ್ತೀರಾ?” ಇಲ್ಲವೇ, “ಸುರಕ್ಷಿತ ಅನಿಸಿಕೆಯನ್ನು ಅನುಭವಿಸುವ ಒಂದು ಸಮಯವು ಬರುವುದು ಎಂದು ನೀವು ನೆನಸುತ್ತೀರಿ?” ಎಂದು ನೀವು ಕೇಳಸಾಧ್ಯವಿದೆ.
4 ಲೋಕದ ಬೇರೆ ಬೇರೆ ಭಾಗಗಳಲ್ಲಿ ಆಗುತ್ತಿರುವ ವಿಧ್ವಂಸಕ ನೆರೆಹಾವಳಿ, ಭೂಕಂಪ, ಅಥವಾ ಅಶಾಂತಿಯಂತಹ ವಿಷಯಗಳು ಆಸಕ್ತಿಯನ್ನು ಕೆರಳಿಸುವಂತಹ ವಿಷಯಗಳಾಗಿರಸಾಧ್ಯವಿದೆ. ಉದಾಹರಣೆಗೆ, ನೀವು ಹೀಗೆ ಕೇಳಬಹುದು:
◼ “[ನೈಸರ್ಗಿಕ ವಿಪತ್ತೊಂದನ್ನು ಹೆಸರಿಸಿ] ಇದಕ್ಕೆ ದೇವರು ಹೊಣೆಯಾಗಿದ್ದಾನೋ?” ಅಥವಾ ಇತ್ತೀಚೆಗೆ ಉಂಟಾದ ಅಶಾಂತಿಯ ಕುರಿತಾಗಿ ಮಾತಾಡುತ್ತಾ, ನೀವು ಹೀಗೆ ಕೇಳಬಹುದು: “ಪ್ರತಿಯೊಬ್ಬರು ಶಾಂತಿಯನ್ನು ಇಷ್ಟಪಡುವುದಾದರೆ, ಅದನ್ನು ಸಾಧಿಸುವುದು ಏಕೆ ಇಷ್ಟೊಂದು ಕಷ್ಟಕರವಾಗಿದೆ?”
ನಿಮ್ಮ ಪೀಠಿಕೆಯಲ್ಲಿ ಇತ್ತೀಚಿನ ಘಟನೆಗಳನ್ನು ಉಪಯೋಗಿಸಲು ಹುಷಾರಾಗಿರಿ. ರೀಸನಿಂಗ್ ಪುಸ್ತಕದಲ್ಲಿ, 10-11ನೆಯ ಪುಟಗಳಲ್ಲಿ ಕಂಡುಬರುವ “ಸದ್ಯದ ಘಟನೆಗಳು” ಎಂಬ ಶೀರ್ಷಿಕೆಯ ಕೆಳಗಿರುವ ಸಹಾಯಕಾರಿ ಸಲಹೆಗಳನ್ನು ನೀವು ಕಂಡುಕೊಳ್ಳಸಾಧ್ಯವಿದೆ. ಆದರೆ ರಾಜಕೀಯ ಇಲ್ಲವೇ ಸಾಮಾಜಿಕ ವಿಷಯಗಳ ಪಕ್ಷವಹಿಸುವುದರಿಂದ ದೂರವಿರಿ. ಅದಕ್ಕೆ ಬದಲು, ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿದೆ ಎಂಬುದನ್ನು ತೋರಿಸಲು, ಶಾಸ್ತ್ರವಚನಗಳ ಮತ್ತು ದೇವರ ರಾಜ್ಯದ ಕಡೆಗೆ ಅವರ ಗಮನವನ್ನು ಸೆಳೆಯಿರಿ.